ಕರುನಾಡಿನಲ್ಲಿ ಒಂದು ವಾರ ಮಳೆ ಬೀಳುವ ಸಾಧ್ಯತೆ..

Karnataka Rain Update

ಉರಿ ಬಿಸಿಲಿನಿಂದ ತತ್ತರಿಸಿದ ಜನರಿಗೆ ಹವಾಮಾನ ಇಲಾಖೆಯು ಮುಂದಿನ ಒಂದು ವಾರ ಕರ್ನಾಟಕದ ಹಲವು ಭಾಗಗಳಲ್ಲಿ ಮೇಲೆ ಬೀಳುವ ಸಾಧ್ಯತೆ ಇದೆ ಎಂದು ತಿಳಿಸಿದೆ.

WhatsApp Group Join Now
Telegram Group Join Now

ಬರಗಾಲದ ಸಂಕಷ್ಟದಲ್ಲಿ ಕರುನಾಡು :- ಹೋದ ವರ್ಷ ಮಳೆ ಸಕಾಲದಲ್ಲಿ ಆಗದೆ ಈಗ ನೀರಿನ ಅಭಾವ ಹೆಚ್ಚಾಗಿದೆ. ಜನರು ಕುಡಿಯುವ ನೀರಿಗೆ ಪರದಾಡುತ್ತಾ ಇದ್ದಾರೆ. ಎಲ್ಲ ನದಿಗಳು ಬತ್ತಿ ಹೋಗುತ್ತಿವೆ. ರಾಜ್ಯದ ಬಹುತೇಕ ಜಿಲ್ಲೆಗಳನ್ನು ಬರಗಾಲ ಪೀಡಿತ ಪ್ರದೇಶ ಎಂದು ಗುರುತಿಸಲಾಗಿದೆ. ರಾಜ್ಯ ರಾಜಧಾನಿಯಲ್ಲಿ ಕಲುಷಿತ ನೀರನ್ನು ಫಿಲ್ಟರ್ ಮಾಡಿ ನಿತ್ಯ ಬಳಕೆಗೆ ನೀಡುವ ಕಾರ್ಯ ಕೆಲವು ಪ್ರೈವೇಟ್ ಕಂಪನಿಗಳು ಟ್ಯಾಂಕರ್ ಮೂಲಕ ನೀರನ್ನು ಕೊಡ್ತಾ ಇದ್ದಾರೆ. 

ಸರ್ಕಾರವು ಜನರಿಗೆ ತೊಂದರೆ ಆಗದಂತೆ ಹಲವು ಕ್ರಮಗಳನ್ನು ಈಗಾಗಲೇ ತೆಗೆದುಕೊಂಡಿದೆ. ಇಂತಹ ಕಠಿಣ ಪರಿಸ್ಥಿತಿಯಲ್ಲಿ ಈಗ ಹವಾಮಾನ ಇಲಾಖೆಯ ವರದಿ ಜನರಿಗೆ ಸಂತಸ ತಂದಿದೆ. ಈಗಾಗಲೇ ಮಳೆ ಬರಲಿ ಎಂದು ಹಲವು ಕಡೆ ಪೂಜೆ ಪುನಸ್ಕಾರ. ಹಾಗೆ ಮೋಡ ಬಿತ್ತನೆ ಮಾಡುವ ಬಗ್ಗೆಯೂ ಚಿಂತನೆ ನಡೆಸುವ ಬಗ್ಗೆ ಕೆಲವು ಚರ್ಚೆಗಳು ನಡೆದಿವೆ.ಆದರೆ ಮೋಡ ಬಿತ್ತನೆ ಬಗ್ಗೆ ಯಾವುದೇ ಅಧಿಕೃತ ವರದಿ ಇಲ್ಲ.

ಹವಾಮಾನ ಇಲಾಖೆಯ ವರದಿ ಏನು?

ಹವಾಮಾನ ಇಲಾಖೆಯು ರಾಜ್ಯದ ಹಲವು ಜಿಲ್ಲೆಗಳಲ್ಲಿ ಮೇಲೆ ಬೀಳುವ ಸಾಧ್ಯತೆ ಇದೆ. ಬೀದರ್, ಕಲಬುರ್ಗಿ, ವಿಜಯನಗರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಮಗಳೂರು, ಹಾಸನ, ಕೊಡಗು, ಮಂಡ್ಯ, ಕೋಲಾರ, ರಾಮನಗರ, ಮೈಸೂರು ಸೇರಿ ರಾಜ್ಯದ ಹಲವೆಡೆ ಮೇಲೆ ಬೀಳುವ ಸಾಧ್ಯತೆ ಹೆಚ್ಚಿದೆ. ನಿನ್ನೆ ರಾಜ್ಯದ ಕೆಲವು ಭಾಗಗಳಲ್ಲಿ ಮಳೆ ಆಗಿದ್ದು, ಬೀದರ್ ಜಿಲ್ಲೆಯ ಕೆಲವು ತಾಲೂಕಿನಲ್ಲಿ ಮಳೆ ಆಗಿರುವ ವರದಿ ಆಗಿದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಕಳೆದ ದೀಪಾವಳಿ ನಂತರ ರಾಜ್ಯದಲ್ಲಿ ಒಂದು ಮಳೆ ಆಗದೆ ಇರುವುದು ಬರಗಾಲಕ್ಕೆ ಕಾರಣವಾಗಿದೆ. ಇದು ಹೀಗೆ ಮುಂದುವರೆದರೆ ರಾಜ್ಯದಲ್ಲಿ ಇರುವ ಎಲ್ಲ ಕರೆಗಳು ಹೊಳೆಗಳು ಬತ್ತಿ ಹೋಗುತ್ತವೆ. ಈ ವರ್ಷವೂ ಮಳೆ ಸಕಾಲಕ್ಕೆ ಆಗದೆ ಇದ್ದರೆ ರೈತನಿಗೆ ಸಕಾಲಕ್ಕೆ ಬೇಳೆ ಬೆಳೆಯಲು ಆಗದೆ ಮುಂದಿನ ವರ್ಷವು ಅಕ್ಕಿಯ ಕೊರತೆ ಹಾಗೂ ನೀರಿನ ಕೊರತೆ ಉಂಟಾಗುವ ಸಾಧ್ಯತೆ ಹೆಚ್ಚಿದೆ. ಜನರು ಈಗಿಂದಲೇ ನೀರಿನ ಶೇಖರಣೆ ಮಾಡುವುದು ಉತ್ತಮ ಎಂದು ಸರ್ಕಾರ ಮತ್ತು ಹವಾಮಾನ ಇಲಾಖೆ ತಿಳಿಸಿದೆ.

ಇದನ್ನೂ ಓದಿ: ಅಬ್ಬಬ್ಬಾ! ಚಾಲೆಂಜಿಂಗ್ ಸ್ಟಾರ್ ದರ್ಶನ್ ಪತ್ನಿ ವಿಜಯಲಕ್ಷ್ಮಿ ಖರೀದಿಸಿದ ಕಾರಿನ ಬೆಲೆ ಕೇಳಿದರೆ ತಲೆ ತಿರುಗುತ್ತದೆ 

ಬೆಂಗಳೂರಿನ ನೀರಿನ ಅಭಾವದ ಬಗ್ಗೆ ಡಿಕೆ ಶಿವಕುಮಾರ್ :-

ಬೆಂಗಳೂರು ನಗರಾಭಿವೃದ್ಧಿ ಸಚಿವರಾದ ಡಿಕೆ ಶಿವಕುಮಾರ್ ಅವರು ನೀರಿನ ಬಿಕ್ಕಟ್ಟಿನ ಕುರಿತು ಮಾಧ್ಯಮ ಮಿತ್ರರೊಂದಿಗೆ ಮಾತನಾಡಿ ಬೆಂಗಳೂರಿಗೆ ಕುಡಿಯುವ ನೀರು ಪೂರೈಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಬೆಂಗಳೂರಿನ 31,900 ಬೋರ್ವೆಲ್‌ಗಳ ಈಗಾಗಲೇ ಬತ್ತಿ ಹೋಗಿವೆ. ಹಾಳಾಗಿರುವ ಬೋರ್ವೆಲ್ಗಳನ್ನು ರಿಪೇರಿ ಮಾಡುವ ಕಾರ್ಯ ನಡೆಯುತ್ತಿದೆ. ಟ್ಯಾಂಕರ್‌ಗಳ ಮೂಲಕ ನೀರು ಪೂರೈಕೆ ಮಾಡಲಾಗುವುದು. ಜೊತೆಗೆ ಸ್ಲಂಗಳಿಗೆ ಉಚಿತ ಕುಡಿಯುವ ನೀರು ನೀಡಲಾಗುತ್ತದೆ. ಅಪಾರ್ಟಮೆಂಟ್‌ಗಳಿಗೆ ನೀರಿನ ದರವನ್ನು ನಿಗದಿಪಡಿಸಲಾಗಿದೆ. ನೀರು ಪೂರೈಕೆಯ ಮಾಫಿಯಾಗೆ ಕಡಿವಾಣ ಹಾಕಲು ಬಿಬಿಎಂಪಿ ಈಗಾಗಲೇ ಕಡಿಮೆ ದರದಲ್ಲಿ ನೀರು ಪೂರೈಸಲು ಮುಂದಾಗಿದೆ. ಈ ಸೇವೆಯನ್ನು ಜನರು ಬಳಸಿಕೊಳ್ಳಬೇಕು ಎಂದು ತಿಳಿಸಿದೆ. ಜನರು ನೀರಿನ ಮರುಬಳಕೆ ಮಾಡಬೇಕು. ಇದರಿಂದ ಸ್ವಲ್ಪ ನೀರಿನ ಅಭಾವವನ್ನು ಕಡಿಮೆ ಮಾಡಬಹುದು ಎಂದು ತಿಳಿಸಿದೆ.

ಇದನ್ನೂ ಓದಿ: ಎಲೆಕ್ಷನ್ ಲಿಸ್ಟ್ ನಲ್ಲಿ ನಿಮ್ಮ ಹೆಸರಿನ ನೋಂದಣಿ ಪ್ರಕ್ರಿಯೆ ಹೇಗೆ?