ಲೇಬರ್ ಕಾರ್ಡ್ ನೊಂದಣಿ ಪ್ರಕ್ರಿಯೆ ಆರಂಭ; ಹೊಸ ಲೇಬರ್ ಕಾರ್ಡ್ ಪಡೆಯಲು ಏನ್ ಮಾಡಬೇಕು

Labour Card Application Karnataka

ಕಟ್ಟಡ ಮತ್ತು ಇತರೆ ಕೆಲಸ ಮಾಡುವವವರಿಗೆ ಇದೀಗ ಸಿಹಿ ಸುದ್ದಿ ಬಂದಿದೆ ಅಂತಲೇ ಹೇಳಬಹುದು. ಹೌದು, ಇದೀಗ ಸರ್ಕಾರದಿಂದ ಅನೇಕ ಯೋಜನೆಗಳು ಜಾರಿಯಾಗುತ್ತಿವೆ ಈ ಎಲ್ಲ ಯೋಜನೆಗಳಿಂದ ಮಹಿಳೆಯರಿಗೆ, ಬಡವರಿಗೆ ಮತ್ತು ಆರ್ಥಿಕ ಪರಿಸ್ಥಿತಿಯಲ್ಲಿ ಹಿಂದುಳಿದಿರುವವರಿಗೆ ಸರ್ಕಾರದಿಂದ ಸಿಗುವ ಈ ಯೋಜನೆಗಳು, ಸಾಲ ಸೌಲಭ್ಯಗಳು ಬಹಳ ಉಪಯೋಗವಾಗಲಿವೆ. ಇದರಿಂದ ಅವರು ತಮ್ಮ ತಮ್ಮ ಸ್ವಂತ ಉದ್ಯೋಗ ನಡೆಸಿಕೊಂಡು ಜೀವನ ನಡೆಸಲು ಸಹಾಯವಾಗಲಿದೆ. ಹಾಗೆಯೇ ಇದೀಗ ಕಾರ್ಮಿಕ ಇಲಾಖೆಯಿಂದ ಹಲವಾರು ಯೋಜನೆಗಳು ಜಾರಿಯಾಗುತ್ತಿವೆ. ಅವುಗಳನ್ನು ಪಡೆಯಲು ಕಾರ್ಮಿಕರು ಲೇಬರ್ ಕಾರ್ಡ್ ಅನ್ನು ಪಡೆದುಕೊಳ್ಳೋದು ಅತೀ ಮುಖ್ಯ. ಇನ್ನು ಕಾರ್ಮಿಕ ಇಲಾಖೆಯಿಂದ ದೊರೆಯುವ ಈ ಯೋಜನೆಗಳು ಬಹಳಷ್ಟು ಜನರಿಗೆ ಉಪಯೋಗವಾಗಲಿವೆ.

WhatsApp Group Join Now
Telegram Group Join Now

ಹಾಗೆಯೇ, ಸರ್ಕಾರದಿಂದ ದೊರೆಯುವ ಈ ಸೌಲಭ್ಯವನ್ನು ಪಡೆಯಲು ಕಾರ್ಮಿಕರು ಅಥವಾ ಅರ್ಹ ಅಭ್ಯರ್ಥಿ ಲೇಬರ್ ಕಾರ್ಡ್ ಅನ್ನು ಹೊಂದಬೇಕು. ಅವಾಗ ಮಾತ್ರ ಸರ್ಕಾರ ನೀಡುತ್ತಿರುವ ಈ ಎಲ್ಲ ಸೌಲಭ್ಯ ಪಡೆಯಲು ಸಾಧ್ಯ. ಹಾಗಾಗಿ ಲೇಬರ್ ಕಾರ್ಡ್ ದೊರೆಯಬೇಕಿದ್ದರೆ ಅಥವಾ ಈ ಯೋಜನೆಗಳನ್ನು ಪಡೆಯಲು ಕಾರ್ಮಿಕರು ನೋಂದಣಿ ಮಾಡಿಕೊಳ್ಳುವುದು ಕಡ್ಡಾಯವಾಗಿರುತ್ತದೆ. ಮತ್ತು ಅವರು ನೋಂದಣಿ ಮಾಡುವ ಮೂಲಕ ಅದನ್ನು ಪಡೆಯಬಹದು. ಹಾಗಾದ್ರೆ ಅದನ್ನು ಹೇಗೆ ಪಡೆಯುವುದು ಮತ್ತು ಈ ಯೋಜನೆಗಳ ಸಂಪೂರ್ಣ ಮಾಹಿತಿಯ ಬಗ್ಗೆ ನೋಡ್ತಾ ಹೋಗೋಣ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಒಂದು ಕಾರ್ಡ್ ಇದ್ರೆ ಸಾಕು ಪಡೆಯಬಹುದು ಹಲವು ಸೌಲಭ್ಯ

ಹೌದು ಬೆಂಗಳೂರು ನಗರದ ಸ್ಥಳದಲ್ಲೇ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ನೋಂದಣಿ ಅಭಿಯಾನವು ನಡೆಯಲಿದೆ. ನೋಂದಣಿ ಪ್ರಕ್ರಿಯೆಯನ್ನು ಮಾಡಲು ಹಿರಿಯ ಕಾರ್ಮಿಕ ನಿರೀಕ್ಷಕರು ಅಥವಾ ಕಾರ್ಮಿಕ ನಿರೀಕ್ಷಕರ ಕಛೇರಿಗಳಿಗೆ ಭೇಟಿ ನೀಡಬಹುದು. ಇನ್ನು ಸರ್ಕಾರದಿಂದ ಜಾರಿಗೆ ಆಗಿರುವ ಲೇಬರ್ ಕಾರ್ಡ್ ಮತ್ತು ಅದರ ಅಡಿಯಲ್ಲಿ ದೊರೆಯುವ ಯೋಜನೆಗಳನ್ನು ಪಡೆಯಲು ನೋಂದಣಿ ಪ್ರಕ್ರಿಯೆ ಪ್ರಾರಂಭವಾಗಿದೆ. ಈ ಒಂದು ನೋಂದಣಿ ಪ್ರಕ್ರಿಯೆ ಈಗಾಗಲೇ ಶುರುವಾಗಿದ್ದು, 30 ನೇ ಡಿಸೆಂಬರ್ 2023 ರಿಂದ 31 ನೇ ಮಾರ್ಚ್ 2024 ರವರೆಗೆ ಈ ಒಂದು ಲೇಬರ್ ಕಾರ್ಡ್ ನೋಂದಣಿ ಪ್ರಕ್ರಿಯೆ ನಡೆಯಲಿದೆ. ಈ ಮೂಲಕ ಕರ್ನಾಟಕ ಸರ್ಕಾರ ನೀಡುತ್ತಿರುವ ಈ ಯೋಜನಗಳು ಅದೆಷ್ಟೋ ಜನರಿಗೆ ಸಾಹಾಯ ಆಗಲಿದೆ ಅಂತಲೇ ಹೇಳಬಹುದು. ಹೌದು ಅರ್ಹ ಅಭ್ಯರ್ಥಿಗಳು ಲೇಬರ್ ಕಾರ್ಡ್ ಅನ್ನು ನೊಂದಣಿ ಮಾಡುವ ಮೂಲಕ ಕಾರ್ಡ್ ಪಡೆದುಕೊಂಡು ಒಂದಷ್ಟು ಯೋಜನೆಗಳ ಸೌಲಭ್ಯಗಳನ್ನು ಪಡೆದುಕೊಳ್ಳಬಹುದು.

ಮುಖ್ಯವಾಗಿ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರು ಮಂಡಳಿಯಲ್ಲಿ ನೋಂದಣಿಯಾಗಲು 18 ರಿಂದ 60 ವರ್ಷದೊಳಗಿರಬೇಕು. ಇದರ ಜೊತೆಗೆ ಲೇಬರ್ ಕಾರ್ಡ್ ಅನ್ನು ಪಡೆಯುವ ಅಥವಾ ನೋಂದಣಿ ಮಾಡುವ ಮೊದಲು ಅರ್ಹ ಅಭ್ಯರ್ಥಿಯು ಮೊದಲು 12 ತಿಂಗಳುಗಳ ಕಾಲ ಅಂದ್ರೆ ಒಂದು ವರ್ಷ ಕಟ್ಟಡ ಮತ್ತು ಇತರೆ ನಿರ್ಮಾಣ ಕಾಮಗಾರಿಗಳಲ್ಲಿ ಕನಿಷ್ಠ 90 ದಿನಗಳು ಕೆಲಸ ನಿರ್ವಹಿಸಿರಬೇಕು. ಹಾಗಾದರೆ ಮಾತ್ರ ಸರ್ಕಾರದಿಂದ ದೊರೆಯುವ ಈ ಯೋಜನೆಗಳನ್ನು ಅವರು ಪಡೆಯಲು ಸಾಧ್ಯ. ನೊಂದಣಿ ಮಾಡಲು ಅರ್ಹ ಅಭ್ಯರ್ಥಿಗಳು 90 ದಿನಗಳ ಉದ್ಯೋಗ ದೃಢೀಕರಣ ಪತ್ರ, ಅರ್ಜಿದಾರ ಹಾಗೂ ಅವಲಂಬಿತರ ಆಧಾರ್ ಕಾರ್ಡ್ ಪ್ರತಿ, ಮತ್ತು ಅರ್ಜಿದಾರರ ಬ್ಯಾಂಕ್‌ ಪಾಸ್ ಬುಕ್ ಪ್ರತಿ, ಅರ್ಜಿದಾರರ ಆಧಾರ್ ಕಾರ್ಡ್‌’ಗೆ ಲಿಂಕ್ ಇರುವ ದೂರವಾಣಿ ಸಂಖ್ಯೆಯನ್ನ ಕಡ್ಡಾಯವಾಗಿ ನೀಡಬೇಕಾಗುತ್ತೆದೆ.

ಇನ್ನು ಅರ್ಜಿ ಸಲ್ಲಿಸಿ ಕಾರ್ಡ್ ಪಡೆದ ಕಾರ್ಮಿಕರಿಗೆ ಸಾಕಷ್ಟು ಅನುಕೂಲಗಳಾಗಲಿದ್ದು, ಮುಖ್ಯವಾಗಿ ಅಪಘಾತ ಪರಿಹಾರ, ಪ್ರಮುಖ ವೈದ್ಯಕೀಯ ವೆಚ್ಚ, ಸಹಾಯಧನ, ತಾಯಿ ಮಗು ಸಹಾಯಹಸ್ತಾ, ದುರ್ಬಲತೆ ಪಿಂಚಣಿ ಮುಂದುವರಿಕೆ, ಹೆರಿಗ ಸೌಲಭ್ಯ, ಶೈಕ್ಷಣಿಕ ಸಹಾಯಧನ, ಅಂತ್ಯಕ್ರಿಯೆ ವೆಚ್ಚ, ಮದುವೆ ಸಹಾಯಧನ, ವೈದ್ಯಕೀಯ ಸಹಾಯಧನ, ಪಿಂಚಣಿ ಸೌಲಭ್ಯ, ಶ್ರಮಸಾಮರ್ಥ್ಯ ಟೂಲ್ ಕಿಟ್ ಹಾಗೂ ಉಚಿತ ಸಾರಿಗೆ ಬಸ್‌ ಪಾಸ್‌ ಸೌಲಭ್ಯವನ್ನ ಕಲ್ಪಿಸಿಕೊಡಲಾಗುತ್ತದೆ. ಹೀಗಾಗಿ ನೋಂದಣಿ ಪ್ರಕ್ರಿಯೆಯಲ್ಲಿ ನಿಮಗೆ ಹೆಚ್ಚಿನ ಮಾಹಿತಿ ಬೇಕಿದ್ದರೆ ಕಾರ್ಮಿಕ ಅಧಿಕಾರಿಗಳು & ಹಿರಿಯ ಕಾರ್ಮಿಕ ನಿರೀಕ್ಷಕರು, ಇಲ್ಲವೇ ಕಾರ್ಮಿಕ ನಿರೀಕ್ಷಕರನ್ನು ಸಂಪರ್ಕಿಸಬಹುದು, ಅಥವಾ ಅಧಿಕೃತ ವೆಬ್ಸೈಟ್ ಗೂ ಕೂಡ ಭೇಟಿ ನೋಡಿ ಅರ್ಜಿ ಸಲ್ಲಿಸಬಹುದು. ಇದೇ ರೀತಿಯ ಹೆಚ್ಚಿನ ಮಾಹಿತಿಗಾಗಿ ನಮ್ಮ ಟೆಲಿಗ್ರಾಂ ಚಾನಲ್ ಸೆರಲು ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: 45% ರಿಯಾಯಿತಿಯೊಂದಿಗೆ Redmi A2, ನಿಮ್ಮ ಮನೆಗೆ ಆಗಮಿಸಲಿದೆ ಅದು ಕೇವಲ 5000 ರೂಪಾಯಿಗಳ ಕಮ್ಮಿ ಬೆಲೆಯಲ್ಲಿ