ಅಯೋಧ್ಯೆ ಭಾರತದ ಪ್ರಸಿದ್ಧ ಯಾತ್ರ ಕ್ಷೇತ್ರವಾಗಿದೆ. ರಾಮನ ಪ್ರತಿಷ್ಠಾಪನೆ ನಂತರ ಅಯೋಧ್ಯೆಗೆ ಭಕ್ತರು ಬರುವ ಸಂಖ್ಯೆ ಹೆಚ್ಚಾಗಿದೆ. ರೈಲು, ಬಸ್ ಎಲ್ಲವೂ ಈಗಾಗಲೇ ಬುಕ್ ಆಗುವೆ. ಎಲ್ಲರಿಗೂ ಅಯೋಧ್ಯೆಯ ರಾಮನ ದರ್ಶನ ಮಾಡಬೇಕು ಎಂಬ ಮಹಾದಾಸೆ. 500 ವರ್ಷಗಳ ಹೋರಾಟದ ಜಯವನ್ನು ಸಂಭ್ರಮಿಸಿ ಅಯೋಧ್ಯೆಯ ರಾಮನ ಕಣ್ತುಂಬಿಕೊಂಡು ಬರಲು ಈಗಾಗಲೇ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ನಿತ್ಯ ಬರುತ್ತಾ ಇದ್ದಾರೆ. ಕರ್ನಾಟಕದಲ್ಲಿ ಸಹ ಭಕ್ತರು ಅಯೋಧ್ಯೆಗೆ ಹೋಗುತ್ತಿದ್ದಾರೆ. ಅಯೋಧ್ಯೆಗೆ ಎಂದೇ ಹಲವಾರು ಜಿಲ್ಲೆಗಳಿಂದ ಸ್ಪೆಷಲ್ ಬಸ್, ರೈಲು ಸಂಪರ್ಕ ವ್ಯವಸ್ತೆಯನ್ನು ಕಲ್ಪಿಸಲಾಗಿದೆ. ಅಯೋಧ್ಯೆಗೆ ರೈಲು ಮಾರ್ಗದಿಂದ ತೆರಳಲು ಬಯಸಿದ್ದರೆ ರೈಲಿನ ಸಮಯವನ್ನು ತಿಳಿಯಿರಿ.
ಕೊಪ್ಪಳದಿಂದ ಅಯೋಧ್ಯೆಗೆ ರೈಲು ಸೇವೆ ಆರಂಭ :- ಕೊಪ್ಪಳ ಕ್ಷೇತ್ರದ ಸಂಸದರಾಗಿರುವ ಕರಡಿ ಸಂಗಣ್ಣ ಅವರು ಕೊಪ್ಪಳದಿಂದ ಅಯೋಧ್ಯೆಗೆ ಹೊಸದಾಗಿ ರೈಲು ಸೇವೆ ಒದಗಿಸಿ ಎಂದು ಇಲಾಖೆಗೆ ಮನವಿ ಮಾಡಿದ್ದರು, ಅವರ ಮನವಿಯನ್ನು ಒಪ್ಪಿ ಈಗ ಹೊಸದಾಗಿ ಅಯೋಧ್ಯೆಗೆ ರೈಲು ಸೇವೆಯನ್ನು ಒದಗಿಸುತ್ತದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಮೈಸೂರಿನಲ್ಲಿರುವ ವಿಷ್ಣುವರ್ಧನ್ ಪುತ್ಥಳಿ ತಯಾರಿಸಿದ್ದು ಅರುಣ್ ಯೋಗರಾಜ್
ವಿವಿಧ ಜಿಲ್ಲೆಗಳಿಂದ ಕೊಪ್ಪಳದ ಮೂಲಕ ಅಯೋಧ್ಯೆ ರೈಲು ಮಾರ್ಗದ ಸಮಯ :-
- ಜನವರಿ 31, ಫೆಬ್ರವರಿ 14, ಮತ್ತು ಫೆ. 28 ರಂದು ಬೆಂಗಳೂರು ನಿಂದ ಅಯೋಧ್ಯೆಗೆ ತೆರಳುವ ರೈಲು ಕೊಪ್ಪಳ ಮಾರ್ಗವಾಗಿ ಸಂಚರಿಸಲಿದೆ.
- ಫೆ. 4 ಹಾಗೂ ಫೆ.17 ಮತ್ತು ಫೆ.18 ರಂದು ಮೈಸೂರಿನಿಂದ ಅಯೋಧ್ಯೆಗೆ ಸಂಚರಿಸುವ ರೈಲು ಕೊಪ್ಪಳ ಮಾರ್ಗವಾಗಿ ಸಾಗಲಿದೆ.
- ಫೆ. 7 ಮತ್ತು ಫೆ. 21 ರಂದು ತುಮಕೂರಿನಿಂದ ಅಯೋಧ್ಯೆಗೆ ಕ್ರಮಿಸುವ ರೈಲು ಕೊಪ್ಪಳದ ಮೂಲಕ ಅಯೋಧ್ಯೆಗೆ ತಲುಪಲಿದೆ.
- ಫೆ. 11 ಮತ್ತು ಫೆ. 25 ರಂದು ಚಿತ್ರದುರ್ಗದಿಂದ ತೆರಳುವ ಟ್ರೈನ್ ಕೊಪ್ಪಳದ ಮೂಲಕ ಅಯೋಧ್ಯೆಗೆ ಹೋಗುತ್ತದೆ.
- ಫೆ. 17 ಬೆಳಗಾವಿ ಯಿಂದ ಅಯೋಧ್ಯೆಗೆ ತೆರಳುವ ರೈಲು ಕೊಪ್ಪಳ ಮಾರ್ಗದಿಂದ ಸಂಚರಿಸಲಿದೆ. ಇದೇ ರೀತಿಯ ಹೆಚ್ಚಿನ ಮಾಹಿತಿಗಾಗಿ ನಮ್ಮ ಟೆಲಿಗ್ರಾಂ ಚಾನಲ್ ಸೆರಲು ಇಲ್ಲಿ ಕ್ಲಿಕ್ ಮಾಡಿ
ಅಯೋಧ್ಯೆಯಿಂದ ಹಿಂದಿರುಗಲು ಇರುವ ರೈಲಿನ ಸಮಯ:-
- ಫೆಬ್ರವರಿ. 3 ಮತ್ತು 17 ಹಾಗೂ ಮಾ. 2ರಂದು ಅಯೋಧ್ಯೆಯಿಂದ ಹೊರಟು ಕೊಪ್ಪಳದ ಮೂಲಕ ಬೆಂಗಳೂರು ತಲುಪಲಿದೆ.
- ಫೆ. 7 ಮತ್ತು 21 ರಂದು ಮೈಸೂರಿಗೆ ಬರುವ ರೈಲು ಕೊಪ್ಪಳ ರೈಲು ಮಾರ್ಗದಲ್ಲಿ ಸಾಗಲಿದೆ.
- ಫೆ. 10 ಹಾಗೂ ಫೆ. 24ರಂದು ತುಮಕೂರಿಗೆ ಬರುವ ಟ್ರೈನ್ ಅಯೋಧ್ಯೆಯಿಂದ ತುಮಕೂರಿನ ಮಾರ್ಗವಾಗಿ ಬರಲಿದೆ.
- ಫೆ. 14 ಮತ್ತು ಫೆ. 22 ರಂದು ಚಿತ್ರದುರ್ಗಕ್ಕೆ ಹೊರಡುವ ರೈಲು ಅಯೋಧ್ಯೆಯಿಂದ ಕೊಪ್ಪಳ ಮಾರ್ಗವಾಗಿ ಬರಲಿದೆ.
- ಫೆ. 17 ರಂದು ಹೊರಡುವ ಅಯೋಧ್ಯೆ- ಬೆಳಗಾವಿ ಗೆ ಟ್ರೈನ್ ಇದೆ.
ಟಿಕೆಟ್ ಕಾಯ್ದಿರಿಸುವ ಕ್ರಮ :-
ಟಿಕೆಟ್ ಕಾಯ್ದಿರಿಸಬೇಕಂದರೆ ನೀವು ಅನುಸರಿಸಬೇಕಾದ ಕ್ರಮಗಳು ಹೀಗಿವೆ :-
- ಮೊದಲನೆಯದಾಗಿ ನೀವು IRCTC website ಅಥವಾ Application ಗೆ ಹೋಗಬೇಕು.
- ನಂತರ ನಿಮ್ಮ ಮೊಬೈಲ್ ಸಂಖ್ಯೆ ಮತ್ತು password ಹಾಕಿ login ಆಗಿ. ನಿಮ್ಮ ಅಕೌಂಟ್ ವೆಬ್ಸೈಟ್ ನಲ್ಲಿ ಇಲ್ಲ ಎಂದರೆ ಹೊಸದಾಗಿ ನಿಮ್ಮ ಖಾತೆ ತೆರೆಯಬೇಕು.
- ನಂತರ ನೀವು ಎಲ್ಲಿಂದ ಎಲ್ಲಿಗೆ ಪ್ರಯಾಣಿಸುತ್ತಿರಿ ಮತ್ತು ದಿನಾಂಕವನ್ನು ಸೆಲೆಕ್ಟ್ ಮಾಡಿ.
- ನಿಮಗೆ ನೀವು ಹಾಕಿದ ಸ್ಥಳದಿಂದ ಇರುವ ರೈಲಿನ ಮಾರ್ಗ ಮತ್ತು ರೈಲ್ವೆ ನಂಬರ್ ಹಾಗೂ ಖಾಲಿ ಇರುವ ಸಿಟ್ ವಿವರಗಳು ಸಿಗುತ್ತವೆ.
- ನಂತರ ಯಾವ ಟ್ರೈನ್ ಎಂದು ಕ್ಲಿಕ್ ಮಾಡಿ ನಿಮ್ಮ ಹೆಸರು, ವಿಳಾಸ, ವಯಸ್ಸು, ಪ್ರಯಾಣಿಸುವ ಪ್ರಯಾಣಿಕರ ಸಂಖ್ಯೆ ಮತ್ತು ಅವರ ವಿವರಗಳನ್ನು ಭರ್ತಿ ಮಾಡಿ.
- ಕೊನೆಯದಾಗಿ ಆನ್ಲೈನ್ payment ಮಾಡಲು options ಕೇಳುತ್ತದೆ. ನಿಮಗೆ ಬೇಕಾದ option ಗೆ ಹೋಗಿ ಹಣವನ್ನು payment ಮಾಡಿದ ಮೇಲೆ ನಿಮ್ಮ ಸಿಟ್ ಬುಕ್ ಆಗುತ್ತದೆ.
ಇದನ್ನೂ ಓದಿ: ಮುಂಬರುವ Tecno Spark 20 256 GB ಸ್ಟೋರೇಜ್ ನೊಂದಿಗೆ ಭಾರತದಲ್ಲಿ ಶೀಘ್ರದಲ್ಲೇ ಅದೂ ಕೇವಲ 12,000 ರೂ.ಗೆ