ಏಪ್ರಿಲ್ 6 ರಂದು SSLC ಪರೀಕ್ಷೆಯ ಕೊನೆಯ ದಿನ ಆಗಿತ್ತು. ಅದರ ನಂತರ ಏಪ್ರಿಲ್ 15 ರಿಂದ ಮೌಲ್ಯಮಾಪನ ಆರಂಭ ಆಗಿತ್ತು. ಮೌಲ್ಯ ಮಾಪನವನ್ನು ಶೀಘ್ರದಲ್ಲಿ ಮುಗಿಸಿ 2024 ರ SSLC ಫಲಿತಾಂಶವನ್ನು ಬಿಡುಗಡೆ ಮಾಡಲು ಕರ್ನಾಟಕ ಶಾಲಾ ಪರೀಕ್ಷಾ ಮತ್ತು ಮೌಲ್ಯ ಮಾಪನ ಮಂಡಳಿ ತೀರ್ಮಾನಿಸಿದೆ. ಅದರ ಬಗ್ಗೆ ಹೊಸ ಅಪ್ಡೇಟ್ ಇಲ್ಲಿದೆ.
SSLC ಫಲಿತಾಂಶ ಯಾವಾಗ ಬಿಡುಗಡೆ ಆಗುವ ಸಾಧ್ಯತೆ ಇದೆ?: ಮೌಲ್ಯ ಮಾಪನವನ್ನು ಪೂರ್ಣಗೊಳಿಸಿ ಏಪ್ರಿಲ್ ತಿಂಗಳ ಕೊನೆಯ ವಾರ ಅಥವಾ ಮೇ ಮೊದಲ ವಾರದಲ್ಲಿ ಫಲಿತಾಂಶ ಬಿಡುಗಡೆ ಆಗುವ ಸಾಧ್ಯತೆ ಇದೆ ಎಂದು ಇಲಾಖೆ ತಿಳಿಸಿದೆ. ಇನ್ನು ದಿನಾಂಕದ ಬಗ್ಗೆ ಯಾವುದೇ ಖಚಿತ ಮಾಹಿತಿ ದೊರೆಯಲಿಲ್ಲ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ವೆಬ್ಸೈಟ್ ನಲ್ಲಿ ಫಲಿತಾಂಶ ವೀಕ್ಷಣೆ ಮಾಡುವುದು ಹೇಗೆ?: ವೆಬ್ಸೈಟ್ ಮೂಲಕ ಫಲಿತಾಂಶ ವೀಕ್ಷಿಸಲು ನೀವು ಮೊದಲು ಇಲಾಖೆಯ ಅಧಿಕೃತ ವೆಬ್ಸೈಟ್ ksseeb.karnataka.gov.in ಗೆ ಭೇಟಿ ನೀಡಿ ನಿಮ್ಮ ಶಾಲೆಯ ಕೋಡ್ ಮತ್ತು ನಿಮ್ಮ ಪರೀಕ್ಷೆಯ ನೋಂದಣಿ ಸಂಖ್ಯೆ ಮತ್ತು ಹುಟ್ಟಿದ ದಿನಾಂಕ ಹಾಕಿದರೆ ನೀವು ಫಲಿತಾಂಶ ವೀಕ್ಷಣೆ ಮಾಡಬಹುದು. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: SSLC ನಂತರ ಮುಂದೇನು ಎಂಬ ಯೋಚನೆಯೇ? ಇಲ್ಲಿದೆ ಕೆಲವು ಸಲಹೆಗಳು
SMS ಮೂಲಕ ಫಲಿತಾಂಶ ನೋಡುವುದು ಹೇಗೆ?
ಇಂಟರ್ನೆಟ್ ಸೇವೆ ಲಭ್ಯ ಇರದೆ ಇರುವವರು ಅಥವಾ ಯಾವುದೇ ತಾಂತ್ರಿಕ ದೋಷ ಉಂಟಾದರೆ ನೀವು ನಿಮ್ಮ ಮೊಬೈಲ್ ಇಂದ KB10 ಎಂದು ಟೈಪ್ ಮಾಡಿ ನಿಮ್ಮ ಹಾಲ್ ಟಿಕೆಟ್ ನಂಬರ್ ನಮೂದಿಸಿ 56263 ಗೆ SMS ಕಳುಹಿಸಿ ನಿಮಗೆ ನಿಮ್ಮ ಫಲಿತಾಂಶದ ಮಾಹಿತಿಯನ್ನು ನಿಮ್ಮ ಮೊಬೈಲ್ ಗೆ ಕಳುಹಿಸಲಾಗುತ್ತದೆ.
ಫಲಿತಾಂಶ ನೋಡಿದ ಮೇಲೆ ಈ ವಿಷಯವನ್ನು ಮರೆಯಬೇಡಿ :- ವೆಬ್ಸೈಟ್ ಮೂಲಕ ನೀವು ಫಲಿತಾಂಶ ವೀಕ್ಷಣೆ ಮಾಡಿದರೆ ನೀವು ಯಾವುದೇ ಕಾರಣಕ್ಕೂ ಫಲಿತಾಂಶದ ಪೇಜ್ ಅನ್ನು screenshot ಅಥವಾ ಡೌನ್ಲೋಡ್ ಮಾಡಿಕೊಳ್ಳಲು ಮರೆಯಬೇಡಿ. ಯಾಕೆಂದರೆ ಇದು ನಿಮಗೆ ಒರಿಜಿನಲ್ ಮಾರ್ಕ್ಸ್ ಕಾರ್ಡ್ ಬರುವ ವರೆಗೆ ಉಪಯೋಗ ಆಗುತ್ತದೆ.
ಯಾವ ದಿನ ಯಾವ ಪರೀಕ್ಷೆ ನಡೆದಿತ್ತು?
- ಮಾರ್ಚ್ 25 -2024 ಸೋಮವಾರ – ಪ್ರಥಮ ಭಾಷೆ ( ಕನ್ನಡ, ಇಂಗ್ಲೀಷ್, ಉರ್ದು, ತೆಲುಗು, ಮರಾಠಿ, ತಮಿಳು, ಸಂಸ್ಕೃತ, ಹಿಂದಿ).
- ಮಾರ್ಚ್ 27- 2024-ಬುಧವಾರ – ಸಮಾಜ ವಿಜ್ಞಾನ.
- ಮಾರ್ಚ್ 30 -2024 ಶನಿವಾರ – ವಿಜ್ಞಾನ.
- ಏಪ್ರಿಲ್ 2-2024- ಮಂಗಳವಾರ – ಗಣಿತ.
- ಏಪ್ರಿಲ್ 4 -2024- ಗುರುವಾರ – ತೃತೀಯ ಭಾಷೆ ( ಹಿಂದಿ , ಕನ್ನಡ , ಅರೆಬಿಕ್, ಉರ್ದು , ಸಂಸ್ಕೃತ, ಕೊಂಕಣಿ , ತುಳು,ಇಂಗ್ಲಿಷ್).
- ಏಪ್ರಿಲ್ 6 – 2024-ಶನಿವಾರ – ದ್ವಿತೀಯ ಭಾಷೆ( ಇಂಗ್ಲಿಷ್ , ಕನ್ನಡ ).
ಈಗಾಗಲೇ ಸೆಕೆಂಡ್ ಪಿಯುಸಿ ಫಲಿತಾಂಶ ಬಿಡುಗಡೆ ಆಗಿದ್ದು ಹತ್ತನೇ ತರಗತಿಯ ಫಲಿತಾಂಶ ಬಿಡುಗಡೆ ಆಗುವ ಬಗ್ಗೆ ಎಲ್ಲರೂ ಕಾಯುತ್ತಾ ಇದ್ದರೂ. ಈಗ ಇನ್ನೇನು ಒಂದು ಅಥವಾ ಎರಡು ವಾರದಲ್ಲಿ ಹತ್ತನೇ ತರಗತಿಯ ಫಲಿತಾಂಶ ಬಿಡುಗಡೆ ಆಗಲಿದ್ದು ಮಕ್ಕಳು ಕಾತುರದಿಂದ ಕಾಯುತ್ತಾ ಇದ್ದಾರೆ. SSLC ಫಲಿತಾಂಶ ನೀವು ಅಂದುಕೊಂಡ ಹಾಗೆ ಬಾರದೆ ಇದ್ದಾರೆ ಯಾವುದೇ ಕಾರಣಕ್ಕೂ ನಿರಾಶೆ ಆಗಬಾರದು. ಮುಂದಿನ ಹಂತಕ್ಕೆ SSLC ಮುಖ್ಯ ಎನ್ನುವುದು ನಿಜ ಆದರೆ ಇದೊಂದೇ ನಿಮ್ಮ ಜೀವನವನ್ನು ನಿರ್ಧರಿಸುವುದಿಲ್ಲ. SSLC ಯಲ್ಲಿ ಕಡಿಮೆ ಅಂಕ ಬಂದರು ಸಹ ಇಂದು ಹಲವಾರು ವೃತ್ತಿಪರ ಕೋರ್ಸ್ ಗಳು ಲಭ್ಯ ಇವೆ. ಅದರ ಬಗ್ಗೆ ಗಮನ ಹರಿಸಬಹುದು.