ಮುಂದಿನ ವಾರ ಯುಗಾದಿ ಹಬ್ಬ ಹಾಗೂ ರಂಜಾನ್ ಹಬ್ಬ ಇರುವುದರಿಂದ ಸರ್ಕಾರಿ ಮತ್ತು ಖಾಸಗಿ ನೌಕರರಿಗೆ ಮಂಗಳವಾರ ಮತ್ತು ಗುರುವಾರ ರಜೆ ಇರಲಿದೆ. ಜೊತೆಗೆ ಮಧ್ಯ ಒಂದು ದಿನ ವೈಯಕ್ತಿಕ ರಜೆಯನ್ನು ಹಾಕಿದರೆ ಮೂರು ದಿನಗಳ ಕಾಲ ರಜೆ ಸಿಗಲಿದೆ ಹಾಗೂ ಐಟಿ ಬಿಟಿ ಕಂಪನಿಗಳ ನೌಕರರಿಗೆ ಶನಿವಾರ ಮತ್ತು ಭಾನುವಾರ ರಜೆ ಇರಲಿದೆ. ಸೋಮವಾರ ಮತ್ತು ಬುಧವಾರ ಒಂದು ದಿನ ರಜೆ ಹಾಕಿದರೆ ಒಂದು ವಾರ ಊರಿಗೆ ಬರಲು ಅವಕಾಶ ಇದೆ. ಇದೇ ಕಾರಣಕ್ಕೆ ಈಗ ಬೆಂಗಳೂರಿಂದ ಊರಿಗೆ ಬರುವ ಜನರ ಸಂಖ್ಯೆ ಹೆಚ್ಚಳ ಆಗಿದೆ. ಇದೇ ಕಾರಣಕ್ಕೆ ವಿಶೇಷವಾಗಿ ಕೆ ಎಸ್ ಆರ್ ಟಿ ಸಿ ಹೆಚ್ಚುವರಿ ಬಸ್ ಬಿಡುತ್ತಿದೆ.
ಒಟ್ಟು ಏಷ್ಟು ಬಸ್ ಗಳನ್ನು ಬಿಡುಗಡೆ ಮಾಡಲಾಗಿದೆ. :- ನಾಲ್ಕು ರಸ್ತೆ ಸಾರಿಗೆ ನಿಗಮಗಳು ಸೇರಿ ಬರೋಬ್ಬರಿ 2,000 ಬಸ್ ವ್ಯವಸ್ಥೆ ಮಾಡಲಾಗಿದೆ. ಕೆಎಸ್‌ಆರ್‌ಟಿಸಿ ಸಂಸ್ಥೆಯಿಂದ 1,750 ಬಸ್ ಗಳು ಹಾಗು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಿಂದ 145 ಬಸ್ ಗಳು ಹಾಗೂ ಕೆಕೆಆರ್‌ಟಿಸಿಯ ಸಂಸ್ಥೆಯಿಂದ 200 ಬಸ್ ಗಳು ಮತ್ತು ಬಿಎಂಟಿಸಿ ಸಂಸ್ಥೆಹೊಂದ 180 ವಿಶೇಷ ಬಸ್‌ಗಳು ಸಂಚಾರ ಮಾಡಲಿವೆ.
ಯಾವ ಯಾವ ಪ್ರದೇಶಗಳಿಗೆ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ :-
ವಿಶೇಷ ಬಸ್ ಸೇವೆಗಳು ಬೆಂಗಳೂರಿನ ನಗರದ ಕೆಂಪೇಗೌಡ ನಿಲ್ದಾಣ ಮತ್ತು ಸ್ಯಾಟಲೈಟ್ ನಿಲ್ದಾಣ ಹಾಗೂ ಶಾಂತಿನಗರದಿಂದ ಕರ್ನಾಟಕದ ಪುಣ್ಯ ಕ್ಷೇತ್ರಗಳಾದ ಧರ್ಮಸ್ಥಳ, ಕುಕ್ಕೆಸುಬ್ರಹ್ಮಣ್ಯ, ಶೃಂಗೇರಿ, ಹೊರನಾಡು, ಗೋಕರ್ಣ, ಕೊಲ್ಲೂರು ಹಾಗೂ ಮಡಿಕೇರಿ, ದಾವಣಗೆರೆ, ಹುಬ್ಬಳ್ಳಿ ಸೇರಿದಂತೆ ಹಲವು ಜಿಲ್ಲೆಗಳಿಗೆ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ. ರಾಜ್ಯದ ಜಿಲ್ಲೆಗಳ ಜೊತೆಗೆ ಪಕ್ಕದ ರಾಜ್ಯದ ನಗರಗಳಿಗೂ ಸಹ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ. ಕರ್ನಾಟಕದ ನೆರೆ ಹೊರೆಯ ರಾಜ್ಯಗಳಾದ ಹೈದರಾಬಾದ್, ಚೆನ್ನೈ, ಗೋವಾ ಪಣಜಿ, ಶಿರಡಿ, ಎರ್ನಾಕುಲಂಗೆ ವಿಶೇಷ ಬಸ್ ನ ವ್ಯವಸ್ಥೆ ಇರಲಿದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ವಿಶೇಷ ಬಸ್ ವ್ಯವಸ್ಥೆ ಏಕೆ?
- ಬೇಡಿಕೆ ಪೂರೈಕೆ: ರಜಾದಿನಗಳಲ್ಲಿ ಪ್ರಯಾಣಿಕರ ಸಂಖ್ಯೆ ಗಣನೀಯವಾಗಿ ಹೆಚ್ಚಾಗುವುದರಿಂದ, ವಿಶೇಷ ಬಸ್‌ಗಳು ಈ ಹೆಚ್ಚಿನ ಬೇಡಿಕೆಯನ್ನು ಪೂರೈಸಲು ಸಹಾಯ ಮಾಡುತ್ತವೆ. ಜೊತೆಗೆ ಮಕ್ಕಳಿಗೆ ಬೇಸಿಗೆ ರಜವು ಆರಂಭ ಆಗಿರುವುದರಿಂದ ಹೆಚ್ಚಿನ ಬಸ್ ಗೆ ಬೇಡಿಕೆ ಇರುವುದರಿಂದ ಬೇಡಿಕೆಯನ್ನು ಪೂರೈಸಲು ಈ ವ್ಯವಸ್ಥೆ ಕಲ್ಪಿಸಲಾಗಿದೆ.
- ಸುಲಭ ಲಭ್ಯತೆ: ವಿಶೇಷ ಬಸ್‌ಗಳು ಹೆಚ್ಚಿನ ಸಂಖ್ಯೆಯಲ್ಲಿವೆ ಅದರಿಂದ ಪ್ರಯಾಣಿಕರಿಗೆ ತಮ್ಮ ಅನುಕೂಲಕ್ಕೆ ತಕ್ಕಂತೆ ಬಸ್‌ಗಳನ್ನು ಆಯ್ಕೆ ಮಾಡುವ ಸ್ವಾತಂತ್ರ್ಯ ಸಿಗುತ್ತದೆ. ಹಾಗೂ ದೂರದ ಪ್ರಯಾಣಕ್ಕೆ ಎರಡು ಮೂರು ಬಸ್ ಬದಲಿಸಿ ಹೋಗುವ ಪ್ರಮೇಯ ಇರುವುದಿಲ್ಲ. ನೀವು ಆರಾಮದಾಯಕವಾದ ಪ್ರಯಾಣ ಮಾಡಲು ಅನುಕೂಲ ಆಗಿದೆ.
- ಬಸ್ ರಶ್ ಕಡಿಮೆ ಮಾಡಲು :- ಒಂದು ಬಸ್ ನಲ್ಲಿ ಕುಳಿತುಕೊಳ್ಳುವ ಸಿಟ್ ಗಿಂತ ಹೆಚ್ಚು ನಿಂತು ಪ್ರಯಾಣಿಸುವ ಸಂದರ್ಭ ಹೆಚ್ಚು ಇದನ್ನು ಹಬ್ಬದ ಸಮಯದಲ್ಲಿ ತಗ್ಗಿಸಲು ಸಹಾಯ ಆಗುತ್ತದೆ. ಹೆಚ್ಚುವರಿ ಬಸ್ ಇರುವುದರಿಂದ ಒಂದೇ ಬಸ್ ಗೆ ನುಕು ನುಗ್ಗಲು ಆಗುವುದನ್ನು ತಪ್ಪಿಸಲು ಸಾಧ್ಯವಿದೆ.
- ಸುರಕ್ಷಿತ ಪ್ರಯಾಣ: ಕೆಎಸ್ಆರ್ಟಿಸಿ ಬಸ್ಸುಗಳು ಸುರಕ್ಷಿತ ಮತ್ತು ವಿಶ್ವಾಸಾರ್ಹ, ಇದು ಪ್ರಯಾಣಿಕರಿಗೆ ಒಂದು ಖಾತ್ರಿಯನ್ನು ನೀಡುತ್ತದೆ.
ಇದನ್ನೂ ಓದಿ: ನೀವು ಆನ್ಲೈನ್ ನಲ್ಲಿ ಹಣ ಸಂಪಾದನೆ ಮಾಡುವುದು ಹೇಗೆ ಎಂಬ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ತುರ್ತು ಪರಿಸ್ಥಿತಿಯಲ್ಲಿ ಉಪಯೋಗವಾಗುವಂತಹ, ಬ್ಯಾಟರಿಯನ್ನು ಉಳಿಸುವ ಸುಲಭ ವಿಧಾನಗಳನ್ನು ತಿಳಿಯಿರಿ