Kia Seltos Facelift: ಹೌದು, ಕಿಯಾ ಸೆಲ್ಟೋಸ್ ಫೇಸ್‌ಲಿಫ್ಟ್ ಒಂದು ಕಾಲದಲ್ಲಿ ದುಬಾರಿ ಕಾರು ಎನಿಸಿಕೊಂಡಿತ್ತು ಈಗ ಇದರ ಬೆಲೆಯಲ್ಲಿ ಕುಸಿತ ಕಂಡಿದೆ. ಕಂಪನಿಗೆ ಇದು ಬೇಜಾರಿನ ಸಂಗತಿ ಆದರೂ ಸಹ ಖರೀದಿದಾರರಿಗೆ ಇದು ಒಂಥರಾ ಸಂತಸದ ಸುದ್ದಿ ಅಂತನೇ ಹೇಳಬಹುದು. ಒಟ್ಟಿನಲ್ಲಿ ಈ ಕಾರಣದಿಂದಾದರೂ ಜನರು ಕಡಿಮೆ ಬೆಲೆಯಲ್ಲಿ ಒಳ್ಳೆಯ SUV ಯನ್ನು ಖರೀದಿಸುವಂತಾಗಿದೆ. ಅಷ್ಟೇ ಅಲ್ಲದೆ ಈ ಕಾರು ಭಾರತೀಯ ಮಾರುಕಟ್ಟೆಯಲ್ಲಿ ಬೇರೆ ವಾಹನಗಳಿಗೆ ಸ್ಪರ್ಧೆಯನ್ನು ನಡೆಸುತ್ತಿದೆ. ಬನ್ನಿ ವೀಕ್ಷಕರೇ, ಖರೀದಿದಾರರಿಗೆ ಸಹಾಯವಾಗುವಂತಹ ಇದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳೋಣ.
ಒಟ್ಟಿನಲ್ಲಿ ಈ ಕಾರಿನ ಬೆಲೆಯನ್ನು ರೂ.2000 ಕಡಿತಗೊಳಿಸಲಾಗಿದೆ. ಹೊಸ ಸೆಲ್ಟೋಸ್ ನ ಬೆಲೆಗಳು 10.90 ಲಕ್ಷದಿಂದ ಪ್ರಾರಂಭವಾಗುತ್ತದೆ ಮತ್ತು 20.30 ಲಕ್ಷದವರೆಗೆ (Both Ex-Showroom), ಈ ಮಾಡೆಲ್‌ನಲ್ಲಿ ಮೂರು ರೂಪಾಂತರಗಳಿವೆ ಮತ್ತು 11 ಬಣ್ಣಗಳು ಲಭ್ಯವಾಗುತ್ತಿವೆ. ಇದರಲ್ಲಿ ವಿವಿಧ ಟ್ರಿಮ್ ಆಯ್ಕೆಗಳು ಕೂಡ ಸೇರಿವೆ.
ದೈನಂದಿನ ಹೊಸ ಮಾಹಿತಿಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ: Click Here To Join WhatsApp
ಕಿಯಾ ಸೆಲ್ಟೋಸ್ ಫೇಸ್‌ಲಿಫ್ಟ್ ನ ವೈಶಿಷ್ಟ್ಯತೆಗಳು(Features of Kia Seltos Facelift)
ಕಿಯಾ ಸೆಲ್ಟೋಸ್ ಫೇಸ್ ಲಿಫ್ಟ್ 10.25 ಇಂಚಿನ ಟಚ್ ಸ್ಕ್ರೀನ್ ಅನ್ನು ಹೊಂದಿದೆ. ಅದು ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಮತ್ತು ವೈರ್‌ಲೆಸ್ ಆಂಡ್ರಾಯ್ಡ್ ನೊಂದಿಗೆ ಸಂಪರ್ಕವನ್ನು ಹೊಂದಿದೆ. ಇದರಿಂದ ಖರೀದಿದಾರರಿಗೆ ಈ ಕಾರನ್ನು ಸುಲಭವಾಗಿ ಚಾಲನೆ ಮಾಡಬಹುದು. ಅಷ್ಟೇ ಅಲ್ಲದೆ, ವೈರ್‌ಲೆಸ್ ಮೊಬೈಲ್ ಚಾರ್ಜರ್, ಪನೋರಮಿಕ್ ಸನ್‌ರೂಫ್, ಆಂಬಿಯೆಂಟ್ ಲೈಟಿಂಗ್, adjustable ಚಾಲಕ ಆಸನ, ಮತ್ತು ಏರ್ ಪ್ಯೂರಿಫೈಯರ್ ಹಾಗೂ ಪ್ರೀಮಿಯಂ ಸೌಂಡ್ ಸಿಸ್ಟಮ್ ಇಷ್ಟೆಲ್ಲ ವೈಶಿಷ್ಟಗಳು ಇದರಲ್ಲಿ ಸೇರಿಕೊಂಡಿವೆ.
Kia Seltos Facelift ADAS ತಂತ್ರಜ್ಞಾನವನ್ನೂ ಸಹ ಹೊಂದಿದೆ. ಈ ತಂತ್ರಜ್ಞಾನವು ಗಾಡಿಯನ್ನು ಸಾಲಿನಿಂದ ಹೊರಗಡೆ ತೆಗೆದುಕೊಂಡು ಹೋಗುವಾಗ ಎಚ್ಚರಿಕೆಯನ್ನು ಸೂಚಿಸುವಲ್ಲಿ ಸಹಾಯ ಮಾಡುತ್ತದೆ. ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ನಿಯಂತ್ರಣ, ಹಿಲ್ ಹಾಲ್ ಅಸಿಸ್ಟ್, ಹಿಲ್ ನಿಯಂತ್ರಣ, ಎಳೆತ ನಿಯಂತ್ರಣ, 360 ಡಿಗ್ರಿ ಕ್ಯಾಮೆರಾ ಮತ್ತು ಐಸೊಫಿಕ್ಸ್ ಚೈಲ್ಡ್ ಸೀಟ್ ಆಂಕರ್ ನಂತಹ ವಿಶೇಷವಾದ ವೈಶಿಷ್ಟ್ಯತೆಗಳನ್ನು ಕೂಡ ಕಿಯ ಸೆಲ್ಟೋಸ್ ಹೊಂದಿದೆ.
ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram
ಕಿಯಾ ಸೆಲ್ಟೋಸ್ ಇಂಜಿನ್ ನ ಬಗ್ಗೆ ಮಾಹಿತಿ:
ಕಿಯಾ ಸೆಲ್ಟೋಸ್ ಫೇಸ್‌ಲಿಫ್ಟ್ ಇಂಜಿನ್ ಗಳು 115 BHP ಮತ್ತು 144 NM ಟಾರ್ಕ್ ಅನ್ನು ಉತ್ಪಾದಿಸುವುದರ ಜೊತೆಗೆ 1.5 ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. ಅಷ್ಟೇ ಅಲ್ಲದೆ, ಇದು 6 high speed CVT ಯನ್ನು ಹೊಂದಿದೆ. ಎರಡನೇ ಆಯ್ಕೆಯಾದ ಇನ್ನೊಂದು 1.5 ಲೀಟರ್ ಡೀಸೆಲ್ ಎಂಜಿನ್ 116 ಬಿಎಚ್‌ಪಿ ಮತ್ತು 250 ಎನ್‌ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದರಂತೆ ಕಿಯಾ ಸೆಲ್ಟೋಸ್ ಫೇಸ್ ಲಿಫ್ಟ್ ಎರಡನೇ ಎಂಜಿನ್ 160 ಬಿಎಚ್‌ಪಿ ಮತ್ತು 253 ಎನ್‌ಎಂ ಟಾರ್ಕ್ ಅನ್ನು ಹೊಂದಿದೆ. ಈ ಎಂಜಿನ್ 6 ಸ್ಪೀಡ್ IMT ಮತ್ತು 7 ಸ್ಪೀಡ್ DCT ಗೇರ್‌ಬಾಕ್ಸ್‌ನೊಂದಿಗೆ ಮಾರುಕಟ್ಟೆಯಲ್ಲಿ ಲಭ್ಯವಿದೆ. ಇತರ ಗಾಡಿಗಳಿಗೆಂತ ಕಿಯಾದ ಇಂಜಿನ್ ಗಳು ಬಹಳ ಉತ್ತಮವಾಗಿವೆ.
ಇನ್ನೂ ಇದರ ಮೈಲೇಜ್ ಬಗ್ಗೆ ಹೇಳಬೇಕೆಂದರೆ, ಕಿಯಾ ಸೆಲ್ಟೋಸ್ ಫೇಸ್‌ಲಿಫ್ಟ್ ಪೆಟ್ರೋಲ್ ದಲ್ಲಿ 17 ಕಿಲೋಮೀಟರ್ ವರೆಗೆ ಮೈಲೇಜ್ ಅನ್ನು ನೀಡುತ್ತದೆ, ಸಿವಿಟಿಯಲ್ಲಿ (ಸ್ವಯಂಚಾಲಿತ) 17.7 ಕಿಮೀ, ಇಮ್ಟಿಯಲ್ಲಿ 17.7 ಕಿಮೀ, ಡಿಸಿಟಿಯಲ್ಲಿ (ಸ್ವಯಂಚಾಲಿತ) 17.9 ಕಿಮೀ, ಡೀಸೆಲ್ ಇಮ್ಟಿಯಲ್ಲಿ 20.7 ಕೆಎಂಪಿಎಲ್, ಡೀಸೆಲ್ನಲ್ಲಿ (ಸ್ವಯಂಚಾಲಿತ) 19.1 ಕಿಮೀ ವರೆಗೆ ನೀಡುತ್ತದೆ.
ಇದನ್ನೂ ಓದಿ: ಕೇವಲ 10000 ಡೌನ್ ಪೇಮೆಂಟ್ ನೊಂದಿಗೆ ಹೀರೋ ಎಲೆಕ್ಟ್ರಿಕ್ AE 75 ಫ್ಯಾಮಿಲಿ ಸ್ಕೂಟರ್ ಅನ್ನು ಖರೀದಿಸಿ.
ಇದನ್ನೂ ಓದಿ: DL ಮತ್ತು RC ಗೆ ಹೊಸ ರೂಲ್ಸ್ ಜಾರಿ, ಗಟ್ಟಿಯಾದ ನಿರ್ಧಾರವನ್ನು ತೆಗೆದುಕೊಂಡ ಸಾರಿಗೆ ಸಂಸ್ಥೆ