ಕರ್ನಾಟಕ ಲೋಕಸೇವಾ ಆಯೋಗ ಕರ್ನಾಟಕ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯಲ್ಲಿ 97 ಹುದ್ದೆಗಳಿಗೆ ಅರ್ಜಿ ಆಹ್ವಾನ ಮಾಡಲಾಗಿದೆ

KPSC Recruitment 2024

ಕರ್ನಾಟಕ ಲೋಕಸೇವಾ ಆಯೋಗ ಕರ್ನಾಟಕ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯಲ್ಲಿ( ಕೆಪಿಎಸ್ಸಿ) ಖಾಲಿ ಇರುವ ಸಹಾಯಕ ನಿಯಂತ್ರಕರು ಹಾಗೂ ಲೆಕ್ಕಪರಿಶೋಧನಾಧಿಕಾರಿ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ ಮಾಡಲಾಗಿದೆ. ಆಸಕ್ತರು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಇಲಾಖೆಯು ತಿಳಿಸಿದೆ.

WhatsApp Group Join Now
Telegram Group Join Now

ಹುದ್ದೆಯ ವಿವರ:-

ಅರ್ಜಿ ಆಹ್ವಾನ ಮಾಡಿದ ಇಲಾಖೆ ಕರ್ನಾಟಕ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆ. ಒಟ್ಟು 97 ಹುದ್ದೆಗಳ ಸಂಖ್ಯೆ ಖಾಲಿ ಇದ್ದು, ಗ್ರೂಪ್ A ಗೆ 43 ಹಾಗೂ ಗ್ರೂಪ್ B ಗೆ 54 ಹುದ್ದೆಗಳನ್ನು ಭರ್ತಿ ಮಾಡಲಾಗುವುದು. ಅರ್ಜಿ ಸಲ್ಲಿಸಲು ಆರಂಭ ದಿನಾಂಕ 18-03-2024 . ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 17-04-2024. ಹುದ್ದೆಗೆ ಪೂರ್ವಭಾವಿ ಪರೀಕ್ಷೆಯ ದಿನಾಂಕ 02-06-2024. ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಹೊಂದಿರುವ ವಿಶ್ವ ವಿದ್ಯಾನಿಲಯದಿಂದ M.B.A ಅಥವಾ M.com ಪದವಿ ಪಡೆದಿರಬೇಕು. ಇಲ್ಲವೇ C.A. C.S, C.M.A ಎಕ್ಸಾಮ್ ಗಳನ್ನು ಪಾಸ್ ಆಗಿರಬೇಕು.

ಹುದ್ದೆಯ ಸಂಬಳ :- ಗ್ರೂಪ್ A- 52,650 ರಿಂದ 97,100 ರೂಪಾಯಿ ಹಾಗೂ ಗ್ರೂಪ್ B ಯ ತಿಂಗಳ ವೇತನ 43,100 ರಿಂದ 83,900 ರೂಪಾಯಿ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ 

ಶುಲ್ಕದ ವಿವರ:-

  • ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ – 600 ರೂಪಾಯಿ
  • ಪ್ರವರ್ಗ 2A, 2B, 3A, 3B ಅಭ್ಯರ್ಥಿಗಳಿಗೆ- 300 ರೂಪಾಯಿ
  • ಮಾಜಿ ಸೈನಿಕ ಅಭ್ಯರ್ಥಿಗಳಿಗೆ – 50 ರೂಪಾಯಿ
  • SC/ ST ಅಭ್ಯರ್ಥಿಗಳಿಗೆ ಯಾವುದೇ ಶುಲ್ಕವಿಲ್ಲ.
  • ಆನ್ಲೈನ್ ಮೂಲಕ ಶುಲ್ಕವನ್ನು ಪಾವತಿಸಬೇಕು.

ಇದನ್ನೂ ಓದಿ: ಕೈಗೆ ಸುತ್ತಿ ಮಡಚಬಹುದಾದಂತಹ ನೋಟವನ್ನು ಹೊಂದಿರುವ ಈ Motorola ಫೋನ್ನಲ್ಲಿ ಟ್ಯಾಬ್ಲೆಟ್ ಅನ್ನೂ ಕಾಣಬಹುದು

ಅರ್ಜಿ ಸಲ್ಲಿಸುವಾಗ ಗಮನಿಸಬೇಕಾದ ಅಂಶಗಳು :-

  • ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮೊದಲು ಅಧಿಸೂಚನೆಯಲ್ಲಿ ತಿಳಿಸಿದ ಎಲ್ಲ ಮಾಹಿತಿಗಳನ್ನು ಪೂರ್ತಿಯಾಗಿ ಓದಿ ನಂತರವೇ ಅರ್ಜಿಯನ್ನು ಭರ್ತಿ ಮಾಡಬೇಕು.
  • ಅರ್ಜಿ ಸಲ್ಲಿಸುವಾಗ ಯಾವುದೇ ತಪ್ಪು ಮಾಹಿತಿಯನ್ನು ನೀಡಿದ್ದಲ್ಲಿ ಅದನ್ನು ಬದಲಾಯಿಸಲು ಇಲಾಖೆಗೆ ಮನವಿ ಸಲ್ಲಿಸಲು ಅವಕಾಶ ಇರುವುದಿಲ್ಲ. ಒಂದು ವೇಳೆ ಯಾವುದೇ ಮಾಹಿತಿಯ ತಿದ್ದುಪಡಿ ಮಾಡಬೇಕಾಗಿದ್ದಲ್ಲಿ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕದ ಒಳಗೆ ಮಾಹಿತಿಯನ್ನು ಆನ್ಲೈನ್ ನಲ್ಲಿ ತಿದ್ದುಪಡಿಗೆ ಅವಕಾಶ ಇದೆ.
  • ಅಭ್ಯರ್ಥಿಗಳ ವಯೋಮಿತಿ ಮತ್ತು ವಿದ್ಯಾರ್ಹತೆಯ ಪ್ರಮಾಣಪತ್ರಗಳನ್ನು ಮತ್ತು ಜಾತಿ ಪ್ರಮಾಣಪತ್ರವನ್ನು ನಿಮ್ಮ ಹೆಸರಿನಲ್ಲಿಯೇ ಸಲ್ಲಿಸಬೇಕು. ಯಾವುದೇ ಕಾರಣಕ್ಕೂ ಬೇರೆಯವರ ಪ್ರಮಾಣ ಪತ್ರವನ್ನು ಸಲ್ಲಿಸಿದ್ದಾರೆ ನಿಮ್ಮ ಅರ್ಜಿಯನ್ನು ಇಲಾಖೆಯು ತಿರಸ್ಕಾರ ಮಾಡುತ್ತದೆ.
  • ಅರ್ಜಿ ಸಲ್ಲಿಸುವಾಗ ಮೀಸಲಾತಿ ವಿವರಗಳನ್ನು ಸಲ್ಲಿಸದೆ ನಂತರ ಸಲ್ಲಿಸಿದಲ್ಲಿ ಅದನ್ನು ಪರಿಗಣಿಸುವುದಿಲ್ಲ.
  • ಅರ್ಜಿಯನ್ನು ಸಲ್ಲಿಸಿದ ನಂತರ ಶುಲ್ಕವನ್ನು ಪಾವತಿಸದೇ ಇರುವ ಅರ್ಜಿಗಳನ್ನು ತಿರಸ್ಕಾರ ಮಾಡಲಾಗುವುದು.

ಅರ್ಜಿ ಸಲ್ಲಿಸುವ ವಿಧಾನ :-

ಇಲಾಖೆಯ ಅಧಿಕೃತ ವೆಬ್ಸೈಟ್ ಗೆ ಹೋಗಿ, KPSC ಆಡಿಟ್ ಆಫೀಸರ್ ಮತ್ತು ಸಹಾಯಕ ನಿಯಂತ್ರಕರು ಹುದ್ದೆಯ ಅಧಿಸೂಚನೆಯ ಮೇಲೆ ಕ್ಲಿಕ್ ಮಾಡಿ ಆನ್ಲೈನ್ ಅರ್ಜಿ ನಮೂನೆಯಲ್ಲಿ ನಿಮ್ಮ ಹೆಸರು ವಯಸ್ಸು, ಲಿಂಗ ಹುಟ್ಟಿದ ದಿನಾಂಕ, ಜಾತಿ ವಿವರ, ಹಾಗೂ ನಿಮ್ಮ ವಿಳಾಸ ಮತ್ತು ಮೊಬೈಲ್ ಸಂಖ್ಯೆಯನ್ನು ಭರ್ತಿ ಮಾಡಿ. ನಂತರ ನಿಮ್ಮ ವಿದ್ಯಾರ್ಹತೆಯ ಮಾಹಿತಿಯನ್ನು ಭರ್ತಿ ಮಾಡಿ ನಂತರ ನಿಮ್ಮ ಜಾತಿ ಪ್ರಮಾಣ ಪತ್ರ ಮತ್ತು ವಿದ್ಯಾರ್ಹತೆಯ ಸರ್ಟಿಫಿಕೇಟ್ ಗಳನ್ನು ಸ್ಕ್ಯಾನ್ ಮಾಡಿ ಭರ್ತಿ ಮಾಡಿ ನಂತರ ಪಾವತಿಸಬೇಕಾದ ಶುಲ್ಕವನ್ನು ಆನ್ಲೈನ್ ಮೂಲಕ ತುಂಬಿ. ಅರ್ಜಿಯನ್ನು ಸಲ್ಲಿಸುವ ಮುನ್ನ ಎಲ್ಲಾ ಮಾಹಿತಿಗಳನ್ನು ಒಮ್ಮೆ ಪರಿಶೀಲನೆ ಮಾಡಿ ಅರ್ಜಿಯನ್ನು ಸಲ್ಲಿಸಿ.

ಅಧಿಸೂಚನೆ PDF ಡೌನ್ ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ಅಧಿಸೂಚನೆ PDF ಡೌನ್ ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: SBI ನ ವಾರ್ಷಿಕ ಠೇವಣಿಯಲ್ಲಿ ಹೂಡಿಕೆ ಮಾಡಿ ಪ್ರತಿ ತಿಂಗಳು ಆದಾಯ ಪಡೆಯಿರಿ