Karnataka Rain update: ಮಳೆ, ಮಳೆ, ಮಳೆ ರಾಜ್ಯಾದ್ಯಂತ ಈಗಾಗಲೇ ಶುರುವಾಗಿರುವ ಮಳೆಯ ಆರ್ಭಟ ಕಳೆದ ಮೂರು ದಿನಗಳಿಂದ ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಆಗುತ್ತಿದೆ ಇನ್ನು ಮುಂದಿನ 48 ಗಂಟೆಗಳ ಕಾಲ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಭಾರಿ ಮಳೆ ಆಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಈಗಾಗಲೇ ಸೂಚನೆ ನೀಡಿದೆ ಕಳೆದ ಮೂರು ದಿನಗಳಿಂದ ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ದಾಖಲೆ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ಹೇಳಿತ್ತು. ಇದೀಗ ಮುಂದಿನ 48 ಗಂಟೆಗಳಲ್ಲಿ ಈ ಏಳು ಜಿಲ್ಲೆಗಳಿಗೆ ಭಾರಿ ಮಳೆ ಆಗುವ ಮುನ್ಸೂಚನೆ ನೀಡಿದೆ.
ಯಾವ ಯಾವ ಜಿಲ್ಲೆಗಳಲ್ಲಿ ಮುಂದಿನ 48 ಗಂಟೆ ಬಾರಿ ಮಳೆ.?
ಕೋಲಾರ, ಮೈಸೂರು, ಬೆಂಗಳೂರು, ಕೊಡಗು, ಮಂಡ್ಯ, ರಾಮನಗರ, ಕಲಬುರ್ಗಿ ಜಿಲ್ಲೆಗಳಲ್ಲಿ ಮುಂದಿನ 48 ಗಂಟೆಗಳ ಅವಧಿಯಲ್ಲಿ ಭಾರಿ ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ ಇನ್ನೂ ಈ ಜಿಲ್ಲೆಗಳನ್ನು ಹೊರತುಪಡಿಸಿ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಆಗುವ ಮುನ್ಸೂಚನೆ ಇದೆ. ಈ 2023ರಲ್ಲಿ ಇದೆ ಮೊದಲ ಬಾರಿಗೆ ಚಂಡಮಾರುತ ಸೈಕ್ಲೋನ್ ಬಂಗಾಳ ಕೊಲ್ಲಿಯ ಮೂಲಕ ರಾಜ್ಯಕ್ಕೆ ಅಪ್ಪಳಿಸಲಿದೆ ಈ ಸೈಕ್ಲೋನ್ ಪ್ರಭಾವ ದಿಂದ ರಾಜ್ಯ ದಲ್ಲಿ ಬೆಂಬಿಡದೆ ಸತತ ವಾಗಿ ರಣ ಭಯಂಕರ ಮಳೆ, ಗಾಳಿ, ಸುಳಿಗಾಳಿ, ಮಿಂಚು, ಗುಡುಗು, ಸಹಿತ ಆಲಿಕಲ್ಲು ಮಳೆ ಉಂಟಾಗಲಿದೆ ಮುಂದಿನ ಕೆಲವೇ ದಿನ ಗಳಲ್ಲಿ ಬೆಂಗಳೂರು ಸೇರಿದಂತೆ ಕರ್ನಾಟಕದ ವಿವಿಧ ಜಿಲ್ಲೆ ಗಳಿಗೆ ಮಳೆಯ ಆಘಾತ ಎದುರಾಗುವ ಸಂಭವವಿದೆ ಹವಾಮಾನ ದಲ್ಲಿ ಬದಲುಗೊಂಡ ವೈಪರಿತ್ಯ ತೀವ್ರ ಸ್ವರೂಪ ಪಡೆದಿರುವುದು ಖಚಿತವಾಗಿದೆ.
ಮೂರು ದಿನಗಳಿಂದ ಬೆಂಗಳೂರಿ ನಲ್ಲಿ ಉತ್ತಮ ಮಳೆಯಾಗಿದ್ದು ಸೋಮವಾರ ಬೆಳಗ್ಗೆ ಯಿಂದ ಮೋಡ ಕವಿದ ವಾತಾವರಣ ಇತ್ತು ರಾತ್ರಿ ಹೊತ್ತಿಗೆ ಹಲವು ಭಾಗಗಳಲ್ಲಿ ಮಳೆಯಾಗಿದೆ ಮಂಗಳವಾರ ಕೂಡ ಬೆಂಗಳೂರಿನ ಹಲವು ಭಾಗಗಳಲ್ಲಿ ಸ್ವಲ್ಪ ಮಟ್ಟಿಗೆ ಮಳೆ ಬಿದ್ದಿದೆ ಇನ್ನು ಬುಧವಾರ ದಂದು ಸ್ವಲ್ಪ ಬಿಸಿಲು ಬಂದಿತ್ತು ತಂಪಾದ ವಾತಾವರಣ ಸೃಷ್ಟಿಯಾಗಿತ್ತು.
ಇದನ್ನೂ ಓದಿ: ರೈಲಿನಲ್ಲಿ ರಾತ್ರಿ ಸಮಯ ಜರ್ನಿ ಮಾಡುವವರಿಗೆ ಹೊಸ ನಿಯಮ ಎಲ್ಲರೂ ನೋಡಬೇಕಾದ ವಿಷಯ.
ಕೆಲವು ಪ್ರಮುಖ ಜಿಲ್ಲೆಗಳ ಗುರುವಾರದ ಉಷ್ಣಾಂಶ
- ಬೆಂಗಳೂರಿನಲ್ಲಿ 30 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ ಮತ್ತು 21 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ.
- ಮೈಸೂರಿನಲ್ಲಿ 33 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ ಮತ್ತು 21 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ.
- ಕೊಡಗು 30 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ ಮತ್ತು 18 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ.
- ಮಂಡ್ಯ 33 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ ಮತ್ತು 22 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ.
- ರಾಮನಗರ 32 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ ಮತ್ತು 22 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ.
- ಕಲಬುರ್ಗಿ 34 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ ಮತ್ತು 24 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ.
- ಕೋಲಾರ 31 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ ಮತ್ತು 22 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ.
- ಬೆಳಗಾವಿ 34 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ ಮತ್ತು 20 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ.
ಇದನ್ನೂ ಓದಿ: ಚಿಕ್ಕ ವಯಸ್ಸಿಗೆ ಮರಣ ಹೊಂದಿದ ಕನ್ನಡದ ಕಿರುತೆರೆ ನಟ ನಟಿಯರು!
ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram