ಜಲಸಂಪನ್ಮೂಲ ಇಲಾಖೆ ಮತ್ತು ಸಾರ್ವಜನಿಕ ಗ್ರಂಥಾಲಯ ಇಲಾಖೆಯಲ್ಲಿ ಬರೋಬ್ಬರಿ 313 ಖಾಲಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಹುದ್ದೆಯ ಬಗ್ಗೆ ಪೂರ್ಣ ವಿವರಗಳನ್ನು ತಿಳಿಯಲು ಈ ಲೇಖನವನ್ನು ಪೂರ್ತಿಯಾಗಿ ಓದಿ.
ಜಲಸಂಪನ್ಮೂಲ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ವಿವರ :-
- ಕಿರಿಯ (ಸಿವಿಲ್): 216 ಹುದ್ದೆಗಳು.
- ಕಿರಿಯ (ಸಿವಿಲ್) – ಗ್ರೂಪ್ ಸಿ ಸಿಬ್ಬಂದಿಗೆ *(ಸೇವಾ ನಿರತ): 54 ಹುದ್ದೆಗಳ.
- ಕಿರಿಯ (ಮೆಕ್ಯಾನಿಕಲ್): 26 ಹುದ್ದೆಗಳು.
- ಕಿರಿಯ (ಮೆಕ್ಯಾನಿಕಲ್) – ಗ್ರೂಪ್ ಸಿ *ಸಿಬ್ಬಂದಿಗೆ (ಸೇವಾ ನಿರತ): 4 ಹುದ್ದೆಗಳು.
ಸಾರ್ವಜನಿಕ ಗ್ರಂಥಾಲಯ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ವಿವರ :- ಸಹಾಯಕ ಗ್ರಂಥಪಾಲಕ: 13 ಹುದ್ದೆಗಳು.
ವಿದ್ಯಾರ್ಹತೆ :-
- ಕಿರಿಯ ಸಂಸ್ಥೆ ಹುದ್ದೆಗೆ ಈ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ಸಂಸ್ಥೆಯಿಂದ ಸಿವಿಲ್ ಅಥವಾ ಮೆಕ್ಯಾನಿಕಲ್ ಡಿಪ್ಲೋಮಾ ಪದವಿ ಪಡೆದಿರಬೇಕು. ಈ ಹುದ್ದೆಗೆ ಯಾವುದೇ ರೀತಿಯ ಅನುಭವದ ಅವಶ್ಯಕತೆ ಇರುವುದಿಲ್ಲ.
- ಗ್ರಂಥಾಲಯ ಸಹಾಯಕ ಹುದ್ದೆಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಮಾನ್ಯತೆ ಪಡೆದ ಸಂಸ್ಥೆಯಿಂದ ಮೂರು ವರ್ಷಗಳ ಡಿಪ್ಲೋಮಾ ಇನ್ ಲೈಬ್ರರಿ ಸೈನ್ಸ್ ಪಾಸ್ ಆಗಿರಬೇಕು. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ವಯಸ್ಸಿನ ಮಿತಿ :- ಅಭ್ಯರ್ಥಿಯ ಕನಿಷ್ಠ ವಯಸ್ಸು 18 ವರ್ಷ ಇರಬೇಕು. ಹಾಗೂ ಗರಿಷ್ಠ ವಯಸ್ಸು 35 ವರ್ಷ ಮೀರಿರಬಾರದು. ಸರ್ಕಾರದ ಮೀಸಲಾತಿ ನಿಯಮದ ಪ್ರಕಾರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ 5 ವರ್ಷ ಹಾಗೂ ಇತರ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ 3 ವರ್ಷ ಹಾಗೂ ಅಂಗವಿಕಲ ಅಭ್ಯರ್ಥಿಗಳಿಗೆ 10 ವರ್ಷ ವಯಸ್ಸಿನ ಸಡಿಲಿಕೆ ಇರುತ್ತದೆ.
ಶುಲ್ಕದ ವಿವರಗಳು :- ಸಾಮಾನ್ಯ ವರ್ಗದ ಅಭ್ಯರ್ಥಿಗಳು 600 ರೂಪಾಯಿ ಅರ್ಜಿ ಶುಲ್ಕ ನೀಡಬೇಕು ಹಾಗೂ ಪ್ರವರ್ಗ 2ಎ ಅಥವಾ 2ಬಿ ಅಥವಾ 3ಎ ಅಥವಾ 3ಬಿ ವರ್ಗದ ಅಭ್ಯರ್ಥಿಗಳು 300 ರೂಪಾಯಿ ಹಾಗೂ ಮಾಜಿ ಸೈನಿಕ ಅಭ್ಯರ್ಥಿಗಳು 50 ರೂಪಾಯಿ ಪಾವತಿಸಬೇಕು. ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಹಾಗೂ ಅಂಗವಿಕಲ ಅಭ್ಯರ್ಥಿಗಳಿಗೆ ಯಾವುದೇ ಶುಲ್ಕ ಇರುವುದಿಲ್ಲ. ಅರ್ಜಿ ಶುಲ್ಕವನ್ನು ನೀವು ನೆಟ್ ಬ್ಯಾಂಕಿಂಗ್ ಅಥವಾ ಡೆಬಿಟ್ ಕಾರ್ಡ್ ಅಥವಾ ಕ್ರೆಡಿಟ್ ಕಾರ್ಡ್ ಅಥವಾ ಯುಪಿಐ ಮೂಲಕ ಆನ್‌ಲೈನ್ ಮೂಲಕ ಪಾವತಿಸಬೇಕು.
ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಹೇಗೆ?
ಅಭ್ಯರ್ಥಿಗಳನ್ನು ಇಲಾಖೆಯು ಸ್ಪರ್ಧಾತ್ಮಕ ಪರೀಕ್ಷೆ ನಡೆಸಿ ಅದರಲ್ಲಿ ಉತ್ತೀರ್ಣ ಆಗಿರುವ ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತಾರೆ.
ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಎರಡು ಪತ್ರಿಕೆ ಇದ್ದು ಇಂದು ಸಾಮಾನ್ಯ ಪತ್ರಿಕೆ ಮತ್ತು ಹಾಗೂ ನಿರ್ದಿಷ್ಟ ವಿಷಯಗಳ ಬಗ್ಗೆ ಪ್ರಶ್ನೆ ಪತ್ರಿಕೆ ಇರುತ್ತದೆ. ಒಂದೊಂದು ಪತ್ರಿಕೆಯು 100 ಅಂಕಗಳ ಪ್ರಶ್ನೆಯನ್ನು ಒಳಗೊಂಡಿರುತ್ತದೆ. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ನೆಗೆಟಿವ್ ಅಂಕಗಳು ಇರುತ್ತದೆ.
ವೇತನದ ಬಗ್ಗೆ ಮಾಹಿತಿ :- ಕಿರಿಯ ಎಂಜಿನಿಯರ್‌ಗೆ ಮಾಸಿಕ ವೇತನ 33,450 ರೂಪಾಯಿಯಿಂದ 62,600 ರೂಪಾಯಿ ಆಗಿರುತ್ತದೆ. ಹಾಗೂ ಗ್ರಂಥಾಲಯ ಸಹಾಯಕರಿಗೆ 30,350 ರೂಪಾಯಿಯಿಂದ 58,250 ರೂಪಾಯಿ ಆಗಿರುತ್ತದೆ.
ಹುದ್ದೆಗೆ ಅರ್ಜಿ ಸಲ್ಲಿಸುವಾಗ ನೀವು ಇಲಾಖೆಯ ಅಧಿಕೃತ ವೆಬ್ಸೈಟ್ ನಲ್ಲಿ ಮಾತ್ರ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸುವಾಗ ಎಚ್ಚರಿಕೆಯಿಂದ ಅರ್ಜಿ ಸಲ್ಲಿಸಿ.
ಅಧಿಸೂಚನೆ PDF ಡೌನ್ ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಕರ್ನಾಟಕದಲ್ಲಿ 1000 ಗ್ರಾಮ ಲೆಕ್ಕಿಗ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ ವಿಸ್ತರಣೆ ಆಗಿದೆ.
ಇದನ್ನೂ ಓದಿ: ಕೆಲವು ಷರತ್ತುಗಳನ್ನು ಪೂರೈಸಿದರೆ ನೀವು 50,000 EPFO ಬೋನಸ್ ಹಣವನ್ನು ಕಡೆಯಬಹುದು