ಮೃತಪಟ್ಟವರನ್ನು ಮರಳಿ ಕರೆತರಲು ಎಂದಿಗೂ ಸಾಧ್ಯವಿಲ್ಲ. ಆದರೆ, ಅವರ ಕುಟುಂಬಗಳಿಗೆ ನೆರವಾಗಲು ಸಣ್ಣ ಪುಟ್ಟ ಸಹಾಯ ಮಾಡೋದು ಮನುಜ ಧರ್ಮ. ಹೀಗಾಗಿ ksrtc ಕಡೆಯಿಂದ ಅಪಘಾತದ ಪರಿಹಾರ ಮೊತ್ತ ಹೆಚ್ಚು ಮಾಡಲಾಗಿದ್ದು, ಮೃತಪಟ್ಟವರ ಕುಟುಂಬದವರಿಗೆ ಪರಿಹಾರ ನೀಡಲು ನಿಗಮದವರು ಜಾರಿಗೊಳಿಸಿರುವ ಈ ಅಪಘಾತ ಪರಿಹಾರ ವಿಮೆಯು ಉತ್ತಮವಾಗಿದ್ದು, ಇದು ಭಾರತದ ಯಾವುದೇ ಸರ್ಕಾರಿ ಬಸ್ ನಿಗಮಗಳಲ್ಲಿನ ದೊಡ್ಡ ಮೊತ್ತದ ಪರಿಹಾರ ಅಂದ್ರೆ ತಪ್ಪಾಗಲ್ಲ. ಹೌದು ಪ್ರಯಾಣಿಕರು ಬಸನಲ್ಲಿದ್ದಾಗ ಆದ ಅಪಘಾತದಿಂದ ಸಂಭವಿಸುವ ಪ್ರಾಣ ಹನಿಗೆ ಈ ಪರಿಹಾರ ಮೊತ್ತ ಅನ್ವಯಿಸುತ್ತದೆ ಅಂತ ಹೇಳಬಹುದು.
ಹೌದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ವಾಹನಗಳು ಅಪಘಾತಕ್ಕೀಡಾಗ, ನಿಗಮದ ವಾಹನಗಳಲ್ಲಿ ಸಂಚರಿಸುತ್ತಿದ್ದ ಪ್ರಯಾಣಿಕರು ಮೃತಪಟ್ಟಲ್ಲಿ, ಮೃತ ಪ್ರಯಾಣಿಕರ ಅವಂಬಿತರಿಗೆ, ಆರ್ಥಿಕ ನೆರವು ನೀಡುವ ಸಲುವಾಗಿ ಪ್ರಯಾಣಿಕರ ಅಪಘಾತ ಪರಿಹಾರ ನಿಧಿ ಟ್ರಸ್ಟ್ ವತಿಯಿಂದ ಪ್ರಸ್ತುತ 3,00,000 ಅಂದ್ರೆ 3ಲಕ್ಷ ಪರಿಹಾರ ನೀಡಲಾಗುತ್ತಿದೆ. ಆದ್ರೆ ಇದೀಗ ಮುಂದುವರೆದು ಪ್ರಸ್ತುತ ಪಾವತಿಸುತ್ತಿರುವ ಪರಿಹಾರ ಮೊತ್ತವನ್ನು ದಿನಾಂಕ 1/3/2017 ಪಾವತಿಸಲಾಗುತ್ತಿದ್ದು, ತದನಂತರ ಪರಿಹಾರದ ಮೊತ್ತದಲ್ಲಿ ಯಾವುದೇ ಹೆಚ್ಚಳವಾಗಿರುವುದಿಲ್ಲ. ಈ ಹಿನ್ನೆಲೆಯಲ್ಲಿ ದಿನಾಂಕ 31/10/2023ರಂದು ನಡೆದ 29ನೇ ಅಪಘಾತ ಪರಿಹಾರ ನಿಧಿ ಸಭೆಯಲ್ಲಿ ಚರ್ಚಿಸಿ, ಪರಿಹಾರ ಮೊತ್ತವನ್ನ 3 ಲಕ್ಷದಿಂದ 10 ಲಕ್ಷಗಳಿಗೆ ಹೆಚ್ಚಿಸಲು ಸಭೆಯು ಅನುಮೋದನೆ ತೆಗೆದುಕೊಳ್ಳಲಾಗಿದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಪರಿಹಾರ ಮೊತ್ತದಲ್ಲಿ ಪರಿಷ್ಕರಣೆ ಮಾಡಿ ಆದೇಶ
ಹೌದು ಇತ್ತೀಚಿನ ದಿನಗಳಲ್ಲಿ ಅಪಘಾತ ಪ್ರಕರಣಗಳು ಹೆಚ್ಚಾಗ್ತಲೆ ಇದೆ. ಒಂದಿಲ್ಲ ಒಂದು ರೀತಿಯಲ್ಲಿ ಅಪಘಾತ ಪ್ರಕರಣಗಳು ನಡಿತಾ ಇತ್ತು ಇಂತಹ ಅಪಘಾತಗಳಲ್ಲಿ ಪ್ರಾಣ ಹಾನಿ ಆಗಿರುವುದೇ ಹೆಚ್ಚಿನದ್ದು. ಹೀಗಾಗಿ ಬಸ್ ಅಪಘಾತ ಪ್ರಕರಣಗಳು ಕೂಡ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಜೊತೆಗೆ ಕೆಲವೊಂದು ಪ್ರಕರಣಗಳಲ್ಲಿ ಸಾರಿಗೆ ಇಲಾಖೆಯಿಂದ ಸರಿಯಾಗಿ ಪರಿಹಾರ ದೊರಕದ ಕಾರಣ ಈ ಒಂದು ವಿಷಯಕ್ಕೆ ಸಂಬಂಧಪಟ್ಟಂತೆ ಚರ್ಚಿಯನ್ನ ನಡೆಸಿ ಸಭೆ ಕರೆದು ಅಂತಿಮವಾಗಿ ನಿರ್ಣಯವನ್ನು ತೆಗೆದುಕೊಂಡಿದ್ದು ಈ ಹಿಂದೆ ಬಸ್ ಅಪಘಾತದಲ್ಲಿ ಸಾವನ್ನಪ್ಪಿದ ಮೃತರ ಕುಟುಂಬಕ್ಕೆ ಮೂರು ಲಕ್ಷದವರೆಗೆ ಪರಿಹಾರವನ್ನ ನೀಡಲಾಗುತ್ತಿತ್ತು ಆದರೆ ಇದೀಗ ಆ ಪರಿಹಾರದ ಮೊತ್ತದಲ್ಲಿ ದೊಡ್ಡ ಬದಲಾವಣೆಯನ್ನು ಮಾಡಲಾಗಿತ್ತು 10 ಲಕ್ಷ ಪರಿಹಾರವನ್ನು ನೀಡುವ ಭರವಸೆಯನ್ನು ಇದೀಗ ಕೆಎಸ್ಆರ್ಟಿಸಿ ನಿಗಮ ಮಂಡಳಿ ನೀಡಿದೆ. ಹೌದು ಇತ್ತೀಚಿಗೆ ಬಸ್ ಪ್ರಯಾಣಿಕರು ಸಾವನ್ನಪ್ಪಿರತಕ್ಕಂತಹ ಘಟನೆಗಳು ಹೆಚ್ಚಾಗುತ್ತಿದೆ.
ಬಸ್ ಗಳಲ್ಲಿ ಅಪಘಾತಗಳು ಸಂಭವಿಸುತ್ತಿದ್ದು ಜೊತೆಗೆ ಬಸ್ ಗೆ ಸಿಲುಕಿ ಸಾವನ್ನಪ್ಪಿರುವವರ ಸಂಖ್ಯೆ ಅತಿ ಹೆಚ್ಚಾಗುತ್ತಿದೆ. ಇದಕ್ಕೆ ಕಾರಣ ಚಾಲಕರ ನಿರ್ಲಕ್ಷ್ಯವೋ ಅಥವಾ ಪ್ರಯಾಣಿಕರ ಆತುರವೋ ಗೊತ್ತಿಲ್ಲ ಆದರೂ ಕೂಡ ಬಸ್ ಗಳಿಗೆ ಸಿಲುಕಿ ಸಾವಿಗೀಡಾಗುತ್ತಿರುವ ಪ್ರಯಾಣಿಕರ ಸಂಖ್ಯೆ ಹೆಚ್ಚಾಗುತ್ತದೆ. ಅದಕ್ಕೆ ಕೆಲವೊಮ್ಮೆ ಬಸ್ ಅಪಘಾತಗಳು ಸಂಭವಿಸಿ ಅದರಲ್ಲಿಯೂ ಕೂಡ ಸಾವು ನೋವು ಪ್ರಕರಣಗಳು ಹೆಚ್ಚಾಗ್ತಲೆ ಇದೆ ಹೀಗಾಗಿ ಸರ್ಕಾರ ಇದನ್ನ ಗಂಭೀರವಾಗಿ ಪರಿಗಣಿಸಿದ್ದು ಸಂಬಂಧಪಟ್ಟ ನಿಗಮ ಮಂಡಳಿಯವರಿಂದ ಒಂದು ಮಹತ್ವದ ಆದೇಶ ಹೊರ ಬಿದ್ದಿದ್ದು ಪರಿಹಾರದ ಮೊತ್ತವನ್ನ 3 ಲಕ್ಷದಿಂದ 10 ಲಕ್ಷಕ್ಕೆ ಏರಿಕೆ ಮಾಡಿ ಆದೇಶವನ್ನು ಹೊರಡಿಸಲಾಗಿದ್ದು ಇನ್ನು ಮುಂದೆ ಹೊಸ ವರ್ಷದಿಂದ ಈ ನಿಯಮ ಜಾರಿಯಾಗಿತ್ತು ಮುಂದಿನ ವರ್ಷದಿಂದ ಬಸ್ ಅಪಘಾತದಲ್ಲಿ ಮೃತಪಡತಕ್ಕಂತಹ ಮೃತರ ಸಂಬಂಧಿಕರಿಗೆ ಅಥವಾ ಕುಟುಂಬಸ್ಥರಿಗೆ ಈ ಒಂದು ಪರಿಹಾರದ ಮೊತ್ತವನ್ನು ನೀಡಲು ನಿಗಮ ಮಂಡಳಿ ನಿರ್ಧಾರವನ್ನು ಮಾಡಿದೆ.
ಹೌದು ಪರಿಷ್ಕೃತ ಪರಿಹಾರ ಮೊತ್ತ 10 ಲಕ್ಷದಲ್ಲಿ ತಕ್ಷಣದ ಪರಿಹಾರವಾಗಿ 25,000ವನ್ನು ಕರಾರಸಾ ನಿಗಮದ ಸುತ್ತೋಲೆ ದಿನಾಂಕ 08/12/1998ರ ಅನುಸಾರ ಸಂಬಂಧಪಟ್ಟ ವಿಭಾಗೀಯ ನಿಯಂತ್ರಣಾಧಿಕಾರಿಗಳು ಪಾವತಿ ಮಾಡಬೇಕಾಗುತ್ತೆ. ತದನಂತರ, ಅಪನಿ ಟ್ರಸ್ಟ್‌ನಿಂದ 25,000 ಸಂಬಂಧಪಟ್ಟ ವಿಭಾಗಗಳಿಗೆ ಮರುಪಾವತಿಸಿ, ಬಾಕಿ ಮೊತ್ತ 9,75,000ಗಳನ್ನು ಉಲ್ಲೇಖ ಸುತ್ತೋಲೆಯಾನುಸಾರ ದಿವಂಗತರ ಅಂದ್ರೆ ಅಪಘಾತದಲ್ಲಿ ಮೃತಪಟ್ಟವರ ವಾರಸುದಾರರಿಗೆ ಪಾವತಿಸಬೇಕು ಅಂತ ತಿಳಿಸಲಾಗಿದೆ. ಮೃತರ ಕುಟುಂಬದವರಿಗೆ ಪರಿಹಾರ ಧನವನ್ನು 10 ಲಕ್ಷಕ್ಕೆ ಹೆಚ್ಚಿಸಿರುವುದರಿಂದ ಕಾಲ ಕ್ರಮೇಣ ಅಪಘಾತ ಪರಿಹಾರ ನಿಧಿಯ ಒಟ್ಟು ಖರ್ಚು ಒಟ್ಟು ಆದಾಯಕ್ಕಿಂತ ಅಧಿಕವಾಗುವ ಹಿನ್ನೆಲೆಯಲ್ಲಿ ವಂತಿಕೆ ಸಂಗ್ರಹಣೆಯನ್ನು ಹೆಚ್ಚಿಸಲು ಸಹ ಸಭೆಯಲ್ಲಿ ನಿರ್ಣಯ ಕೈಗೊಳ್ಳಳಾಗಿದ್ಯಂತೆ. ಅದರಂತೆ ಪ್ರತಿ ಪ್ರಯಾಣಿಕರಿಂದ ಪಡೆಯಬೇಕಾದ ವಂತಿಕೆ ಸಂಗ್ರಹಣೆ ಮೊತ್ತವನ್ನ ಹೆಚ್ಚಿಸಲಾಗ್ತಿದ್ದು, ಈ ನಿಯಮ 01/01/2024 ರಿಂದ ಜಾರಿಗೆ ಬರಲಿದ್ಯಂತೆ.
ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram
ಇದನ್ನೂ ಓದಿ: ಡಿಸೆಂಬರ್ 31ರ ಒಳಗಾಗಿ ರೇಷನ್ ಕಾರ್ಡ್ ಇದ್ದವರು ಈ ಕೆಲಸ ಕಡ್ಡಾಯವಾಗಿ ಮಾಡಿ
ಇದನ್ನೂ ಓದಿ: ಬ್ಯಾಂಕ್ ನಲ್ಲಿ FD ಇಡೋರಿಗೆ ಗುಡ್ ನ್ಯೂಸ್; SBI ಬ್ಯಾಂಕ್ ನಲ್ಲಿ ಸಿಗಲಿದೆ ಹೆಚ್ಚಿನ ಬಡ್ಡಿ