ಬಡವರ ಮಕ್ಕಳ ವಿಧ್ಯಾಭ್ಯಾಸಕ್ಕೆ ಎಂದೇ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಹೆಚ್ಚಿನ ಮೊತ್ತದ ಅನುದಾನ ಬಿಡುಗಡೆ ಮಾಡುತ್ತದೆ. ಹಲವಾರು ಬಗೆಯ ಸ್ಕಾಲರ್ಶಿಪ್ ಯೋಜನೆಗಳು ಈಗಾಗಲೇ ಜಾರಿಯಲ್ಲಿ ಇದೆ . ಈಗಾಗಲೇ ಜಾತಿಯ ಆಧಾರದ ಮೇಲೆ, ಅಂಕಗಳ ಆಧಾರದ ಮೇಲೆ ಹಾಗೂ ವಿಕಲಚೇತನರಿಗೆ ಎಂದು ಹಲವು ಬಗೆಯ scolarship ಸರಕಾರದಿಂದ ಸಿಗುತ್ತವೆ. ಬಡವರಿಗೆ ಹಾಗೂ ಹಿಂದುಳಿದ ವರ್ಗದವರಿಗೆ ಈಗಾಗಲೇ ರಾಜ್ಯ ಸರಕಾರ ಸ್ಟೇಟಸ್ ಸ್ಕಾಲರ್ಶಿಪ್ ಪೋರ್ಟಲ್(status scholarship portal) ಮೂಲಕ ವಿಧ್ಯಾರ್ಥಿಗಳಿಗೆ ಸ್ಕಾಲರ್ಶಿಪ್ ಅನ್ನು ನೀಡುತ್ತಿದೆ. ಈಗ ಹೊಸದಾಗಿ ರಾಜ್ಯ ಕಾರ್ಮಿಕ ಕಲ್ಯಾಣ ಇಲಾಖೆಯಿಂದ ಕಾರ್ಮಿಕರ ಮಕ್ಕಳಿಗೆ ಲೇಬರ್ ಕಾರ್ಡ್ ಸ್ಕಾಲರ್ಶಿಪ್ ನೀಡಲು ಮುಂದಾಗಿದೆ.
ಏನಿದು ಲೇಬರ್ ಕಾರ್ಡ್ ಸ್ಕಾಲರ್ಶಿಪ್ ?: ಕರ್ನಾಟಕ ಕಾರ್ಮಿಕ ಕಲ್ಯಾಣ ಮಂಡಳಿಯಿಂದ ರಾಜ್ಯದ ಕಾರ್ಮಿಕರ ಮಕ್ಕಳು ಮತ್ತು ಹಿಂದುಳಿದ ವರ್ಗದ ಮಕ್ಕಳಿಗೆ ರಾಜ್ಯ ಸರ್ಕಾರ ನೀಡುವ ಸ್ಕಾಲರ್ಶಿಪ್ ಇದಾಗಿದೆ. ಹೈಸ್ಕೂಲ್, ಪಿಯುಸಿ, ಡಿಗ್ರೀ , ಡಿಪ್ಲೊಮಾ ಓದುತ್ತಿರುವ ವಿದ್ಯಾರ್ಥಿಗಳು ಈ ಸ್ಕಾಲರ್ಶಿಪ್ ಗೆ ಅರ್ಜಿ(apply) ಮಾಡಬಹುದು. ಲೇಬರ್ ಕಾರ್ಡ್ ಹೊಂದಿರುವವರ ಮಕ್ಕಳು ಈಗಲೇ ಅರ್ಜಿ ಸಲ್ಲಿಸಬಹುದು. ಇಲ್ಲ ಎಂದರೆ ಕಾರ್ಮಿಕ ಎಂದು ಲೇಬರ್ ಕಾರ್ಡ್ ಮಾಡಿಸಿಕೊಳ್ಳಬೇಕು. ಲೇಬರ್ ಕಾರ್ಡ್ ಮಾಡಿಸಲು ಯಾವುದೇ ಶುಲ್ಕವಿಲ್ಲ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಅಪ್ಲೈ (apply) ಮಾಡಲು ಬೇಕಾಗಿರುವ ಅಗತ್ಯ ದಾಖಲಾತಿಗಳು:-
- ಆಧಾರ್ ಕಾರ್ಡ್ ಜೆರಾಕ್ಸ್ ಮತ್ತು ಬ್ಯಾಂಕ್ ಖಾತೆಯ ವಿವರ.
- ಕಾರ್ಮಿಕರ ಮಕ್ಕಳು ಎಂಬುದಕ್ಕೆ ಲೇಬರ್ ಕಾರ್ಡ್.
- ರೇಶನ್ ಕಾರ್ಡ್ ಜೆರಾಕ್ಸ್.
- ಎಜುಕೇಷನ್ ಸರ್ಟಿಫಿಕೇಟ್.
- ಆದಾಯ ಪ್ರಮಾಣ ಪತ್ರದ ಜೆರಾಕ್ಸ್.
- ಜಾತಿ ಪ್ರಮಾಣ ಪತ್ರದ ಜೆರಾಕ್ಸ್.
- ಮೊಬೈಲ್ ಸಂಖ್ಯೆ.
ಅಪ್ಲೈ (apply) ಮಾಡುವ ವಿಧಾನ ಹೇಗೆ?
- ಕರ್ನಾಟಕ ಕಾರ್ಮಿಕ ಕಲ್ಯಾಣ ಮಂಡಳಿಯ ಅಧಿಕೃತ ವೆಬ್ಸೈಟ್ ಗೆ ಹೋಗಿ . ವೆಬ್ಸೈಟ್ ಅಡ್ರೆಸ್ ಹೀಗಿದೆ ಇಲ್ಲಿ ಕ್ಲಿಕ್ ಮಾಡಿ
- apply scolarship ಎಂಬುದನ್ನು ಆಯ್ಕೆ ಮಾಡಿ.
- ಸ್ಟೂಡೆಂಟ್ ಲಾಗಿನ್ ಐಡಿ (student login id) ಕೇಳುತ್ತದೆ. ಅಲ್ಲಿ ನಿಮ್ಮ ಮೊಬೈಲ್ ಸಂಖ್ಯೆ ಅಥವಾ ಇಮೇಲ್(email) ವಿಳಾಸ ಹಾಕಿ ಮತ್ತು ಪಾಸ್ವರ್ಡ್ ಹಾಕಿ.
- login ಆದ ನಂತರ ನಿಮಗೆ application ಸಿಗುತ್ತದೆ.
- ನಿಮ್ಮ ಹೆಸರು ನಮೂದಿಸಿ (ಆಧಾರ್ ಕಾರ್ಡ್ ನಲ್ಲಿ ಇರುವಂತೆ)
- ನಿಮ್ಮ ಮೊಬೈಲ್ ಸಂಖ್ಯೆ ನಮೂದಿಸಿ. ಬಂದಿರುವ OTP ಹಾಕಿ next ಬಟನ್ ಕ್ಲಿಕ್ ಮಾಡಿ.
- ನಿಮ್ಮ ವಿಳಾಸ ಹಾಗೂ ಲಿಂಗ ನಮೂದಿಸಿ.
- ಆಧಾರ್ ಕಾರ್ಡ್ ನಂಬರ್ ಹಾಕಿ.
- ಕಾರ್ಮಿಕ ಕಾರ್ಡ್ ನಂಬರ್ ಹಾಕಿ.
- ನೀವು ಕಲಿಯುತ್ತಿರುವ ತರಗತಿಯ ಮಾಹಿತಿ ಹಾಕಬೇಕು.
- ಜಾತಿ ಮತ್ತು ಆದಾಯ ಪ್ರಮಾಣ ಪತ್ರಗಳನ್ನು ಸ್ಕ್ಯಾನ್ ಮಾಡಿ ಹಾಕಬೇಕು.
- ನಿಮ್ಮ ಎಜುಕೇಷನ್ ಸರ್ಟಿಫಿಕೇಟ್ ಸ್ಕ್ಯಾನ್ ಮಾಡಿ ಹಾಕಿ.
ಇಲ್ಲ ಎಂದರೆ ನಿಮ್ಮ ಹತ್ತಿರದ ಗ್ರಾಮ್ ಒನ್ ಕೇಂದ್ರಕ್ಕೆ ನಿಮ್ಮ ಎಲ್ಲಾ ದಾಖಲೆಗಳನ್ನು ತೆಗೆದುಕೊಂಡು ಹೋಗಬೇಕು . ಅಲ್ಲಿ ನಿಮ್ಮ ಅರ್ಜಿ ಸಲ್ಲಿಸಬಹುದು. ನಿಮ್ಮ ಅಪ್ಲಿಕೇಷನ್ ಪರಿಶೀಲನೆ ಮಾಡಿ ನಿಮಗೆ ಹಣವನ್ನು ವರ್ಗಾವಣೆ ಮಾಡುತ್ತಾರೆ. ಇದೇ ರೀತಿಯ ಹೆಚ್ಚಿನ ಮಾಹಿತಿಗಾಗಿ ನಮ್ಮ ಟೆಲಿಗ್ರಾಂ ಚಾನಲ್ ಸೆರಲು ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಶೀಘ್ರದಲ್ಲೇ ಬಿಡುಗಡೆಯಾಗಲಿರುವ Oppo Reno 11F 5G ಹಲವು ವೈಶಿಷ್ಟ್ಯಗಳನ್ನು ಹೊತ್ತು ಬರುತ್ತಿದೆ.
ಇದನ್ನೂ ಓದಿ: ಪರ್ಸನಲ್ ಲೋನ್ ಬಡ್ಡಿಯ ದರ ಹೆಚ್ಚಾಗುವ ಸಾಧ್ಯತೆಯಿದೆ; RBI ನಿಯಮದಲ್ಲಿ ಬದಲಾವಣೆ