Krithi Shetty: ಚಿತ್ರರಂಗದಲ್ಲಿ ಗುರುತಿಸಿಕೊಂಡ್ರೆ ಒಂದು ರೀತಿಯ ಹಿಂಸೆ, ಸೋತ್ರೆ ಮತ್ತೊಂದು ತೆರೆನಾದ ನೋವು ಇವುಗಳ ಮಧ್ಯೆ ಸಿಲುಕುವ ಕಲಾವಿದರ ಸಂಕಟ ಹೇಳತೀರದು. ಸಮುದ್ರದ ಮಧ್ಯಭಾಗದಲ್ಲಿ ಸಿಲುಕಿದಂತೆ ಹೊರಬರಲಾಗದಂತೆ, ಮುಂದೆ ಹೋಗಲಾಗದಂತೆ ಒದ್ದಾಡಬೇಕು. ಇದೀಗ ಇಂತದ್ದೇ ಒಂದು ಸ್ಥಿತಿಯಲ್ಲಿ ಕರ್ನಾಟಕ ಮೂಲದ ತೆಲುಗು ನಟಿ ಕೃತಿ ಶೆಟ್ಟಿ ಇದ್ದಾರೆ. ಸದ್ಯ ಈಗಷ್ಟೇ ಸಿನಿಮಾ ರಂಗದಲ್ಲಿ ಗುರುತಿಸಿಕೊಂಡು ಒಂದಷ್ಟು ಫ್ಯಾನ್ ಫಾಲ್ಲೋಯಿಂಗ್ ಹೊಂದಿರುವ ಇವ್ರಿಗೆ ಸ್ಟಾರ್ ನಟನ ಮಗನಿಂದಲೇ ಮಾನಸಿಕ ಕಿರುಕುಳ ಶುರುವಾಗಿದ್ಯಂತೆ. ಎಷ್ಟು ಕೋಟಿ ಬೇಕಿದ್ರೂ ಕೊಡ್ತೀನಿ ನೀನು ಬಾ ಅಂತ ಕರೆಯುತ್ತಾರೆ ಕೃತಿ ಅವ್ರಿಗೆ ಆಗಾಗ ಕರೆ ಮಾಡಿ ಮಾನಸಿಕವಾಗಿ ಬಹಳ ಹಿಂಸೆಯನ್ನ ನೀಡ್ತೀದ್ದಾನಂತೆ ಈ ಬಗ್ಗೆ ಖಾಸಗಿ ವಾಹಿನಿಯೊಂದಿಗೆ ನೀಡಿದ ಸಂದರ್ಶನದಲ್ಲಿ ನಟಿ ಕೃತಿ ಶೆಟ್ಟಿ ಹೇಳಿಕೊಂಡಿದ್ದಾರೆ. ಹೌದು ಕರ್ನಾಟಕದ ಈ ಚೆಲುವೆ ತೆಲುಗು ಹಾಗೂ ತಮಿಳು ಚಿತ್ರ ರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ಇನ್ನು ಟಾಲಿವುಡ್‌ನಲ್ಲಿ ಸಿಕ್ಕಾಪಟ್ಟೆ ಬೇಡಿಕೆಯ ನಟಿಯಾಗಿದ್ದಾರೆ. ಅಲ್ಲದೇ ಉಪ್ಪೇನಾ ಸಿನಿಮಾ ಮೂಲಕ ಮೊದಲ ಬಾರಿಗೆ ತೆರೆಮೇಲೆ ಮಿಂಚಿದ ಕೃತಿ ಅಭಿನಯಕ್ಕೆ ಅಭಿಮಾನಿಗಳು ಫಿಧಾ ಆಗಿ ಹೋಗಿದ್ರು.
ಕೃತಿ ಚೊಚ್ಚಲ ಸಿನಿಮಾದಲ್ಲೇ ಅಭಿಮಾನಿಗಳ ಹೃದಯ ಗೆದ್ದು ಭರವಸೆಯ ನಟಿಯಾಗಿ ಗುರುತಿಸಿಕೊಳ್ಳೋಕೆ ಶುರು ಮಾಡುದ್ರು. ಇನ್ನು ನಟಿ ಕೃತಿ ಶೆಟ್ಟಿ ಸಿನಿಮಾ ಜೊತೆಗೆ ಆಗಾಗ ಫೋಟೋಶೂಟ್ ಮೂಲಕವೂ ಸದ್ದು ಮಾಡುತ್ತಿರುತ್ತಾರೆ. ಆದ್ರೆ ಆಗಷ್ಟೇ ಗುರುತಿಸಿಕೊಂಡು ಒಂದಷ್ಟು ಅಭಿಮಾನಿಗಳನ್ನ ಸಂಪಾದನೆ ಮಾಡ್ತಿದ್ದ ನಟಿ ಕೃತಿಗೆ ಉಪ್ಪೇನಾ ಬಳಿಕ ಬಂದ ಯಾವ ಸಿನಿಮಾಗಳು ಹೇಳಿಕೊಳ್ಳುವಷ್ಟು ಸಕ್ಸಸ್ ಕೊಡಲಿಲ್ಲ. ಆದರೂ ಕೃತಿಗೆ ಬೇಡಿಕೆ ಕಡಿಮೆಯಾಗಿಲ್ಲ. ಈಗಲೂ ಅನೇಕ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಆದ್ರೆ ಇದೀಗ ಕೃತಿ ಅವ್ರಿಗೆ ಮತ್ತೊಂದು ಸಮಸ್ಯೆ ಶುರುವಾಗಿದ್ದು ಸ್ಟಾರ್ ನಟನ ಮಗ ಕಿರುಕುಳ ನೀಡುತ್ತಿದ್ದಾರೆ ಎನ್ನುವ ಸುದ್ದಿ ಟಾಲಿವುಡ್ ಅಂಗಳದಲ್ಲಿ ಸಾಕಷ್ಟು ಸುದ್ದಿ ಮಾಡ್ತಿದೆ. ಎಷ್ಟು ಕೋಟಿ ಬೇಕಿದ್ರೂ ಕೊಡುತ್ತೇನೆ ಬಾ ಅಂತ ನಟಿ ಕೃತಿ ಶೆಟ್ಟಿಗೆ ಬಹಳ ಟಾರ್ಚರ್ ಮಾಡುತ್ತಿದ್ದಾನಂತೆ.
ಇದನ್ನೂ ಓದಿ: ತಮ್ಮ ಕಾಲು ಕತ್ತರಿಸಿದ ವಿಚಾರ ಗೊತ್ತಾಗಿದ್ದೇ ನಾಲ್ಕನೇ ದಿನಕ್ಕೆ, ಸೂರಜ್ ಸ್ಥಿತಿ ಈಗ ಹೇಗಿದೆ? ವೈದ್ಯರು ಹೇಳಿದ್ದೇನು?
ಎಷ್ಟು ಕೋಟಿ ಬೇಕಿದ್ರೂ ಕೊಡ್ತೀನಿ ನೀನು ಬರಲೇಬೇಕು!
ಇನ್ನು ಮೊದಲ ಸಿನಿಮಾವೇ ಕೃತಿಗೆ ದೊಡ್ಡ ಹೆಸರು ತಂದುಕೊಟ್ಟಿತು. ಬುಚ್ಚಿಬಾಬು ನಿರ್ದೇಶನದ ಉಪ್ಪೇನಾ ಸಿನಿಮಾ ದೊಡ್ಡ ಮಟ್ಟದಲ್ಲಿ ಸಕ್ಸಸ್ ಕಂಡು ಬಾಕ್ಸ್ ಆಫೀಸ್‌ನಲ್ಲಿ 100 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿತ್ತು. ಅದಾದ ನಂತರ ಅಷ್ಟು ಸಕ್ಸಸ್ ಸಿಗಲಿಲ್ಲವಾದ್ರೂ ಬೇಡಿಕೆ ಕಡಿಮೆ ಆಗದೆ ಸಿನಿಮಾಗಳಲ್ಲಿ ಈಗಲೂ ಬ್ಯುಸಿ ಇರುವ ಈ ನಟಿಗೆ ಸ್ಟಾರ್ ಹೀರೋ ಮಗನೊಬ್ಬನಾ ಟಾರ್ಚರ್ ಶುರುವಾಗಿದ್ದು, ಕೃತಿ ಶೆಟ್ಟಿ(Krithi Shetty) ಹಿಂದೆ ಬಿದ್ದಿದ್ದಾರಂತೆ. ಹೇಗಾದರೂ ಮಾಡಿ ಕೃತಿ ಶೆಟ್ಟಿ ಜೊತೆ ಸ್ನೇಹ ಬೆಳೆಸಭೆಕುಬಂತ ನಿರ್ಧರಿಸಿ ಬಹಳ ಕಿರುಕುಳ ನೀಡುತ್ತಿದ್ದಾನಂತೆ. ಅಲ್ಲದೇ ಪ್ರತಿ ಕಾರ್ಯಕ್ರಮದಲ್ಲೂ ಕೃತಿ ಶೆಟ್ಟಿ ಜೊತೆಯೇ ಓಡಾಡಿ ತೊಂದರೆ ಕೊಡುತ್ತಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ. ಸಾಲದಕ್ಕೆ ಇತ್ತೀಚೆಗಷ್ಟೆ ಕೃತಿ ಶೆಟ್ಟಿಗೆ ಫೋನ್ ಮಾಡಿ ಶೂಟಿಂಗ್ ನಿಲ್ಲಿಸಿ ಬರುವಂತೆ ಒತ್ತಾಯ ಮಾಡಿದ್ದಲ್ಲದೇ ಎಷ್ಟು ಕೋಟಿ ಬೇಕಾದರೂ ಕೊಡುತ್ತೇನೆ ಆದ್ರೆ ನೀನು ಪಾರ್ಟಿಗೆ ಬರಬೇಕು ಅಂತ ಚಿತ್ರಹಿಂಸೆ ನೀಡಿದ್ದನಂತೆ ಆದರೆ ಕೃತಿ ಯಾವುದೇ ಪಾರ್ಟಿಗೂ ಹೋಗಲ್ಲ ಅಂತ ಹೇಳಿ ಫೋನ್ ಕಟ್ ಮಾಡಿ ಸೈಲೆಂಟ್ ಆದರಂತೆ.
ಈ ಬಗ್ಗೆ ಸ್ವತಃ ನಟಿ ಕೃತಿ ಇತ್ತೀಚಿಗಷ್ಟೆ ಸಂದರ್ಶನವೊಂದರಲ್ಲಿ ಬಹಿರಂಗ ಪಡಿಸಿದ್ದರು ಅಂತ ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಹರಿದಾಡುತ್ತಿದೆ. ಇನ್ನು ಕೃತಿ ಶೆಟ್ಟಿಗೆ ಟಾರ್ಚರ್ ಮಾಡುತ್ತಿರುವ ಸ್ಟಾರ್ ಹೀರೋ ಮಗ ಯಾರು? ತೆಲುಗು ನಟನ ಮಗನ ಅಥವಾ ತಮಿಳು ನಟನ ಮಗನ ಎಂದು ಅಭಿಮಾನಿಗಳು ತಲೆಕೆಡಿಸಿಕೊಂಡಿದ್ದಾರೆ. ಅಲ್ಲದೇ ಸುಂದರ ನಟಿ ಕೃತಿಯನ್ನು ಬೆಂಬಿಡದೇ ಕಾಡುತ್ತಿರುವ ಆ ವ್ಯಕ್ತಿ ಯಾರು ಅಂತ ತಿಳಿದುಕೊಳ್ಳಲು ಅಭಿಮಾನಿಗಳು ಹರಸಾಹಸ ಪಡುತ್ತಿದ್ದಾರೆ. ಆದ್ರೆ ಈ ಬಗ್ಗೆ ಕೃತಿ ಎಲ್ಲಿಯೂ ಕೂಡ ನೇರವಾಗಿ ಏನನ್ನು ಹೇಳಿಕೊಂಡಿಲ್ಲ.
ಇನ್ನು ನಟಿ ಕೃತಿ ಶೆಟ್ಟಿ(Krithi Shetty) ಮೊದಲ ಸಿನಿಮಾ ಸಕ್ಸಸ್ ಆದ ಬಳಿಕ ಯಾವುದೇ ಸಿನಿಮಾದಲ್ಲೂ ಸಕ್ಸಸ್ ಕಾಣಲಿಲ್ಲ ಹೀಗಾಗಿ ಸಕ್ಸಸ್ ಗಾಗಿ ಕಷ್ಟಪಟ್ಟು ನಟಿಸುತ್ತಿರುವ ನಟಿಗೆ ಇದೀಗ ಈ ರೀತಿಯ ಟಾರ್ಚರ್ ಶುರುವಾಗಿರೋದು ಅಭಿಮಾನಿಗಳಿಗೆ ಕೊಂಚ ಬೇಸರ ತರಿಸಿದೆ. ಇನ್ನು ಹೃತಿಕ್ ರೋಷನ್ ನಟನೆಯ ಸೂಪರ್ 30 ಸಿನಿಮಾದಲ್ಲಿ ವಿದ್ಯಾರ್ಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ನಂತರ ‘ಉಪ್ಪೇನ’ ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಂಡರು. ಮೊದಲ ಸಿನಿಮಾದಲ್ಲಿ ಗೆದ್ದು ಬೀಗಿದರು. ಬಳಿಕ ನಾನಿ ನಟನೆಯ ‘ಶ್ಯಾಮ್ ಸಿಂಗ್ ರಾಯ್’ ಚಿತ್ರದಲ್ಲಿ ಪುಟ್ಟ ಪಾತ್ರ ಮಾಡಿದರು, ಬಳಿಕ ಬಂಗಾರ್ರಾಜು, ದಿ ವಾರಿಯರ್, ಮೀಚೆರ್ಲ ನಿಯೋಜಕವರ್ಗಂ, ಆ ಅಮ್ಮಾಯಿ ಗುರಿಂಚಿ ಮೀಕು ಚೆಪ್ಪಾಲಿ, ಕಸ್ಟಡಿ, ಹೀಗೆ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದರೆ ಈ ಎಲ್ಲಾ ಸಿನಿಮಾಗಳು ನೆಲಕಚ್ಚಿವೆ. ಹೀಗಿರುವಾಗ ದೊಡ್ಡ ಸಕ್ಸಸ್‌ಗಾಗಿ ಕಾಯುತ್ತಿರುವ ಕೃತಿ ಶೆಟ್ಟಿಗೆ ಹೊಸ ಸಮಸ್ಯೆ ಶುರುವಾಗಿದೆ. ಇದನ್ನು ಹೇಗೆ ನಿಭಾಯಿಸುತ್ತಾರೆ, ಸ್ಟಾರ್ ಹೀರೋ ಮಗ ಯಾರು ಎನ್ನುವುದು ಬಹಿರಂಗವಾಗುತ್ತಾ ಕಾದು ನೋಡಬೇಕು. ಅಥವಾ ಕೃತಿ ಶೆಟ್ಟಿ ಅವ್ರೆ ಇದಕ್ಕೆಲ್ಲ ಅಂತ್ಯವಾಡ್ತಾರಾ ಏನಾಗುತ್ತೆ ನಟಿಯರು ಚಿತ್ರರಂಗದ ಬದುಕು ಅನ್ನೋ ಪ್ರಶ್ನೆಗಳು ಇದೀಗ ಮೂಡುತ್ತಿದ್ದೂ, ಇದಕ್ಕೆಲ್ಲ ಕೃತಿ ಶೆಟ್ಟಿ ಅವ್ರೆ ಉತ್ತರ ಕೊಡಬೇಕಿದೆ.
ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram