Karnataka Next CM: ಈ ಬಾರಿಯ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಮತದಾರ ಬಂಧುಗಳು ಬದಲಾವಣೆ ಬಯಸಿ ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರ ಕೊಡಲು ತೀರ್ಮಾನಿಸಿದ್ದಾರೆ ಅಂತ ಕಾಣಿಸುತ್ತದೆ. ಹೌದು ಈಗಾಗ್ಲೇ ಮತದಾರರು ಕಾಂಗ್ರೆಸ್ ಪಕ್ಷಕೆ ಸ್ಪಷ್ಟ ಬಹುಮತಕ್ಕಿಂತ ಹೆಚ್ಚಿನ ಕ್ಷೇತ್ರಗಳನ್ನ ಗೆಲ್ಲಿಸಿಕೊಟ್ಟಿದ್ದು ಚುನಾವನಾಧಿಕಾರಿಗಳಿಂದ ಈ ಬಗ್ಗೆ ಅಧಿಕೃತ ಹೇಳಿಕೆ ಹೊರಬೀಳಬೇಕಿದೆ. ಇನ್ನು ಈ ಬಾರಿ ಮಂತ್ರಿ ಮಂಡಲದಲ್ಲಿದ್ದ ದೊಡ್ಡ ದೊಡ್ಡ ನಾಯಕರೇ ಮಕಾಡೇ ಮಲಗಿದ್ದರೆ. ಈ ಮಧ್ಯೆ ಕಾಂಗ್ರೆಸ್ ಗೆದ್ದು ಬೀಗುತ್ತಿದ್ದೂ ಪಕ್ಷ ಅಧಿಕಾರಕ್ಕೆ ಬಂದಾಗಿದೆ ಆದರೆ ಈಗ ಕಾಂಗ್ರೆಸ್ಸಿಗರು ಹಾಗೂ ಹೈಕಮಾಂಡ್ ಮುಂದಿರೋ ದೊಡ್ಡ ಸವಾಲು ಏನಾಪ್ಪಾ ಅಂದ್ರೆ ಯಾರಗಬೇಕು ಸಿಎಂ ಅಂತ. ಹೌದು ಚುನಾವಣೆಗೂ ಮೊದಲಿನಿಂದಲೇ ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ಸಿಎಂ ಯಾರಗಬೇಕು ಅನ್ನೋದರ ಕುರಿತು ಸಾಕಷ್ಟು ಚರ್ಚೆಗಳಾಗಿತ್ತು. ರಾಜಕೀಯ ನಾಯಕರು ತಮ್ಮ ತಮ್ಮಲೇ ಕೈ ಕೈ ಹಿಸುಕಿಕೊಳ್ಳುತ್ತಿದ್ರು ಅಲ್ಲದೆ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ನಡುವೆ ಒಳಗೊಳಗೇ ಸಿಎಂ ಗದುಗ್ಗೆ ಇರಲು ಫೈಟ್ ಇತ್ತು ಅಂತ ಕೂಡ ಸಾಕಷ್ಟು ಸುದ್ದಿಗಳಾಗಿದ್ವು. ಹಾಗಾದ್ರೆ ಈಗಾಗ್ಲೇ ವಿಧಾನಸಭಾ ಚುನಾವಣೆ ಯಲ್ಲಿ ಈ ಬಾರಿ ಸ್ಪಷ್ಟ ಬಹುಮತ ಪಡೆದಿರೋ ಕಾಂಗ್ರೆಸ್ ಸರ್ಕಾರದ ಮುಂದಿನ ಸಾರಥಿ ಯಾರು, ಯಾರಾಗ್ತಾರೆ ಸಿಎಂ, ಯಾಕೆ ಅವ್ರೆ ಸಿಎಂ ಆಗಬೇಕು ನೋಡೋಣ ಬನ್ನಿ.
ಹೌದು ಈ ಬಾರಿಯ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಭರ್ಜರಿ ಗೆಲುವು ಸಾಧಿಸಿದೆ. ಸ್ಪಷ್ಟ ಬಹುಮತವನ್ನು ಪಡೆದಿರುವ ಹಿನ್ನಲೆಯಲ್ಲಿ ಈಗ ಸರ್ಕಾರ ರಚನೆಯ ಕಸರತ್ತು ಆರಂಭಗೊಂಡಿದೆ. ಇದಕ್ಕಾಗಿ ನಾಳೆ ಮಹತ್ವದ ಕಾಂಗ್ರೆಸ್ ಶಾಸಕಾಂಗ ಸಭೆಯನ್ನು ಕರೆಯಲಾಗಿದೆ. ಈ ಕುರಿತಂತೆ ಕಾಂಗ್ರೆಸ್ ಮೂಲಗಳಿಂದ ಮಾಹಿತಿ ತಿಳಿದು ಬಂದಿದ್ದು, ನಾಳೆ ಕಾಂಗ್ರೆಸ್ ಶಾಸಕಾಂಗ ಸಭೆಯನ್ನು ಕರೆಯಲಾಗಿದೆ. ಈ ಸಭೆಯಲ್ಲಿ ಮುಖ್ಯಮಂತ್ರಿಯಾಗಿ ಯಾರನ್ನು ಆಯ್ಕೆ ಮಾಡಬೇಕು ಎನ್ನುವ ಬಗ್ಗೆ ಬಿಸಿ ಬಿಸಿ ಚರ್ಚೆ ನಡೆಸಲಾಗುತ್ತದೆ.
ಹೀಗಾಗಿ ಈಗಾಗ್ಲೇ ಕಾಂಗ್ರೆಸ್ ಪಕ್ಷದ ಸಿಎಂ ರೇಸ್ ನಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ವರ್ಸಸ್ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ನಡುವೆ ಒಳಗೊಳಗೆ ಫೈಟ್ ನಡೆಯುತ್ತಿದೆ ಎನ್ನಲಾಗುತ್ತಿದೆ. ಆದ್ರೇ ಈ ಬಗ್ಗೆ ನಾಳೆ ನಡೆಯಲಿರುವಂತ ಶಾಸಕಾಂಗ ಪಕ್ಷದ ಸಭೆಯಲ್ಲಿ ಸ್ಪಷ್ಟ ಮಾಹಿತಿ ಹೊರ ಬೀಳಲಿದೆ. ಆದರೂ ಕೂಡ ಇವರಿಬ್ಬರನ್ನ ಹೊರತು ಪಡಿಸಿ ಬೇರೆ ನಾಯಕರು ಕೂಡ ಇದೀಗ ಸಿಎಂ ರೇಸ್ ಗೆ ಇಳುದ್ರು ಅದರಲ್ಲಿ ಕೊನೆಯದಾಗಿ ಉಳಿಯೋದು ಡಿಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಮಾತ್ರ ಹೀಗಾಗಿ ಮುಂದಿನ ಸಿಎಂ ಯಾರಾಗ್ತಾರೆ(Karnataka Next CM) ಅನ್ನೋ ಬಿಸಿ ಬಿಸಿ ಚರ್ಚೆಗಳು ಶುರುವಾಗಿವೆ.
ಯಾರಿಗೆ ಮಣೆ ಹಾಕುತ್ತೆ ಹೈಕಮಾಂಡ್
ಇನ್ನು ಹೈಕಮಾಂಡ್ ನಿರ್ಧಾರವೇ ಅಂತಿಮ ಅಂತ ಈಗ ಗೆಲುವಿನ ನಗೆ ಬೀರಿರುವ ವಿವಿಧ ಕ್ಷೇತ್ರಗಳ ಅಭ್ಯರ್ಥಿಗಳು ಎಲ್ಲೂ ಕೂಡ ಗುಟ್ಟು ಬಿಟ್ಟು ಕೊಡದೆ ಮಾತನಾಡುತ್ತಿದ್ದರು ಕೂಡ ಇಂತವರೇ ಸಿಎಂ ಆಗಬೇಕು ಅನ್ನೋ ಆಸೆ ಖಂಡಿತಾ ಇರುತ್ತೆ ಆದರೆ ಎಲ್ಲಿಯೂ ಅದನ್ನ ಬಹಿರಂಗವಾಗಿ ಹೇಳಿಕೊಳ್ಳೋದು ಅಷ್ಟು ಸುಲಭ ಅಲ್ಲಾ. ಹೀಗಾಗಿ ಹೈಕಮಾಂಡ್ ನಿರ್ಧಾರವೇ ನಮ್ಮ ನಿರ್ಧಾರ ಅಂತ ಗೆದ್ದಿರುವ ಅಭ್ಯರ್ಥಿಗಳು ಹೇಳ್ತಿದ್ದರೆ, ಇತ್ತ ಕಡೆ ಸಿಎಂ ಪಟ್ಟ ಪಡಿಯಲೇಬೇಕು ಅನ್ನುತ್ತಿರುವ ಡಿಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಅವ್ರದ್ದು ಕೂಡ ಇದೆ ಮಾತು. ಆದರೆ ಒಳಗೊಳಗೆ ಸಿಎಂ ಗದುಗ್ಗೆ ಏರಲು ಸರ್ಕಸ್ ನಡೀತಿರೋದಂತೂ ಸುಳಲ್ಲ. ಇದೀಗ ಹೈಕಮಾಂಡ್ ವಿಚಾರಕ್ಕೆ ಬಂದ್ರು ಇದು ಹೈಕಮಾಂಡ್ ಗು ಕೂಡ ದೊಡ್ಡ ತಲೆನೋವಿನ ವಿಚಾರವೇ. ಯಾಕಂದ್ರೆ ಕರ್ನಾಟಕದಲ್ಲಿ ಕಾಂಗ್ರೆಸ್ ಆಸ್ತಿತ್ವ ಉಳಿಸಿಕೊಂಡು ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಎಷ್ಟು ದೊಡ್ಡಮಟ್ಟದಲ್ಲಿ ಬಹುಮತ ಪಡೆದುಕೊಂಡಿದೆ ಅಂದರೆ ಈ ಇಬ್ಬರು ನಾಯಕರ ಶ್ರಮ, ತಳ ದಿಂದ ಕಾರ್ಯಕರ್ತರನ್ನ ಉರಿದುಂಬಿಸಿ ಪಕ್ಷ ಸಂಘಟಿಸಿ ಕಾರ್ಯಕರ್ತರನ್ನ ಗಟ್ಟಿಗೊಳಿಸಿದ ರೀತಿ ಎಲ್ಲವು ಕೂಡ ಇಂದಿನ ಸ್ಪಷ್ಟ ಬಹುಮತಕ್ಕೆ ಕಾರಣವಾಗಿದೆ. ಹೀಗಾಗಿ ಇಬ್ಬರಲ್ಲಿ ಒಬ್ಬರನ್ನು ಬಿಡುವಂತಿಲ್ಲ. ಅಡ್ಡಗತ್ತರಿಯ ಮೇಲೆ ಈಗ ಹೈಕಮಾಂಡ್ ನಿಲ್ಲುವಂತಾಗಿದೆ.
ಇಬ್ಬರು ಕೂಡ ಘಟನುಘಾಟಿ ನಾಯಕರೇ, ಒಬ್ಬರು ಮಾಜಿ ಸಿಎಂ ಇನ್ನೊಬ್ಬರು ಸಿಎಂ ಆಕಾಂಕ್ಷಿ ಕೆಪಿಸಿಸಿ ಅಧ್ಯಕ್ಷರು. ಇಬ್ಬರು ಕೂಡ ಒಳ್ಳೆ ರಾಜಕಾರಣಿಗಳೇ. ಸಿದ್ದರಾಮಯ್ಯ ಅವ್ರ ಕೆಲವೊಂದಷ್ಟು ಅಭಿವೃದ್ಧಿ ಸೂತ್ರಗಳು ಕರ್ನಾಟಕದಲ್ಲಿ ವರ್ಕೌಟ್ ಆಗಿದ್ವು. ಅಲ್ಲದೆ ಶಾಶಕಾಂಗ ಪಕ್ಷದ ನಾಯಕನನ್ನ ಪಕ್ಷದ ಸಿಎಂ ಮಾಡೋದು ಅಷ್ಟು ಸುಲಭದ ಮಾತಲ್ಲ ಅದಕ್ಕೆ ಸಿದ್ದರಾಮಯ್ಯ ನವರ ಶ್ರಮ ಕೂಡ ಅಷ್ಟೆ ಇರುತ್ತೆ. ಅದರಂತೆ ನಡೆದುಕೊಂಡ ಸಿದ್ದರಾಮಯ್ಯ ಕರ್ನಾಟಕದಲ್ಲಿ ಕೆಲವೊಂದಷ್ಟು ಯೋಜನೆಗಳ ಮೂಲಕ ಮನೆ ಮಾತದವರು. ವಿರೋಧಿಗಳ ನಿದ್ದೆ ಗೆಡಿಸಿದವರು. ಇನ್ನೊಂದು ಕಡೆ ಕನಕಪುರದ ಬಂಡೆ ಅಂತಾಳೆ ವಿರೋಧಿಗಳ ಎದೆಯಲ್ಲಿ ನಡುಕ ಹುಟ್ಟಿಸೋ ರಾಜಕಾರಣಿ ಡಿಕೆ ಶಿವಕುಮಾರ್, ಕೇವಲ ಕನಕಪುರ ಮಾತ್ರವಲ್ಲ ಇಡಿ ಕರ್ನಾಟಕದಾದ್ಯಂತ ಮನೆ ಮಾತಾಗಿರುವ ಜನನಾಯಕ. ಕನಕಪುರ ಕ್ಷೇತ್ರಕ್ಕೆ ಅವ್ರು ನೀಡಿರೋ ಕೊಡುಗೆಗೆಗಳು, ಅಭಿವೃದ್ಧಿ ಯೋಜನೆಗಳು ಇಂದು ಅವ್ರು ಪ್ರಚಾರಕ್ಕೆ ಹೋಗಿಲ್ಲ ಅಂದ್ರು ಕೂಡ ಅವ್ರ 1ಲಕ್ಷದ 26ಸಾವಿರ ಮತಗಳ ಅಂತರದಿಂದ ಗೆಲ್ಲಿಸಿದ್ದಾರೆ ಅಂದ್ರೆ ಅದು ಅಂತಿಥ ಗೆಲುವಲ್ಲ. ಹೀಗಾಗಿ ಇದೀಗ ಇಬ್ಬರು ಘಟನುಘಾಟಿ ನಾಯಕರಲ್ಲಿ ಮುಂದಿನ ಸಿಎಂ ನಾನೇ ಆಗ್ಬೇಕು ಅನ್ನೋ ರೇಸ್ ಶುರುವಾಗಿದೆ.
ಹೀಗಾಗಿ ನಾಳೆ ನಡೆಯುವ ಶಾಸಕಾಂಗ ಸಭೆಯಲ್ಲಿ ಮುಂದಿನ ಸಿಎಂ(Karnataka Next CM) ಯಾರಗಬೇಕು ಅಥವಾ ಯಾರಾಗ್ತಾರೆ ಅನ್ನೋದಕ್ಕೆ ಉತ್ತರ ಸಿಗಲಿದೆ. ಅಲ್ಲಿವರೆಗೂ ಕಾದುನೋಡಬೇಕು..
ಇದನ್ನೂ ಓದಿ: ಸಿಡಿಲು ಹೇಗೆ ಉಂಟಾಗುತ್ತೆ, ಆಗ ಏನ್ ಮಾಡ್ಬೇಕು ಗೊತ್ತಾ? ಸಿಡಿಲಿನ ಅಪಾಯದಿಂದ ತಪ್ಪಿಸಿಕೊಳ್ಳುವುದು ಹೇಗೆ?
ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram