Kiccha Sudeep: ಸಲಾರ್ ಟೀಸರ್ ನೋಡಿ ಟ್ವೀಟ್ ಮಾಡಿದ ಕಿಚ್ಚ ಸುದೀಪ್; ಟೀಸರ್ ಬಗ್ಗೆ ಕಿಚ್ಚ ಹೇಳಿದ್ದೇನು ಗೊತ್ತಾ?

Kiccha Sudeep: ಸಲಾರ್ ಸಿನಿಮಾ ಹಾಗೂ ಅದರ ಅಪಡೇಟ್ಸ್ ಜೊತೆಗೆ ಸಿನಿಮಾದ ಟೀಸರ್​ಗಾಗಿ ಪ್ರೇಕ್ಷಕರು ಹಲವು ವರ್ಷಗಳಿಂದ ಕಾದಿದ್ದರು. ಯಾಕಂದ್ರೆ ಪ್ರಭಾಸ್ ಸಾಲು ಸಾಲು ಸೋಲು ಕಾಣುತ್ತಿದ್ದರು ಹೀಗಾಗಿ, ಸಲಾರ್ ಚಿತ್ರದ ಬಗ್ಗೆ ದೊಡ್ಡ ನಿರೀಕ್ಷೆ ಇತ್ತು. ಇದೀಗ ಸಲಾರ್ ಟೀಸರ್ ಬಿಡುಗಡೆಯಾಗಿದ್ದು, ಎಲ್ಲೆಲ್ಲೂ ಸಲಾರ್ ಹವಾ ಶುರುವಾಗಿದೆ. ಅದರಲ್ಲೂ ಇದೇ ಮೊದಲ ಬಾರಿ ಬೆಳ್ಳಂಬೆಳಗ್ಗೆ ಸಿನಿಮಾ ಒಂದರ ಟೀಸರ್ ರಿಲೀಸ್ ಆಗಿದ್ದು, ಪ್ರಶಾಂತ್ ನೀಲ್ & ಪ್ರಭಾಸ್ ಕಾಂಬಿನೇಷನ್ ಕಮಾಲ್ ಮಾಡಲು ಸಿದ್ಧವಾಗಿದೆ. ಹೌದು ಈಗಾಗಲೇ ಟೀಸರ್ ಎಲ್ಲ ಕಡೆ ಸೌಂಡ್ ಮಾಡ್ತಿದ್ದು, ಸ್ಟಾರ್ ಸೆಲಾಬ್ರೇಟಿಗಳು ಕೂಡ ಟೀಸರ್ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದು, ನಮ್ಮ ಕಿಚ್ಚ ಸುದೀಪ್ ಕೂಡ ಚಿತ್ರದ ಟೀಸರ್ ನೋಡಿ ಫುಲ್ ಖುಷಿಯಾಗಿದ್ದು ಟೀಸರ್ ಬಗ್ಗೆ ಒಂದಷ್ಟು ಮಾತುಗಳನ್ನ ಆಡಿ, ಆ ವಿಚಾರವನ್ನ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

WhatsApp Group Join Now
Telegram Group Join Now

ಟ್ರೆಂಡ್ ಸೃಷ್ಟಿ ಮಾಡ್ತಿರೋ ಟೀಸರ್ ನೋಡಿ ಅಭಿಮಾನಿಗಳು ಫುಲ್ ಫಿಧಾ

ಬೆಳ್ಳಂಬೆಳಿಗೆ ಸಲಾರ್ ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ಟೀಸರ್ ಬಿಡುಗಡೆ ಯಾವಾಗಪ್ಪ ಅಂತ ಕಾದು ಕೂತಿದ್ದ ಅಭಿಮಾನಿಗಳ ನಿರೀಕ್ಷೆಗೆ ತಕ್ಕಂತೆ ಟೀಸರ್ ಥ್ರಿಲ್ ನೀಡಿದೆ. ಹೌದು ಸಲಾರ್ ಸಿನಿಮಾ ಟೀಸರ್ ಶುರುವಾಗೋದೆ ಸಿಂಪಲ್ ಇಂಗ್ಲಿಷ್, ನೋ ಕನ್‌ಫ್ಯೂಷನ್, ಅನ್ನೋ ಡೈಲಾಗ್‌ ನಿಂದ. ನಂತ್ರ ಮಾತು ಮುಂದುವರಿಸುವ ಟಿನ್ನು ಆನಂದ್, ಲಯನ್, ಚೀತಾ, ಟೈಗರ್, ಎಲಿಫೆಂಟ್ ವೆರಿ ಡೇಂಜರಸ್, ಬಟ್, ನಾಟ್ ಇನ್ ಜುರಾಸಿಕ್ ಪಾರ್ಕ್. ಬಿಕಾಸ್ ಇನ್ ದಟ್ ಪಾರ್ಕ್, ದೇರ್ ಈಸ್ ಎ. ಎಂದು ಡೈಲಾಗ್ ಹೊಡೆಯುತ್ತಾರೆ. ಆ ಬಳಿಕ ಪ್ರಭಾಸ್ ಪೂರ್ತಿ ಮುಖ ತೋರಿಸದೆ ಮುಖದ ಅರ್ಧ ಭಾಗಕ್ಕೆ ಶೇಡ್ ಲೈಟ್ ಬಿಟ್ಟು ಕುತೂಹಲ ಕೆರಳಿಸುವ ಮೂಲಕ ಟೀಸರ್ ಅನ್ನ ಎಂಡ್ ಮಾಡಲಾಗಿದೆ. ಆದರೆ ಇಲ್ಲಿ ಕೆಜಿಎಫ್ ಸಿನಿಮಾದ ಕೆಲ ದೃಶ್ಯ ಗಳು ಬಂದಿವೆ ಅನ್ನೋದು ಅಭಿಮಾನಿಗಳ ಮಾತಾಗಿದ್ದು, ಸದ್ಯ ಅದೆಲ್ಲವನ್ನ ಬದಿಗೊತ್ತಿ ನೋಡಿದರು ದಕ್ಷಿಣ ಭಾರತ ಅಥವಾ ಉತ್ತರ ಭಾರತ ಮಾತ್ರವಲ್ಲ ಜಗತ್ತೇ ಈ ಟೀಸರ್ ಬಗ್ಗೆ ಸದ್ಯ ಮಾತನಾಡುತ್ತಿದೆ. ಇದೀಗ ಕಿಚ್ಚ ಸುದೀಪ್(Kiccha Sudeep) ಕೂಡ ಟೀಸರ್ ನೋಡಿದ್ದು ತಮ್ಮ ಅನಿಸಿಕೆಯನ್ನ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ.

ಹೌದು ಟೀಸರ್ ನೋಡಿರುವ ಕಿಚ್ಚ ಸುದೀಪ್ ಟೀಸರ್ ಅನ್ನ ಮೆಚ್ಚಿಕೊಂಡಿದ್ದಾರೆ. ಅಲ್ದೇ ಚಿತ್ರ ತಂಡಕ್ಕೂ ಶುಭಾ ಕೊರಿದ್ದಾರೆ. ಹೌದು ಟೀಸರ್ ನೋಡಿದ ಬಳಿಕ ಸುದೀಪ್ ಈ ರೀತಿ ಬರೆದುಕೊಂಡಿದ್ದಾರೆ. ಒಂದು ಸರಳ ರೇಖೆ, ಸರಳ ಹೋಲಿಕೆ. ಜುಸ್, ಪ್ರತಿಸಲ ಇತರರ ಬಲವನ್ನು ವಿಶ್ರಾಂತಿಗೆ ಹೋಗುವಂತೆ ಮಾಡುತ್ತೆ. ಪಾತ್ರ ಹೇಗಿರಬಹುದು ಎಂಬುದಕ್ಕೆ ಅದ್ಭುತವಾದ ಇಂಟ್ರೋ. ಅತ್ಯುತ್ತಮ ಅಂತ ಬರೆದುಕೊಂಡು ಪ್ರಶಾಂತ್ ನೀಲ್ ಪ್ರಭಾಸ್ ಹಾಗೂ ಇನ್ನೊಂದಷ್ಟು ಜನರಿಗೆ ಬೆಸ್ಟ್ ವಿಶ್ ತಿಳಿಸಿದ್ದು, ಸಿನಿಮಾ ರಿಲೀಸ್ ಗು ಕೂಡ ಆಲ್ ದಿ ಬೆಸ್ಟ್ ಹೇಳಿದ್ದಾರೆ.

ಇದನ್ನೂ ಓದಿ: ಮೊದಲ ಮಗುವಿನ ನಿರೀಕ್ಷೆಯಲ್ಲಿ ಕಾಮಿಡಿ ಕಿಲಾಡಿಗಳು ಖ್ಯಾತಿಯ ನಯನ..

ಇದನ್ನೂ ಓದಿ: ಭರ್ಜರಿ ಬ್ಯಾಚುಲರ್ಸ್ ಶೋ ನಿಂದ ಸುಕೃತ ನಾಗ್ ಔಟ್! ನವಾಜ್ ಗೆ ಜೋಡಿಯಾಗಿದ್ದ ಸುಕೃತ ಹೊರನಡೆದದ್ದು ಯಾಕೆ?

ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram