ಈಗಾಗಲೇ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳ ನೇಮಕಾತಿಯ ಬಗ್ಗೆ ಪೂರ್ಣ ವಿವರಗಳನ್ನು ಇಲಾಖೆಯು ಅಧಿಸೂಚನೆ ಹೊರಡಿಸಿತ್ತು. ಆದರೆ ಕೆಲವು ಕಾರಣಗಳಿಂದ ಅರ್ಜಿ ಸಲ್ಲಿಸುವ ದಿನಾಂಕವನ್ನು ಇಲಾಖೆಯು ಮುಂದೂಡಿತು. ಹಿಂದಿನ. ಅಧಿಸೂಚನೆಯ ಪ್ರಕಾರ ಗ್ರಾಮ ಆಡಳಿತ ಅಧಿಕಾರಿಯ ನೇಮಕಾತಿ ಅರ್ಜಿಯನ್ನು ಸಲ್ಲಿಸಲು ಏಪ್ರಿಲ್ 3 2024 ಕೊನೆಯ ದಿನ ಆಗಿತ್ತು. ಈಗ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವನ್ನು ಮುಂದೂಡಲಾಗಿದೆ.
ಅಧಿಸೂಚನೆಯಲ್ಲಿ ತಿಳಿಸಲಾಗಿರುವ ಹೊಸ ದಿನಾಂಕದ ಮಾಹಿತಿ :- ಆನ್ಲೈನ್ ಮೂಲಕ ಹುದ್ದೆಗೆ ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ ಏಪ್ರಿಲ್ 05, 2024 ಹಾಗೂ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಮೇ 04, 2024 ಆಗಿರುತ್ತದೆ. ಹಾಗೂ ಅರ್ಜಿ ಶುಲ್ಕವನ್ನು ಪಾವತಿಸುವ ಕೊನೆಯ ದಿನಾಂಕ ಮೇ 07,2024 ಆಗಿರುತ್ತದೆ.
ಹುದ್ದೆಗೆ ಅರ್ಜಿ ಸಲ್ಲಿಸುವ ವಿಧಾನ :-
ಆನ್ಲೈನ್ ಅಪ್ಲಿಕೇಶನ್ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ ವೆಬ್ಸೈಟ್ ಗೆ ತೆರಳಿ, ಆನ್ಲೈನ್ ಫಾರ್ಮ್ ನಲ್ಲಿ ಹುದ್ದೆಯನ್ನು ಆಯ್ಕೆ ಮಾಡಿ ಎಂಬ ಆಪ್ಷನ್ ನಲ್ಲಿ village administrative officer ಆಪ್ಷನ್ ಆಯ್ಕೆ ಮಾಡಬೇಕು. ನಂತರ ನೀವು ಅರ್ಜಿ ಸಲ್ಲಿಸುವ ಜಿಲ್ಲೆಯ ಹೆಸರನ್ನು ಆಯ್ಕೆ ಮಾಡಬೇಕು. ನಂತರ ನಿಮ್ಮ ಎಸೆಸೆಲ್ಸಿ ಮಾರ್ಕ್ಸ್ ಕಾರ್ಡ್ ನಲ್ಲಿ ಇರುವಂತೆ ಪೂರ್ಣ ಹೆಸರನ್ನು ನಮೂದಿಸಬೇಕು. ನಂತರ ನಿಮ್ಮ ತಾಯಿಯ ಹೆಸರು ಮತ್ತು ತಂದೆಯ ಹೆಸರನ್ನು ನಮೂದಿಸಬೇಕು. ನಿಮ್ಮ ಲಿಂಗ ಮತ್ತು ಮೀಸಲಾತಿ ವಿವರಗಳನ್ನು ಆಯ್ಕೆ ಮಾಡಬೇಕು. ನಿಮ್ಮ ಎಸೆಸೆಲ್ಸಿ ಮಾರ್ಕ್ಸ್ ಕಾರ್ಡ್ ನಲ್ಲಿ ಇರುವಂತೆ ನಿಮ್ಮ ಹುಟ್ಟಿದ ದಿನಾಂಕವನ್ನು ನಮೂದಿಸಬೇಕು. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ನಿಮ್ಮ ಮನೆಯ ಪೂರ್ಣ ವಿಳಾಸವನ್ನು ನಮೂದಿಸಿ. ನಂತರ ನೀವು ಮಿಸಲಾತಿ ಕೋರುವ ಬಗ್ಗೆ ಹಾಗೂ ನೀವು ಗ್ರಾಮೀಣ ಭಾಗದ ಅಭ್ಯರ್ಥಿ ಹೌದೋ ಅಲ್ಲವೋ ಎಂಬ ಬಗ್ಗೆ , ನೀವು ಓದಿರುವ ಮಾಧ್ಯಮದ ಬಗ್ಗೆ ನೀವು ಅಂಗವಿಕಲರು ಅಥವಾ ಮಾಜಿ ಸೈನಿಕರೇ ಎಂಬ ಬಗ್ಗೆ ಹೌದು ಅಥವಾ ಇಲ್ಲ ಎಂಬ ಆಯ್ಕೆಗಳೂ ಇರುತ್ತವೆ. ಎಲ್ಲವನ್ನೂ ಸರಿಯಾಗಿ ಆಯ್ಕೆ ಮಾಡಬೇಕು. ನಂತರ ನಿಮ್ಮ highest education ಮಾಹಿತಿಯನ್ನು ಹಾಕಬೇಕು. ಹಾಗೂ ನಿಮ್ಮ ಅಂಕಗಳ ಮಾಹಿತಿಯನ್ನು ಭರ್ತಿ ಮಾಡಬೇಕು. ಕೊನೆಗೆ ನಿಮ್ಮ ಆಧಾರ್ ಕಾರ್ಡ್ ನಂಬರ್ ಹಾಕಬೇಕು. ಕೊನೆಯದಾಗಿ ನಿಮ್ಮ ಹತ್ತಿರದ ಪರೀಕ್ಷಾ ಕೇಂದ್ರವನ್ನು ಆಯ್ಕೆ ಮಾಡಬೇಕು. declaration ಘೋಷಣೆ ಮಾಡಿ. ನಂತರ ಅರ್ಜಿ ಶುಲ್ಕವನ್ನು ಪಾವತಿಸಬೇಕು.
ಹುದ್ದೆಗೆ ಅರ್ಜಿ ಸಲ್ಲಿಸುವ ಮುನ್ನ ಇಲಾಖೆಯ ಅಧಿಸೂಚನೆಯನ್ನು ಪೂರ್ಣವಾಗಿ ಓದಬೇಕು. ನಂತರ ಹುದ್ದೆಗೆ ನೀವು ಅರ್ಹರೇ ಎಂಬುದನ್ನು ತಿಳಿದುಕೊಂಡು ನೀವು ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸುವಾಗ ನಿಮ್ಮ ಪೂರ್ಣ ಮಾಹಿತಿಯನ್ನು ಮತ್ತೊಮ್ಮೆ ಪರಿಶೀಲಿಸಿ ಅರ್ಜಿ ಸಲ್ಲಿಸುವುದು ಉತ್ತವಾಗಿದೆ. ನಿಮ್ಮ ಅರ್ಜಿ ನಮೂನೆಯಲ್ಲಿ ಏನಾದರೂ ತಪ್ಪು ಮಾಹಿತಿಯೂ ಕಂಡುಬಂದರೆ ನಿಮ್ಮ ಅರ್ಜಿಯ ತಿರಸ್ಕಾರ ಆಗುವ ಸಾಧ್ಯತೆ ಇರುತ್ತದೆ. ಹಾಗೆಯೇ ಯಾವುದೇ ಸುಳ್ಳು ಮಾಹಿತಿಯನ್ನು ಅರ್ಜಿಯಲ್ಲಿ ನಮೂದಿಸಬಾರದು. ಯಾವುದೇ ಅರ್ಜಿದಾರರು ಅರ್ಜಿ ಸಲ್ಲಿಸಿದ ಬಳಿಕ ಅರ್ಜಿಯ ಸಲ್ಲಿಸಿರುವ ಬಗ್ಗೆ ನಿಮ್ಮ ಮೊಬೈಲ್ ಸಂಖ್ಯೆಗೆ ಎಸ್ಎಂಎಸ್ ಅಥವಾ ನಿಮಗೆ ಹಾರ್ಡ್ ಕಾಪಿ ಸಿಕ್ಕಿದರೆ ಅದನ್ನು ನೀವು ಭದ್ರವಾಗಿ ಇರಿಸಿ. ಮುಂದೆ ನಿಮ್ಮ ಪರೀಕ್ಷಾ ಹಾಲ್ ಟಿಕೆಟ್ ಗೆ ಇದು ಬಹಳ ಮುಖ್ಯವಾಗಿದೆ. ಹಾಗೂ ಅರ್ಜಿದಾರರು ಯಾವುದೇ ಮಾಹಿತಿ ಬೇಕಾದಲ್ಲಿ ಇಲಾಖೆಯ ಅಧಿಕೃತ ವೆಬ್ಸೈಟ್ ಗೆ ಭೇಟಿನೀಡಿ.
ಇದನ್ನೂ ಓದಿ: ಈ ಸರ್ಕಾರಿ ಯೋಜನೆಯು ನಿಮ್ಮ ಕುಟುಂಬದ ಭವಿಷ್ಯವನ್ನು ಭದ್ರಪಡಿಸುತ್ತದೆ, 20 ರೂ.ಗೆ 2 ಲಕ್ಷ ಜೀವ ವಿಮೆಯ ವರದಾನ!
ಇದನ್ನೂ ಓದಿ: ನೀವು ಆನ್ಲೈನ್ ನಲ್ಲಿ ಹಣ ಸಂಪಾದನೆ ಮಾಡುವುದು ಹೇಗೆ ಎಂಬ ಮಾಹಿತಿ ಇಲ್ಲಿದೆ.