ಕರ್ನಾಟಕದ ನಂದಿನಿ ಬ್ರಾಂಡ್ ನ ಎಲ್ಲಾ ಉತ್ಪನ್ನಗಳನ್ನು ರಾಜ್ಯದಲ್ಲಿ ಹೆಚ್ಚಾಗಿ ಮಾರಾಟ ಆಗುತ್ತಿದೆ. ಈಗಾಗಲೇ ಗುಜರಾತ್ ರಾಜ್ಯದ ಅಮುಲ್ ಹಾಲು ಉತ್ಪನ್ನ ಕಂಪನಿ ದೇಶದಲ್ಲಿ ಹೆಸರುವಾಸಿ ಆಗಿದೆ. ಅದರಂತೆ ಈಗ ನಂದಿನಿ ಸಹ ಬ್ರಾಂಡ್ ಆಗಲೂ ಹೊಸ ಹೆಜ್ಜೆ ಇಡಲು ಸಜ್ಜಾಗಿದೆ.
ಹೈನೋದ್ಯಮದಲ್ಲಿ ಎರಡನೇ ಸ್ಥಾನ ಪಡೆದಿರುವ ನಂದಿನಿ ಬ್ರ್ಯಾಂಡ್ :- ದೇಶದ ಸಹಕಾರಿ ವಿಭಾಗದ ಹೈನೋದ್ಯಮ ದಲ್ಲಿ ಎರಡನೇ ಸ್ಥಾನ ಗಳಿಸಿ ಈಗಲೇ ಹೆಸರುವಾಸಿ ಆಗಿದೆ. ಇದು ಕರ್ನಾಟಕ್ಕೆ ಒಂದು ಹೆಮ್ಮೆಯ ವಿಷಯ ಆಗಿದೆ.
ನಂದಿನಿ ಇಟ್ಟಿರುವ ಹೊಸ ಹೆಜ್ಜೆ ಏನು?: ಕರ್ನಾಟಕದ ಬ್ರಾಂಡ್ ಆಗಿರುವ ನಂದಿನಿ ಮುಂದಿನ ವರುಷದ ಟಿ-20 ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಸ್ಕಾಟ್ಲೆಂಡ್ ಹಾಗೂ ಐರ್ಲೆಂಡ್ ತಂಡಗಳ ಜೊತೆಗೆ ಪ್ರಾಯೋಜಕತ್ವದ ಒಪ್ಪಂದಕ್ಕೆ ಮುಂದಾಗಿದೆ. ಈ ಮೂಲಕ ಅಮುಲ್ ಕಂಪನಿಯಂತೆ ಜಾಗತಿಕ ಮಟ್ಟದಲ್ಲಿ ಬ್ರಾಂಡ್ ಆಗಲೂ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಕೆ ಎಂ ಎಫ್ ಅಧ್ಯಕ್ಷರು ನೀಡಿರುವ ಹೇಳಿಕೆ ಏನು?
ಈ ಮಹತ್ವದ ನಿರ್ಧಾರದ ಬಗ್ಗೆ ಬುಧವಾರ ಪತ್ರಿಕಾಗೋಷ್ಠಿಯನ್ನು ನಡೆಸಿದ ಕೆಎಂಎಫ್ ಅಧ್ಯಕ್ಷ ಭೀಮ ನಾಯ್ಕ್ ಅವರು 2024ರ ಟಿ-20 ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ಸ್ಕಾಟ್ಲೆಂಡ್ ಹಾಗೂ ಐರ್ಲೆಂಡ್ ತಂಡಗಳಿಗೆ ರಾಜ್ಯದ ನಂದಿನಿ ಬ್ರ್ಯಾಂಡ್ ಪ್ರಾಯೋಜಕತ್ವ ವಹಿಸುವ ಬಗ್ಗೆ ಅಧಿಕೃತವಾಗಿ ಮಾಹಿತಿ ಹಂಚಿಕೊಂಡರು.. ಸ್ಕಾಟ್ಲೆಂಡ್ ಹಾಗೂ ಐರ್ಲೆಂಡ್ ತಂಡದ ಆಟಗಾರರು ಟಿ-20 ಕ್ರಿಕೆಟ್ ವಿಶ್ವಕಪ್ ಆಡುವ ವೇಳೆ ನಮ್ಮ ನಂದಿನಿ ಬ್ರ್ಯಾಂಡ್ ಹೊಂದಿರುವ ಟಿ ಶರ್ಟ್ ಧರಿಸಲಿದ್ದಾರೆ ಎಂದು ಮಾಹಿತಿಯನ್ನು ನೀಡಿದ್ದಾರೆ. ಹಾಗೂ ಈ ನಿಧಾರದ ಬಗ್ಗೆ ಮಾತನಾಡಿದ ಭೀಮ ನಾಯ್ಕ ಅವರು ನಂದಿನಿ ಉತ್ಪನ್ನಗಳ ಪ್ರಚಾರದ ಸಲುವಾಗಿ ಕ್ರಿಕೆಟ್ ತಂಡಗಳ ಪ್ರಾಯೋಜಕತ್ವ ತೆಗೆದುಕೊಂಡಿದ್ದೇವೆ. ನಂದಿನಿಯನ್ನು ಜಾಗತಿಕ ಮಟ್ಟದ ಬ್ರ್ಯಾಂಡ್ ಆಗಿ ಪರಿವರ್ತನೆ ಮಾಡುವ ನಿಟ್ಟಿನಲ್ಲಿ ಈ ನಿರ್ಧಾರ ತೆಗೆದುಕೊಂಡಿದ್ದೇವೆ . ವೆಸ್ಟ್ ಇಂಡೀಸ್ ಮತ್ತು ಅಮೆರಿಕದಲ್ಲಿ ಈ ಬರಿಯ ಟಿ-20 ವಿಶ್ವಕಪ್ ಟೂರ್ನಿ ನಡೆಯಲಿದೆ ಎಂದು ತಿಳಿಸಿದರು.
ಪ್ರಚಾರಕ್ಕೆ ಇದು ಉತ್ತಮ ನಿರ್ಧಾರ :- ಯಾವುದೇ ಬ್ರ್ಯಾಂಡ್ ನ ಉತ್ಪನ್ನಗಳ ಮಾರಾಟ ಹೆಚ್ಚಾಗಲು ಪ್ರಚಾರ ತುಂಬಾ ಮುಖ್ಯ ಆಗುತ್ತದೆ. ಪ್ರಚಾರ ಮಾಡಲು ಏಷ್ಟು ಹಣ ಮತ್ತು ಸಮಯದ ವಿನಿಯೋಗ ಆಗುವುದೋ ಅಷ್ಟು ಹೆಚ್ಚಿನ ಪ್ರಮಾಣದ ಮಾರಾಟ ನಿರೀಕ್ಷೆ ಮಾಡಬಹುದು. ಅದೇ ಕಾರಣಕ್ಕೆ advertisement ಹಾಗೂ ಇನ್ನಿತರ ಕಡೆಯಲ್ಲಿ ಹೆಚ್ಚಿನ ಪ್ರಚಾರ ಕೈಗೊಳ್ಳುತ್ತಾರೆ. ಈಗ ನಂದಿನಿ ಬ್ರ್ಯಾಂಡ್ ಗಳ ಪ್ರಚಾರ ಮಾಡುವ ನಿಟ್ಟಿನಲ್ಲಿ ಸಂಸ್ಥೆ ಮಹತ್ವದ ನಿರ್ಧಾರ ತೆಗೆದುಕೊಂಡಿದೆ.
ಇದನ್ನೂ ಓದಿ: ಹರಿದ ನೋಟ್ ಏನು ಮಾಡ್ಬೇಕು ಎಂಬ ಚಿಂತೆ ಕಾಡುತ್ತಿದೆಯ ಹಾಗಾದರೆ ಈ ಸಿಂಪಲ್ ಹಂತವನ್ನು ಅನುಸರಿಸಿ
ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಎಂಕೆ ಜಗದೀಶ್ ಅವರ ಹೇಳಿಕೆ ಹೀಗಿದೆ :-
ಈಗಾಗಲೇ ನಂದಿನಿ ಬ್ರ್ಯಾಂಡ್ ಉತ್ಪನ್ನಗಳು ಅರಬ್, ಮಲೇಷ್ಯಾ, ವಿಯೆಟ್ನಾಂ, ಸಿಂಗಾಪುರ ಹಾಗೂ ಅಮೆರಿಕಕ್ಕೆ ನಂದಿನಿ ಹಾಲು ಹಾಗೂ ಹಾಲಿನ ಉತ್ಪನ್ನಗಳು ಹಾಗೂ ಸಿಹಿ ತಿಂಡಿಗಳನ್ನು ರಪ್ತು ಮಾಡುತ್ತಾ ಇದ್ದೇವೆ. ಇದರ ಜೊತೆಗೆ ಈಗ ಜಗತ್ತಿನಲ್ಲಿ ಅತಿ ಹೆಚ್ಚು ಜನಪ್ರಿಯವಾದ ಆಟ ಎಂದರೆ ಅದು ಕ್ರಿಕೆಟ್ . ಈ ಆಟವನ್ನು ಕೋಟ್ಯಂತರ ಮಂದಿ ಫಾಲೋ ಮಾಡುತ್ತಾರೆ. . ಅದರಿಂದ ನಾವು ನಂದಿನಿ ಬ್ರ್ಯಾಂಡ್ ನ ಪ್ರಚಾರಕ್ಕೆ ಪ್ರಾಯೋಜಕತ್ವ ತೆಗೆದುಕೊಂಡಿದ್ದೇವೆ. ಇದು ನಮಗೆ ಉತ್ತಮ ವೇದಿಕೆ ಆಗಲಿದೆ ಎಂದು ತಿಳಿಸಿದರು.
ಇದನ್ನೂ ಓದಿ: ಮೂರಾರ್ಜಿ ದೇಸಾಯಿ ಸೇರಿದಂತೆ ಇತರೆ ವಸತಿ ಕಾಲೇಜುಗಳಲ್ಲಿ ಪ್ರಥಮ ಪಿಯುಸಿ ಗೆ ಉಚಿತ ಪ್ರವೇಶ! ಸಂಪೂರ್ಣ ಮಾಹಿತಿಗೆ ಈ ಲೇಖನ ಓದಿ