ರಾಜ್ಯ ಸರ್ಕಾರ ಒಂದು ಇಲ್ಲೊಂದು ಯೋಜನೆಗಳ ಮೂಲಕ ರಾಜ್ಯಾದ್ಯಂತ ಸದ್ದು ಮಾಡ್ತಾ ಇದ್ದು ಇದೀಗ ಗ್ರಾಮೀಣ ಪ್ರದೇಶದ ಬಡ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಹೊಸ ಯೋಜನೆಯನ್ನು ಜಾರಿಗೊಳಿಸಿದೆ. ಹೌದು ವಿದ್ಯಾರ್ಥಿಗಳು ಹಣದ ಸಮಸ್ಯೆಯಿಂದಾಗಿ ಬಸ್ ಸೌಕರ್ಯದ ಸಮಸ್ಯೆಯಿಂದಾಗಿ ಶಾಲಾ ಕಾಲೇಜುಗಳಿಗೆ ಹೋಗಲಾಗದೆ ಮನೆಯಲ್ಲಿಯೇ ಇದ್ದು ತಮ್ಮ ವಿದ್ಯಾಭ್ಯಾಸವನ್ನು ಅರ್ಧಕ್ಕೆ ಮಟಕುಗೊಳಿಸಿರುವ ಸಾಕಷ್ಟು ಉದಾಹರಣೆಗಳಿವೆ ಇದಕ್ಕಾಗಿ ಸರ್ಕಾರ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದೆ ಅದರಲ್ಲಿ ಬೈಸಿಕಲ್ ಯೋಚನೆ ಒಂದು ಆದರೆ ಇದೀಗ ಮತ್ತೊಂದು ಪ್ರೋತ್ಸಾಹ ಧನದ ರೂಪದಲ್ಲಿ ಸರ್ಕಾರ ಹಣ ನೀಡಲು ಮುಂದಾಗಿದ್ದು ಸರ್ಕಾರದಿಂದ ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳಿಗೆ ತಿಂಗಳಿಗೆ 600ರೂಪಾಯಿಯಂತೆ 6ತಿಂಗಳವಾರೆಗೆ ಭತ್ಯೆ ಸಿಗಲಿದೆ.
ಹೌದು ಸಾರಿಗೆ ಭತ್ಯೆ ರೂಪದಲ್ಲಿ ಇದೀಗ ವಿದ್ಯಾರ್ಥಿಗಳಿಗೆ ಸರ್ಕಾರ ಹಣವನ್ನು ನೀಡಲು ಮುಂದಾಗಿದ್ದು ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಇದರ ಉಪಯೋಗವನ್ನು ಪಡೆದುಕೊಳ್ಳಬಹುದು ಹಾಗಾದ್ರೆ ವಿದ್ಯಾರ್ಥಿಗಳು ಯಾವ ರೀತಿ ಸಾರಿಗೆ ಭತ್ಯೆ ಪಡೆದುಕೊಳ್ಳಬಹುದು? ಅದಕ್ಕೆ ಮಾಡಬೇಕಾಗಿರುವ ಕೆಲಸ ಏನು? ಶಿಕ್ಷಣ ಸಚಿವರು ಈ ಕುರಿತಂತೆ ಹೇಳಿರ್ತಕ್ಕಂತ ವಿಷಯವಾದ್ರು ಏನು ಇದೆಲವನ್ನು ಸಂಪೂರ್ಣವಾಗಿ ನೋಡ್ತಾ ಹೋಗೋಣ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram
ಸಮಗ್ರ ಶಿಕ್ಷಣ ಕರ್ನಾಟಕ ಯೋಜನೆಯಡಿಯಲ್ಲಿ ಸಿಗಲಿದೆ ಭತ್ಯೆ
ಹೌದು ಇತ್ತೀಚಿನ ದಿನಗಳಲ್ಲಿ ಒಂದು ಕಡೆ ಬಸ್ ಗಳ ಸಮಸ್ಯೆ ಮತ್ತೊಂದು ಕಡೆ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಬಸ್ ಪಾಸ್ ಮಾಡಿಸಿಕೊಳ್ಳಲು ಹಣದ ಸಮಸ್ಯೆ ಜೊತೆಗೆ ಬಸ್ ಪಾಸ್ ಮಾಡಿಸಿಕೊಳ್ಳುವ ಮೊದಲು ಶಾಲಾ ಕಾಲೇಜುಗಳಿಗೆ ಹೋಗಲು ಮನೆಯಲ್ಲಿ ಇರತಕ್ಕಂತ ಬಡತನದಿಂದಾಗಿ ಶಾಲಾ-ಕಾಲೇಜುಗಳ ಆರಂಭದ ದಿನಗಳಲ್ಲಿ ಕಾಲೇಜು ಶಾಲೆಗಳಿಗೆ ಹೋಗದೆ ಮನೆಯಲ್ಲಿಯೇ ಇರತಕ್ಕಂಥ ಸಾಕಷ್ಟು ಉದಾಹರಣೆಗಳು ಇದ್ದವು. ಅಲ್ದೆ ಸರ್ಕಾರಾನೂ ಕೂಡ ಉಚಿತವಾಗಿ ಬಸ್ ಪಾಸ್ ವ್ಯವಸ್ಥೆಯನ್ನು ಕೂಡ ಮಾಡಿತ್ತು. ಇದರ ಮಧ್ಯೆ ಇದೀಗ ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸಾರಿಗೆ ಭತ್ಯೆಯನ್ನು ಕೊಡಲು ರಾಜ್ಯ ಸರ್ಕಾರ ನಿರ್ಧರಿಸಿದ್ದು ಕೇಂದ್ರ ಸರ್ಕಾರದ ಸಮಗ್ರ ಶಿಕ್ಷಣ ಕರ್ನಾಟಕ ಯೋಜನೆಯ ಅಡಿಯಲ್ಲಿ ಪ್ರತಿ ತಿಂಗಳು ಅಂದ್ರೆ ಆರು ತಿಂಗಳವರೆಗೆ ಪ್ರತಿ ತಿಂಗಳು 600 ರೂಪಾಯಿ ಸಾರಿಗೆ ಭತ್ಯೆಯನ್ನು ಕೊಡಲು ತೀರ್ಮಾನಿಸಿದ್ದು ವರ್ಷದಲ್ಲಿ 6ತಿಂಗಳು ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳು ಸಾರಿಗೆ ಭತ್ಯೆ ಪಡೆದುಕೊಳ್ಳಬಹುದು ಅಂತ ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.
ಇದೀಗ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ನಡಿತಾ ಇದ್ದು ಚಳಿಗಾಲದ ಅಧಿವೇಶನದಲ್ಲಿ ಸಾಕಷ್ಟು ವಿಷಯಗಳು ಚರ್ಚೆಗೆ ಬಂದಿದ್ದು ಅದರಲ್ಲಿ ಬಡ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಂಡಿದ್ದು ಆರು ತಿಂಗಳುಗಳ ಕಾಲ ವಿದ್ಯಾರ್ಥಿಗಳಿಗೆ ಪ್ರತಿ ತಿಂಗಳು 600 ರೂಪಾಯಿಯಂತೆ ಸಾರಿಗೆ ಭತ್ಯೆಯನ್ನ ನೀಡಲಾಗುವುದು ಅಂತ ಶಿಕ್ಷಣ ಸಚಿವರು ತಿಳಿಸಿದ್ದಾರೆ.
ಹೌದು ರಾಜ್ಯದ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಸಿಹಿಸುದ್ದಿ ಸಿಕ್ಕಿದ್ದು, ದೂರದ ಊರುಗಳ ಶಾಲೆಗಳ ತೆರಳುವ ಮಕ್ಕಳಿಗೆ ಕೇಂದ್ರ ಸರ್ಕಾರದ ಪ್ರಾಯೋಜಿತ ಸಮಗ್ರ ಶಿಕ್ಷಣ ಯೋಜನೆಯಡಿ ರೂ.600 ಸಾರಿಗೆ ಭತ್ಯೆ ನೀಡಲಾಗುತ್ತಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ. ಈ ಕುರಿತು ಮಾಹಿತಿ ನೀಡಿರುವ ಸಚಿವರು, ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಸರ್ಕಾರಿ ಬಸ್‌ಗಳ ಮೂಲಕ ಶಾಲೆಗಳಿಗೆ ಹೋಗಲು ಉಚಿತ ಬಸ್ ಪಾಸ್ ವಿತರಿಸಲಾಗುತ್ತಿದೆ. ದೂರದ ಊರುಗಳ ಶಾಲೆಗಳಿಗೆ ತೆರಳುವ ಮಕ್ಕಳಿಗೆ ಕೇಂದ್ರ ಸರ್ಕಾರದ ಪ್ರಾಯೋಜಿತ ʻಸಮಗ್ರ ಶಿಕ್ಷಣ ಕರ್ನಾಟಕʼ ಯೋಜನೆಯಡಿ ಆರು ತಿಂಗಳ ಅವಧಿಗೆ ಪ್ರತಿ ತಿಂಗಳಿಗೆ ರೂ.600 ಸಾರಿಗೆ ಭತ್ಯೆ ನೀಡಲಾಗುತ್ತಿದೆ ಹೇಳಿದ್ದಾರೆ. ರಾಜ್ಯಾದ್ಯಂತ ಶಾಲೆಗಳಲ್ಲಿ ಅಗತ್ಯಕ್ಕೆ ಅನುಗುಣವಾಗಿ ಕೊಠಡಿಗಳ ನಿರ್ಮಾಣ ಕಾರ್ಯ ಚುರುಕುಗೊಳಿಸಲಾಗಿದ್ದು. ಈ ಸಾಲಿನಲ್ಲಿ 9,604 ಶಾಲಾ ಕೊಠಡಿಗಳ ನಿರ್ಮಾಣ ಕಾರ್ಯ ಪೂರ್ಣಗೊಳಿಸಲಾಗುವುದು ಎಂದು ತಿಳಿಸಿದ್ದು, ಪ್ರತಿ ತಿಂಗಳು 600ರೂಪಾಯಿಯಂತೆ 6ತಿಂಗಳು ಸಾರಿಗೆ ಭತ್ಯೆ ನೀಡಲು ಮುಂದಾಗಿದ್ದಾರೆ.
ಇದನ್ನೂ ಓದಿ: ಶಿಕ್ಷಣ ಮತ್ತು ಆರೋಗ್ಯದ ಸಲುವಾಗಿ UPI ವಹಿವಾಟಿನ ಮಿತಿ ಇನ್ನು ಮುಂದೆ 5 ಲಕ್ಷಕ್ಕೆ ಏರಿಕೆಯಾಗಲಿದೆ
ಇದನ್ನೂ ಓದಿ: ಡಿಎಲ್ ಮತ್ತು ಆರ್ ಸಿ ಯಲ್ಲಿ ಹೊಸ ವರ್ಷಕ್ಕೆ ಹೊಸ ರೂಲ್ಸ್; ದೇಶಡೆಲ್ಲೆಡೆ ಒಂದೇ ಮಾದರಿಯ ಸ್ಮಾರ್ಟ್ ಕಾರ್ಡ್ ವಿತರಣೆ