Weather forecast: ಕರಾವಳಿ ಸಹಿತ ಮಲೆನಾಡು ಹಾಗೂ ದಕ್ಷಿಣ ಒಳನಾಡಿನಲ್ಲಿ ಇನ್ನೂ ಒಂದು ವಾರಗಳ ಕಾಲ ಭಾರಿ ಮಳೆ ಆಗಲಿದ್ದು, ರೈತರಿಗೆ ಇದು ಸಿಹಿ ಸುದ್ದಿ ಅಂತಾನೆ ಹೇಳಬಹುದು. ಈಗಾಗಲೇ ರಾಜ್ಯದಲ್ಲಿ ಕೆಲವು ಕಡೆ ಮಳೆ ಆಗುತ್ತಿದ್ದು ಇನ್ನೂ ಹಲವು ಜಿಲ್ಲೆಗಳು ಸೇರಿದಂತೆ ಗುಡುಗು ಮಿಂಚು ಸಮೇತ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚಕರು ತಿಳಿಸಿದ್ದಾರೆ. ಈ ಮಳೆಯಿಂದಾಗಿ ರೈತರು ಸಂತಸದಿಂದ ಇದ್ದಾರೆ. ಇನ್ನು ಕಾವೇರಿ ಜಲಾಶಯದ ಮಟ್ಟ ತುಂಬಬೇಕು ಎಂದರೆ ಇನ್ನೂ ಸುಮಾರು ದಿನಗಳ ಕಾಲ ಮಳೆಯಾಗಬೇಕಿದೆ. ಈಗಾಗಲೇ ಮುಂಗಾರು ಕೈ ಕೊಟ್ಟಿದ್ದು ಹಿಂಗಾರಿನ ಮಳೆಗೆ ಕಾದು ನಿಂತ ರೈತರಿಗೆ ಈ ಮಳೆಯು ತಂಪೆರದಂತಾಗಿದೆ.
ದೈನಂದಿನ ಹೊಸ ಮಾಹಿತಿಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ: Click Here To Join WhatsApp
ಇದನ್ನೂ ಓದಿ: ಜಿಯೋ ಲ್ಯಾಪ್ಟಾಪ್ ಕೇವಲ 15000 ಕ್ಕೆ ಲಭ್ಯವಿದೆ, ಖರೀದಿಸುವವರು ಪೂರ್ತಿ ಮಾಹಿತಿಯನ್ನ ತಿಳಿದುಕೊಳ್ಳಿ.
ಯಾವ ಕಡೆಗಳಲ್ಲಿ ಎಷ್ಟೆಷ್ಟು ಮಳೆಯಾಗಿದೆ ಎನ್ನುವ ಮಾಹಿತಿಯನ್ನು ತಿಳಿದುಕೊಳ್ಳೋಣ
ಉಡುಪಿ ಜಿಲ್ಲೆಯಲ್ಲಿ 112 ಮಿಲಿ ಮೀಟರ್ ಮಳೆಯಾದರೆ, ದಕ್ಷಿಣ ಕನ್ನಡದಲ್ಲಿ 97 ಮಿಲಿ ಮೀಟರ್, ಮೈಸೂರಿನಲ್ಲಿ 93 ಹಾಗೂ ಮಂಡ್ಯದಲ್ಲಿ 83, ಉತ್ತರ ಕನ್ನಡ 79, ಚಿಕ್ಕಮಗಳೂರು 78 ಮತ್ತು ಹಾಸನ 67 ಹಾಗೂ ತುಮಕೂರು 63 ಮಿಲಿ ಮೀಟರ್ ಸೇರಿದಂತೆ ರಾಜ್ಯದ ಹಲವೆಡೆ ಜಿಲ್ಲೆಗಳಲ್ಲಿ ಈಗಾಗಲೇ ಸುಮಾರು ಮಳೆಯಾಗಿದ್ದು, ಇನ್ನೂ ಒಂದು ವಾರಗಳ ಕಾಲ ವರುಣದೇವನ ಆರ್ಭಟ ಹೆಚ್ಚಾಗಲಿದೆ ಎಂದು ಮೂಲಗಳು ತಿಳಿಸಿವೆ.
ಹಲವೆಡೆ ಆಗುತ್ತಿರುವ ಭಾರಿ ಮಳೆಯಿಂದಾಗಿ ವಾಹನ ಸವಾರರು ಪರದಾಡುವ ಸ್ಥಿತಿ ಎದುರಾಗಿದೆ. ರಸ್ತೆಗಳೆಲ್ಲ ಜಲಾವೃತವಾಗಿದ್ದು ವಾಹನ ಸವಾರರಿಗೆ ಮತ್ತು ಶಾಲಾ ಕಾಲೇಜು ಮಕ್ಕಳಿಗೆ ಸ್ವಲ್ಪ ಸಂಕಷ್ಟ ಎದುರಾಗಿದೆ. ಇದೇ ರೀತಿ ಒಂದು ವಾರಗಳ ಕಾಲ ಮಳೆಯಾದರೆ ಕಾವೇರಿ ಜಲಾಶಯ ತುಂಬಿ ಒಳಹರಿವು ಹೆಚ್ಚಾಗಲಿದೆ ಎಂದು ಮೂಲಗಳು ತಿಳಿಸಿವೆ.
ಇನ್ನು ಉತ್ತರ ಕನ್ನಡ ಹಾಗೂ ದಕ್ಷಿಣ ಕನ್ನಡ ಸೇರಿದಂತೆ ಇನ್ನೂ ಕೂಡ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆ ಬೀಳುವ ಸಾಧ್ಯತೆ ಇದೆ. ಶಿವಮೊಗ್ಗ, ಚಿಕ್ಕಮಂಗಳೂರು, ಹಾಸನ, ಮಂಡ್ಯ, ತುಮಕೂರು, ಬೆಳಗಾವಿ, ಹಾಗೂ ಕೊಡಗು ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಇಲ್ಲಿ ವಾಸಿಸುವ ಜನರಿಗೆ ಭದ್ರತೆಯಿಂದ ಇರಲು ಸೂಚಿಸಲಾಗಿದೆ.
ಇನ್ನೂ ಹಲವಡೆ ಸೇರಿದಂತೆ ಬೆಂಗಳೂರು ಕೋಲಾರ ಚಿತ್ರದುರ್ಗ ದಾವಣಗೆರೆ ಮತ್ತು ಚಿಕ್ಕಬಳ್ಳಾಪುರ ಸೇರಿದಂತೆ ಸಾಧಾರಣ ಮಳೆ ಬೀಳುವ ಸಾಧ್ಯತೆ ಇದೆ. ಈಗಾಗಲೇ ರೈತರು ಬರಪೀಡಿತರಾಗಿದ್ದು, ಮುಂಗಾರು ಕೈ ಕೊಟ್ಟ ಹಿನ್ನೆಲೆಯಲ್ಲಿ ಹಿಂಗಾರಿನ ಮಳೆಗೆ ಕಾದು ಕೂತಿದ್ದಾರೆ. ಬೀಜಗಳೆಲ್ಲ ಫಸ್ಸಲು ಕಂಡಿದ್ದು, ವರುಣನ ಬರುವಿಕೆಯನ್ನು ಕಾಯುತ್ತಿವೆ . ಒಟ್ಟಿನಲ್ಲಿ ರೈತರು ಹಿಂಗಾರಿನ ಮಳೆಗಾಗಿ ಕೈ ಕಟ್ಟಿ ಕಾಯುತ್ತಾ ಕುಳಿತಿದ್ದಾರೆ. ಜಮೀನಿನಲ್ಲಿ ಬೆಳೆಗಳೆಲ್ಲ ಚಿಗುರಿದ್ದು ಈ ಹೊತ್ತಿಗೆ ವರುಣದೇವನು ಭೂಮಿಯನ್ನ ಚುಂಬಿಸಬೇಕಿತ್ತು. ಆದರೆ ವರುಣನ ಬರುವಿಕೆಯನ್ನು ಕಾಯುತ್ತಾ ರೈತರು ಬೆಳೆಯನ್ನು ನೋಡುತ್ತಾ ಕೂತಿದ್ದಾರೆ. ಏನೇ ಇರಲಿ ಹವಾಮಾನ ಇಲಾಖೆ ಮುನ್ಸೂಚಕರು ಹಿಂಗಾರಿನ ಬಗ್ಗೆ ಮಾಹಿತಿಯನ್ನು ಕೊಟ್ಟಿದ್ದಾರೆ ಇನ್ನು ಒಂದು ವಾರಗಳ ಕಾಲ ಮಳೆ ಆಗಲಿದೆ, ಈ ನಿಟ್ಟಿನಲ್ಲಿ ಮಳೆ ಆಗುತ್ತಾ ಅಂತ ಕಾಯಬೇಕಿದೆ.
ಇದನ್ನೂ ಓದಿ: ನೀಟಾಗಿ ಡವ್ ಮಾಡ್ತವ್ನೆ ನಂಬಬೇಡ್ರೋ; ಡ್ರೋನ್ ಪ್ರತಾಪ್ ನ ಎಜುಕೇಟಿವ್ ಪ್ರಾಡ್ ಎಂದ ನವರಸ ನಾಯಕ
ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram