KR Pete Chandan Gowda Election Result: ಮಂಡ್ಯದಲ್ಲಿ ಚುನಾವಣೆಯ ರಂಗು ಜೋರಾಗಿಯೇ ಇತ್ತು ಕಾರಣ ಪಕ್ಷೇತರ ಅಭ್ಯರ್ಥಿಯಾಗಿ ರಾಜ್ಯ ರಾಜಕಾರಣ ಪ್ರವೇಶ ಮಾಡಲು ಯೂಟ್ಯೂಬರ್ ಒಬ್ಬ ಚುನಾವಣಾ ಅಖಾಡಕ್ಕೆ ಇಳಿದಿದ್ರು. ಹೌದು ಇತ್ತೀಚಿನ ದಿನಗಳಲ್ಲಿ ಜಿಲ್ಲೆಯ ರಾಜಕೀಯವು ಹಣಬಲ ಮತ್ತು ಜಾತಿ ಸಮೀಕರಣದತ್ತ ವಾಲುತ್ತಿತ್ತು. ಇದರ ಮಧ್ಯೆಯೇ ಈ ಬಾರಿ ತಮ್ಮ ಜನಕೇಂದ್ರಿತ ರಾಜಕಾರಣದ ಮೂಲಕ ಚುನಾವಣೆಯ ಸ್ವರೂಪವನ್ನು ಬದಲಾಯಿಸಲು ಯೌಟ್ಯೂಬರ್ ಚಂದನ್ ಪ್ರಯತ್ನಿಸಿದ್ರು, ಇವರ ಕಾರ್ಯಕ್ಕೆ ಅಪಾರ ಜನರು ಬೆಂಬಲ ಸಹ ಕೊಟ್ಟಿದ್ರು. ಹಾಗಿದ್ರೆ ಇಂದು ಪ್ರಕಟವಾಗಿರುವ ಚುನಾವಣಾ ಫಲಿತಾಂಶದಲ್ಲಿ ಯೌಟ್ಯೂಬರ್ ಚಂದನ್ ಗೌಡ ಗಳಿಸಿದ ಒಟ್ಟು ವೋಟ್ ಎಷ್ಟು ಗೊತ್ತಾ. ಕೆ ಆರ್ ಪೇಟೆ ವಿಧಾನಸಭಾ ಕ್ಷೇತ್ರದ ಚುನಾವಣಾ ಫಲಿತಾಂಶ ಹೇಗಿದೆ ನೋಡೋಣ ಬನ್ನಿ.
ಹೌದು ಕೇವಲ 27 ವರ್ಷದ ಚಂದನ್ ಗೌಡ ಕೆ, ಒಬ್ಬ ಯೂಟ್ಯೂಬರ್ ಆಗಿದ್ದು, ಪಕ್ಷೇತರವಾಗಿ ಕೆ ಆರ್ ಪೇಟೆ ಕ್ಷೇತ್ರದಿಂದ ಸ್ಪರ್ಧಿಸಲು ನಿರ್ಧರಿಸಿ ಸ್ಪರ್ಧೆ ಕೂಡ ಮಾಡಿದ್ರು. ತಮ್ಮ ಸ್ವಂತ ಚುನಾವಣಾ ತಂತ್ರಗಳನ್ನು ರೂಪಿಸಿದ್ದ ಚಂದನ್ ಕೆಆರ್ ಪೇಟೆ ತಾಲೂಕಿನ ಊಚನಹಳ್ಳಿ ನಿವಾಸಿಯಾಗಿದ್ದು, ಇವರ ತಂದೆ ದಿನಗೂಲಿ ಕೆಲಸ ಮಾಡುತ್ತಿದ್ದು, ತಾಯಿ ಗೃಹಿಣಿ. ಇವರು ಚುನಾವಣೆ ಸಂಬಂಧ 2022ರ ಅಕ್ಟೋಬರ್ನಿಂದ ಪ್ರಚಾರ ಕಾರ್ಯ ಆರಂಭಿಸಿದ್ದು, ಬೆಳಿಗ್ಗೆ 6:30ಕ್ಕೆ ಪ್ರಚಾರದ ಕಾರ್ಯವನ್ನು ಆರಂಭಿಸಿದರೇ ಮಧ್ಯಾಹ್ನ 12 ಗಂಟೆಯವರೆಗು ಪ್ರಚಾರದಲ್ಲಿ ತೊಡಗಿಕೊಳ್ಳುತ್ತಿದ್ರು ನಂತರ ಸಾಯಂಕಾಲ 4:30 ಕ್ಕೆ ಪ್ರಚಾರ ಪ್ರಾರಂಭಿಸಿದರೇ ರಾತ್ರಿ 10 ಗಂಟೆಗೆ ಪ್ರಚಾರ ಮುಗಿಸಿ ಬರುತ್ತಿದ್ರು, ಇವ್ರು ಅತೀ ಕಡಿಮೆ ಸಮಯದಲ್ಲಿ ಕೆ. ಆರ್ ಪೇಟೆ ತಾಲೂಕಿನ 200 ಹಳ್ಳಿಗಳಿಗೆ ತೆರಳಿ ಪ್ರಚಾರ ಮಾಡುವ ಗುರಿಯನ್ನ ಇಟ್ಟುಕೊಂಡಿದ್ರು ಜೊತೆಗೆ ತಕ್ಕಮಟ್ಟಿನ ಜನಮನ್ನಣೆಯನ್ನ ಕೂಡ ಪಡೆದಿದ್ರು.ಯಾವುದೇ ಹಳ್ಳಿಗೆ ಹೋದ್ರು ಕೂಡ ಜನ ಚಂದನ್ ಅವ್ರನ್ನ ಗುರುತಿಸುತ್ತಿದ್ರು, ಅಷ್ಟರ ಮಟ್ಟಿಗೆ ಚಂದನ್ ಜನರನ್ನ ತಲುಪಿದ್ರು.
ಇದನ್ನೂ ಓದಿ: ಕಾಂಗ್ರೆಸ್ ಸ್ಪಷ್ಟ ಬಹುಮತ, ಯಾರಾಗ್ತಾರೆ ಸಿಎಂ? ಡಿಕೆಶಿ ಮತ್ತು ಸಿದ್ದರಾಮಯ್ಯ ನಡುವೆ ಟಫ್ಫ್ ಫೈಟ್!
ಕೆ. ಆರ್ ಪೇಟೆ ಮತದಾರರು ಚಂದನ್ ಗೌಡ ಕೈ ಹಿಡಿಯಲಿಲ್ವಾ?
ತಮ್ಮ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಚಂದನ್ ಪಣ ತೊಟ್ಟು ಬದಲಾವಣೆಯ ಪರ್ವವನ್ನ ಆರಂಭಿಸಬೇಕು ಅಂತ ಬಂದಿದ್ದ ಚಂದನ್ ಕೆ.ಆರ್. ಪೇಟೆ ಯಲ್ಲಿ ಕಳೆದ 30 ವರ್ಷಗಳಿಂದ ಹಲವು ಗ್ರಾಮಗಳಲ್ಲಿ ರಸ್ತೆ ಅಭಿವೃದ್ಧಿಯಾಗಿಲ್ಲ, ಭ್ರಷ್ಟಾಚಾರ ಜನರ ಮುಂದಿರುವ ದೊಡ್ಡ ಸವಾಲು, ಹೀಗಾಗಿ ಬದಲಾವಣೆಯನ್ನು ತರಲು ನಾನು ಚುನಾವಣೆಯಲ್ಲಿ ಸ್ಪರ್ಧಿಸಲು ನಿರ್ಧರಿಸಿದ್ದೇನೆ ಅಂತ ಚಂದನ್ ಗೌಡ ಹೇಳಿಕೊಂಡಿದ್ರು, ಆದ್ರೆ ಅದೃಷ್ಟ ಅವ್ರ ಕೈ ಹಿಡಿಯಲಿಲ್ಲ. ಹೌದು ಈ ಬಾರಿ ಕೆ. ಆರ್. ಪೇಟೆ ಚುನಾವಣಾ ಕಣದಲ್ಲಿ ಚಂದನ್ ಸೋಲನ್ನಾ ಅನುಭವಿಸಿದ್ದಾರೆ.
ಚಂದನ್ ಗೌಡ ಅವರಿಗೆ ಸಿಕ್ಕ ಮತ ಎಷ್ಟು?
ಹೌದು ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಮಂಡ್ಯ ಜಿಲ್ಲೆ ಕೆ.ಆರ್. ಪೇಟೆ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷದ ಹೆಚ್. ಟಿ. ಮಂಜು ಗೆಲುವಿನ ನಗೆ ಬೀರಿದ್ದಾರೆ. ತನ್ನ ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್ ಪಕ್ಷದ ಬಿ.ಎಲ್ ದೇವರಾಜ್ ಅವರಿಗಿಂತ ಭಾರೀ ಅಂತರದಿಂದ ಮತಗಳನ್ನು ಪಡೆದು ಜಯಶೀಲರಾಗಿದ್ದಾರೆ. ಆದರೆ ಯಾವುದೇ ರಾಜಕೀಯ ಹಿನ್ನೆಲೆ ಇಲ್ಲದೆ ಚೊಚ್ಚಲ ಬಾರಿಗೆ ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸಿದ್ದ ಯೂಟ್ಯೂಬರ್ ಚಂದನ್ ಗೌಡ 8,497 ಮತಗಳನ್ನು ಪಡೆಯುವ ಮೂಲಕ ಗಮನ ಸೆಳೆದಿದ್ದಾರೆ. 8ವರೆ ಸಾವಿರ ಜನರ ಮನಸ್ಸನ್ನ ಚಂದನ್ ಮೊದಲ ಬಾರಿಗೆ ಗೆದ್ದಿರೋದು ನಿಜಕ್ಕೂ ಕೂಡ ದೊಡ್ಡ ವಿಚಾರವೇ ಸರಿ. ರಾಜಕೀಯದಲ್ಲಿ ಸೋಲು ಗೆಲುವು ಸರ್ವೇ ಸಾಮಾನ್ಯ ಹೀಗಾಗಿ ಚಂದನ್ ಅವ್ರೆ ಹೇಳಿರುವಂತೆ ಗೆದ್ದಾಗ ಹಿಗ್ಗಾಲ್ಲ ಸೋತಾಗ ಕುಗ್ಗಲ್ಲ ಅನ್ನುವಂತೆ ಚಂದನ್ ಈಗಲೂ ಕೂಡ ಇದೆ ಆತ್ಮಸ್ಥೈರ್ಯದಲ್ಲಿ ಕೆ. ಆರ್. ಪೇಟೆಯಲ್ಲಿ ಬದಲಾವಣೆಗೆ ಪ್ರಯತ್ನವನ್ನ ಕೈ ಬಿಡದೆ ಮತ್ತಷ್ಟು ಜನರನ್ನ ತಲುಪಿ ಅವ್ರ ಆಶಿರ್ವಾದದಿಂದ ಅವ್ರ ಚುನಾವಣಾ ಗೆಲುವಿನ ಕನಸು ಮುಂದಿನ ಬಾರಿಗೆ ಈಡೇರಲಿ ಅನ್ನೋದು ನಮ್ಮ ಆಶಯ..
ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram