Karnataka Rain News: ಈ ಬಿಸಿಲಿನ ಕಾಟಕ್ಕೆ ಬೆಂದು ಹೋಗಿರುವ ಜನರು ಈ ಮಳೆ ಯಾವಾಗ ಬರುತ್ತದೆ ಎನ್ನುತ್ತಿದ್ದಾರೆ. ಹೌದು ಈ ವರ್ಷ ಅತಿ ಹೆಚ್ಚು ಬಿಸಿಲು ಜನರಿಗೆ ಕಾಟ ಕೊಡುತ್ತಿದೆ. ಜನರು ಹೊರೆಗೆ ಹೋಗಲು ಭಯಪಡುವಂತಾಗಿದೆ ಹೊರಗೆ ಕೆಲಸ ಮಾಡುವರ ಪಾಡು ಕೇಳುವಂತಿಲ್ಲ. ಮನೆ ಒಳಗೂ ಇರಲು ಬಿಡದ ಈ ಬಿಸಿಲು ಫ್ಯಾನ್ ಇರದಂತೆ ಒಂದು ನಿಮಿಷ ಇರಲು ಆಗುತ್ತಿಲ್ಲ ಅದಕ್ಕೆ ಜನರು ಈ ಬಿಸಿಲು ಯಾವಾಗ ಹೋಗಿ ಮಳೆ ಬರುತ್ತದೆ ಎಂದು ಕಾಯುತ್ತಿದ್ದಾರೆ.
ಹವಾಮಾನ ಇಲಾಖೆಯು ಮಳೆಯ ಸೂಚನೆ ಬಗ್ಗೆ ಏನೆಂದು ಹೇಳಿದೆ?
ಈ ಬಿಸಿಲಿನ ತಾಪಕ್ಕೆ ಬೆಂದು ಹೋಗಿರುವ ಕರ್ನಾಟಕದ ಜನರಿಗೆ ಹವಮಾನ ಇಲಾಖೆಯು ಕರ್ನಾಟಕದ ದಕ್ಷಿಣ ಮತ್ತು ಉತ್ತರ ಒಳನಾಡು ಹಾಗೂ ಕರಾವಳಿ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಮಾನ ಇಲಾಖೆಯು ಮುನ್ಸೂಚನೆ ನೀಡಿದೆ. ಈ ಸುದ್ದಿಯು ಹೊರಗೆ ಕೆಲಸ ಮಾಡುವ ಜನರಿಗೆ ಒಂದು ರೀತಿಯಲ್ಲಿ ಖುಷಿ ತಂದಿದೆ.
ಯಾವ ಯಾವ ಜಿಲ್ಲೆಗೆ ಮಳೆಯಾಗುವ ಸಾಧ್ಯತೆ ಇದೆ?
ಉತ್ತರ ಒಳನಾಡಿನ ಬೀದರ್, ಬಾಗಲಕೋಟೆ, ಬೆಳಗಾವಿ, ಗದಗ, ಹಾವೇರಿ, ರಾಯಚೂರು, ಕಲಬುರಗಿ, ಯಾದಗಿರಿ, ಕೊಪ್ಪಳ, ವಿಜಯಪುರ ಹಾಗೂ ದಕ್ಷಿಣ ಒಳನಾಡಿನ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ದಾವಣಗೆರೆ, ಚಿತ್ರದುರ್ಗ, ಚಿಕ್ಕಮಂಗಳೂರು, ಹಾಸನ, ಕೊಡಗು, ಮಂಡ್ಯ, ಮೈಸೂರು, ತುಮಕೂರು, ವಿಜಯನಗರ, ಶಿವಮೊಗ್ಗ, ರಾಮನಗರ ಜಿಲ್ಲೆಗಳ ಕೆಲವು ಕಡೆಯಲ್ಲಿ ಮತ್ತು ಕರಾವಳಿಯ ಎಲ್ಲಾ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ.
ಇದನ್ನು ಓದಿ: ಪತಿಯ ಸಮಾಧಿಗೆ ಪೂಜೆ ಸಲ್ಲಿಸಿದ ಮಾಲಾಶ್ರೀ ಮತ್ತು ಮಕ್ಕಳು.!
ಯಾವ ಯಾವ ಜಿಲ್ಲೆಗಳಲ್ಲಿ ಈಗಾಗಲೇ ಮಳೆಯಾಗಿದೆ?
ಮಂಗಳೂರು, ಕೊಡಗು, ಗುಲ್ಬರ್ಗ, ಚಿಕ್ಕಮಂಗಳೂರು ಮತ್ತು ಹಾಸನ ಜಿಲ್ಲೆಗಳ ಕೆಲವು ಭಾಗಗಳಲ್ಲಿ ಈಗಾಗಲೇ ಮಳೆಯಾಗಿದೆ ಕರ್ನಾಟಕದ ಕೆಲವು ಭಾಗಗಳಲ್ಲಿ ಉಷ್ಣಾಂಶ ಹೆಚ್ಚಾಗಿದೆ. ಮಳೆಯಾದ ಪ್ರದೇಶದ ಜನರು ಸ್ವಲ್ಪ ದಿನ ಬಿಸಿಲಿನ ತಾಪದಿಂದ ದೂರ ಉಳಿದು ಮಳೆಯ ತಂಪನ್ನು ಅನುಭವಿಸಬಹುದಾಗಿದೆ. ಬೆಂಗಳೂರಿ ನಲ್ಲಿ ಮೋಡ ಕವಿದ ವಾತಾವರಣ ಇರಲಿದ್ದು ರಾತ್ರಿ ವೇಳೆಗೆ ಹಗುರ ಮಳೆ ಆಗುವ ಸಾಧ್ಯತೆ ಇದೆ.
- ಬೆಂಗಳೂರಿನಲ್ಲಿ 32 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ ಮತ್ತು 21 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ.
- ಮೈಸೂರಿನಲ್ಲಿ 34 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ ಮತ್ತು 22 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ.
- ಶಿವಮೊಗ್ಗದಲ್ಲಿ 34 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ ಮತ್ತು 22 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ.
- ಬೆಳಗಾವಿಯಲ್ಲಿ 32 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ ಮತ್ತು 21 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ.
- ದಕ್ಷಿಣ ಕನ್ನಡದಲ್ಲಿ 36 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ ಮತ್ತು 25 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ.
- ಉತ್ತರ ಕನ್ನಡದಲ್ಲಿ 34 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ ಮತ್ತು 22 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ.
- ಕಲಬುರಗಿಯಲ್ಲಿ 32 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ ಮತ್ತು 23 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ
- ತುಮಕೂರಿನಲ್ಲಿ 33 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ ಮತ್ತು 22 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ
- ಕೋಲಾರದಲ್ಲಿ 32 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ ಮತ್ತು 22 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ.
- ದಾವಣಗೆರೆಯಲ್ಲಿ 34 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ ಮತ್ತು 23 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ.
ಬಿಸಿಲಿನ ತಾಪಕ್ಕೆ ಸೋತು ಹೋಗಿರುವ ಜನರಿಗೆ ಒಂದು ರೀತಿಯಲ್ಲಿ ತಂಪು ಮಾಡಲು ಮಳೆಯೂ ಬರುತ್ತಿದೆ ಎನ್ನಬಹುದು. ಈ ಬಿಸಿಲಿಗೆ ಒಂದು ರೀತಿ ನಾವೇ ಕಾರಣ ಏಕೆಂದರೆ ಮಾನವನ ಕೆಲಸದಿಂದ ಆಮ್ಲಜನಕವು ಕಡಿಮೆಯಾಗಿ ಇಂಗಾಲದ ಡೈಯಾಕ್ಸೈಡ್ ಹೆಚ್ಚಾಗುತ್ತಿದೆ. ಈ ಇಂಗಾಲದ ಡೈಯಾಕ್ಸೈಡ್ ಓಝೋನ್ ಪದರದ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ ಅದರಿಂದ ಬಿಸಿಲಿನ ತಾಪವು ಕೂಡ ಹೆಚ್ಚಾಗುತ್ತದೆ.
ಇದನ್ನು ಓದಿ: ಅಕ್ಕನ ಮದುವೆಗೆ ಓಡಾಡ್ತೀರೋ ಬುಲೆಟ್ ಪ್ರಕಾಶ್ ಮಗ. ಅಕ್ಕನ ಮದುವೆ ತಯಾರಿ ಬಗ್ಗೆ ರಕ್ಷಕ್ ಹೇಳಿದ್ದೇನು ಗೊತ್ತಾ?
ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram