ರೈಲ್ವೆ ಸ್ಟೇಷನ್ ಗೆ ಹೋದರೆ ಮಾರುಕಟ್ಟೆಯ ಬೆಲೆಗಿಂತ ಹೆಚ್ಚಿನ ಹಣವನ್ನು ನೀಡಿ ಊಟ ತಿಂಡಿ ಮಾಡಬೇಕು. ಒಂದು ಪ್ಯಾಕೆಟ್ ಚಿಪ್ಸ್ ತೆಗೆದುಕೊಂಡರು ಸಹ ರೈಲ್ವೆ ನಿಲ್ದಾಣದಲ್ಲಿ 10-20 ರೂಪಾಯಿ ಜಾಸ್ತಿ ಇರುತ್ತದೆ. ಹಾಗಿದ್ದಾಗ ಕರ್ನಾಟಕದಲ್ಲಿ ಕಡಿಮೆ ಬೆಲೆಯಲ್ಲಿ ಊಟ ತಿಂಡಿ ಸಿಗುತ್ತದೆ ಎಂದರೆ ನೀವು ನಂಬಲೇಬೇಕು. ಹಾಗಾದರೆ ಯಾವ ಯಾವ ರೈಲ್ವೆ ನಿಲ್ದಾಣದಲ್ಲಿ ಕಡಿಮೆ ಬೆಳೆಗೆ ಊಟ ತಿಂಡಿ ಸಿಗುತ್ತದೆ ಎಂದು ತಿಳಿಯೋಣ.
ಭಾರತದಲ್ಲಿ ಕಡಿಮೆ ಬೆಲೆಗೆ ಊಟ ತಿಂಡಿ ಸಿಗುವ ರೈಲ್ವೆ ಸ್ಟೇಷನ್ ಗಳು ಏಷ್ಟು?: ಭಾರತದಲ್ಲಿ ಒಟ್ಟು 100 ಸ್ಟೇಷನ್ ಗಳಲ್ಲಿ ಅತಿ ಕಡಿಮೆ ಬೆಲೆಗೆ ಊಟ ತಿಂಡಿ ನೀಡುವ ಕೌಂಟರ್ ತೆರೆಯಲಾಗಿದೆ. ಬೆಳಗಿನ ತಿಂಡಿ 20 ರೂಪಾಯಿ ಹಾಗೂ ಮಧ್ಯಾನ್ಹದ ಊಟ 50 ರೂಪಾಯಿ ಹಾಗೂ 200 ಎಂಎಲ್ ನೀರು 3 ರೂಪಾಯಿಗೆ ನೀಡಲಾಗುತ್ತದೆ. ಈ ಸೌಲಭ್ಯವನ್ನು ಭಾರತೀಯ ರೈಲ್ವೆ ಮಂಡಳಿ ನೀಡುತ್ತಿದೆ.
ಕರ್ನಾಟಕದಲ್ಲಿ ಕಡಿಮೆ ಬೆಲೆಯಲ್ಲಿ ಊಟ ತಿಂಡಿ ಸಿಗುವ ರೈಲ್ವೆ ಸ್ಟೇಷನ್ ಗಳು :-
1) ದಕ್ಷಿಣ ರೈಲ್ವೆ ವಿಭಾಗ:- ರಾಜ್ಯದಲ್ಲಿ ಭಾರತೀಯ ರೈಲ್ವೆ ಮಂಡಳಿ ತೆರದ ಊಟದ ಕೌಂಟರ್ ನಲ್ಲಿ ಮಂಗಳೂರು ಸೆಂಟ್ರಲ್ ಮತ್ತು ಮಂಗಳೂರು ಜಂಕ್ಷನ್ ನಿಲ್ದಾಣದಲ್ಲಿ ಪ್ರಯಾಣಿಕರ ಅನುಕೂಲಕ್ಕೆ ಕೌಂಟರ್ ತೆರೆಯಲಾಗಿದೆ. ದಕ್ಷಿಣ ರೈಲ್ವೆ ವಿಭಾಗದಲ್ಲಿ ಈ ಭಾಗಕ್ಕೆ ಕೌಂಟರ್ ತೆರೆಯಲಾಗಿದೆ. ಮಂಗಳೂರು ರೈಲ್ವೆ ನಿಲ್ದಾಣದಲ್ಲಿ ಹೆಚ್ಚಿನ ಊರುಗಳಿಗೆ ಸಂಪರ್ಕ ಸಾಧಿಸಲು ಸಾಧ್ಯವಾಗುತ್ತದೆ. ಹೊರ ರಾಜ್ಯಗಳಿಗೆ ಈ ರೈಲ್ವೆ ನಿಲ್ದಾಣದಿಂದ ಸಂಪರ್ಕ ಸಾಧ್ಯವಿದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
2) ನೈರುತ್ಯ ರೈಲ್ವೆ ವಿಭಾಗ :- ನೈಋತ್ಯ ರೈಲ್ವೆ ವಿಭಾಗಗದಲ್ಲಿ ಬರುವ ಮುಖ್ಯ ರೈಲ್ವೆ ನಿಲ್ದಾಣಗಳಾದ ಕೆಎಸ್ಆರ್ ಬೆಂಗಳೂರು ಹಾಗೂ ಯಶವಂತಪುರ ರೈಲ್ವೆ ನಿಲ್ದಾಣ, ಹಾಗೂ ಮೈಸೂರು ರೈಲ್ವೆ ನಿಲ್ದಾಣ, ವಿಜಯಪುರ ರೈಲ್ವೆ ನಿಲ್ದಾಣ ಮತ್ತು ಬಳ್ಳಾರಿ ರೈಲು ನಿಲ್ದಾಣಗಳಲ್ಲಿ ಈ ಭಾರತೀಯ ರೈಲ್ವೆ ಇಲಾಖೆ ವಿಶೇಷ ಕೌಂಟರ್‌ಗಳನ್ನು ತೆರೆದಿದೆ.
ಇದನ್ನೂ ಓದಿ: HSRP ನಂಬರ್ ಪ್ಲೇಟ್ ಹಾಕದೆ ಇದ್ದೀರಾ? ಹಾಗಾದರೆ 1,000 ರೂಪಾಯಿ ದಂಡ ಕಟ್ಟಲು ಸಿದ್ಧರಾಗಿ
ಈ ಹಿಂದೆ ಇತ್ತು ಜನತಾ ಊಟದ ಸೇವೆ :-
ಇನ್ನೂ ಈ ಹಿಂದೆ ರೈಲ್ವೆ ಪ್ರಯಾಣ ಮಾಡುವ ಪ್ರಯಾಣಿಕರಿಗೆ ಕಡಿಮೆ ದರದಲ್ಲಿ ಊಟ ನೀಡಬೇಕು ಎಂದು ಜನತಾ ಊಟದ ಸೇವೆ ಎಂಬ ಹೆಸರಿನಲ್ಲಿ ರೈಲ್ವೆ ಸ್ಟೇಷನ್ ಹತ್ತಿರದ ರೆಸ್ಟೋರೆಂಟ್ ಗಳು ಕಡಿಮೆ ದರದಲ್ಲಿ ಊಟವನ್ನು ನೀಡುತ್ತಿದ್ದರು. ಈಗ ಈ ಸೌಲಭ್ಯವೂ ರೈಲ್ವೆ ಸ್ಟೇಷನ್ ಒಳಗೆ ಕೌಂಟರ್ ಮಾದರಿಯಲ್ಲಿ ಲಭ್ಯವಿದೆ.
ಈ ವಿಶೇಷ ಊಟ ಮತ್ತು ತಿಂಡಿ ಕೌಂಟರ್ ಇರುವುದು ಪ್ರಯಾಣಿಕರಿಗೆ ಉಪಯೋಗ ಆಗಿದೆ. ಸಧ್ಯ ಹೆಚ್ಚಾಗಿ ಜನರು ಪ್ರಯಾಣಿಸುವ ರಾಜ್ಯದ ಮುಖ್ಯ ರೈಲ್ವೆ ಸ್ಟೇಷನ್ ಗಳಲ್ಲಿ ಈ ಸೌಲಭ್ಯ ಲಭ್ಯ ಇದೆ. ಮುಂದಿನ ದಿನಗಳಲ್ಲಿ ಈ ವಿಶೇಷ ಕೌಂಟರ್ ಸೌಲಭ್ಯವೂ ರಾಜ್ಯದ ಎಲ್ಲ ರೈಲ್ವೆ ನಿಲ್ದಾಣಗಳಲ್ಲಿ ಸುರುವಾಗಬೇಕಾಗಿದೆ. ಈ ಸೌಲಭ್ಯ ಇರುವುದರಿಂದ ರೈಲ್ವೆ ಪ್ರಯಾಣಿಕರಿಗೆ ಹೆಚ್ಚಿನ ಹಣ ನೀಡಿ ಊಟ ಮಾಡುವುದು ತಪ್ಪುತ್ತದೆ ಹಾಗೂ ಜನರಿಗೆ ರೈಲ್ವೆ ಪ್ರಯಾಣ ಮಾಡುವಾಗ ಊಟದ ಸಮಸ್ಯೆಗೆ ಪರಿಹಾರ ಸಿಕ್ಕಂತೆ ಆಗಿದೆ. ಇದು ಬಡವರಿಗೆ ಹೆಚ್ಚಿನ ಅನುಕೂಲ ಆಗುತ್ತದೆ. ಹಾಗೂ ಕಡಿಮೆ ದರದಲ್ಲಿ ಊಟ ಸಿಗುವುದರಿಂದ ಹಸಿವಿನಿಂದ ಪ್ರಯಾಣಿಸುವ ಪ್ರಯಾಣಿಕರ ಸಂಖ್ಯೆ ಕಡಿಮೆ ಆಗಲಿದೆ.
ಇದನ್ನೂ ಓದಿ: ಇಬ್ಬರು ಮಕ್ಕಳಿದ್ದಾರಾ? ಈ ಅಂಚೆ ಇಲಾಖೆಯ ಯೋಜನೆಯಿಂದ 6 ಲಕ್ಷ ರೂ. ಪಡೆಯಿರಿ!