ರಾಜ್ಯ ಸರಕಾರ ಶಕ್ತಿ ಯೋಜನೆ ಜಾರಿಗೊಳಿಸಿದ ಹಿನ್ನೆಲೆಯಲ್ಲಿ ಮಹಿಳಾ ಪ್ರಯಾಣಿಕರ ಸಂಖ್ಯೆ ಹೆಚ್ಚಾಗುತ್ತಿದೆ. ಹೌದು ಮಹಿಳೆಯರಿಗೆ ಸರಕಾರಿ ಸಾರಿಗೆಯಲ್ಲಿ ಉಚಿತ ಪ್ರಯಾಣ ಘೋಷಿಸಿ ಶಕ್ತಿ ಯೋಜನೆಗೆ ಚಾಲನೆ ನೀಡಿದ ಮೊದಲ ವಾರದಲ್ಲೇ ತುಮಕೂರು, ಚಿತ್ರದುರ್ಗ, ಮೈಸೂರು, ಬಳ್ಳಾರಿ, ದಾವಣಗೆರೆ, ಬೆಂಗಳೂರು ಸೇರಿದಂತೆ ರಾಜ್ಯದ ಆನೇಕ ಜಿಲ್ಲೆಗಳಿಂದ ಮಹಿಳೆಯರು ಟ್ರಿಪ್ ಗಳನ್ನ ಹೊಡೆಯುತ್ತಿದ್ದೂ, ದೇವರ ದರ್ಶನ, ಜಾಲಿ ಟ್ರಿಪ್, ಪ್ರವಾಸಿ ತಾಣಗಳಿಗೆ ಹೋಗುವ ಮೂಲಕ ಉಚಿತ ಬಸ್ ಪ್ರಯಾಣದ ಸದ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಇನ್ನು ರಾಜ್ಯ ಸರಕಾರ ಮಹಿಳೆಯರಿಗೆ ಉಚಿತ ಪ್ರಯಾಣದ ಸೌಲಭ್ಯ ಕಲ್ಪಿಸಿದ ನಂತರ ಕರಾವಳಿ ಹಾಗೂ ಮಲೆನಾಡಿನ ಭಾಗದ ಪ್ರಸಿದ್ಧ ದೇವಸ್ಥಾನಗಳಿಗೆ ಭೇಟಿ ನೀಡುವ ಭಕ್ತ ಮಹಿಳೆಯರ ಸಂಖ್ಯೆಯಲ್ಲಿ ಗಣನೀಯ ಹೆಚ್ಚಳವಾಗಿದೆ.
ಇದರಿಂದ ದೇವರ ದರ್ಶನಕ್ಕೆ ತುಸು ಸರತಿಯ ಸಾಲು ಕಂಡು ಬರುತ್ತಿದೆ. ಇದು ಒಂದು ಕಡೆಯಾದ್ರೆ, ಕೆಲವು ಪ್ರಯಾಣಿಕರು ಕಿಟಕಿ ಗಾಜುಗಳನ್ನೇ ಒಡೆದು ಒಳನುಗ್ಗುವ ಯತ್ನ ನಡೆಸೀ ಸೀಟ್ ಗಳಿಗಾಗಿ ಏನ್ ಬೇಕಾದ್ರು ಮಾಡುವ ಮಟ್ಟಕ್ಕೆ ಹೋಗ್ಬಿಟ್ಟಿದ್ದಾರೆ. ಇನ್ನು ಮಹಿಳೆಯರನ್ನು ನಿಯಂತ್ರಿಸಲಾಗದೆ ಚಾಲಕ ಮತ್ತು ಕಂಡಕ್ಟರ್‌ಗಳು ಮೂಕ ಪ್ರೇಕ್ಷಕರಾಗಿ ನೋಡುತ್ತ ನಿಲ್ಲುವಂತಾಗಿದ್ದು, ಉಚಿತ ಎಂಬ ಕಾರಣಕ್ಕೆ ಮಹಿಳೆಯರು ಯಾತ್ರಾ ಸ್ಥಳಗಳಿಗೆ ಅಧಿಕ ಸಂಖ್ಯೆಯಲ್ಲಿ ತೆರಳುತ್ತಿರುವುದರಿಂದ ಬಸ್‌ಗಳಲ್ಲಿ ನೂಕುನುಗ್ಗಲು ಹೆಚ್ಚಾಗಿದೆ, ಅಲ್ದೇ ಈ ನೂಕುನುಗ್ಗಲಿಗೆ ಐದಕ್ಕೂ ಹೆಚ್ಚು ಬಸ್‌ಗಳ ಡೋರ್‌ಗಳು ಕಿತ್ತು ಬಂದಿರೋದು ಕೂಡ ಸುದ್ದಿಯಾಗಿದೆ. ಕೆಲ ವಿಡಿಯೋಗಳು ಕೂಡ ಈ ಕುರಿತು ವೈರಲ್ ಆಗಿವೆ. ಸದ್ಯಕ್ಕೆ ಮೈಸೂರು ಬಸ್ ನಲ್ಲಿ ಪ್ರಯಾಣಿಸುವಾಗ ಮಹಿಳೆಯರು ಸೀಟಿಗಾಗಿ ಹೊಡೆದಡಿಕೊಂಡಿರುವ ವಿಡಿಯೋ ಇದೀಗ ಸಾಕಷ್ಟು ವೈರಲ್ ಆಗ್ತಿದೆ.
ಬಿಟ್ಟಿ ಭಾಗ್ಯಗಳಿಗೆ ಮರುಳಾಗಿರುವ ಮಹಿಳೆಯರು ಬಿಟ್ಟಿ ಟೂರ್ ಗಳನ್ನ ಮಾಡ್ತಾ ದೇವಾಲಯ ಪ್ರಾವಾಸಿ ತಾಣಗಳು ಅಂತ ಜಾಲಿ ಮೂಡ್ ನಲ್ಲಿದ್ದಾರೆ. ಇನ್ನು ಈ ಮಧ್ಯೆ ಮೈಸೂರಿನಲ್ಲಿ ಚಾಮುಂಡಿಬೆಟ್ಟಕ್ಕೆ ತೆರಳುವ ನಗರ ಸಾರಿಗೆ ಬಸ್‌ನಲ್ಲಿ ಮಹಿಳೆಯರ ಗಲಾಟೆ ಮಾಡಿ ಕೊಂಡಿರುವ ದೃಶ್ಯ ಎಲ್ಲ ಕಡೆ ವೈರಲ್ ಆಗ್ತಿದೆ. ಹೌದು ಮಹಿಳೆಯರು ಸೀಟಿಗಾಗಿ ಕೈಕೈ ಮಿಲಾಯಿಸಿದ್ದಾರೆ. ಎಲ್ಲಡೇ ಬಸ್‌ನೊಳಗೆ ಕಿತ್ತಾಡಿಕೊಂಡ ವೀಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡ್ತಿದ್ದು, ನೆಟ್ಟಿಗರಂತೂ ತರೆವರಿ ಕಮೆಂಟ್ಸ್ ಮಾಡ್ತಿದ್ದಾರೆ. ಒಂದೆರಡು ತಾಸುಗಳ ಪ್ರಯಣಕ್ಕೆ ಮಹಿಳೆಯರು ಈ ರೀತಿ ಕಿತ್ತಾಡಿಕೊಂಡು ಬಡೆದಾಡಿಕೊಳ್ಳೋದು ಸರಿ ಅಲ್ಲ ಅನ್ನೋದು ಹಲವರ ಅಭಿಪ್ರಾಯ. ಅಲ್ದೇ ಸೀಟಿ ಗಾಗಿ ಶುರುವಾಗುವ ಜಗಳ ಕೊನೆಗೆ ಎಲ್ಲಿಗೆ ಹೋಗಿ ನಿಲ್ಲುತ್ತೋ ಹೇಳೋಕಾಗಲ್ಲ. ಈಗ ಮೈಸೂರು ನಗರ ಸಾರಿಗೆಯಲ್ಲಿ ನಡೆದಿರುವುದು ಆದೆ ಯಾರು ಏನೇ ಹೇಳಿದ್ರು ಕೂಡ ಅವ್ರ ಗಲಾಟೆ ತಣ್ಣಗಾಗಿಲ್ಲ. ಮಾತಿಗೆ ಮಾತು, ಏಟಿಗೆ ಏಟು ಎಂಬಂತೆ ಜಗಳ ಅತಿರೇಖಾಕ್ಕೆ ಹೋಗ್ತಾಯಿದೆ. ಹೀಗಾಗಿ ಸರ್ಕಾರ ಬಿಟ್ಟಿ ಯೋಜನೆಗಳನ್ನ ತಂದು ಮಹಿಳೆಯರನ್ನ ಬೀದಿ ರಂಪಾಟಕ್ಕೆ ಬಿಟ್ಟಿದೆ ಅಂತ ಸಾಕಷ್ಟು ಜನ ಕಮೆಂಟ್ಸ್ ಹಾಕ್ತಿದ್ದಾರೆ. ಅಲ್ಲದೇ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಅವರನ್ನು ಕೂಡ ಜನ ಈಗ ಪ್ರಶ್ನೆ ಮಾಡ್ತಿದ್ದಾರೆ. ಬಿಟ್ಟಿ ಭಾಗ್ಯ ಕೊಟ್ಟಿದ್ದು ಸಾಕು ಈಗ ನಮ್ಮ ರಾಜ್ಯದಲ್ಲಿ ನಡೀತಿರೋದು ಸಾಕು ಅಂತಿದ್ದಾರೆ.
ಇದನ್ನೂ ಓದಿ: ನಂಬಿದವರಿಂದಲೇ ರಶ್ಮಿಕಾ ಮಂದಣ್ಣನಿಗೆ ಲಕ್ಷ ಲಕ್ಷ ಪಂಗನಾಮ!! ಇನ್ನು ಆಗಬೇಕಿತ್ತು ಇಂಥವರಿಗೆ ಅಂತ ಒಂದಷ್ಟು ಜನ ಶಾಪ.
ಇನ್ನೆರಡು ದಿನಗಳಲ್ಲಿ ಫ್ರೀ ಬಸ್ ಗೆ ಹೊಸ ರೂಲ್ಸ್
ಇನ್ನು ಉಚಿತ ಪ್ರಯಾಣ ಹಿನ್ನೆಲೆಯಲ್ಲಿ ಯೋಜನೆಯನ್ನ ಸರ್ಕಾರ ಯಾವಾಗ ವಾಪಸ್ ತೆಗೆದುಕೊಂಡು ಬಿಡ್ತಾರೋ ಅಂತ ಜನರು ಇರುವಷ್ಟು ದಿನ ಚೆನ್ನಾಗಿ ಬಳಸಿಕೊಳ್ಳೋಣ ಅಂತ ಸಾಗರೋಪಾದಿಯಲ್ಲಿ ಹರಿದು ಬರುತ್ತಿರುವ ಮಹಿಳೆಯರ ದಂಡನ್ನು ಕಂಟ್ರೋಲ್ ಮಾಡೋಕೆ ಸಾರಿಗೆ ಇಲಾಖೆ ಮುಂದಾಗ್ತಿದೆ. ಏನು ಮಾಡೋಕಾಗದ ಪರಿಸ್ಥಿತಿಯಲ್ಲಿರುವ ಡ್ರೈವರ್ ಹಾಗು ಕಂಡಕ್ಟರ್ ಪರವಾಗಿರುವ ರಾಜ್ಯ ಸರ್ಕಾರ ಹೊಸ ಚಿಂತನೆ ನಡೆಸುತ್ತಿದೆ. ಹೌದು ಈ ಬಗ್ಗೆ ಸಾರಿಗೆ ಸಚಿವ ರಾಮಲಿಂಗರೆಡ್ಡಿ, ಉಚಿತ ಪ್ರಯಾಣ ನಿಭಾಯಿಸೋದು ಕಷ್ಟವಾಗೋದ್ರಿಂದ ಈಗ ನಾವು ಹೊಸ ಮಾರ್ಗಸೂಚಿ ತರೋದು ಅನಿವಾರ್ಯವಾಗಿದೆ.
ಹೀಗಾಗಿ ಬುಕ್ಕಿಂಗ್ ಮೂಲಕವೇ ಪ್ರಯಾಣಕ್ಕೆ ಅವಕಾಶ ಕಲ್ಪಿಸುವಂತೆ ಸಾರಿಗೆ ಅಧಿಕಾರಿಗಳಿಗೆ ಸೂಚಿಸಿದ್ದು, ಇನ್ನೆರಡು ದಿನಗಳಲ್ಲಿ ನಿರ್ಧಾರ ಮಾರ್ಗಸೂಚಿ ಹೊರಡಿಸುತ್ತೇವೆ, ಅಲ್ದೇ ಸಾರಿಗೆ ಇಲಾಖೆಯ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದು, ಕಿಟಕಿ ಹೊಡೆಯೋದು, ಡೋರ್ ಒಡೆಯೋದು ಆದ್ರೇ ಕಷ್ಟ. ಶಿಸ್ತಿನಲ್ಲಿ ಬರಬೇಕು. ಅದನ್ನ ಬಿಟ್ಟು ಅತಿರೇಕದ ವರ್ತನೇ ತೋರಿಸಿದ್ರೆ ಪ್ರತ್ಯೇಕ ಮಾರ್ಗಸೂಚಿಗಳನ್ನ ಅಂದ್ರೆ ಗೈಡ್ ಲೈನ್ಸ್ ತನ್ನಿ ಅಂತಾ ಅಧಿಕಾರಿಗಳಿಗೆ ಸಚಿವ ರಾಮಲಿಂಗ ರೆಡ್ಡಿ ಸೂಚನೆ ನೀಡಿದ್ದಾರೆ. ಹೀಗಾಗಿ ಈ ವೀಕೆಂಡ್ ನಿಂದ ಮಹಿಳಾ ಪ್ರಯಾಣಿಕರ ಪ್ರಯಾಣದ ರೂಲ್ಸ್ ಬದಲಾಗುವ ಸಾಧ್ಯತೆಯಿದೆ. ಹೌದು ಸಿಕ್ಕ ಸಿಕ್ಕ ಬಸ್ ಹತ್ತುವಂತಿಲ್ಲ, ಪ್ರಯಾಣ ಮಾಡಬೇಕಾದ್ರೇ ಮುಂಗಡ ಬುಕ್ಕಿಂಗ್ ಕಡ್ಡಾಯವಾಗಿ ಮಾಡಿಕೊಂಡಿರಬೇಕಾಗುತ್ತದೆ ಅಂತ ಹೇಳಲಾಗ್ತಿದ್ದು, ಸದ್ಯ ಆಗ್ತಿರುವಂತಹ ಇಂತಹ ಘಟನೆಗಳಿಗೆ ಬ್ರೇಕ್ ಹಾಕಲು ಸಾರಿಗೆ ಇಲಾಖೆ ಏನು ನಿರ್ಧಾರ ಕೈಗೊಂಡು ಕ್ರಮ ತೆಗೆದುಕೊಳ್ಳುತ್ತೋ ಗೊತ್ತಿಲ್ಲ, ಅದನ್ನ ಕಾದು ನೋಡಬೇಕಿದೆ.
ಉಚಿತ ಪ್ರಯಾಣದ ವೇಳೆ ಬಸ್ ಸೀಟಿಗಾಗಿ ಮಹಿಳೆಯರು ಪರಸ್ಪರ ಜಡೆ ಹಿಡಿದು ಮಾರಾಮಾರಿ ನಡೆಸಿದ್ದಾರೆ..#KannadaNews #BreakingNews #KannadaLiveTv #LatestNews #KarnatakaNews #viralvideo#fighting @CMofKarnataka pic.twitter.com/AhrzHvzSyx
— ಸತೀಶ್ ಕಂದಗಲ್ ಪುರ (@sathisho2555) June 20, 2023
ಇದನ್ನೂ ಓದಿ: ಕನ್ನಡದ ಖ್ಯಾತ ಕಿರುತೆರೆ ನಟಿಯೊಂದಿಗೆ ಯೂಟ್ಯೂಬರ್ ಚಂದನ್ ಗೌಡ ಎಂಗೇಜ್ಮೆಂಟ್..
ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram