KAL ಅಧಿಕೃತ ವೆಬ್ಸೈಟ್ ನಲ್ಲಿ ಖಾಲಿ ಇರುವ ಗ್ರೂಪ್ D ಹುದ್ದೆ ಹಾಗೂ ವಾಹನ ಚಾಲಕ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗಿದೆ. ಆಸಕ್ತರು ಹುದ್ದೆಯ ಅಧಿಸೂಚನೆಯನ್ನು ಪೂರ್ಣವಾಗಿ ತಿಳಿದುಕೊಂಡು ನಿಯಮಗಳ ಅನುಸಾರವಾಗಿ ಅರ್ಜಿ ಸಲ್ಲಿಸಬಹುದು.
ಹುದ್ದೆಯ ಪೂರ್ಣ ವಿವರ:- ಇದು ಕರ್ನಾಟಕ ವಿಧಾನ ಪರಿಷತ್ ಸಚಿವಾಲಯವು ಅಧಿಕೃತವಾಗಿ ಕರೆದ 3 ವಾಹನ ಚಾಲಕ ಹುದ್ದೆ ಹಾಗೂ 29 ಗ್ರೂಪ್ D ಹುದ್ದೆಗಳಿಗೆ ಅರ್ಜಿ ಆಹ್ವಾನ ಮಾಡಲಾಗಿದೆ. ಗ್ರೂಪ್ D ಹುದ್ದೆಯ ವೇತನ ಶ್ರೇಣಿ 21,400 ರೂಪಾಯಿ ಯಿಂದ 42,000 ರೂಪಾಯಿ ಹಾಗೂ ವಾಹನ ಚಾಲಕ ಹುದ್ದೆಗೆ 17,000 ರೂಪಾಯಿಯಿಂದ 28,900 ರೂಪಾಯಿ.
ವಾಹನ ಚಾಲಕ ಹುದ್ದೆಗೆ ಶೈಕ್ಷಣಿಕ ಅರ್ಹತೆ :- ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕಡ್ಡಾಯವಾಗಿ ಮಾನ್ಯ ಪಡೆದ ಮಂಡಳಿಯಿಂದ ಎಸೆಸೆಲ್ಸಿ(SSLC) ಪಾಸ್ ಆಗಿರಬೇಕು ಜೊತೆಗೆ ಮೋಟಾರ್ ಕಾರ್ ಅಥವಾ ಭಾರಿ ವಾಹನದ ಚಾಲನಾ ಪರವಾನಿಗೆ ಪತ್ರವನ್ನು ಹೊಂದಿರಬೇಕು.
ಗ್ರೂಪ್ D ಹುದ್ದೆಗೆ ಶೈಕ್ಷಣಿಕ ಅರ್ಹತೆ :- ಅಭ್ಯರ್ಥಿಗಳು ಕಡ್ಡಾಯವಾಗಿ ಮಾನ್ಯ ಪಡೆದ ಮಂಡಳಿಯಿಂದ ಎಸೆಸೆಲ್ಸಿ(SSLC) ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಪಾಸ್ ಆಗಿರಬೇಕು. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಗ್ರೂಪ್ D ಹುದ್ದೆಯ ಮೀಸಲಾತಿ ವಿವರ:-
ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ 8 ಹುದ್ದೆಗಳು ಅದರಲ್ಲಿ ಎರಡು ಮಹಿಳಾ ಮೀಸಲಾತಿ ಹುದ್ದೆ. ಸಾಮಾನ್ಯ ವರ್ಗ ಒಟ್ಟು 12 ಹುದ್ದೆಗಳು ಅದರಲ್ಲಿ 5 ಮಹಿಳಾ ಹುದ್ದೆ. ಪ್ರವರ್ಗ 01, 2A, 2B, 3A, 3B ಒಟ್ಟು 8 ಹುದ್ದೆಗಳು ಅದ್ರಲ್ಲಿ ಒಂದು ಮೀಸಲಾತಿ ಹುದ್ದೆ.
ವಾಹನ ಚಾಲನಾ ಹುದ್ದೆಯ ಮೀಸಲಾತಿ ವಿವರ:- ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ತಲಾ ಒಂದು ಹುದ್ದೆ ಹಾಗೂ ಸಾಮಾನ್ಯ ವರ್ಗಕ್ಕೆ ಒಂದು ಮೀಸಲಿರಿಸಲಾಗಿದೆ.
ಅಭ್ಯರ್ಥಿಯ ಶುಲ್ಕದ ವಿವರ :- ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 600 ರೂಪಾಯಿ ಹಾಗೂ ಪ್ರವರ್ಗ 01, 2A, 2B, 3A, 3B ವರ್ಗದ ಅಭ್ಯರ್ಥಿಗಳಿಗೆ 300 ರೂಪಾಯಿ ಹಾಗೂ ಮಾಜಿ ಸೈನಿಕ ಅಭ್ಯರ್ಥಿಗಳಿಗೆ 50 ರೂಪಾಯಿ ಹಾಗೂ ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಯಾವುದೇ ರೀತಿಯ ಅರ್ಜಿ ಶುಲ್ಕವಿಲ್ಲ. ಶುಲ್ಕದ ಡಿಡಿ ತೆಗೆದು ಅರ್ಜಿ ನಮೂನೆಯ ಜೊತೆಗೆ ಡಿಡಿ ಪ್ರತಿಯನ್ನು ಸಲ್ಲಿಸಬೇಕು.
ಇದನ್ನೂ ಓದಿ: ಹೊಸ ವರ್ಷದಲ್ಲಿ ಬದಲಾದ ಕ್ರೆಡಿಟ್ ಕಾರ್ಡ್ ನ ನಿಯಮಗಳು, ಯಾವೆಲ್ಲ ಕಾರ್ಡುಗಳಲ್ಲಿ ಬದಲಾವಣೆ ಇರಬಹುದು?
ವಯೋಮಿತಿ :-
ಸಾಮಾನ್ಯ ವರ್ಗ:- 18ರಿಂದ 35 ವರ್ಷ. ಪ್ರವರ್ಗ 01, 2A, 2B, 3A, 3B 18 ರಿಂದ 38 ವರ್ಷ. ಪರಿಶಿಷ್ಟ ಜಾತಿ ಮತ್ತು ಪಂಗಡದ ಅಭ್ಯರ್ಥಿಗಳಿಗೆ 18 ರಿಂದ 40 ವರ್ಷ.
ಅರ್ಜಿ ಸಲ್ಲಿಸುವ ವಿಧಾನ :- ಈ ಹುದ್ದೆಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಸಾಧ್ಯವಿಲ್ಲ. ನೀವು ಅರ್ಜಿ ನಮೂನೆಯನ್ನು ಆಫ್ಲೈನ್ ಮೂಲಕ ಸಲ್ಲಿಸಬೇಕಾಗುತ್ತದೆ. ಅರ್ಜಿ ನಮೂನೆಯ ಪ್ರತಿ ಹಾಗೂ ನಿಮ್ಮ ದಾಖಲೆ ಪತ್ರಗಳನ್ನು ಕೆಳಕಂಡ ವಿಳಾಸಕ್ಕೆ ಅಂಚೆಯ ಮೂಲಕ ಕಳುಹಿಸಬೇಕು.
ವಿಳಾಸ:- ಕಾರ್ಯದರ್ಶಿ, ಕರ್ನಾಟಕ ವಿಧಾನ ಪರಿಷತ್ ಸಚಿವಾಲಯ, ಅಂಚೆ ಪೆಟ್ಟಿಗೆ ನಂಬರ್ – 5079, ಮೊದಲನೇ ಮಹಡಿ , ವಿಧಾನಸೌಧ , ಬೆಂಗಳೂರು – 560001 ಗೆ ಪೋಸ್ಟ್ ಮಾಡಬೇಕು ಅಥವಾ ವಿಧಾನ ಸೌಧದ ಎರಡನೇ ಮಹಡಿಯಲ್ಲಿ ಇರುವ ರೂಂ ನಂಬರ್ 216 ಕ್ಕೆ ತೆರಳಿ ನಿಮ್ಮ ಅರ್ಜಿ ಸಲ್ಲಿಸಬೇಕು.
- ಅರ್ಜಿ ಸಲ್ಲಿಸುವ ಆರಂಭ ದಿನಾಂಕ :- 04-03-2024.
- ಕೊನೆಯ ದಿನಾಂಕ :- 05-04-2024.
ಅಧಿಸೂಚನೆ PDF ಡೌನ್ ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಮಹಿಳಾ ದಿನಾಚರಣೆಯ ಅಂಗವಾಗಿ ಮಹಿಳೆಯರ ಸಬಲೀಕರಣಕ್ಕೆ ಹಲವಾರು ಯೋಜನೆಗಳನ್ನು ರೂಪಿಸಿದ ಕೇಂದ್ರ ಸರ್ಕಾರ