ಕೆಪಿಎಸ್‌ಸಿ ಅಧಿಸೂಚನೆ, ಡಿಪ್ಲೊಮಾ ಮತ್ತು ಪಿಯುಸಿ ಅರ್ಹತೆಯುಳ್ಳವರಿಗೆ RPC ವೃಂದದಲ್ಲಿ ನೇಮಕಾತಿ

KPSC Recruitment 2024

ಕರ್ನಾಟಕ ನಾಗರೀಕ ಸೇವೆಗಳ ನೇರ ನೇಮಕಾತಿ 2021 ರ ನಿಯಮಗಳು ಹಗುಬ್ ತಿದ್ದುಪಡಿ ನಿಯಮ 2022 ಅನ್ವಯದಲ್ಲಿ ಗ್ರೂಪ್ ಸಿ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಗೆ ಕರ್ನಾಟಕ ಲೋಕಸೇವಾ ಆಯೋಗವು ಅರ್ಜಿಯನ್ನು ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಅಭ್ಯರ್ಥಿಗಳು 29-04-2024 ರಿಂದ 28-05-2024 ರವರೆಗೆ ಅರ್ಜಿ ಸಲ್ಲಿಸಬಹುದು. ಹಾಗೂ ಶುಲ್ಕ ಪಾವತಿಸಲು ಕೊನೆಯ ದಿನಾಂಕ 28-05-2024.

WhatsApp Group Join Now
Telegram Group Join Now

ಹುದ್ದೆಗಳ ವಿವರ ಹೀಗಿದೆ:- 

ಜಲಸಂಪನ್ಮೂಲ ಇಲಾಖೆಯಲ್ಲಿ 216 ಕಿರಿಯ ಇಂಜಿನಿಯರ್ (ಸಿವಿಲ್) ಹುದ್ದೆಗಳು , 54 ಹುದ್ದೆಗಳು ಕಿರಿಯ ಇಂಜಿನಿಯರ್ (ಸಿವಿಲ್) ಸೇವೆ ಸಲ್ಲಿಸುತ್ತಿರುವ ನಿರತ ಗ್ರೂಪ್ ಸಿ ಸಿಬ್ಬಂದಿಗಳಿಗೆ ಜವು 26 ಮೆಕ್ಯಾನಿಕಲ್ ಹುದ್ದೆಗಳು ಮತ್ತು ಸೇವಾ ನಿರತ ಗ್ರೂಪ್‌ ಸಿ ಸಿಬ್ಬಂದಿಗಳಿಗೆ 04 ಕಿರಿಯ ಇಂಜಿನಿಯರ್ ಹುದ್ದೆಗಳು ಖಾಲಿ ಇವೆ. ಇದರ ಜೊತೆಗೆ ಸಾರ್ವಜನಿಕ ಗ್ರಂಥಾಲಯದಲ್ಲಿ 13 ಗ್ರಂಥಪಾಲಕ ಹುದ್ದೆಗಳು ಖಾಲಿ ಇವೆ. ಹುದ್ದೆಗೆ ಆಯ್ಕೆ ಆದ ಕಿರಿಯ ಇಂಜಿನಿಯರ್ ಅಭ್ಯರ್ಥಿಗಳಿಗೆ 33,450 ರೂಪಾಯಿಯಿಂದ 62,600 ರೂಪಾಯಿ ಹಾಗೂ ಸಹಾಯಕ ಗ್ರಂಥಪಾಲಕರಿಗೆ 30,350 ರಿಂದ 58,250 ರೂಪಾಯಿ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ವಿದ್ಯಾರ್ಹತೆ ವಿವರ :- ಕಿರಿಯ ಇಂಜಿನಿಯರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಆಸಕ್ತ ಅಭ್ಯರ್ಥಿಗಳು ಸಿವಿಲ್ ಅಥವಾ ಮೆಕ್ಯಾನಿಕಲ್ ವಿಷಯದಲ್ಲಿ ಡಿಪ್ಲೊಮ ಇನ್ ಇಂಜಿನಿಯರಿಂಗ್ ಓದಿರಬೇಕು. ಹಾಗೂ ಸಹಾಯಕ ಗ್ರಂಥಪಾಲಕ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಆಸಕ್ತರು ಡಿಪ್ಲೊಮ ಇನ್ ಲೈಬ್ರರಿ ಸೈನ್ಸ್‌ ಕಂಪ್ಲೀಟ್ ಮಾಡಬೇಕು. ಈ ವಿಷಯಗಳಲ್ಲಿ ಓದಿರುವವರು ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದು. 

ಹುದ್ದೆಯ ವಯಸ್ಸಿನ ಮಿತಿ :-

ಹುದ್ದೆಗೆ ಅರ್ಜಿ ಸಲ್ಲಿಸುವ ಸಾಮಾನ್ಯ ವರ್ಗದ ಅಭ್ಯರ್ಥಿಗಳು 18 ರಿಂದ 35 ವರ್ಷ ವಯೋಮಿತಿ ಇದೆ. ಹಾಗೂ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ 3 ವರ್ಷ ವಯಸ್ಸಿನ ಸಡಿಲಿಕೆ ಹಾಗೂ ಎಸ್‌ಸಿ, ಎಸ್‌ಟಿ, ಪ್ರವರ್ಗ-1 ಅಭ್ಯರ್ಥಿಗಳಿಗೆ 5 ವರ್ಷ ವಯಸ್ಸಿನ ಸಡಿಲಿಕೆ ಇದೆ.

ಪಾವತಿಸುವ ಶುಲ್ಕದ ವಿವರ :- ಸಾಮಾನ್ಯ ವರ್ಗದ ಅಭ್ಯರ್ಥಿಗಳು 600 ರೂಪಾಯಿ ಶುಲ್ಕವನ್ನು ಪಾವತಿಸಬೇಕು. ಹಾಗೂ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ 300 ರೂಪಾಯಿ ಪಾವತಿಸಬೇಕು. ಹಾಗೂ ಮಾಜಿ ಸೈನಿಕ ಅಭ್ಯರ್ಥಿಗಳಿಗೆ 50 ರೂಪಾಯಿ. ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಮತ್ತು ಪ್ರವರ್ಗ-1 ಅಭ್ಯರ್ಥಿಗಳ ಯಾವುದೇ ಶುಲ್ಕ ಇಲ್ಲ.

ನೇಮಕಾತಿ ವಿವರ :- ಸ್ಪರ್ಧಾತ್ಮಕ ಪರೀಕ್ಷೆಯ ನಡೆಸಿ ನೇಮಕಾತಿ ನಡೆಯುತ್ತದೆ.

ಹುದ್ದೆಗೆ ಅರ್ಜಿ ಸಲ್ಲಿಸುವವರು ನೀಡುವವರು ಆಧಾರ್ ಕಾರ್ಡ್, ಎಜುಕೇಷನ್ ಸರ್ಟಿಫಿಕೇಟ್, ಜಾತಿ ಪ್ರಮಾಣ ಪತ್ರ, ಹಾಗೂ ನಿಮ್ಮ ವೈಯಕ್ತಿಕ ದಾಖಲೆಗಳನ್ನು ನೀಡಬೇಕು. ಶುಲ್ಕವನ್ನು ಆನ್ಲೈನ್ ಮೂಲಕ ಪಾವತಿಸಬೇಕು. ಹುದ್ದೆಗಳಿಗೆ ಅರ್ಜಿ ಸಲ್ಲಿಸುವವರು ಯಾವುದೇ ಅನುಭವ ಇರಬೇಕು ಏನು ಎಂಬ ನಿಯಮ ಇಲ್ಲ. ಹಾಗೆ ಪದವಿ ಪೂರ್ಣ ಗೊಳಿಸದೆ ಇರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸುವಾಗ ನೀಡುವ ಯಾವುದೇ ಮಾಹಿತಿ ಸುಳ್ಳಗಿದ್ದಲ್ಲಿ ನಿಮ್ಮ ಅರ್ಜಿಯನ್ನು ತಿರಸ್ಕರಿಸಲಾಗುತ್ತದೆ. ಅರ್ಜಿ ಸಲ್ಲಿಸುವಾಗ ಎಲ್ಲಾ ವಿವರಗಳನ್ನು ಸರಿಯಾಗಿ ಭರ್ತಿ ಮಾಡಿ.

ಇದನ್ನೂ ಓದಿ: ಕೆಪಿಎಸ್‌ಸಿ ಇಲಾಖೆಯಲ್ಲಿ 200ಕ್ಕೂ ಹೆಚ್ಚಿನ PDO ಹುದ್ದೆಗಳ ಭರ್ತಿಗೆ ನೇಮಕಾತಿಗೆ ಅರ್ಜಿ ಆಹ್ವಾನ ಮಾಡಲಾಗಿದೆ. 

ಇದನ್ನೂ ಓದಿ: ಉತ್ತಮ ಮೈಲೇಜ್ ಹಾಗೂ ವಿನ್ಯಾಸದೊಂದಿಗೆ ಮಾರುತಿ ಗ್ರಾಂಡ್ ವಿಟಾರ, ಖರೀದಿಸಲು ತುದಿಗಾಲಲ್ಲಿ ನಿಂತ ಗ್ರಾಹಕರು