ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ಖಾಲಿ ಇರುವ ಒಟ್ಟು 247 ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹುದ್ದೆಗಳನ್ನು ಭರ್ತಿ ಮಾಡಲು ಮುಂದಾಗಿದ್ದು ಆಸಕ್ತರು ಅರ್ಜಿ ಸಲ್ಲಿಸಲು ಕೋರಿದೆ.
ಹುದ್ದೆಯ ಬಗ್ಗೆ ಮಾಹಿತಿ:- 247 ಹುದ್ದೆಗಳಲ್ಲಿ 150 ಉಳಿಕೆ ಮೂಲ ವೃಂದ ಹುದ್ದೆಗಳು ಹಾಗೂ 97 ಹೈದರಾಬಾದ್-ರ‍್ನಾಟಕ ವೃಂದ ಹುದ್ದೆಗಳನ್ನು ಭರ್ತಿ ಮಾಡಲು ಇಲಾಖೆ ಮುಂದಾಗಿದೆ. ಅಭ್ಯರ್ಥಿಗಳು 15-04-2024 ರಿಂದ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 15-05-2024 ಆಗಿದೆ.
ಅರ್ಜಿ ಶುಲ್ಕದ ವಿವರ:- ಅರ್ಜಿ ಸಲ್ಲಿಸುವ ಸಾಮಾನ್ಯ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ 600 ರೂಪಾಯಿ ಹಾಗೂ ವರ್ಗ 2ಎ ಅಥವಾ 2ಬಿ ಅಥವಾ 3ಎ ಅಥವಾ 3ಬಿ ಅಭ್ಯರ್ಥಿಗಳಿಗೆ 300 ರೂಪಾಯಿ ಹಾಗೂ ಮಾಜಿ ಸೈನಿಕ ಅಭ್ಯರ್ಥಿಗಳಿಗೆ 50 ರೂಪಾಯಿ ಹಾಗೂ ಎಸ್ ಸಿ ಅಥವಾ ಎಸ್ ಟಿ ಹಾಗೂ ಪ್ರವರ್ಗ -1 ಮತ್ತು ಪಿಡಬ್ಲ್ಯೂಡಿ ಅಭ್ಯರ್ಥಿಗಳಿಗೆ ಶುಲ್ಕ ಪಾವತಿಸುವ ಅಗತ್ಯ ಇಲ್ಲ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ವಯಸ್ಸಿನ ಮಿತಿ :- ಹುದ್ದೆ ಅರ್ಜಿ ಸಲ್ಲಿಸುವ ಸಾಮಾನ್ಯ ಅಭ್ಯರ್ಥಿಯ ವಯಸ್ಸು 18 ರಿಂದ 35 ವರ್ಷ. ಸರಕಾರದ ಮೀಸಲಾತಿಯ ನಿಯಮದಂತೆ ವಯಸ್ಸಿನ ಸಡಿಲಿಕೆ ಇರುತ್ತದೆ.
ವೇತನದ ಮಾಹಿತಿ:- ಆಯ್ಕೆಯಾದ ಅಭ್ಯರ್ಥಿಗಳ ಮಾಸಿಕ ವೇತನವೂ 37,900 ರೂಪಾಯಿಯಿಂದ 70,850 ರೂಪಾಯಿ ಆಗಿರುತ್ತದೆ.
ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಿದ್ಯಾರ್ಹತೆ :- ಅಭ್ಯರ್ಥಿಗಳು ಯುಜಿಸಿ ಮಾನ್ಯತೆ ಪಡೆದ ಸಂಸ್ಥೆಯಿಂದ ಪದವಿ ಪಡೆದಿರಬೇಕು.
ಇದನ್ನೂ ಓದಿ: ಮಹಿಳೆಯರು ಈ ಯೋಜನೆಯಲ್ಲಿ 2 ಲಕ್ಷ ಹೂಡಿಕೆ ಮಾಡಿದರೆ 30,000 ಲಾಭ ಪಡೆಯಬಹುದು.
ಅಭ್ಯರ್ಥಿಗಳ ಆಯ್ಕೆಯ ವಿಧಾನ :-
ಕರ್ನಾಟಕ ನಾಗರಿಕ ಸೇವೆಗಳ ನಿಯಮಗಳ ಅನುಸಾರವಾಗಿ ಸ್ಪರ್ಧಾತ್ಮಕ ಪರೀಕ್ಷೆಯನ್ನು ನಡೆಸಿ ಪರೀಕ್ಷೆಯಲ್ಲಿ ಗಳಿಸಿದ ಶೇಕಡಾವಾರು ಅಂಕಗಳ ಆಧಾರದ ಮೇಲೆ ಆಯ್ಕೆ ಪ್ರಕ್ರಿಯೆ ನಡೆಯುತ್ತದೆ.
ಸ್ಮರ್ಧಾತ್ಮಕ ಪರೀಕ್ಷೆಯು ಕನ್ನಡ ಭಾಷಾ ಪರೀಕ್ಷೆ ಹಾಗೂ ಸ್ಪರ್ಧಾತ್ಮಕ ಪರೀಕ್ಷೆ ಆಗಿದ್ದು, 100 ಅಂಕಗಳ ಎರಡು ಪತ್ರಿಕೆಗಳು ಇರುತ್ತದೆ. ವಸ್ತುನಿಷ್ಠ ಬಹು ಆಯ್ಕೆಯ ಮಾದರಿಯಲ್ಲಿ ಪತ್ರಿಕೆ ಇರಲಿದ್ದು. ಪರೀಕ್ಷೆ ಅವಧಿ ಎರಡು ಗಂಟೆ ಆಗಿರುತ್ತದೆ. ಒಂದು ತಪ್ಪು ಉತ್ತರಕ್ಕೆ ನಾಲ್ಲನೇ ಒಂದು ಋಣಾತ್ಮಕ ಅಂಕಗಳನ್ನು ಕಡಿತಗೊಳಿಸಲಾಗುತ್ತದೆ.
ಹುದ್ದೆಗೆ ಅರ್ಜಿ ಸಲ್ಲಿಸುವ ವಿಧಾನ:- ಆಸಕ್ತ ಅಭ್ಯರ್ಥಿಗಳು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಧಿಕೃತ ವೆಬ್ಸೈಟ್ https://kpsc.kar.nic.in/ ತೆರಳಿ ನೇಮಕಾತಿ ಅಧಿಸೂಚನೆಯ ಗಮನಿಸಿ ನಂತರ ಅರ್ಜಿ ನಮೂನೆಯಲ್ಲಿ ನಿಮ್ಮ ವೈಯಕ್ತಿಕ ಮಾಹಿತಿಯನ್ನು ಹಾಗೂ ನಿಮ್ಮ ಗುರುತಿನ ಪುರಾವೆ ಹಾಗೂ ವಿದ್ಯಾರ್ಹತೆ ಮಾಹಿತಿಯನ್ನು ಸರಿಯಾಗಿ ಭರ್ತಿ ಮಾಡಿ. ನಂತರ ನಿಮಗೆ ನಿಗದಿ ಪಡಿಸಲಾದ ಶುಲ್ಕವನ್ನು ಪಾವತಿಸಿ ಅರ್ಜಿ ಸಲ್ಲಿಸಬೇಕು.
ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಸಲ್ಲಿಸಲು, ಏಪ್ರಿಲ್ 15, 2024 ರಂದು ಅರ್ಜಿ ಸಲ್ಲಿಸಲು ಅಪ್ಲಿಕೇಶನ್ ಲಿಂಕ್ ಅನ್ನು ಸಕ್ರಿಯಗೊಳಿಸಲಾಗುತ್ತದೆ. ಹಾಗೂ ಇಲಾಖೆಯ ನಿಯಮದಂತೆ ಎಲ್ಲಾ ವಿವರಗಳು ಮತ್ತು ದಾಖಲೆಗಳನ್ನು ಸರಿಯಾಗಿ ಒದಗಿಸಿದ ಅರ್ಜಿಯನ್ನು ಮಾತ್ರ ಸ್ವೀಕರಿಸುತ್ತದೆ. ಆದ್ದರಿಂದ ಆನ್‌ಲೈನ್ ಫಾರ್ಮ್ ಅನ್ನು ಸಲ್ಲಿಸುವಾಗ ಪ್ರತಿಯೊಂದು ವಿವರವನ್ನು ಸರಿಯಾಗಿ ನಮೂದಿಸಬೇಕು. ಹಾಗೂ ನಿಗದಿತ ಸಮಯದ ಒಳಗೆ ನೀವು ಅರ್ಜಿ ಸಲ್ಲಿಸಬೇಕು ಹಾಗೂ ಅರ್ಜಿ ಸಲ್ಲಿಸಿದ ನಂತರ ನೀವು ಶುಲ್ಕ ಪಾವತಿ ಮಾಡದೆ ಇದ್ದಲ್ಲಿ ನಿಮ್ಮ ಅರ್ಜಿಯು ಮಾನ್ಯ ಆಗುವುದಿಲ್ಲ.
ಅಧಿಸೂಚನೆ PDF ಡೌನ್ ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ(RPC)
ಅಧಿಸೂಚನೆ PDF ಡೌನ್ ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ(HK)
ಇದನ್ನೂ ಓದಿ: ಕೇವಲ 9,499 ಕ್ಕೆ Redmi 5G ಫೋನ್, ಇಂತಹ ಅವಕಾಶವನ್ನು ಕಳೆದುಕೊಳ್ಳಬೇಡಿ!