ನಮ್ಮ ರಾಜ್ಯದಲ್ಲಿ ಕಟ್ಟಡಗಳು, ಸೇತುವೆಗಳು ಅಥವಾ ರಸ್ತೆಬದಿಗಳ ನಿರ್ಮಾಣದ ಪ್ರದೇಶಗಳಲ್ಲಿ ಸಣ್ಣ ಮಕ್ಕಳು ತಮ್ಮ ಹೆತ್ತವರೊಂದಿಗೆ ಕೆಲಸ ಮಾಡುವುದನ್ನು ನಾವು ಅನೇಕ ಬಾರಿ ನೋಡಿರುತ್ತೇವೆ, ಅವರ ಅಧ್ಯಯನ ಅಥವಾ ಶಾಲೆಯ ಬಗ್ಗೆ ನೀವು ಅವರನ್ನು ಕೇಳಿದಾಗ ಅವರು ನಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸುವಷ್ಟು ಹಣವಿಲ್ಲ, ನಾವು ಗಳಿಸುವ ಎಲ್ಲವೂ ನಮ್ಮ ಊಟ ಬಟ್ಟೆಗೆ ಹೋಗುತ್ತದೆ ಅಂತ ಹೇಳುತ್ತಾರೆ. ಇದು ನಮ್ಮ ದೇಶದಲ್ಲಿ ಸರ್ವೇ ಸಾಮಾನ್ಯವಾಗಿಬಿಟ್ಟಿದೆ. ಹೌದು ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಗಳು ಕರ್ನಾಟಕ ಕಟ್ಟಡ ಕಾರ್ಮಿಕರ ಮಕ್ಕಳಿಗಾಗಿ ಸಾಕಷ್ಟು ಯೋಜನೆಗಳು ಆಗಾಗ್ಗೆ ಪ್ರೋತ್ಸಾಹ ಧನ ನೀಡೋದು ಸಾಮಗ್ರಿ ವಿತರಣೆ, ಹೀಗೆ ಸಾಕಷ್ಟು ಸಹಾಯ ಮಾಡುತ್ತಾ ಅವ್ರನ್ನ ವಿದ್ಯಾಭ್ಯಾಸದ ಕಡೆ ಗಮನ ಹರಿಸಿ ಓದಿನ ಮಹತ್ವದ ಬಗ್ಗೆ ತಿಳಿಸಿಕೊಡುತ್ತಿದೆ.
ಹೌದು ಇಂತ ಮಕ್ಕಳಿಗೆ ವಿದ್ಯಾರ್ಥಿವೇತನ ಮಾತ್ರವಲ್ಲದೆ ಅವರ ಉಜ್ವಲ ಭವಿಷ್ಯಕ್ಕೆ ಒಂದು ಹೆಜ್ಜೆ ಮತ್ತು ಉತ್ತಮ ಜೀವನಶೈಲಿಯನ್ನು ಒದಗಿಸವ ನಿಟ್ಟಿನಲ್ಲಿ ಈಗ ಕಟ್ಟಡ ಕಾರ್ಮಿಕರ ಮಕ್ಕಳಿಗೆ ಆರ್ಥಿಕ ನೆರವು ದೊರೆಯಲಿದೆ. ಕಲಿಯಲು ಬಯಸುವ ಮಕ್ಕಳು ಈ ಅವಕಾಶವನ್ನು ಪಡೆದುಕೊಳ್ಳಲು ಮತ್ತು ಅವರ ಕನಸನ್ನು ನನಸಾಗಿಸಲು ಕರ್ನಾಟಕ ಕಟ್ಟಡ ಕಾರ್ಮಿಕರ ಮಕ್ಕಳ ಕರ್ನಾಟಕ ಕಾರ್ಮಿಕ ಶೈಕ್ಷಣಿಕ ನೆರವು 2023-24ನೇ ಸಾಲಿಗೆ ಶೈಕ್ಷಣಿಕ ಪ್ರೋತ್ಸಾಹ ಧನ ಸಹಾಯಕ್ಕಾಗಿ ಆನ್‌ಲೈನ್ ಮುಖಾಂತರ ಅರ್ಜಿಯನ್ನು ಆಹ್ವಾನಿಸಲಾಗಿದೆ. ಹೀಗಾಗಿ ಅಧಿಕೃತ ವೆಬ್ಸೈಟ್ನಲ್ಲಿ ಅರ್ಜಿ ಸಲ್ಲಿಸಬಹುದು. ಇನ್ನು ಕರ್ನಾಟಕ ಕಾರ್ಮಿಕ ಕಲ್ಯಾಣ ಮಂಡಳಿಯು ಈ ವಿದ್ಯಾರ್ಥಿವೇತನ ಕಾರ್ಯಕ್ರಮವನ್ನು ಆಯೋಜಿಸುವ ಜವಾಬ್ದಾರಿಯನ್ನು ಹೊಂದಿದ್ದು ಯಾವುದೇ ಅರ್ಹ ವಿದ್ಯಾರ್ಥಿ ಈ ಪ್ರಶಸ್ತಿಗೆ ಅರ್ಜಿ ಸಲ್ಲಿಸಬಹುದು ಮತ್ತು ಅದರಿಂದ ಲಾಭ ಪಡೆಯಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram
ಯಾವ ತರಗತಿ ವಿದ್ಯಾರ್ಥಿಗಳಿಗೆ ಎಷ್ಟು ಪ್ರೋತ್ಸಾಹ ಧನ ಸಿಗುತ್ತದೆ
ಕರ್ನಾಟಕ ಕಾರ್ಮಿಕ ಶೈಕ್ಷಣಿಕ ನೆರವು 2023-24ನೇ ಸಾಲಿಗೆ ಶೈಕ್ಷಣಿಕ ಪ್ರೋತ್ಸಾಹ ಧನ ಸಹಾಯಕ್ಕಾಗಿ ಆನ್‌ಲೈನ್ ಮುಖಾಂತರ ಅರ್ಜಿಯನ್ನು ಆಹ್ವಾನಿಸಲಾಗಿದೆ. ಅಧಿಕೃತ ವೆಬ್ಸೈಟ್ನಲ್ಲಿ ಅರ್ಜಿ ಸಲ್ಲಿಸಬಹುದು. ಕರ್ನಾಟಕ ಕಾರ್ಮಿಕ ಕಲ್ಯಾಣ ಮಂಡಳಿಯು ಈ ವಿದ್ಯಾರ್ಥಿವೇತನ ಕಾರ್ಯಕ್ರಮವನ್ನು ಆಯೋಜಿಸುವ ಜವಾಬ್ದಾರಿಯನ್ನು ಹೊಂದಿದೆ. ಯಾವುದೇ ಅರ್ಹ ವಿದ್ಯಾರ್ಥಿ ಈ ಪ್ರಶಸ್ತಿಗೆ ಅರ್ಜಿ ಸಲ್ಲಿಸಬಹುದು ಮತ್ತು ಅದರಿಂದ ಲಾಭ ಪಡೆಯಬಹುದಾಗಿದೆ. ಶೈಕ್ಷಣಿಕ ಪ್ರೋತ್ಸಾಹ ಧನ ಸಹಾಯ, 6,000 ರಿಂದ ರೂ.20,000 ವರೆಗೆ ಸಿಗಲಿದ್ದು, ಪ್ರೌಢಶಾಲೆ, ಪಿಯುಸಿ/ಡಿಪ್ಲೊಮಾ/ಐಟಿಐ, ಪದವಿ, ಸ್ನಾತಕೋತ್ತರ ಪದವಿ, ಇಂಜಿನೀಯರಿಂಗ್/ವೈದ್ಯಕೀಯ ಓದುತ್ತಿರುವ ವಿದ್ಯಾರ್ಥಿಗಳು ಸಹಾಯ ಧನ ಪಡೆಯಲು ಅರ್ಜಿ ಸಲ್ಲಿಸಬಹುದು.
ಇನ್ನು ಕರ್ನಾಟಕದಲ್ಲಿ ವಾಸಿಸುವ ಕಾರ್ಮಿಕರ ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ಒದಗಿಸಲು, ಸಂಘವು ವಿದ್ಯಾರ್ಥಿವೇತನ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಿದೆ. ಶೈಕ್ಷಣಿಕ ವಿದ್ಯಾರ್ಥಿವೇತನ ಬಯಸುವ ಕಾರ್ಮಿಕರ ಮಕ್ಕಳು ಕರ್ನಾಟಕ ವೆಲ್ಫೇರ್ ಬೋರ್ಡ್ ಎಜುಕೇಶನ್ ಸೊಸೈಟಿಗೆ ಅರ್ಜಿಗಳನ್ನು ಸಲ್ಲಿಸಲು ಆಹ್ವಾನಿಸಲಾಗಿದೆ. ಕರ್ನಾಟಕ ಕಾರ್ಮಿಕ ಕಲ್ಯಾಣ ನಿಧಿಯ ಶೈಕ್ಷಣಿಕ ಬೆಂಬಲ ಕಾರ್ಯಕ್ರಮಕ್ಕೆ ಅರ್ಜಿ ಸಲ್ಲಿಸಲು ಆಸಕ್ತಿ ಹೊಂದಿರುವ ವಿದ್ಯಾರ್ಥಿಗಳು ಸೈಟ್ನ ಅಧಿಕೃತ ಪುಟಕ್ಕೆ ಹೋಗುವ ಮೂಲಕ ಅರ್ಜಿ ಸಲ್ಲಿಸಬಹುದು.
ಹೌದು ಕರ್ನಾಟಕ ಕಾರ್ಮಿಕ ಕಲ್ಯಾಣ ಮಂಡಳಿಯ ಅಧಿಕೃತ ವೆಬ್ಸೈಟ್ https://klwbapps.karnataka.gov.in/ ಹೋಗುವ ಮೂಲಕ ನೀವು ಅರ್ಜಿ ಸಲ್ಲಿಸಬಹುದು. ಇನ್ನು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 31-01-2024 ಆಗಿದೆ. ಕಾರ್ಮಿಕ ಕಲ್ಯಾಣ ನೆರವು ವಿದ್ಯಾರ್ಥಿವೇತನ 2024 ಗೆ ಅಗತ್ಯವಿರುವ ದಾಖಲೆಗಳು ಆನ್ ಲೈನ್ ಅರ್ಜಿ ನಮೂನೆಯನ್ನು ಸಲ್ಲಿಸುವಾಗ, ಕರ್ನಾಟಕ ಕಾರ್ಮಿಕ ಕಲ್ಯಾಣ ಮಂಡಳಿ ಮತ್ತು ಕಾರ್ಮಿಕ ಇಲಾಖೆ ವಿದ್ಯಾರ್ಥಿಗಳು ದಾಖಲೆಗಳನ್ನು ಸಲ್ಲಿಸುವಂತೆ ವಿನಂತಿಸಿದೆ.
- ಹೀಗಾಗಿ ನಿಮ್ಮ ಇತ್ತೀಚಿನ ಪಾಸ್ ಪೋರ್ಟ್ ಗಾತ್ರದ ಫೋಟೋ
- ಹಿಂದಿನ ಅರ್ಹತಾ ಅಂಕಪಟ್ಟಿ
- ಆದಾಯ ಪ್ರಮಾಣ ಪತ್ರ
- ಜಾತಿ ಪ್ರಮಾಣ ಪತ್ರ, ಶುಲ್ಕ ಸ್ವೀಕೃತಿ
- ಆಧಾರ್ ಕಾರ್ಡ್
- ವಸತಿ ಪ್ರಮಾಣಪತ್ರ, ಬ್ಯಾಂಕ್ ಪಾಸ್ ಬುಕ್
- ಕಾರ್ಮಿಕ ಕಾರ್ಡ್ ಮತ್ತು ಸ್ವಯಂ ಘೋಷಣೆ ನಮೂನೆ ಸಲ್ಲಿಸಬೇಕಾಗುತ್ತದೆ
ಇನ್ನು ಹೆಚ್ಚಿನ ಮಾಹಿತಿಗಾಗಿ ಕರ್ನಾಟಕ ಕಾರ್ಮಿಕ ಕಲ್ಯಾಣ ಮಂಡಳಿ, ಕಾರ್ಮಿಕ ಕಲ್ಯಾಣ ಭವನ, ನಂ.48, 1ನೇ & 2ನೇ ಮಹಡಿ, ಮತ್ತೀಕೆರೆ ಮುಖ್ಯರಸ್ತೆ, ಯಶವಂತಪುರ, ಬೆಂಗಳೂರು-560022 ಇಲ್ಲಿ ಖುದ್ದಾಗಿ ವಿಚಾರಿಸಬಹುದು.
ಇದನ್ನೂ ಓದಿ: ಕಿಸಾನ್ ವಿಕಾಸ್ ಯೋಜನೆಯಡಿ ಹೂಡಿಕೆ ಮಾಡಿ; ಅಂಚೆ ಕಚೇರಿ ಮಹತ್ವದ ಯೋಜನೆಯಿಂದ ಉತ್ತಮ ಲಾಭ ಪಡಿಯಿರಿ
ಇದನ್ನೂ ಓದಿ: ಇನ್ನು ಮುಂದೆ ಬಗರ್ ಹುಕುಂ ಆಪ್ ನಿಂದಲೇ ಅರ್ಜಿಯನ್ನು ಸಲ್ಲಿಸಬಹುದು. ಮಾಹಿತಿ ನೀಡಿದ ಸಚಿವ ಕೃಷ್ಣಭೈರೇಗೌಡ.