BPL, APL ಕಾರ್ಡ್ ದಾರರಿಗೆ ಬಿಗ್ ಶಾಕ್; ಒಂದು ಲಕ್ಷದಷ್ಟು ತಿದ್ದುಪಡಿ ಅರ್ಜಿ ರಿಜೆಕ್ಟ್! ಗೃಹಲಕ್ಷ್ಮಿ ಯೋಜನೆಯ ಹಣ ಹಾಗಾದ್ರೆ ಬರಲ್ವಾ?

ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳ ನೋಂದಣಿ ಪ್ರಕ್ರಿಯೆ ಆರಂಭವಾದ ಬಳಿಕ ಮಹಿಳೆಯರು ಪಡಿತರ ಚೀಟಿಯಲ್ಲಿ ಯಜಮಾನಿ ಸ್ಥಾನಕ್ಕಾಗಿ ಆಧಾರ್‌ ಕಾರ್ಡ್‌(Aadhar Card), ರೇಷನ್‌ ಕಾರ್ಡ್‌ ಮತ್ತಿತರೆ ದಾಖಲೆಗಳನ್ನು ಹಿಡಿದು ಪರದಾಡಿದ್ದು ಗೊತ್ತಿರೋ ವಿಚಾರ. ಹೌದು ರಾಜ್ಯ ಸರಕಾರದ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳ ನೋಂದಣಿ ಪ್ರಕ್ರಿಯೆ ಆರಂಭವಾದ ಬಳಿಕ ಮಹಿಳೆಯರು ಪಡಿತರ ಚೀಟಿಯಲ್ಲಿ ಯಜಮಾನಿ ಸ್ಥಾನಕ್ಕಾಗಿ ಆಧಾರ್‌ ಕಾರ್ಡ್‌, ರೇಷನ್‌ ಕಾರ್ಡ್‌ ಮತ್ತಿತರೆ ದಾಖಲೆಗಳನ್ನು ಹಿಡಿದು ಸೇವಾಕೇಂದ್ರ ಹಾಗೂ ಸರಕಾರಿ ಕಚೇರಿಗಳ ಮುಂದೆ ಬೆಳಂಬೆಳಗ್ಗೆಯೇ ಠಿಕಾಣಿ ಹೂಡುತ್ತಿದ್ದರು. ರಾಜ್ಯ ಸರಕಾರ ಜಾರಿಗೆ ತಂದಿರುವ ಗೃಹಲಕ್ಷ್ಮಿ ಯೋಜನೆಯ ಪ್ರಯೋಜನ ಪಡೆಯಲು ಪಡಿತರ ಚೀಟಿ ತಿದ್ದುಪಡಿ, ಆಧಾರ್‌ ತಿದ್ದುಪಡಿ, ಮೊಬೈಲ್‌ ಸಂಖ್ಯೆ ಲಿಂಕ್‌ ಮಾಡಿಸುವುದು ಸೇರಿದಂತೆ ನಾನಾ ಕೆಲಸಗಳಿಗಾಗಿ ಬ್ಯಾಂಕ್‌, ಸೇವಾ ಕೇಂದ್ರ, ತಾಲೂಕು ಕಚೇರಿಗಳ ಬಳಿ ಜಮಾಯಿಸುತ್ತಿದ್ರು, ಯೋಜನೆಯ ನೋಂದಣಿ ಆರಂಭವಾದ ದಿನದಿಂದಲೂ ಫಲಾನುಭವಿಗಳು ಸೂಕ್ತ ದಾಖಲೆ ಒದಗಿಸಿ ಯೋಜನೆಯ ಲಾಭ ಪಡೆಯಲು ಸೇವಾ ಕೇಂದ್ರಗಳ ಬಳಿ ಹರಸಹಾಸವನ್ನೇ ಪಟ್ಟಿದ್ರು, ಅದ್ರೆ ಯೋಜನೆಯ ಲಾಭ ಎಲ್ಲ ಗೃಹಲಕ್ಷ್ಮಿಯರಿಗೂ ಸಿಕ್ಕಿರಲಿಲ್ಲ. ಇದೀಗ ಮತ್ತೊಂದು ಶಾಕ್ ಎದುರಾಗಿದ್ದು, ರೇಷನ್ ಕಾರ್ಡ್ ತಿದ್ದುಪಡಿ ಮಾಡಿಸಿದವರಿಗೆ ಮತ್ತೆ ತಲೆಬಿಸಿ ಅನ್ನಬಹುದು.

WhatsApp Group Join Now
Telegram Group Join Now

ಹೌದು ರೇಷನ್ ಕಾರ್ಡ್(Ration Card) ತಿದ್ದುಪಡಿಗಾಗಿ ಅರ್ಜಿ ಸಲ್ಲಿಸಿದ್ದಾರೆ ಬಹುತೇಕ ಎಪಿಎಲ್(APL) ಕಾರ್ಡ್​ದಾರರ ಅರ್ಜಿಗಳು ತಿರಸ್ಕೃತಗೊಂಡಿವೆ. ಇನ್ನು ಗೃಹಲಕ್ಷ್ಮಿ ಯೋಜನೆಯ(Gruhalakshmi Yojane) ಲಾಭ ಪಡೆಯಲು ತಿದ್ದುಪಡಿಗೆ ಎಪಿಎಲ್ ಕಾರ್ಡ್​ದಾರರು ಮುಂದಾಗಿದ್ದರು. ಹೌದು ಅರ್ಜಿ ಹಾಕಿದವರಲ್ಲಿ ಶೇ.70ರಷ್ಟು ಎಪಿಎಲ್ ಕಾರ್ಡ್​​ದಾರರಿದ್ದಾರೆ. ಇನ್ನು ರಾಜ್ಯದಲ್ಲಿ ಒಟ್ಟು 24 ಲಕ್ಷ‌ APL ಕಾರ್ಡ್​​​ ದಾರರಿದ್ದಾರೆ. ಅದ್ರಲ್ಲಿ ಕಳೆದ 14 ದಿನದಲ್ಲಿ ಅಂದ್ರೆ ಗೃಹಲಕ್ಷ್ಮೀ ಯೋಜನೆಯ ಲಾಭ ಪಡುವ ಉದ್ದೇಶದಿಂದ ಸಾಕಷ್ಟು ಜನ ತಿದ್ದುಪಡಿಗಾಗಿ ಅರ್ಜಿ ಸಲ್ಲಿಸಿದ್ರು.

ಹೌದು ಸುಮಾರು 53 ಸಾವಿರ ಅರ್ಜಿ ತಿದ್ದುಪಡಿಗೆ ಸಲ್ಲಿಕೆಯಾಗಿದ್ದು, ಇದರ ಜೊತೆಗೆ ಈ‌ ಹಿಂದೆ 3.18 ಲಕ್ಷ ಅರ್ಜಿಗಳು ತಿದ್ದುಪಡಿಗೆ ಬಾಕಿ ಇದ್ದವು. ಎಲ್ಲ ಸೇರಿ ಒಟ್ಟು 3.71 ಲಕ್ಷ ಬಿಪಿಎಲ್ ಕಾರ್ಡ್(BPL Card) ತಿದ್ದುಪಡಿಗಾಗಿ ಅರ್ಜಿ ಬಾಕಿ ಇತ್ತು. ಅದರಲ್ಲಿ ಇದೀಗ 1.17 ಲಕ್ಷ ಅರ್ಜಿಗಳಿಗೆ ಆಹಾರ ಇಲಾಖೆ ಒಪ್ಪಿಗೆ ನೀಡಿದೆ. ಆದ್ರೆ ಬರೋಬ್ಬರಿ 93 ಸಾವಿರ ಅರ್ಜಿಗಳು ತಿರಸ್ಕಾರಗೊಂಡಿರುವ ಮಾಹಿತಿ ಲಭ್ಯವಾಗಿದೆ. ಉಳಿದ ತಿದ್ದುಪಡಿ ಅರ್ಜಿಗಳ ಪರಿಷ್ಕರಣೆ ಕಾರ್ಯ ತಿಂಗಳಾಂತ್ಯದೊಳಗೆ ಪೂರ್ಣಗೊಳ್ಳಲಿದೆ ಅಂತ ಹೇಳಲಾಗ್ತಿದೆ.

ದೈನಂದಿನ ಹೊಸ ಮಾಹಿತಿಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ: Click Here To Join WhatsApp

ಗೃಹಲಕ್ಷ್ಮೀ ಹಣದ ನಿರೀಕ್ಷೆಯಲ್ಲಿದ್ದವರಿಗೆ ಶಾಕ್!

ಇನ್ನು ಅರ್ಜಿ ತಿರಸ್ಕೃತ ವಾಗಲು ಆಹಾರ ಇಲಾಖೆ ಕೆಲವೊಂದು ಕಾರಣಗಳನ್ನ ಸಹ ನೀಡಿದೆ. ಬರೋಬ್ಬರಿ 93 ಸಾವಿರ ಅರ್ಜಿಗಳು ಮಾತ್ರ ತಿರಸ್ಕೃತವಾಗಿದೆ ಅಷ್ಟೇ ಆದ್ರೆ ಕಾರ್ಡ್ಗಳು ತೀರಸ್ಕೃತವಾಗಿಲ್ಲ. ಈ ಹಿಂದೆ ಹೇಗೆ ಕಾರ್ಡ್ ಚಾಲ್ತಿಯಲ್ಲಿತ್ತೋ ಆಗೇ ಮುಂದುವರೆಯಲಿದೆ. ಇನ್ನು ತಿದ್ದುಪಡಿ ಅರ್ಜಿ ತಿರಸ್ಕೃತವಾಗಲು ಕಾರಣಗಳು ಏನಪ್ಪಾ ಅಂದ್ರೆ ಮೊದಲಿಗೆ ರಕ್ತಸಂಬಂಧ ಇಲ್ಲದವರ ಹೆಸರನ್ನು ಕಾರ್ಡ್ ಗೆ ಸೇರ್ಪಡೆ ಮಾಡಲಾಗಿದೆ ಎನ್ನಲಾಗಿದೆ. ಇದರ ಜೊತೆಗೆ ಅತ್ತೆ, ಸೊಸೆ ಇಬ್ಬರೂ ಗೃಹ ಲಕ್ಷ್ಮಿ ಯೋಜನೆ ಫಲಾನುಭವಿ ಆಗಲು ಕಾರ್ಡ್ ನ್ನ ಪ್ರತ್ಯೇಕ ಮಾಡಿಕೊಳ್ಳಲು ನಿರ್ಧಾರ ಮಾಡಿ ಡಿಲಿಟ್ ಗೆ ಅರ್ಜಿ ಸಲ್ಲಿಕೆ ಮಾಡಲಾಗಿತ್ತು. ಹೀಗಾಗಿ ಅಂತವರ ಅರ್ಜಿ ತಿರಸ್ಕಾರವಾಗಿತ್ತು.

ಇನ್ನು ಕೆಲವರು ಕುಟುಂಬ ಸದಸ್ಯರು ಬೇರ್ಪಡೆಯಾಗಿದ್ದೀವಿ ಅಂತ ತೋರಿಸಿದ್ದಾರೆ. ಹೀಗಾಗಿ ಅಂತವರ ಅರ್ಜಿಯನ್ನು ರದ್ದು ಮಾಡಲಾಗಿದೆ. ಇನ್ನು ಸರ್ಕಾರಿ ಕೆಲಸದಲ್ಲಿದ್ದವರು ಸಹ ತಿದ್ದುಪಡಿಗೆ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಇದರ ಜೊತೆಗೆ ಗೃಹ ಲಕ್ಷ್ಮಿ ಯೋಜನೆಗಾಗಿ ನಕಲಿ‌ ವಿಳಾಸ ಬದಲಾವಣೆಗೆ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಅದ್ರೆ ಸಂಬಂಧಪಟ್ಟ ಅಧಿಕಾರಿಗಳು ಹೋಗಿ ಪರಿಶೀಲನೆ ಮಾಡಿದಾಗ ನಿಜಾಂಶ ಹೊರಬಿದ್ದಿದ್ದೆ. ಹೀಗಾಗಿ ಅಂತವರ ಅರ್ಜಿಯನ್ನು ಸಹ ತಿದ್ದುಪಡಿಯಿಂದ ಹೊರಗಿಡಲಾಗಿದೆ. ಹೀಗೆ ಆಹಾರ ಇಲಾಖೆ ನಾನಾ ಕಾರಣಗಳನ್ನ ಕೊಟ್ಟು ಸುಮಾರಾಗಿ 93 ಸಾವಿರ ಅರ್ಜಿಗಳನ್ನ ತಿದ್ದುಪಡಿಯಿಂದ ಹೊರಗಿಟ್ಟಿದೆ.

ರಾಜ್ಯದಲ್ಲಿ ಗೃಹಲಕ್ಷ್ಮಿ ಯೋಜನೆಯ(Gruhalakshmi Yojane) ಎರಡು ಸಾವಿರ ಹಣ ಕೆಲವರಿಗೆ ಇನ್ನೂ ಹೋಗಿಲ್ಲ. ಹೌದು ಅರ್ಜಿ ಹಾಕಿದ 1.13 ಕೋಟಿ ಮನೆಯೊಡತಿಯರಲ್ಲಿ 82 ಲಕ್ಷ ಅರ್ಜಿದಾರರಿಗೆ ಹಣ ವರ್ಗಾವಣೆ ಆಗಿದೆ. ಇನ್ನುಳಿದ 28 ಲಕ್ಷ ಅರ್ಜಿದಾರ ಮನೆಯೊಡತಿಯರಿಗೆ ಹಣ ವರ್ಗಾವಣೆ ಆಗಬೇಕಿದೆ. ಇದು ಕೂಡ ನವಂಬರ್ ತಿಂಗಳೊಳಗೆ ಈ ಗೊಂದಲಗಳು ಸರಿಯಾಗಲಿದೆ ಅಂತ ಅಧಿಕಾರಿಗಳು ಮಾಹಿತಿಯನ್ನ ಕೊಟ್ಟಿದ್ದಾರೆ.

ಇದನ್ನೂ ಓದಿ: ಹಬ್ಬದ ಬಳಿಕ ತರಕಾರಿಗಳ ಬೆಲೆ ಎಷ್ಟಾಗಿದೆ ನೋಡಿ? ಟೊಮೆಟೊ, ಈರುಳ್ಳಿ, ಹಸಿರು ಮೆಣಸಿನಕಾಯಿ ದರ ಎಷ್ಟಿದೆ?

ಇದನ್ನೂ ಓದಿ: ಗೃಹಲಕ್ಷ್ಮೀ 2ನೇ ಕಂತಿನ ಹಣ ಯಾವಾಗ ಬರುತ್ತೆ ಗೊತ್ತಾ? ಈ ದಿನದಿಂದಲೇ ನಿಮ್ಮ ಖಾತೆಗೆ ಜಮೆ ಆಗುತ್ತೆ ಹಣ

ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram