ಕಾರ್ಮಿಕರ ಮಕ್ಕಳಿಗೆ ಉಚಿತ ಲ್ಯಾಪ್ ಟಾಪ್ ವಿತರಣೆ; ಲ್ಯಾಪ್ ಟಾಪ್ ಪಡೆಯೋದು ಹೇಗೆ? ಏನ್ ಮಾಡ್ಬೇಕು? ಕೊನೆ ದಿನ?

ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಇಲಾಖೆಯ ವತಿಯಿಂದ ಕಟ್ಟಡ ಕಾರ್ಮಿಕರು ಹಾಗೂ ಇತರೆ ನಿರ್ಮಾಣ ಕಾರ್ಮಿಕರ ಮಕ್ಕಳಿಗೆ ಸರ್ಕಾರ ಉಚಿತವಾಗಿ ಲ್ಯಾಪ್ ಟಾಪ್ ವಿತರಣೆ ಮಾಡುತ್ತಿದೆ. ಹೌದು ಕಾರ್ಮಿಕರ ಮಕ್ಕಳು ವಿದ್ಯಾಭ್ಯಾಸದಿಂದ ಹಿಂದೆ ಸರಿಯಬಾರದು, ಅಗತ್ಯ ಇರುವ ಮಕ್ಕಳಿಗೆ ಉಚಿತ ವಿದ್ಯಾಭ್ಯಾಸದ ಸಲಕರಣೆಯನ್ನ ಈ ಹಿಂದಿನಿಂದಲೂ ಸರ್ಕಾರ ವಿತರಣೆ ಮಾಡುತ್ತಿದೆ. ಸಮವಸ್ತ್ರ, ನೋಟ್ ಬುಕ್ಸ್, ಪ್ರೋತ್ಸಾಹ ಧನ, ಸೇರಿದಂತೆ ಸಾಕಷ್ಟು ರೀತಿಯ ಸೌಲಭ್ಯಗಳನ್ನ ನಿಡ್ತಿದೆ. ಇನ್ನು ಇದೀಗ ಪ್ರಥಮ ಹಾಗೂ ದ್ವಿತೀಯ ಪಿಯುಸಿ ಓದುತ್ತಿರುವ ಮಕ್ಕಳಿಗೆ ಅವರ ಶೈಕ್ಷಣಿಕ ವಿಕಾಸ ಹಾಗೂ ಉತ್ತೇಜಿಸಲು ಉಚಿತವಾಗಿ ಲ್ಯಾಪ್ ಟಾಪ್ ನೀಡುವ ಯೋಜನೆ ಇದ್ದು, ಅರ್ಹ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಈ ಯೋಜನೆಗೆ ಅರ್ಜಿ ಸಲ್ಲಿಸಿ ಉಚಿತವಾಗಿ ಲ್ಯಾಪ್ ಟಾಪ್ ಪಡೆದುಕೊಳ್ಳಬಹುದಾಗಿದೆ.

WhatsApp Group Join Now
Telegram Group Join Now

ಹೌದು ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಇಲಾಖೆಯಿಂದ ಪಿಯುಸಿ ಓದುತ್ತಿರುವ ಮಕ್ಕಳಿಗೆ ಉಚಿತವಾಗಿ ಲ್ಯಾಪ್ ಟಾಪ್ ನೀಡಲಾಗುತ್ತಿದ್ದು, ಈಗಾಗ್ಲೇ ವಿಜಯಪುರ ಜಿಲ್ಲೆಯಲ್ಲಿ ಕಟ್ಟಡ ಕಾಮಗಾರಿ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ವತಿಯಿಂದ ನೋಂದಾಯಿತಾ ಕಾರ್ಮಿಕರ ಮಕ್ಕಳಿಗೆ ಉಚಿತವಾಗಿ ಲ್ಯಾಪ್ ಟಾಪ್ ನೀಡಲಾಗಿದ್ದು, ಇದರ ಬಗ್ಗೆ ಸ್ವತಃ ಜಿಲ್ಲಾಧಿಕಾರಿಗಳೇ ಮಾಹಿತಿ ಹಂಚಿಕೊಂಡಿದ್ದಾರೆ. ಹಾಗಾದ್ರೆ ಕೇವಲ ವಿಜಯಪುರ ಜಿಲ್ಲೆಯ ನೋಂದಾಯಿತಾ ಕಟ್ಟಡ ಕಾರ್ಮಿಕರ ಮಕ್ಕಳಿಗೆ ಮಾತ್ರ ಉಚಿತ ಲ್ಯಾಪ್ ಟಾಪ್ ಯೋಜನೆ ಅನ್ವಯಿಸುತ್ತ ಅಥವಾ ಬೇರೆಯವರು ಯೋಜನೆಯ ಲಾಭ ಪಡೆಯುಬಹುದಾ? ಅಥವಾ ಉಚಿತ ವಾಗಿ ಲ್ಯಾಪ್ ಟಾಪ್ ಪಡೆದುಕೊಳ್ಳಬೇಕು ಅಂದ್ರೆ ಏನ್ ಮಾಡಬೇಕು ನೋಡೋಣ ಬನ್ನಿ.

ದೈನಂದಿನ ಹೊಸ ಮಾಹಿತಿಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ: Click Here To Join WhatsApp

ಲೇಬರ್ ಕಾರ್ಡ್ ಇದ್ರೆ ಸಿಗುತ್ತೆ ಸರ್ಕಾರದಿಂದ ಲ್ಯಾಪ್ ಟಾಪ್

ಹೌದು ಕಟ್ಟಡ ಕಾಮಗಾರಿ ಹಾಗೂ ಇತರ ನಿರ್ಮಾಣ ಕೂಲಿ ಕಾರ್ಮಿಕರ ಕಲ್ಯಾಣ ಮಂಡಳಿ ವತಿಯಿಂದ ನೋಂದಾಯಿತಾ ಕಾರ್ಮಿಕರ ಮಕ್ಕಳ ವಿದ್ಯಾಭ್ಯಾಸಕ್ಕೆ ಸಹಕರಿಸಲು ಕಾರ್ಮಿಕ ಇಲಾಖೆ ಕಾರ್ಮಿಕರ ಮಕ್ಕಳಿಗೆ ಉಚಿತವಾಗಿ ಲ್ಯಾಪ್ ಟಾಪ್(Laptop) ನೀಡುತ್ತಿದ್ದೂ, ಈಗಾಗ್ಲೇ ವಿಜಯಪುರ ಜಿಲ್ಲೆಯಲ್ಲಿ ಕೂಲಿ ಕಾರ್ಮಿಕರ ಮಕ್ಕಳಿಗೆ ಉಚಿತವಾಗಿ ಲ್ಯಾಪ್ ಟಾಪ್ ವಿತರಣೆ ಮಾಡಲಾಗಿದೆ. ಇನ್ನು ರಾಜ್ಯಾದ್ಯಂತ ಯೋಜನೆಯ ಲಾಭ ಪಡೆಯಬೇಕು ಅಂದ್ರೆ ಉಚಿತ ಲ್ಯಾಪ್ಟಾಪ್ ಅರ್ಜಿ ಸಲ್ಲಿಸಲು ಮಕ್ಕಳ ತಂದೆ ಅಥವಾ ತಾಯಿ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಕಾರ್ಡ್ ಹೊಂದಿರಬೇಕು, ಹಾಗೂ 31 ಮಾರ್ಚ್ 2023 ರ ಮೊದಲು ಕಾರ್ಮಿಕರ ಕಾರ್ಡ್ ಮಾಡಿಸಿರಬೇಕು. ಈ ಸಾಲಿನಲ್ಲಿ ಪ್ರಥಮ ಅಥವಾ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿರಬೇಕು. ಅಂತ ವಿದ್ಯಾರ್ಥಿಗಳು 10ನೇ ತರಗತಿಯಲಿ ಪಡೆದ ಅಂಕದ ಮೆರಿಟ್ ಆಧಾರದಲ್ಲಿ ಆಯಾ ತಾಲೂಕು ವಲಯದಲ್ಲಿ ಉಚಿತ ಲ್ಯಾಪ್ ಟಾಪ್ ಹಂಚಲಾಗುತ್ತದೆ. ಇನ್ನು ಫಲಾನುಭವಿಗಳ ಒಂದು ಮಗುವಿಗೆ ಮಾತ್ರ ಈ ಯೋಜನೆಯ ಲಾಭ ಸಿಗಲಿದೆ.

ಇದರ ಜೊತೆಗೆ ನಿಗದಿತ ಅರ್ಜಿ ನಮೂನೆ ಭರ್ತಿ ಮಾಡಬೇಕು. ಅಲ್ದೇ ನೋಂದಾಯಿತ ಕಾರ್ಮಿಕ ಇಲಾಖೆಯ ಗುರುತಿನ ಚೀಟಿ
ಕಾರ್ಮಿಕನ ಹಾಗೂ ವಿದ್ಯಾರ್ಥಿಯ ಆಧಾರ ಕಾರ್ಡ್, ಪಿಯುಸಿ ವ್ಯಾಸಂಗ ಮಾಡುತ್ತಿರುವ ಕಾಲೇಜಿನ ಧ್ರಡೀಕರಣ ವ್ಯಾಸಂಗ ಪ್ರಮಾಣ ಪತ್ರವನ್ನ ಕಾರ್ಮಿಕ ಇಲಾಖೆಗೆ ನೀಡಿ ಅರ್ಜಿ ಸಲ್ಲಿಸಬೇಕು. ಹೌದು ಅರ್ಹ ಕಾರ್ಮಿಕರ ಮಕ್ಕಳಿಗೆ ಅರ್ಜಿ ಸಲ್ಲಿಸಲು ಆಯಾ ತಾಲೂಕು ಕಟ್ಟಡ ಕಾರ್ಮಿಕರ ಇಲಾಖೆಯ ಕಚೇರಿಯಲ್ಲಿ ಅರ್ಜಿ ನಮೂನೆಯನ್ನು ಪಡೆದು ಅಲ್ಲಿ ಕೇಳಲಾಗಿರುವ ದಾಖಲೆಗಳೊಂದಿಗೆ ಅರ್ಜಿ ಭರ್ತಿ ಮಾಡಿ ತಾಲೂಕು ಕಾರ್ಮಿಕ ನಿರೀಕ್ಷಕರ ಕಚೇರಿಯಲ್ಲಿ ಸಲ್ಲಿಸಬಹುದಾಗಿದೆ. ಇನ್ನು ಜಿಲ್ಲಾವಾರು ಲ್ಯಾಪ್ ಟಾಪ್ ವಿತರಣೆ ಮಾಡೋದ್ರಿಂದ ಯಾವ ಜಿಲ್ಲೆಗೆ ಯಾವ ಸಮಯದಲ್ಲಿ ದಿನಾಂಕ ಮಾಡಿರುತ್ತಾರೆ ಅನ್ನೋದು ನಿಗಾಧಿ ಆಗಿರೋದಿಲ್ಲ ಸಂಬಂಧಪಟ್ಟ ಕಾರ್ಮಿಕ ಇಲಾಖೆಗೆ ಹೋಗಿ ಕಾರ್ಮಿಕ ನೀರಿಕ್ಷಣ ಅಧಿಕಾರಿಗಳನ್ನ ಸಂಪರ್ಕಿಸಬೇಕು. ನಂತರ ನಿಗಾಧಿಪಡಿಸಿದ ದಿನಾಂಕದೊಂದು ಅರ್ಜಿ ಸಲ್ಲಿಸಬೇಕು.

ಇದನ್ನೂ ಓದಿ: CIBIL Score ಅಥವಾ ಯಾವುದೇ ದಾಖಲೆಗಳು ಇಲ್ಲದೆ ಸುಲಭವಾಗಿ ಸಾಲ ಪಡೆಯಬಹುದು

ಇದನ್ನೂ ಓದಿ: ಮೆಟ್ರಿಕ್ ನಂತರದ ವಿದ್ಯಾರ್ಥಿವೇತನ ಅರ್ಜಿ ಪ್ರಾರಂಭ; ಅರ್ಜಿ ಸಲ್ಲಿಸುವುದು ಹೇಗೆ? ಕೊನೆಯ ದಿನಾಂಕ

ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram