ಕರ್ನಾಟಕ ಲೋಕಸೇವಾ ಆಯೋಗವು ಖಾಲಿ ಇರುವ ಭೂ ಮಾಪಕರ ಹುದ್ದೆಗೆ ಆನ್ಲೈನ್ ಮೂಲಕ ಅರ್ಜಿ ಆಹ್ವಾನ ಮಾಡಿದ್ದು ಆಸಕ್ತರು ಅರ್ಜಿ ಸಲ್ಲಿಸಲು ಇಲಾಖೆ ತಿಳಿಸಿದೆ. ಹುದ್ದೆಗೆ ಅರ್ಜಿ ಸಲ್ಲಿಸುವ ಪೂರ್ಣ ಮಾಹಿತಿಗಳು ಇಲ್ಲಿವೆ.
ಹುದ್ದೆಯ ಬಗ್ಗೆ ಪೂರ್ಣ ವಿವರ :- ಭೂಮಾಪನ ಕಂದಾಯ ವ್ಯವಸ್ಥೆವು ಭೂ ದಾಖಲೆಗಳ ಇಲಾಖೆಯಲ್ಲಿ 364 ಗ್ರೂಪ್ ಸಿ ಭೂ ಮಾಪಕರ ಹುದ್ದೆಗಳು ಖಾಲಿ ಇವೆ. ಹುದ್ದೆಗೆ ಅರ್ಜಿ ಸಲ್ಲಿಸಲು ಮಾರ್ಚ್ 11 ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಏಪ್ರಿಲ್ 10ರ ವರೆಗೆ ಅವಕಾಶ ಇದೆ ಎಂದು ಇಲಾಖೆಯು ಅಧಿಸೂಚನೆಯಲ್ಲಿ ಸ್ಪಷ್ಟವಾಗಿ ತಿಳಿಸಿದೆ.
ಹುದ್ದೆಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಯ ವಿದ್ಯಾರ್ಹತೆ ಏನಿರಬೇಕು?
ಇನ್ನೂ ಹುದ್ದೆಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಯು ಯಾವುದೇ ಮಾನ್ಯ ಪಡೆದ ವಿಶ್ವ ವಿದ್ಯಾನಿಲಯದಿಂದ ಬಿ.ಇ. ಇನ್ ಸಿವಿಲ್ ಅಥವಾ ಬಿ.ಟೆಕ್ ಇನ್ ಸಿವಿಲ್ ಅಥವಾ ಡಿಪ್ಲೋಮಾ ಇನ್ ಸಿವಿಲ್ ಎಂಜಿನಿಯರಿಂಗ್ ಪೂರ್ಣಗೊಂದಿರಬೇಕು. ಇಲ್ಲವೇ ಕರ್ನಾಟಕ ಪರೀಕ್ಷಾ ಮಂಡಳಿ ನಡೆಸುವ ಪಿಯುಸಿ ಪರೀಕ್ಷೆಯಲ್ಲಿ ಉತ್ತೀರ್ಣ ಆಗಿರಬೇಕು ಅಥವಾ ಸಿಬಿಎಸ್‌ಇ ಅಥವಾ ಐಸಿಎಸ್‌ಇಯ 12ನೇ ತರಗತಿ ಉತ್ತೀರ್ಣರಾಗಿರಬೇಕು ಜೊತೆಗೆ ಕಡ್ಡಾಯವಾಗಿ ಗಣಿತ ವಿಷಯದಲ್ಲಿ 60% ಅಂಕ ಪಡೆದಿರಬೇಕು. ಮೇಲಿನ ಎರಡು ವಿದ್ಯಾರ್ಹತೆಯ ಹೊರತು ಪಡಿಸಿ ಕರ್ನಾಟಕ ಸರ್ಕಾರದ ವೃತ್ತಿ ಶಿಕ್ಷಣ ಇಲಾಖೆ ನಡೆಸುವ ಲ್ಯಾಂಡ್ ಮತ್ತು ಸಿಟಿ ಸರ್ವೆಯ ಪದವಿ ಪೂರ್ವ ಡಿಪ್ಲೋಮಾ ಪಾಸ್ ಆಗಿರಬೇಕು ಅಥವಾ ಕರ್ನಾಟಕ ಸರ್ಕಾರದ ಉದ್ಯೋಗ ಮತ್ತು ತರಬೇತಿ ಇಲಾಖೆ ನಡೆಸುವ ಐಟಿಐ ಇನ್ ಸರ್ವೆ ಟ್ರೇಡ್‌ನಲ್ಲಿ ಪಾಸ್ ಆಗಿರಬೇಕು.
ಹುದ್ದೆಗೆ ಅರ್ಜಿ ಸಲ್ಲಿಸಲು ವಯಸ್ಸಿನ ಮಿತಿ ಹೀಗಿದೆ :- ಅರ್ಜಿ ಸಲ್ಲಿಸುವ ಅಭ್ಯರ್ಥಿಯ ಕನಿಷ್ಠ ವಯಸ್ಸು 18 ಹಾಗೂ ಗರಿಷ್ಠ ವಯಸ್ಸು 35. ಸರಕಾರದ ಮೀಸಲಾತಿ ನಿಯಮದಂತೆ 2ಎ ಅಥವಾ 2ಬಿ ಅಥವಾ 3ಎ ಅಥವಾ 3ಬಿ ಅಭ್ಯರ್ಥಿಗಳಿಗೆ 3 ವರ್ಷ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಮತ್ತು ಪ್ರವರ್ಗ-1 ಅಭ್ಯರ್ಥಿಗಳಿಗೆ 5 ವರ್ಷಗಳ ವಯೋಮಿತಿಯ ಸಡಿಲಿಕೆ ಇರುತ್ತದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಹುದ್ದೆಗೆ ಅರ್ಜಿ ಸಲ್ಲಿಸುವಾಗ ನೀಡಬೇಕಾದ ಶುಲ್ಕದ ವಿವರ:- ಸಾಮಾನ್ಯ ಮತ್ತು ಇತರ ಹಿಂದುಳಿದ ಪ್ರವರ್ಗಗಳಿಗೆ ಸೇರಿದ ಅಭ್ಯರ್ಥಿಯು 600 ರೂಪಾಯಿ ಅರ್ಜಿ ಶುಲ್ಕವನ್ನು ಪಾವತಿಸಬೇಕು. ಹಾಗೂ ಪ್ರವರ್ಗ 2ಎ ಅಥವಾ 2ಬಿ ಅಥವಾ 3ಎ ಅಥವಾ 3ಬಿ ಅಭ್ಯರ್ಥಿಗಳು 300 ರೂಪಾಯಿ ಶುಲ್ಕ ಪಾವತಿಸಬೇಕು ಹಾಗೂ ಮಾಜಿ ಸೈನಿಕ ಅಭ್ಯರ್ಥಿಗಳು 50 ರೂಪಾಯಿ ಶುಲ್ಕ ಪಾವತಿಸಬೇಕು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಮತ್ತು ಪ್ರವರ್ಗ-1 ಮತ್ತು ವಿಶೇಷ ಚೇತನ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ.
ಹುದ್ದೆಯ ಆಯ್ಕೆಯ ವಿಧಾನ ಹೀಗಿದೆ :-
ಅಭ್ಯರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ ನಡೆಸುತ್ತಾರೆ ನಂತರ ಡಾಕ್ಯುಮಂಎಟ್ ಪರಿಶೀಲನೆ ಮತ್ತು ವೈದ್ಯಕೀಯ ಪರೀಕ್ಷೆಯ ನಡೆಸಿ ಅಭ್ಯರ್ಥಿಗಳ ಆಯ್ಕೆ ಮಾಡಲಾಗುತ್ತದೆ.
ಮಾಸಿಕ ವೇತನ :- ಆಯ್ಕೆಯಾಗುವ ಅಭ್ಯರ್ಥಿಗಳ ಮಾಸಿಕ ವೇತನವೂ 23,500 ರೂಪಾಯಿಯಿಂದ 47,650 ರೂಪಾಯಿ ಇರಲಿದೆ.
ಹುದ್ದೆಗೆ ಅರ್ಜಿ ಸಲ್ಲಿಸುವ ವಿಧಾನ :- ಇಲಾಖೆಯ ಅಧಿಕೃತ ವೆಬ್ಸೈಟ್ https://kpsc.kar.nic.in/ ಗೆ ಭೇಟಿನೀಡಿ. ಅರ್ಜಿ ನಮೂನೆಯಲ್ಲಿ ನಿಮ್ಮ ವೈಯಕ್ತಿಕ ಮತ್ತು ಶೈಕ್ಷಣಿಕ ದಾಖಲೆಗಳನ್ನು ತುಂಬಿ ಹಾಗೂ ನಿಮ್ಮ ಅರ್ಜಿ ಶುಲ್ಕ ಅನ್ವಯ ಅದಲ್ಲಿ ಅದನ್ನು ತುಂಬಿ ಅರ್ಜಿ ಸಲ್ಲಿಸಿ. ಅರ್ಜಿ ಸಲ್ಲಿಸುವಾಗ ಎಲ್ಲಾ ವಿವರಗಳನ್ನು ಮತ್ತೊಮ್ಮೆ ಪರಿಶೀಲಿಸಿ ಅರ್ಜಿ ಸಲ್ಲಿಸಿ.
ಅಧಿಸೂಚನೆ PDF ಡೌನ್ ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ(HK)
ಅಧಿಸೂಚನೆ PDF ಡೌನ್ ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ(RPC)
ಇದನ್ನೂ ಓದಿ: ಭಾರತೀಯ ಹೆದ್ದಾರಿಗಳಲ್ಲಿ ಶೀಘ್ರದಲ್ಲೇ ಸದ್ದು ಮಾಡಲಿರುವ ಅಸಾಧಾರಣ ಎಪ್ರಿಲಿಯಾ, ಇದರ ವೈಶಿಷ್ಟ್ಯತೆಯನ್ನು ತಿಳಿಯಿರಿ!
ಇದನ್ನೂ ಓದಿ: ಪಿಯುಸಿ ಓದಿದವರಿಗೆ ಬಳ್ಳಾರಿ ನ್ಯಾಯಾಲಯಗಳಲ್ಲಿ ಖಾಲಿ ಹುದ್ದೆಗಳು ಇವೆ. ಈಗಾಲೇ ಅರ್ಜಿ ಸಲ್ಲಿಸಿ