Krishi Thapanda New House: ಬಿಗ್ ಬಾಸ್ ಖ್ಯಾತಿಯ ನಟಿ ಕೃಷಿ ತಾಪಾಂಡ ಹೊಸ ಮನೆಗೆ ಕಾಲಿಟ್ಟಿದ್ದಾರೆ- ಮನೆಯ ಗೃಹ ಪ್ರವೇಶ ಫೋಟೋ ಹಂಚಿಕೊಂಡು ಖುಷಿ ಪಟ್ಟ ನಟಿ

Krishi Thapanda New House: ಕೃಷಿ ತಾಪಂಡಾ ಕನ್ನಡ ಚಿತ್ರರಂಗದ ನಟಿ ಮತ್ತು ಮಾಡೆಲ್. ಬಿಗ್ ಬಾಸ್ ಸೀಸನ್ 5ರ ಸ್ಪರ್ಧೆಯು ಹೌದು. ಕೊಡಗಿನಲ್ಲಿ ಜನಿಸಿದ ಇವರು ಕಹಿ ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ಸಿನಿಪಯಣ ಆರಂಭಿಸಿದರು. ಆದರೆ 2016 ರಲ್ಲಿ ತೆರೆಕಂಡ ಅಕಿರ ಚಿತ್ರದಿಂದ ಕೃಷಿ ಅವ್ರ ಖ್ಯಾತಿ ಹೆಚ್ಚಾಗಿ ಎಲ್ಲಾ ಕಡೆ ಗುರುತಿಸಿಕೊಳ್ಳಲು ಶುರು ಮಾಡಿ ತಮ್ಮದೇ ಅಭಿಮಾನಿ ಬಳಗವನ್ನ ಪಡೆದರು. ಇನ್ನು ಅದ್ಭುತವಾದ ಕನ್ನಡಕ್ಕಾಗಿ ಒಂದನ್ನು ಒತ್ತಿ ಸಿನಿಮಾವೂ ನಟಿಗೆ ಹೆಸರು ತಂದು ಕೊಟ್ಟಿದ್ದು, ಈ ಚಿತ್ರದಲ್ಲಿನ ಇವ್ರ ನೈಜ ನಟನೆಗೆ ಪ್ರೇಕ್ಷಕರಂತೂ ಫಿಧಾ ಆಗಿ ಹೋದ್ರು. ನಂತರ ಹಲವು ಸಿನಿಮಾಗಳಲ್ಲಿ ಕೃಷಿ ನಟಿಸಿದ್ದಾರೆ. ಅಲ್ಲದೇ ನಟಿ ಕೃಷಿ ತಾಪಂಡಾ ಬಿಗ್ ಬಾಸ್ ಕನ್ನಡ ಸೀಸನ್ 5 ರಲ್ಲಿ ಭಾಗವಹಿಸಿದ್ದರು. ಇತರೆ ಸ್ಪರ್ಧಿಗಳಿಗೆ ಚೆನ್ನಾಗಿ ಸ್ಪರ್ಧೆ ನೀಡಿದ್ದರು. ಇದರಿಂದ ಬಿಗ್ ಬಾಸ್ ಮೂಲಕ ಮತ್ತಷ್ಟು ಖ್ಯಾತಿ ಪಡೆದುಕೊಂಡ್ರು. ಇನ್ನು ಬಿಗ್ ಬಾಸ್ ಸೀಸನ್ 5 ರಲ್ಲಿ ಕೃಷಿ ತಾಪಂಡಾ ತಮ್ಮ ನಗುವಿನ ಮೂಲಕವೇ ಹೆಸರು ವಾಸಿಯಾಗಿದ್ದರು. ಹಾಗೂ ಎಲ್ಲರ ಜೊತೆ ಆತ್ಮೀಯವಾಗಿ, ಸದಾ ಲವ-ಲವಿಕೆಯಿಂದಲೇ ಇರುತ್ತಿದಿದ್ದರಿಂದ ಇವ್ರಿಗೆ ಅಭಿಮಾನಿ ಬಳಗವು ಹೆಚ್ಚು. ಇದೀಗ ನಟಿ ಕೃಷಿ ತಾಪಂಡಾ ಜೀವನದ ಹೊಸ ಅಧ್ಯಾಯ ಶುರು ಮಾಡಿದ್ದು ನೂತನ ಮನೆಗೆ ಕಾಲಿಟ್ಟಿದ್ದಾರೆ. ಈ ಖುಷಿ ವಿಚಾರವನ್ನ ಖುದ್ದು ಕೃಷಿ ಅವ್ರೆ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

WhatsApp Group Join Now
Telegram Group Join Now

ಯಾವಾಗಲೂ ಕೃಷಿ ಅವ್ರ ಮೊಗದಲ್ಲಿ ನಗು ಇದ್ದೆ ಇರುತ್ತೆ ಹೀಗಾಗಿ ಇವ್ರ ಮಾತಲ್ಲಿ ಉತ್ಸಾಹ ತುಂಬಿರುತ್ತದೆ. ಇದನ್ನ ಯಾರೇ ಗಮನಿಸಿದ್ರೂ ಅಷ್ಟೆ. ಅವರಿಗೂ ಕೃಷಿ ಅವ್ರ ಆ ಖುಷಿ ಪಾಸ್ ಆಗುತ್ತದೆ ಅನ್ನೋದು ಕೃಷಿ ಅವ್ರನ್ನ ಹತ್ತಿರದಿಂದ ನೋಡಿದವರ ಮಾತು. ಇನ್ನು ಕನ್ನಡಕ್ಕಾಗಿ ಒಂದನ್ನ ಒತ್ತು ಚಿತ್ರದ ನಾಯಕಿ ಕೃಷಿ ತಾಪಂಡ ಅವ್ರ ಅಭಿನಯ ಎಲ್ಲರ ದಿಲ್ ಕದ್ದು ಬಿಡ್ತು. ಹೌದು ಕೃಷಿ ತಾಪಂಡ ಮಾಡಿರೋದು ಬೆರಳೆಣಿಕೆಯಷ್ಟು ಸಿನಿಮಾ ಮಾತ್ರ. ಆದರೆ ಇವರ ಖ್ಯಾತಿ ಎಲ್ಲೆಡೆ ಇದೆ. ಎಲ್ಲರ ಜೊತೆಗೆ ಬೆರೆತು ನಡೆಯೋದು ಈ ಚೆಲುವೆಯ ಫಸ್ಟ್ ಕ್ವಾಲಿಟಿ. ಅದುವೇ ಈಕೆಯ ನಗುವಿನ ಹಿಂದಿನ ರಹಸ್ಯವಂತೆ. ಇನ್ನು ಸದಾ ಹಸನ್ಮುಕಿ ಕೃಷಿ ಅಭಿನಯದ ಚಿತ್ರಗಳ ಲೆಕ್ಕ ಬಹಳೇನೂ ಇಲ್ಲ. ಹೆಚ್ಚು ಕಡಿಮೆ ತಮಿಳು ಸೇರಿ 8 ಸಿನಿಮಾಗಳ ಲೆಕ್ಕ ವಿಕಿಪಿಡಿಯಾದಲ್ಲಿ ಸಿಗುತ್ತದೆ. ಆದರೆ ಮಾಡಿರೋ ಸಿನಿಮಾಗಳಲ್ಲಿ ಕೃಷಿ ಪಾತ್ರ ಹೈಲೈಟ್ ಆಗಿರುತ್ತೆ. ಕೃಷಿ ತಾಪಂಡ ಅಭಿನಯಿಸಿರೋ ಸಿನಿಮಾಗಳು ಅಕಿರ, ಕಹಿ, ಎರಡು ಕನಸು, ಇರಾ, ಲಂಕೆ, ಭರಾಟೆ ಚಿತ್ರಗಳಲ್ಲಿ ಕೃಷಿ ನಟಿಸಿದ್ದಾರೆ. ಕೃಷಿ ತಾಪಂಡ ಸಿನಿಮಾಗಳ ಜೊತೆಗೆ ಫೋಟೋಗಳ ಬಗ್ಗೆನೂ ಭಾರೀ ಕ್ರೇಜ್ ಹೊಂದಿದ್ದು ಆಗಾಗ ಹೊಸ ರೀತಿಯ ಫೋಟೋ ಶೂಟ್​ ಗಳಲ್ಲೂ ಕೂಡ ಕಾಣಿಸಿಕೊಳ್ತಾರೆ.ಯಾಕೆಂದ್ರೆ ಇವ್ರು ಮಾಡೆಲ್ ಕೂಡ ಹೌದು.

ಇದನ್ನೂ ಓದಿ: ಮೊದಲ ಬಾರಿಗೆ ಕಾಣಿಸಿಕೊಂಡ ಜೈ ಜಗದೀಶ್ ಮೊದಲು ಪತ್ನಿ ಮಗಳು! ಮೊದಲ ಪತ್ನಿ ಜೊತೆಗೆ ವಿಜಯಲಕ್ಷ್ಮಿ ಒಡನಾಟ ಇರೋದು ನಿಜಾನಾ?

ಹೊಸ ಮನೆಯ ಫೋಟೋಗಳನ್ನು ಹಂಚಿಕೊಂಡ ಕೃಷಿ ತಾಪಂಡಾ

ಈ ಸುಂದರ ನಟಿ ನೂತನ ಮನೆಗೆ ಕಾಲಿಟ್ಟಿದ್ದಾರೆ. ಹೌದು ಕೃಷಿ ತಾಪಂಡಾ ಅವ್ರ ನೂತನ ಮನೆಯ ಗೃಹಪ್ರವೇಶ ಸಮಾರಂಭ ಬಹಳ ಅದ್ಭುತವಾಗಿ ನೆರವೇರಿದೆ. ಈ ಒಂದು ಕಾರ್ಯಕ್ರಮದಲ್ಲಿನ ಫೋಟೋಗಳನ್ನ ನಟಿ ಕೃಷಿ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡು ಹೊಸ ಮನೆ ಹೊಸ ಜೀವನ ಆರಂಭ ಅಂತ ಕಪ್ಶನ್ ಬರೆದುಕೊಂಡಿದ್ದಾರೆ. ಇನ್ನು ನೂತನ ಮನೆಯ ಗೃಹ ಪ್ರವೇಶ ಕಾರ್ಯಕ್ರಮ ಶಾಸ್ತ್ರ ಬದ್ದವಾಗಿ ಮತ್ತು ಅಷ್ಟೇ ಸಿಂಪಲ್ ಆಗಿ ನಡೆದಿರುವಂತೆ ಫೋಟೋದಲ್ಲಿ ಕಾಣಿಸುತ್ತಿದೆ. ಅಷ್ಟಾಗಿ ಯಾರನ್ನು ಕೂಡ ಗೃಹಪ್ರವೇಶ ಕಾರ್ಯಕ್ರಮಕ್ಕೆ ನಟಿ ಕೃಷಿ ಇನ್ವಾಯ್ಟ್ ಮಾಡಿಲ್ಲ ಅಂತ ಅನ್ನಿಸುತ್ತಿದೆ. ಹೀಗಾಗಿ ಅಪ್ಪ ಅಮ್ಮ ಫ್ಯಾಮಿಲಿ ಅವ್ರ ಜೊತೆಗೆ ಪೂಜೆಯಲ್ಲಿ ಕ್ಲಿಕ್ಕಿಸಿದ್ದ ಫೋಟೋಗಳನ್ನ ಹಂಚಿಕೊಂಡು ಈ ಖುಷಿಯ ವಿಚಾರವನ್ನ ಶೇರ್ ಮಾಡಿಕೊಂಡಿದ್ದಾರೆ. ಇನ್ನು ಈ ಕಾರ್ಯಕ್ರಮದಲ್ಲಿ ಅಪ್ಪಟ ಕೊಡಗಿನ ಕುವರಿಯಂತೆ ನಟಿ ಕೃಷಿ ತಾಪಂಡಾ ಮಿಂಚಿದ್ದಾರೆ. ಹೌದು ಕೊಡಗು ಸ್ಟೈಲ್ ನಲ್ಲಿ ಸೀರೆಯುಟ್ಟು ಅಪ್ಪಟ ಕೊಡಗಿನ ಮನೆ ಮಗಳಂತೆ ಕಾಣಿಸುತ್ತಿದ್ದಾರೆ. ಹಳದಿ ಹಾಗೂ ಗುಲಾಬಿ ಮಿಶ್ರಿತ ಸೀರೆಯಲ್ಲಿ ನಟಿ ಕೃಷಿ ಸಖತ್ ಕ್ಯೂಟ್ ಆಗಿ ಕಾಣಿಸಿಕೊಂಡಿದ್ದಾರೆ. ಕೃಷಿ ಅವ್ರ ನೂತನ ಮನೆಯ ಗೃಹ ಪ್ರವೇಶದ ಫೋಟೋಗಳು ಇಲ್ಲಿವೆ ನೋಡಿ.

 

View this post on Instagram

 

A post shared by Krishi Thapanda (@krishithapanda)

ಇದನ್ನೂ ಓದಿ: ಮೊದಲ ದಿನ ಶಾಲೆಗೆ ಹೊರಟ ರಾಯನ್ ರಾಜ್ ಸರ್ಜಾ- ಮಗನ ಬಗ್ಗೆ, ಭವಿಷ್ಯದ ಬಗ್ಗೆ ಮೇಘನಾ ರಾಜ್ ಹೇಳಿದ್ದೇನು ಗೊತ್ತಾ?

ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram