ಸ್ನೇಹಿತರೆ ತಮ್ಮಲ್ಲರಿಗೂ ಗೊತ್ತಿರುವಂತೆ ತಮ್ಮ ಭವಿಷ್ಯವಾಣಿಯಿಂದಲೇ ಹೆಚ್ಚು ಸುದ್ದಿಯಲ್ಲಿರುವ ಹಾಸನದ ಕೋಡಿ ಮಠದ ಡಾ.ಶಿವಾನಂದ ಶಿವಯೋಗಿ ಮಹಾ ಸ್ವಾಮೀಜಿಗಳು ಮತ್ತೊಂದು ಭಯಾನಕ ಭವಿಷ್ಯವನ್ನು ನುಡಿದಿದ್ದರು. ಹೌದು ಈಗಾಗಲೇ ಅವ್ರು ನುಡಿದಿದ್ದ ಎರಡು ಭವಿಷ್ಯಗಳು ನಿಜವಾಗಿವೆ. ಇದರ ಬೆನ್ನಲೇ ಜಗತ್ತಿಗೆ ಮತ್ತೊಂದು ಗಂಡಾಂತರ ಎದುರಾಗಲಿದೆ ಎಂದಿದ್ದರು. ಈ ಹಿಂದೆ ಅವ್ರು ಹೇಳಿದಂತೆ ರಾಜ್ಯದಲ್ಲಿ ಬಹುಮತದ ಸರ್ಕಾರ ಬಂದಿದೆ. ಈ ವರ್ಷದಲ್ಲಿ ದೊಡ್ಡ ಅವಘಡ ನಡೆಯುತ್ತದೆ ಎಂದು ಹೇಳಿದ್ರು, ಅದರಂತೆ ಒಡಿಶಾದಲ್ಲಿ ರೈಲು ದುರಂತವು ಸಂಭವಿಸಿದೆ. ಇದೀಗ ನಡೆಯುತ್ತಿರುವ ಘಟನೆಯೊಂದನ್ನ ನೋಡ್ತಿದ್ರೆ ಈ ವರ್ಷ ಇನ್ನೂ ಒಂದು ಗಂಡಾಂತರ ದೇಶಕ್ಕೆ ಕಾದಿದೆ ಅಂತ ಶ್ರೀಗಳು ಹೇಳಿದ ಮಾತು ನೆನಪಾಗುತ್ತಿದೆ.
ಹೌದು ಈ ವರ್ಷ ಅಚಾನಕ್ಕಾಗಿ ಗುಡುಗು-ಮಿಂಚು ಬರಲಿದೆ. ಎರಡರಿಂದ ಮೂರು ರಾಷ್ಟ್ರಗಳು ನೀರಿನಲ್ಲಿ ಮುಳುಗಡೆಯಾಗಲಿದೆ. ಎಲ್ಲೋ ನಡೆಯುವ ಬಾಂಬ್ ದಾಳಿಯಿಂದ ನಮಗೆ ಸಾಕಷ್ಟು ಅನಾಹುತ ಸಂಭವಿಸಲಿದೆ ಅಂತ ಹೇಳಿದ್ರು ಆ ಭವಿಷ್ಯ ಇದೀಗ ಜಾಗತಿಕ ಮಟ್ಟದಲ್ಲಿ ಸದ್ದು ಮಾಡುತ್ತಿರುವ ಇಸ್ರೇಲ್ ಹಾಗೂ ಪ್ಯಾಲೆಸ್ತೇನ್ ಯುದ್ಧವನ್ನು ನೋಡುತ್ತಿದ್ದರೆ ಅದು ನಿಜ ಇರಬಹುದು ಅನ್ನಿಸ್ತಿದೆ. ಹೌದು ಕೋಡಿ ಮಠದ ಸ್ವಾಮೀಜಿ ಕಳೆದ ಎರಡು ತಿಂಗಳ ಹಿಂದೆ ನುಡಿದ ಜಗತ್ತಿನಲ್ಲಿ ಒಂದು ದೇಶ ಕಣ್ಮರೆಯಾಗಲಿದೆ ಎಂಬ ಭವಿಷ್ಯ ನಿಜವಾಗುವುದೇ ಎಂಬ ಅನುಮಾನ ಹೆಚ್ಚಾಗುತ್ತಿದೆ.
ಹೌದು ಕಾಲಜ್ಞಾನದ ಯಾವುದೇ ಭವಿಷ್ಯ ಸುಳ್ಳಾಗಿಲ್ಲವೆಂದು ಆಗಾಗ ಭವಿಷ್ಯ ನುಡಿಯುವ ಹಾಸನ ಜಿಲ್ಲೆಯ ಅರಸೀಕೆರೆ ತಾಲ್ಲೂಕಿನ ಹಾರನಹಳ್ಳಿ ಕೋಡಿಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಅವರು, ಕಳೆದ ಎರಡು ತಿಂಗಳ ಹಿಂದೆ ಜಾಗತಿಕ ಮಟ್ಟದಲ್ಲಿ ಸಂಭವಿಸುವ ಘಟನೆಗಳ ಬಗ್ಗೆ ಭವಿಷ್ಯ ನುಡಿದಿದ್ದರು. ಶ್ರಾವಣ ಮಾಸದ ಮಧ್ಯಂತರದಲ್ಲಿ ಜಾಗತಿಕ ಮಟ್ಟದಲ್ಲಿ ವಿಪರೀತ ಮಳೆಯಾಗಲಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಯುದ್ಧ ಭೀತಿಯಿದೆ. ಭೂಕಂಪನಗಳು, ಸುನಾಮಿಗಳಿಂದ ಹೆಚ್ಚಿನ ಜನರ ಸಾವು ನೋವು ಸಂಭವಿಸಲಿವೆ. ವಿಷಾನೀಲ ಬೀಸುವ ಪ್ರಸಂಗವೂ ಇದೆ, ಅದು ಎಲ್ಲ ಕಡೆಯೂ ವ್ಯಾಪಿಸಲಿದೆ. ಯುದ್ಧದ ಭೀತಿಯಿಂದ ಹಾಗೂ ಮಳೆಯಿಂದ ಎರಡು ದೇಶಗಳು ಭೂಪಟದಿಂದ ಕಣ್ಮರೆಯಾಗಲಿವೆ ಅಂತ ಹೇಳಿದ್ದರು.
ಅದು ಈಗ ಕೋಡಿ ಶ್ರೀಗಳ ಭವಿಷ್ಯ ಮತ್ತೆ ನಿಜವಾಗುತ್ತಿದೆ ಎಂಬಂತೆ ಇಸ್ರೇಲ್- ಪ್ಯಾಲೆಸ್ತೇನ್ ಯುದ್ಧ ಆರಂಭವಾಗಿದ್ದು, ಶ್ರೀಗಳ ಭವಿಷ್ಯಕ್ಕೆ ಮತ್ತಷ್ಟು ಹಿಂಬು ಕೊಡುವಂತೆ ಘಟನೆಗಳು ನಡೀತಿವೆ. ಇನ್ನು ಬಾಂಬ್‌ಗಳು, ಭೂಕಂಪ, ಯುದ್ದಭೀತಿ, ಜನ ಜನಗಳ ಮೇಲೆ ನಿಯಂತ್ರಣ ಕಳೆದುಕೊಂಡು ಹುಚ್ಚರಾಗುವುದು, ದೇಹ ಅಶಕ್ತಿಯಿಂದ ದಾರಿಯಲ್ಲಿ ಬಿದ್ದು ಸಾಯುವುದು. ದೇಹ ಅಂಗಾಂಗಗಳ ಮೇಲೆ ಪ್ರಭಾವ ಕಳೆದುಕೊಳ್ಳುತ್ತವೆ. ಜಾಗತಿಕ ಭೂಪಟದಲ್ಲಿ ಒಂದು ದೇಶ ಕಣ್ಮರೆಯಾಗುತ್ತದೆ ಎಂದು ಹಾಸನ ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ. ಆದರೆ, ಈ ಭವಿಷ್ಯ ಇಸ್ರೇಲ್ ಹಾಗೂ ಪ್ಯಾಲೆಸ್ತೇನ್ ಯುದ್ಧದಲ್ಲಿ ಒಂದು ದೇಶ ಭೂಪಟದಿಂದ ಕಣ್ಮರೆಯಾಗುವ ಭವಿಷ್ಯವನ್ನು ನಿಜ ಮಾಡುವುದೇ ಎಂಬ ಅನುಮಾನ ಕಾಡುತ್ತಿದೆ.
ದೈನಂದಿನ ಹೊಸ ಮಾಹಿತಿಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ: Click Here To Join WhatsApp
ಕಣ್ಮರೆಯಾಗುವ ಆ ಒಂದು ದೇಶ ಯಾವುದು?
ಭವಿಷ್ಯ ನಡಿದಂತೆ ಬಾಂಬ್‌ಗಳು, ಭೂಕಂಪ, ಯುದ್ದಭೀತಿ, ಜನ ಜನಗಳ ಮೇಲೆ ನಿಯಂತ್ರಣ ಕಳೆದುಕೊಂಡು ಹುಚ್ಚರಾಗುವುದು, ದೇಹ ಅಶಕ್ತಿಯಿಂದ ದಾರಿಯಲ್ಲಿ ಬಿದ್ದು ಸಾಯುವುದು. ದೇಹ ಅಂಗಾಂಗಗಳ ಮೇಲೆ ಪ್ರಭಾವ ಕಳೆದುಕೊಳ್ಳುತ್ತವೆ ಎಂದಿದ್ದರು ಅದರಂತೆ ಈಗ ಯುದ್ಧ ಶುರುವಾಗಿದೆ ಸಾಕಷ್ಟು ತೊಂದರೆಗಲಾಗ್ತಿದ್ದು ಕೋಡಿ ಶ್ರೀಗಳ ಭವಿಷ್ಯ ನಿಜವಾಗ್ತಿದೆ. ಹೌದು ಜಾಗತಿಕ ಮಟ್ಟದಲ್ಲಿ ಪ್ಯಾಲೆಸ್ತೇನ್ ಭಾಗವಾಗಿದ್ದ ಇಸ್ರೇಲ್ ಒಕ್ಕೂಟವು ಸ್ವತಂತ್ರ ದೇಶವಾಗಿ ಅಸ್ತಿತ್ವಕ್ಕೆ ಬಂದು 60 ವರ್ಷಗಳೇ ಕಳೆಯುತ್ತಿವೆ. ಆದರೆ, ಇನ್ನೂ ಇಸ್ರೇಲ್ ದೇಶವೆಂದು ಒಪ್ಪಿಕೊಳ್ಳಲು ನೆರೆಹೊರೆ ದೇಶಗಳು ಸಿದ್ಧವಾಗಿಲ್ಲ. ಜೊತೆಗೆ, ಇಸ್ರೇಲ್ ಮೇಲೆ ಪ್ಯಾಲೆಸ್ತೇನ್ ರಾಷ್ಟ್ರದಿಂದ ಗಾಜಾಪಟ್ಟಿ ಸೇರಿದಂತೆ ಹಲವು ಭೂ ಪ್ರದೇಶಗಳ ವಿವಾದಿಂದಾಗಿ ಆಗಿಂದಾಗ್ಗೆ ಯುದ್ಧಗಳು ನಡೆಯುತ್ತಲೇ ಇವೆ. ಈವರೆಗೆ ಇಸ್ರೇಲ್ ಮಾಡಿದ ಯಾವುದೇ ಯುದ್ಧದಲ್ಲಿ ಸೋತಿಲ್ಲ. ಈಗ ಏಕಾಏಕಿ ಹಮಾಸ್ ಉಗ್ರರು ದಾಳಿ ಮಾಡಿದ್ದು, ಇಸ್ರೇಲ್ ಕೂಡ ಯುದ್ಧವನ್ನು ಸಾರಿದೆ. ಈಗ 1 ಸಾವಿರಕ್ಕೂ ಅಧಿಕ ಉಗ್ರರು ಸಾವನ್ನಪ್ಪಿದ್ದು, ಇತ್ತ 800ಕ್ಕೂ ಅಧಿಕ ಇಸ್ರೇಲ್ ನಾಗರೀಕರು ಮೃತರಾಗಿದ್ದಾರೆ ಅಂತ ತಿಳಿದುಬಂದಿದೆ.
ಇದನ್ನೂ ಓದಿ: ಗೃಹಲಕ್ಷ್ಮೀ ಯೋಜನೆಯ ಫಲಾನುಭವಿಗಳಿಗೆ ಗುಡ್ ನ್ಯೂಸ್; ಬಿಡುಗಡೆ ಆಗಲಿದೆ 2ನೇ ಕಂತಿನ ಹಣ
ಇದನ್ನೂ ಓದಿ: ಇಸ್ರೇಲ್ ನಲ್ಲಿ ಯುದ್ಧ ಏರಿಕೆ ಕಂಡ ಚಿನ್ನದ ಬೆಲೆ! ಹೀಗಿದೆ ನೋಡಿ ಇಂದಿನ ಚಿನ್ನ, ಬೆಳ್ಳಿಯ ದರ ಎಷ್ಟಾಗಿದೆ ನೋಡಿ?
ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram