ಕೆಪಿಎಸ್‌ಸಿ ಇಲಾಖೆಯಲ್ಲಿ 200ಕ್ಕೂ ಹೆಚ್ಚಿನ PDO ಹುದ್ದೆಗಳ ಭರ್ತಿಗೆ ನೇಮಕಾತಿಗೆ ಅರ್ಜಿ ಆಹ್ವಾನ ಮಾಡಲಾಗಿದೆ.

Karnataka PDO Recruitment 2024

ರಾಜ್ಯದ ನಿರುದ್ಯೋಗಿ ಯುವಕ, ಯುವತಿಯರು ಕೆಪಿಎಸ್‌ಸಿ ಇಲಾಖೆಯಲ್ಲಿ PDO ಉದ್ಯೋಗ ಮಾಡಲು ಬಯಸುವವರಿಗೆ ಈಗ ಸುವರ್ಣ ಅವಕಾಶ ದೊರಕಿದೆ ಅರ್ಹ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು ಎಂದು ಇಲಾಖೆಯು ಅಧಿಸೂಚನೆ ಪ್ರಕಟ ಮಾಡಿದೆ. ಹುದ್ದೆಗೆ ಅರ್ಜಿನಲ್ಲಿಸುವ ವಿಧಾನ ಹಾಗೂ ಹುದ್ದೆಯ ಬಗ್ಗೆ ಪೂರ್ಣ ವಿವರಗಳನ್ನು ತಿಳಿಯಿರಿ.

WhatsApp Group Join Now
Telegram Group Join Now

ಹುದ್ದೆಗಳ ಬಗ್ಗೆ ಪೂರ್ಣ ವಿವರ :-

ಕರ್ನಾಟಕ ಲೋಕಸೇವಾ ಆಯೋಗವು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ಯ ಇಲಾಖೆಯಲ್ಲಿ ಖಾಲಿ ಇರುವ ಗ್ರೂಪ್ ಸಿ ವರ್ಗದ 247 ಪಿಡಿಒ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆಯನ್ನು ಪ್ರಕಟಿಸಿದ್ದು ಉಳಿಕೆ ಮೂಲ ವೃಂದ ಮತ್ತು ಹೈದ್ರಾಬಾದ್ ಕರ್ನಾಟಕ ವೃಂದಕ್ಕೆ ಪ್ರತ್ಯೇಕ ಅಧಿಸೂಚನೆಗಳನ್ನು ಇಲಾಖೆಯು ಬಿಡುಗಡೆ ಮಾಡಿದೆ. ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಏಪ್ರಿಲ್ 15 ರಿಂದ ಆನ್‌ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದು. ಆಯ್ಕೆಯಾದ ಅಭ್ಯರ್ಥಿಗಳ ತಿಂಗಳ ಸಂಬಳ 37,900 ರೂಪಾಯಿಯಿಂದ 70,850 ರೂಪಾಯಿ ಆಗಿರುತ್ತದೆ.

ವಿದ್ಯಾರ್ಹತೆ :- ಇಲಾಖೆಯ ಅಧಿಸೂಚನೆಯ ಪ್ರಕಾರ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕಡ್ಡಾಯವಾಗಿ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ಪಾಸ್ ಆಗಿರಬೇಕು.

ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸಿನ ಮಿತಿ:- ಹುದ್ದೆಗೆ ಅರ್ಜಿ ಸಲ್ಲಿಸಲು ಸಾಮಾನ್ಯ ವಾರ್ಗದ ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ಹಾಗೂ ಗರಿಷ್ಠ 35 ವರ್ಷ. ಸರ್ಕಾರದ ಮೀಸಲಾತಿ ನಿಯಮದಂತೆ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ಹಾಗೂ ಗರಿಷ್ಠ 38 ವರ್ಷ ಹಾಗೂ ಎಸ್‌ಸಿ- ಎಸ್‌ಟಿ, ಪ್ರವರ್ಗ-1 ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ಹಾಗೂ ಗರಿಷ್ಠ 40 ವರ್ಷ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಮುಖ್ಯ ದಿನಾಂಕಗಳ ಮಾಹಿತಿ :-

ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಇಲಾಖೆಯು 15-04-2024 ರಿಂದ 15-05-2024 ವರೆಗೆ ಸಮಯದ ನಿಗದಿ ಮಾಡಿದೆ. ಹುದ್ದೆಯ ಆಯ್ಕೆಯ ನಡೆಯುವ ಸ್ಪರ್ಧಾತ್ಮಕ ಪರೀಕ್ಷೆಯ ಬಗ್ಗೆ ಅಧಿಸೂಚನೆಯಲ್ಲಿ ಯಾವುದೇ ಪ್ರಕಟಣೆ ಮಾಡಿಲ್ಲ. ಸ್ಪರ್ಧಾತ್ಮಕ ಪರೀಕ್ಷೆಯ ದಿನಾಂಕದ ವಿವರಗಳು ಇಲಾಖೆಯ ವೆಬ್ಸೈಟ್ ನಲ್ಲಿ ಬಿಡುಗಡೆ ಮಾಡುವ ಸಾಧ್ಯತೆ ಇದೆ.

ಅಪ್ಲಿಕೇಶನ್ ಫೀ ವಿವರ:- ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ಅಪ್ಲಿಕೇಶನ್ ಫೀ 600 ರೂಪಾಯಿ ಹಾಗೂ ಇತರೆ ಹಿಂದುಳಿದ ಎಲ್ಲಾ ವರ್ಗದ ಅಭ್ಯರ್ಥಿಗಳಿಗೆ 300 ರೂಪಾಯಿ ನಿಗದಿ ಮಾಡಲಾಗಿದೆ. ಇನ್ನೂ ಅರ್ಜಿ ಸಲ್ಲಿಸುವ ಮಾಜಿ ಸೈನಿಕ ಅಭ್ಯರ್ಥಿಗಳಿಗೆ 50 ರೂಪಾಯಿ ಹಾಗೂ
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1 ಅಭ್ಯರ್ಥಿಗಳಿಗೆ ಅಪ್ಲಿಕೇಶನ್ ಫೀ ನಲ್ಲಿ ವಿನಾಯಿತಿ ಇದೆ.

ಸ್ಪರ್ಧಾತ್ಮಕ ಪರೀಕ್ಷೆ ಬಗ್ಗೆ ಮಾಹಿತಿ :-

ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಾವ ಯಾವ ವಿಷಯಗಳು ಇರುತ್ತವೆ ಹಾಗೂ ಏಷ್ಟು ಅಂಕಗಳಿಗೆ ಪರೀಕ್ಷೆ ನಡೆಯುತ್ತದೆ ಎಂಬ ಮಾಹಿತಿ ನೋಡೋಣ. ಮೊದಲನೇ ಪತ್ರಿಕೆಯಲ್ಲಿ ಸಾಮಾನ್ಯ ಜ್ಞಾನ, ಸಾಮಾನ್ಯ ಕನ್ನಡ, ಸಾಮಾನ್ಯ ಇಂಗ್ಲಿಷ್ ಬಗ್ಗೆ ಪೇಪರ್ ಇರುತ್ತದೆ. 100 ಪ್ರಶ್ನೆಗಳು ಇರಲಿದೆ. ಒಟ್ಟು 200 ಅಂಕಗಳಿಗೆ ನೀವು ಪರಿಕ್ಷೆಯನ್ನು ಬರೆಯಬೇಕು. ಪರೀಕ್ಷೆ ಅವಧಿ 2 ಗಂಟೆ ಆಗಿದ್ದು. ಬಹು ಆಯ್ಕೆ ಪ್ರಶ್ನೆಗಳನ್ನು ಒಳಗೊಂಡಿರುತ್ತದೆ. ಹಾಗೂ ಎರಡನೇ ಪ್ರಶ್ನೆ ಪತ್ರಿಕೆಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್‌ ವಿಷಯಗಳ ಮೇಲೆ 100 ಪ್ರಶ್ನೆಗಳು ಇರಲಿದ್ದು ಮೊದಲನೇ ಪತ್ರಿಕೆಯಂತೆ ಒಟ್ಟು 200 ಅಂಕಗಳಿಗೆ ನೀವು ಪರಿಕ್ಷೆಯನ್ನು ಬರೆಯಬೇಕು. ಪರೀಕ್ಷೆ ಅವಧಿ 2 ಗಂಟೆ ಆಗಿರುತ್ತದೆ.

ಅಧಿಸೂಚನೆ(RPC) PDF ಡೌನ್ ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ಅಧಿಸೂಚನೆ PDF ಡೌನ್ ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ಬಿಎಂಟಿಸಿ ಯಲ್ಲಿ 2500 ಕಂಡಕ್ಟರ್ ಹುದ್ದೆಗೆ ನೇಮಕಾತಿ ಪ್ರಕ್ರಿಯೆ ಹೇಗೆ ನಡೆಯುತ್ತದೆ?

ಇದನ್ನೂ ಓದಿ: ದೈನಂದಿನ ಬಳಕೆಗೆ ಸೂಕ್ತವಾದ ಒಂದೇ ಒಂದು ಬ್ರಾಂಡ್ ಅಂದ್ರೆ ಅದುವೇ ಸುಜುಕಿ ಆಕ್ಸೆಸ್ 125 ಸ್ಕೂಟರ್