ರೈಲ್ವೆ ಇಲಾಖೆಯಲ್ಲಿ ಸೇವೆ ಸಲ್ಲಿಸಬೇಕು ಎಂದು ಬಯಸುವ ಅಭ್ಯರ್ಥಿಗಳಿಗೆ ಕೊಂಕಣ ರೈಲ್ವೆ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದ್ದು. ಆಸಕ್ತ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಹುದ್ದೆಗಳ ವಿವರ ಸಂಬಳದ ಮಾಹಿತಿ ವಯೋಮಿತಿಯ ಮಾಹಿತಿಗೆ ಈ ಲೇಖನವನ್ನು ಓದಿ.
ಹುದ್ದೆಯ ವಿವರಗಳು :- ಕೊಂಕಣ ರೈಲ್ವೆ ಕಾರ್ಪೊರೇಷನ್ ಲಿಮಿಟೆಡ್ ನಲ್ಲಿ 1 ಸೀನಿಯರ್ ಸೆಕ್ಷನ್ ಆಫೀಸರ್ ಹುದ್ದೆ ಖಾಲಿ ಇದೆ. ಹುದ್ದೆಗೆ ಅರ್ಜಿ ಸಲ್ಲಿಸುವ ಆಸಕ್ತರು ಜೂನ್ 18, 2024 ರ ಒಳಗಾಗಿ ಅರ್ಜಿ ಸಲ್ಲಿಸಬೇಕು. ಕಾರವಾರದಲ್ಲಿ ಕೆಲಸ ಮಾಡಲು ರೆಡಿ ಇರಬೇಕು.
ವಿದ್ಯಾರ್ಹತೆಯ ಮಾಹಿತಿ :- ಇಲಾಖೆಯ ನೇಮಕಾತಿ ಅಧಿಸೂಚನೆಯ ಅನುಸಾರ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕಡ್ಡಾಯವಾಗಿ ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಮಂಡಳಿಯಲ್ಲಿ ಬಿ.ಕಾಂ ಪದವಿ ಮುಗಿಸಿರಬೇಕು.
ವಯಸ್ಸಿನ ಮಿತಿ :- ಇಲಾಖೆ ಹೊರಡಿಸಿರುವ ಅಧಿಸೂಚನೆಯ ಅನುಸರ ಹುದ್ದೆಗೆ ಅರ್ಜಿ ಸಲ್ಲಿಸಲು ಮೇ 31, 2024ಕ್ಕೆ 62ವರ್ಷಕಿಂತ ಜಾಸ್ತಿ ವಯಸ್ಸು ಆಗಿರಬಾರದು. ಹಾಗೂ ಈ ಹುದ್ದೆಗೆ ಸರಕಾರದ ಮೀಸಲಾತಿ ನಿಯಮದ ಪ್ರಕಾರ ವಯೋಮಿತಿ ಸಡಿಲಿಕೆ ಇರುತ್ತದೆ.
ತಿಂಗಳ ಸಂಬಳದ ವಿವರ :-
ಇಲಾಖೆಯ ಅಧಿಸೂಚನೆಯಲ್ಲಿ ವೇತನದ ಯಾವುದೇ ನಿಖರ ಮಾಹಿತಿಯನ್ನು ತಿಳಿಸಲಿಲ್ಲ. ಹುದ್ದೆ ಆಯ್ಕೆ ಆಗುವ ಅಭ್ಯರ್ಥಿಯ ಅನುಭವ ಜೊತೆಗೆ ಅವರ ಕೆಲಸದ ಮೇಲೆ ಸಂಬಳ ಸಿಗುತ್ತದೆ ಎಂಬ ಮಾಹಿತಿ ಲಭ್ಯವಿದೆ.
ಹುದ್ದೆಯ ಆಯ್ಕೆ ಪ್ರಕ್ರಿಯೆ :- ಹುದ್ದೆಯ ಆಯ್ಕೆ ಪ್ರಕ್ರಿಯೆಯನ್ನು ಲಿಖಿತ ಪರೀಕ್ಷೆ ನಡೆಸಿ ಅದರಲ್ಲಿ ಉತ್ತೀರ್ಣ ಆದವರಿಗೆ ಸಂದರ್ಶನ ನಡೆಸಿ ಆಯ್ಕೆ ಮಾಡಲಾಗುತ್ತದೆ.
ಅರ್ಜಿ ಶುಲ್ಕ ವಿವರ :- ಕೊಂಕಣ ರೈಲ್ವೆ ಕಾರ್ಪೊರೇಷನ್ ಲಿಮಿಟೆಡ್ ನ ಸೀನಿಯರ್ ಸೆಕ್ಷನ್ ಆಫೀಸರ್ ಹುದ್ದೆಗೆ ಯಾವುದೇ ರೀತಿಯ ಅರ್ಜಿ ಶುಲ್ಕ ಇರುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಬ್ಯಾಂಕ್ ಆಫ್ ಬರೋಡಾದಲ್ಲಿ ಉದ್ಯೋಗಾವಕಾಶಗಳು! ಇಂದೇ ಅರ್ಜಿಯನ್ನು ಸಲ್ಲಿಸಿ!
ಅರ್ಜಿ ಸಲ್ಲಿಸುವ ವಿಧಾನ :-
- ಅರ್ಜಿ ಭರ್ತಿ ಮಾಡಿ :- ಹುದ್ದೆಗೆ ಅರ್ಜಿ ಸಲ್ಲಿಸುವ ಆಸಕ್ತ ಅಭ್ಯರ್ಥಿಗಳು ಮೊದಲು ಇಲಾಖೆಯ ಅಧಿಕೃತ ವೆಬ್ಸೈಟ್ ಗೆ ತೆರಳಿ ಅರ್ಜಿಯನ್ನು ಡೌನ್ಲೋಡ್ ಮಾಡಿ. ಅದರಲ್ಲಿ ಕೇಳಿಯರುವ ನಿಮ್ಮ ವೈಯಕ್ತಿಕ ಮಾಹಿತಿ ಹಾಗೂ ವಿದ್ಯಾರ್ಹತೆ ಮತ್ತು ಅನುಭವಗಳ ಬಗ್ಗೆ ನಿಖರ ಮಾಹಿತಿಯನ್ನು ಭರ್ತಿ ಮಾಡಿ.
- ಮೇಲ್ ಮಾಡಿ :- ಮಾಹಿತಿಗಳನ್ನು ಭರ್ತಿ ಮಾಡಿದ ಅರ್ಜಿ ನಮೂನೆಯ ಜೊತೆಗೆ ನಿಮ್ಮ ಎಜುಕೇಷನ್ ಹಾಗೂ ನಿಮ್ಮ ಅನುಭವ ಹಾಗೂ resume ಹಾಗೂ ಇಲಾಖೆಯ ಅಧಿಸೂಚನೆಯಲ್ಲಿ ತಿಳಿಸಿರುವ ಅಗತ್ಯವಾಗಿರುವ ದಾಖಲಾತಿಗಳೊಂದಿಗೆ ನೀವು [email protected] ಗೆ ಮೇಲ್ ಕಳುಹಿಸಿ. ನಿಮ್ಮ ಅರ್ಜಿಯನ್ನು ಮೇಲ್ ವಿಳಾಸಕ್ಕೆ ಜೂನ್ 18 2024ರೊಳಗೆ ಕಳುಹಿಸಬೇಕು. ಜೂನ್ 18 ರ ನಂತರ ಬರುವ ಅರ್ಜಿಗಳನ್ನು ಸ್ವೀಕರಿಸಲಾಗುವುದಿಲ್ಲ.
ಇನ್ನೂ ಅರ್ಜಿ ಸಲ್ಲಿಸುವ ಮುನ್ನ ಇಲಾಖೆ ಹೊರಡಿಸಿರುವ ಅಧಿಸೂಚನೆಯನ್ನು ಪೂರ್ಣವಾಗಿ ಓದಿಕೊಳ್ಳಿ. ನಂತರ ನೀವು ಈ ಹುದ್ದೆಗೆ ಸೂಕ್ತರಾಗಿ ಇದ್ದರೆ ಅರ್ಜಿ ಸಲ್ಲಿಸಿ. ಅರ್ಜಿ ನಮೂನೆ ಭರ್ತಿ ಮಾಡುವಾಗ ಯಾವುದೇ ಕಾರಣಕ್ಕೂ ತಪ್ಪಾದ ಅಥವಾ ಸುಳ್ಳು ಮಾಹಿತಿ ನೀಡಬಾರದು. ಹಾಗೂ ಅಧಿಸೂಚನೆಯಲ್ಲಿ ಹೇಳಲಾಗಿರುವ ದಾಖಲಾತಿಗಳನ್ನು ಮೇಲ್ ನಲ್ಲಿ ನಿಗದಿತ ದಿನಾಂಕದ ಒಳಗೆ ಕಳುಹಿಸಿ.
ಇದನ್ನೂ ಓದಿ: ಜಿಯೋದ ಅಗ್ಗದ 365 ದಿನಗಳ ಯೋಜನೆ; ಒಂದು ವರ್ಷ ಉಚಿತ ಪ್ರೈಮ್ ವೀಡಿಯೊದೊಂದಿಗೆ!