KSRTC ಅಶ್ವಮೇಧ ಕ್ಲಾಸಿಕ್ ಎಕ್ಸ್ ಪ್ರೆಸ್ ಬಸ್ ನ ವಿಶೇಷತೆಗಳು ಏನು?

KSRTC New Ashwameda Buses

KSRTC ಈಗಾಗಲೇ ಒಂದು ಸಾವಿರ ಹೊಸ ಬಸ್ ಖರೀದಿಸಿದೆ. ಈಗಾಗಲೇ ಮೊದಲ ಹಂತದಲ್ಲಿ ನೂರು ಬಸ್ ಗಾಳನ್ನು ಬಿಡುಗಡೆ ಮಾಡಲಾಗಿದೆ. ಪ್ರಯಾಣದ ಮರುಕಲ್ಪನೆ ಎಂಬ ಟ್ಯಾಗ್ ಲೈನ್ ಹೊಂದಿದೆ. ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಂದ ಬೆಂಗಳೂರಿಗೆ ಅಶ್ವಮೇಧ ಬಸ್ ಓಡಾಡಲಿದೆ. ಇಂದು ಬೆಳಗ್ಗೆ ಬೆಂಗಳೂರಿನ ವಿಧಾನಸೌಧ ಮುಂಭಾಗದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೊಸ ಬಸ್‌ಗಳಿಗೆ ಚಾಲನೆ ನೀಡಿದ್ದಾರೆ. 

WhatsApp Group Join Now
Telegram Group Join Now

ಅಶ್ವಮೇಧ ಕ್ಲಾಸಿಕ್ ಬಸ್ ನ ವಿಶೇಷತೆ ಗಳೇನು?

ಬಸ್ ಮುಂಭಾಗದ ಗ್ಲಾಸ್ ಈಗಿನ ಬಸ್ ಗ್ಲಾಸ್ ಕಿಂತ ದೊಡ್ಡದಾಗಿದೆ. ಈಗ ಪ್ರಸ್ತುತ ಬಸ್ ಗಳಲ್ಲಿ ನಾಮಫಲಕ ಕೆಂಪು ಹಾಗೂ ಕಪ್ಪು ಅಕ್ಷರದಲ್ಲಿ ಇರುತ್ತದೆ. ಆದರೆ ಅಶ್ವಮೇಧ ಕ್ಲಾಸಿಕ್ ಬಸ್ ನಲ್ಲಿ ಬಸ್ ತಲುಪುವ ಸ್ಥಳಗಳು ಪೂರ್ಣ ಎಲ್ ಇ ಡಿ ಸ್ಕ್ರೀನ್ ಒಳಗೊಂಡಿದೆ. ಬಸ್ ನ ಎತ್ತರ 3.42 ಅಡಿ. ಈ ಬಸ್ಸುಗಳು ನಾನ್‌ ಎಸಿ ಸೌಲಭ್ಯ ಹೊಂದಿದೆ. ಎರಡು ರೇರ್ ಕ್ಯಾಮರಾ ಅಳವಡಿಕೆ ಮಾಡಲಾಗಿದೆ. ಮೊದಲ ಬಾರಿಗೆ ಮುಂಭಾಗದಲ್ಲಿ ಟಿಂಟರ್ ಗ್ಲಾಸ್ ಅಳವಡಿಕೆ ಮಾಡಲಾಗಿದೆ. ಬಸ್ ನ ಒಳಗೆ 52 ಸಿಟ್ ಗಳು ಇವೆ. ಎಲ್ಲಾ ಸಿಟ್ ಗಳು ಬಕೆಟ್ ವಿನ್ಯಾಸವನ್ನು ಹೊಂದಿದೆ. ಇದರಿಂದ ಆರಾಮದಾಯಕವಾಗಿ ಪ್ರಯಾಣಿಸಬಹುದು. ಬಸ್ ನಲ್ಲಿ ಜಿಪಿಎಸ್ ಅಳವಡಿಕೆ ಮಾಡಲಾಗಿದೆ. ಪ್ರತಿಯೊಂದು ಸಿಟ್ ಪಕ್ಕ ಪ್ಯಾನಿಕ್ ಬಟನ್ (ಎಮರ್ಜೆನ್ಸಿ ಬಟನ್) ಅಳವಡಿಕೆ ಮಾಡಲಾಗಿದೆ. ನಿಮಗೆ ಬಸ್ ನಲ್ಲಿ ಯಾವುದೇ ರೀತಿಯ ತೊಂದರೆ ಆದರೂ ಈ ಬಟನ್ ಪ್ರೆಸ್ ಮಾಡಿದ ತಕ್ಷಣ ಮಾಹಿತಿ ಕಂಟ್ರೋಲ್ ರೂಂ ಗೆ ಹೋಗುತ್ತದೆ. ಕಂಟ್ರೋಲ್ ರೂಂ ನಿಂದ ನಿಮ್ಮ ಬಸ್ ನ ಕಂಡಕ್ಟರ್ ಅಥವಾ ಡ್ರೈವರ್ ಗೆ ತಕ್ಷಣ ಕರೆ ಮಾಡಿ ನಿಮ್ಮ ಬಸ್ ನಲ್ಲಿ ಯಾರಿಗೆ ಸಮಸ್ಯೆ ಆಗಿದೆ ಎಂಬುದಾಗಿ ವಿಚಾರಿಸುತ್ತಾರೆ ಹಾಗೂ ತಕ್ಷಣ ಸಮಸ್ಯೆಗೆ ಒಳಗವರಿಗೆ ಸಹಾಯಕ್ಕೆ ಹೋಗುತ್ತಾರೆ.

ಈ ಹಿಂದಿನ ಬಸ್ ಗಳಲ್ಲಿ ಲಗೇಜ್ ಇಡಲು ಹೆಚ್ಚಿನ ಸ್ಥಳಾವಕಾಶ ಇರಲಿಲ್ಲ. ಈಗ ದೊಡ್ಡ ದೊಡ್ಡ ಸೂಟ್ಕೇಸ್ ಇಡಲು ಹೆಚ್ಚಿನ ಸ್ಥಳಾವಕಾಶ ಕಲ್ಪಿಸಲಾಗಿದೆ. ಈಗ ಮೊಬೈಲ್ ಎಂಬುದು ಪ್ರತಿಯೊಬ್ಬರ ಬದುಕಿನ ಭಾಗವಾಗಿದೆ. ಪ್ರಯಾಣಿಕರು ಪ್ರಯಾಣಿಸುವ ವೇಳೆಗೆ ತಮ್ಮ ಮೊಬೈಲ್ ಚಾರ್ಜ್ ಕಡಿಮೆ ಆದರೆ ಚಾರ್ಜ್ ಹಾಕಲು ಒಟ್ಟು 6 ಮೊಬೈಲ್ ಚಾರ್ಜಿಂಗ್ ಪಿನ್ ವ್ಯವಸ್ಥೆ ಕಲ್ಪಿಸಲಾಗಿದೆ. ಅಪಘಾತ ಸಂಭವಿಸಿದಾಗ ಪಾರಾಗಲು ಹ್ಯಾಮರ್ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಹಾಗೂ ಏನಾದರೂ ಬೆಂಕಿಯ ಅಪಘಾತ ಸಂಭವಿಸಿದರೆ fire distinction ವ್ಯವಸ್ಥೆ ಇದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಬಸ್ ಪ್ರಯಾಣಿಕರ ಜೊತೆಗೆ ಬಸ್ ಡ್ರೈವರ್ ಗಳಿಗೆ ಸಹ ಉನ್ನತ ಮಟ್ಟದ ಸಿಟ್ ವ್ಯವಸ್ಥೆ ಇದೆ. ಡೋರ್ ತೆಗೆಯಲು ಹಾಗೂ ಮುಚ್ಚಲು ಬಟನ್ ವ್ಯವಸ್ಥೆ ಹೊಂದಿದೆ. ಈ ಹಿಂದೆ ಡ್ರೈವರ್ ಗಳು ಪ್ರತಿ ಸಲವು ಬೋರ್ಡ್ ಬದಲಾಯಿಸಿಕೊಂಡು ವಾಹನ ಓಡಿಸಬೇಕಿತ್ತು. ಆದರೆ ಈಗ ಇರುವ ವ್ಯವಸ್ಥೆಯಲ್ಲಿ ಸುಧಾರಣೆ ಇದೆ ಹಾಗೂ ಗಾಡಿ ಓಡಿಸಲು ಬಹಳ ಸಂತೋಷವಾಗುತ್ತದೆ ಎಂದು KSRTC ಬಸ್ ಡ್ರೈವರ್ ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ. ಇದು ಎಕ್ಸ್ಪ್ರೆಸ್ ಬಸ್ ಆಗಿದೆ. ಇಂದಿನಿಂದ ಸಾರ್ವಜನಿಕರು ಪ್ರಯಾಣ ಮಾಡಬಹುದು. ಇದೇ ರೀತಿಯ ಹೆಚ್ಚಿನ ಮಾಹಿತಿಗಾಗಿ ನಮ್ಮ ಟೆಲಿಗ್ರಾಂ ಚಾನೆಲ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ಇನ್ನು 13 ದಿನ ಮಾತ್ರವೇ ಬಾಕಿ, HSRP ನಂಬರ್ ಪ್ಲೇಟ್ ಅನ್ನು ತ್ವರಿತವಾಗಿ ಹಾಕಿಸಿ

ಇದನ್ನೂ ಓದಿ: ಪ್ರತಿ ತಿಂಗಳು ನಿಮ್ಮ ಪಿಎಫ್ ಖಾತೆಗೆ ಹಣ ಜಮಾ ಆಗುತ್ತದೆಯೇ ಎಂದು ಈಗ ಮೊಬೈಲ್ ನಲ್ಲಿಯೇ ಪರಿಶೀಲಿಸಬಹುದು.