ಇಡಿ ಕರ್ನಾಟಕದದ್ಯಂತ ಕಾವೇರಿ ನಮ್ಮ ಜೀವನಾಡಿ, ನಮಗೆ ನೀರಿಲ್ಲ ಹಿಂಗಿರುವಾಗ ಇನ್ನೊಬ್ಬರಿಗೆ ನೀರು ಕೊಡಿ ಅನ್ನೋದು ಯಾವ ನ್ಯಾಯ ಅಂತ ಎಲ್ಲೆಡೆ ಹೋರಾಟ ಧರಣಿ ಪ್ರತಿಭಟನೆಗಳು ನಡೀತಿದೆ. ಬೆಂಗಳೂರು ಬಂದ್ ಕರ್ನಾಟಕ ಬಂದ್ ಅಂತ ಎಲ್ಲ ಕಡೆ ಬಂದ್ ಬಿಸಿ ಪ್ರತಿಯೊಬ್ಬರಿಗೂ ತಟ್ಟುತ್ತಿದೆ. ಈ ಮಧ್ಯೆ ಸ್ಯಾಂಡಲ್ವುಡ್ ನಟರು ಕಾವೇರಿ ಪರ ಧ್ವನಿ ಎತ್ತುತ್ತಿಲ್ಲ ಅಂತ ಸಾಕಷ್ಟು ಟ್ರೋಲ್ ಆಗಿತ್ತು. ಆಗ ಕನ್ನಡದ ನಟರು ಕೂಡ ಹೋರಾಟದ ಪರ ಧ್ವನಿ ಎತ್ತಿ ಆಡಳಿತರೂಢ ಸರ್ಕಾರಕ್ಕೆ ಬಿಸಿ ಮುಟ್ಟಿಸೋ ಯತ್ನ ಮಾಡುದ್ರೆ ಅದ್ರೆ ಇದೀಗ ಬಹಳ ವಿಭಿನ್ನ ದಲ್ಲಿ ಭಿನ್ನಾ ಅನ್ನೋ ಥರ ಇದೀಗ 2018ರಲ್ಲಿ ಕೊಟ್ಟ ಒಂದು ಸ್ಟೇಟ್ ಮೆಂಟ್ ಈಗ ಬಾರಿ ವೈರಲ್ ಆಗ್ತಿದೆ. ಹಾಗಾದ್ರೆ ಏನದು ಸ್ಟೇಟ್ ಮೆಂಟ್? ಅ ಸ್ಟೇಟ್ ಮೆಂಟ್ ಕೊಟ್ಟವರು ಯಾರು? ಯಾಕೆ? ಈಗ ಯಾಕೆ ಅಷ್ಟು ವೈರಲ್ ಆಗ್ತಿದೆ.. ಇದೆಲ್ಲದರ ಬಗ್ಗೆ ನೋಡೋಣ ಬನ್ನಿ.
ಸ್ನೇಹಿತರೆ ನಿಮ್ಮೆಲ್ಲರಿಗೂ ಗೊತ್ತಿರುವಂತೆ ಕರ್ನಾಟಕ ಮತ್ತು ತಮಿಳುನಾಡಿನ ನಡುವೆ ಕಾವೇರಿ ಜಲ ವಿವಾದ ನಿನ್ನೆ ಮೊನ್ನೆಯದಲ್ಲ ಬಹಳ ಹಿಂದಿನಿಂದಲೂ 2ರಾಜ್ಯಗಳ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಲೇ ಇದೆ. ಇನ್ನು ಈ ವಿಚಾರದಲ್ಲಿ ಭಾರತ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಅವರ ನಡೆ ಪ್ರಸಂಶನೀಯವಾಗಿತ್ತು. ಹೌದು ನಾನಿಲ್ಲಿ ಆಟವಾಡುವುದಕ್ಕೆ ಬಂದವನು. ಯಾವುದೇ ಕಾರಣಕ್ಕೂ ಕರ್ನಾಟಕದ ವಿರೋಧಿಯಾಗಲಾರೆ. ನಾನು ಇಡೀ ದೇಶದ ಸ್ವತ್ತು ಎಂದು ಎಂ.ಎಸ್. ಧೋನಿ ಬಹಳ ಪ್ರಬುದ್ಧತೆ ಮೆರೆದಿದ್ದರು.
ಧೋನಿ(Dhoni) ಅವರ ಅಂದಿನ ನಡೆ ಇಂದು ವೈರಲ್ ಆಗುತ್ತಿದೆ. ಹೌದು, 2018ರಲ್ಲಿ ತಮಿಳುನಾಡು ಪರ ಕಾವೇರಿ ಹೋರಾಟ ಬೆಂಬಲಿಸಿ ಕಪ್ಪು ಪಟ್ಟಿ ಧರಿಸಿ ಆಡುವಂತೆ ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಎಂ.ಎಸ್ ಧೋನಿ(MS Dhoni) ಅವರನ್ನು ಒತ್ತಾಯಿಸಲಾಯಿತು. ಇದಕ್ಕೆ ಧೋನಿ ಅವರು ನೀಡಿದ್ದ ಪ್ರತಿಕ್ರಿಯೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು. ಇದೀಗ ಅಂದಿನ ಸ್ಟೇಟ್ ಮೆಂಟ್ ಇಂದಿನ ಕಾವೇರಿ ಹೋರಾಟಕ್ಕೆ ಮತ್ತಷ್ಟು ಪುಷ್ಟಿ ನೀಡುತ್ತಿದೆ, ಹೀಗಾಗಿ ಧೋನಿ ಅವ್ರ ಆ ಹೇಳಿಕೆ ಸಖತ್ ವೈರಲ್ ಆಗ್ತಿದೆ..
ದೈನಂದಿನ ಹೊಸ ಮಾಹಿತಿಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ: Click Here To Join WhatsApp
ಧೋನಿಯ ಈ ನಡೆಗೆ ಮೆಚ್ಚುಗೆ ವ್ಯಕ್ತಪಡಿಸಿದ ಕನ್ನಡಿಗರು
ಇನ್ನೂ, ಕಾವೇರಿ ನೀರಿಗಾಗಿ ಹೋರಾಟ ನಡೆಸುತ್ತಿರುವ ರೈತರಿಗೆ ಇಡೀ ಕರುನಾಡಿನ ಜನತೆ, ಕನ್ನಡಪರ ಸಂಘಟನೆ, ಸ್ಯಾಂಡಲ್ವುಡ್ ನಟರು ಈಗಾಗಲೇ ಧ್ವನಿ ಎತ್ತಿದ್ದಾರೆ. ನಿನ್ನೆ ಮಹಾನಗರಿ ಬೆಂಗಳೂರು ಬಂದ್ ಗೆ ಕರೆ ನೀಡಲಾಗಿತ್ತು ಅದು ಕೂಡ ಯಶಸ್ವಿಯಾಗಿದ್ದು ಇದೆ ಶುಕ್ರವಾರ ಇಡೀ ಕರ್ನಾಟಕ ಬಂದ್ ಗೆ ವಿವಿಧ ಸಂಘಟನೆಗಳು ಕರೆಕೊಟ್ಟಿದ್ದು ಬಂದ್ ಗೆ ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಪ್ರಾಣ ಬಿಟ್ಟರು ಕಾವೇರಿ ಬಿಡಲ್ಲ ಅಂತ ರೈತರು ವಿವಿಧ ಸಂಘಟನೆಯವರು ಪಟ್ಟು ಹಿಡಿದ್ದಿದ್ದು, ಸರ್ಕಾರಕ್ಕೆ ಕೋರ್ಟ್ ಆದೇಶ ಪಾಲಿಸಬೇಕಾದ ಅನಿವಾರ್ಯತೆ ಇದ್ದು ಮುಂದಿನ ದಿನಗಳಲ್ಲಿ ಹೋರಾಟ ಯಾವ ಹಂತಕ್ಕೆ ಹೋಗುತ್ತೋ ಅನ್ನೋ ಆತಂಕ ಶುರುವಾಗಿದೆ. ಈ ಮಧ್ಯೆ ನಿನ್ನೆ ಕರೆ ಕೊಟ್ಟಿದ್ದ ಬೆಂಗಳೂರು ಬಂದ್ಗೆ ಭಾರತ ತಂಡದ ಆಟಗಾರ ಕನ್ನಡಿಗೆ ಕೆ.ಎಲ್ ರಾಹುಲ್ ಅವರು ಸಹ ಬೆಂಬಲ ವ್ಯಕ್ತಪಡಿಸಿದ್ದರು. ಅಲ್ದೇ ಸ್ಯಾಂಡಲ್ವುಡ್ ನ ನಟರ ಜೊತೆಗೆ ನಟಿ ಮಣಿಯರು ಕೂಡ ಧ್ವನಿ ಎತ್ತಿದ್ದು ಕಾವೇರಿ ನಮ್ಮವಳು ಅಂತಿದ್ದಾರೆ. ಇನ್ನು ಈ ಮಧ್ಯೆ ಕ್ರಿಕೆಟ್ ಲೋಕದ ತಾರೆ ಎಂ. ಎಸ್ ಧೋನಿ ಅವ್ರ ಹಿಂದಿನ ಸ್ಟೇಟ್ ಮೆಂಟ್ ಈಗ ವೈರಲ್ ಆಗ್ತಿದ್ದು, ಅಭಿಮಾನಿಗಳೆಲ್ಲ ಧೋನಿ ಅವ್ರನ್ನ ಹಾಡಿ ಹೊಗಳುತ್ತಿದ್ದಾರೆ.
ಇದನ್ನೂ ಓದಿ: ನಿಮಗೆ ಒಳ್ಳೆ ಸಮಯ ಆರಂಭ ಆಗೋ ಮುನ್ನ ತುಳಸಿ ಗಿಡ ಈ 5 ದೊಡ್ಡ ಸೂಚನೆಗಳನ್ನು ಕೊಡುತ್ತೆ
ಇದನ್ನೂ ಓದಿ: ಧ್ರುವ ಸರ್ಜಾ ಮಗಳ ಜೊತೆಗೆ ಫೋಟೋ ಕ್ಲಿಕ್ಕಿಸಿದ ಮೇಘನಾ; ಕಣ್ಮಣಿ ಎಂದು ಕ್ಯೂಟ್ ಹೆಸರಿಟ್ಟ ಮೇಘನಾ
ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram