ಭಾರತದ ನೈರುತ್ಯ ಭಾಗದಲ್ಲಿ ಇರುವ ಕರ್ನಾಟಕ, ಸಾಂಸ್ಕೃತಿಕ ನಗರಿ ಮೈಸೂರು, ಅತಿ ಹೆಚ್ಚು ಐಟಿ ಕಂಪನಿಗಳ ಹೊಂದಿರುವ ಬೆಂಗಳೂರು, ಕಬ್ಬಿಗೆ ಹೆಸರು ವಾಸಿಯಾದ ಮಂಡ್ಯ, ಸುಂದರ ಪ್ರಕೃತಿಯ ಮಡಿಲಲ್ಲಿ ಮಿಂದೇಳುವ ಅನುಭವ ಕೊಡುವ ಮಲೆನಾಡು ಹೀಗೆ ಕರ್ನಾಟಕದ ಪ್ರತಿ ಜಿಲ್ಲೆಯಲ್ಲೂ ಒಂದೊಂದು ವೈಶಿಷ್ಟ್ಯ ಇದೆ. ಸಾಂಸ್ಕತಿಕ ಕಲೆಗಳು ಇಲ್ಲಿನ ಜನರ ಬದುಕಿನ ಜೀವಾಳ. ಭೂಪ್ರದೇಶದಲ್ಲಿ , ಸಂಸ್ಕೃತಿಯಲ್ಲಿ, ಬುದ್ಧಿವಂತಿಕೆಯಲ್ಲಿ, ವಾಸಿಸುವ ಜನರ ಸಂಖ್ಯೆಯಲ್ಲಿ ಹೀಗೆ ಒಂದೊಂದು ರಾಜ್ಯ ದೊಡ್ಡದಾಗಿದೆ. ಯಕ್ಷಗಾನ, ಕೋಲಾಟ, ಡೊಳ್ಳು ಕುಣಿತ, ವೀರಗಾಸೆ, ಹೀಗೆ ಅನೇಕ ಪ್ರಾಚೀನ ಕಲೆಗಳು ಇಂದಿಗೂ ಇಲ್ಲಿನ ಜನ ಪ್ರೀತಿಸುವ ಕಲೆಗಳು. ಕರ್ನಾಟಕದ ಅತಿ ಭೂಪ್ರದೇಶ ಹೊಂದಿರುವ ಜಿಲ್ಲೆ ಯಾವುದು ಅದರ ವೈಶಿಷ್ಟ್ಯಗಳೇನು ಎಂಬುದನ್ನು ತಿಳಿಯೋಣ ಆದರೆ ಅದಕ್ಕೂ ಮೊದಲು ಕರ್ನಾಟಕದ ವಿವಿಧ ಜಿಲ್ಲೆಗಳ ಬಗ್ಗೆ ಸ್ವಲ್ಪ ಮಾಹಿತಿಯನ್ನು ಪಡೆಯೋಣ..
ಕರ್ನಾಟಕದಲ್ಲಿ ಎಷ್ಟು ಜಿಲ್ಲೆಗಳಿವೆ?: ಕರ್ನಾಟಕದಲ್ಲಿ ಇರುವ ಜಿಲ್ಲೆಗಳ ಸಂಖ್ಯೆ 31. ಪ್ರತಿಯೊಂದೂ ಜಿಲ್ಲೆಯು ಸಹ ತನ್ನದೇ ಆದ ಸಂಸ್ಕೃತಿ ಮತ್ತು ಪರಂಪರೆಯನ್ನು ಹೊಂದಿದೆ. ದೇಶ ವಿದೇಶಗಳ ಜನರು ಉದ್ಯೋಗ ಅರಸಿ ಬರುವ ಬೆಂಗಳೂರು, ಸಂಸ್ಕೃತಿಯ ತವರು ಮೈಸೂರು ಐತಿಹಾಸಿಕ ಸ್ಥಳಗಳ ನಾಡು ಹಂಪಿ, ಸಹಜ ಸೌಂದರ್ಯ ಇರುವ ಮಲೆನಾಡು, ಸಕ್ಕರೆಯ ನಾಡು ಮಂಡ್ಯ, ಹೀಗೆ ಪ್ರತಿ ರಾಜ್ಯ ಒಂದೊಂದು ವೈಶಿಷ್ಟ್ಯ ಹೊಂದಿದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಜಿಲ್ಲೆಗಳ ಹೆಸರು:- ಬೆಂಗಳೂರು ನಗರ, ಬೆಳಗಾವಿ, ಬೀದರ್, ಚಾಮರಾಜನಗರ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಧಾರವಾಡ, ಕಲಬುರಗಿ, ಹಾವೇರಿ, ಕೋಲಾರ, ಮಂಡ್ಯ, ರಾಯಚೂರು, ಶಿವಮೊಗ್ಗ, ಉಡುಪಿ, ವಿಜಯನಗರ, ಉತ್ತರ ಕನ್ನಡ, ಯಾದಗಿರಿ, ತುಮಕೂರು, ರಾಮನಗರ, ಮೈಸೂರು, ಕೊಪ್ಪಳ, ಕೊಡಗು, ಹಾಸನ, ಗದಗ, ದಾವಣಗೆರೆ, ಚಿತ್ರದುರ್ಗ, ಚಿಕ್ಕಬಳ್ಳಾಪುರ, ವಿಜಯಪುರ, ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬಾಗಲಕೋಟೆ.
ಇದನ್ನೂ ಓದಿ: ಮಹಿಳೆಯರಿಗೆ ಸಿಹಿ ಸುದ್ದಿ .. ಆಧಾರ್ ಕಾರ್ಡ್ ರೇಷನ್ ಕಾರ್ಡ್ ಇದ್ದರೆ ಬಡ್ಡಿ ಇಲ್ಲದೆ 3 ಲಕ್ಷ ಸಾಲ ಸಿಗುತ್ತದೆ..
ಅತೀ ಹೆಚ್ಚು ಭೂ ಭಾಗವನ್ನು ಹೊಂದಿರುವ ಕರ್ನಾಟಕದ ಜಿಲ್ಲೆ ಯಾವುದು?
ವಿಸ್ತೀರ್ಣದಲ್ಲಿ ಕರ್ನಾಟಕದ ಅತಿ ದೊಡ್ಡ ಜಿಲ್ಲೆ ಬೆಳಗಾವಿ. ಉತ್ತರ ಕರ್ನಾಟಕದ ಭಾಗದಲ್ಲಿ ಬರುವ ಈ ಜಿಲ್ಲೆಯ ವಿಸ್ತೀರ್ಣ 13,400 ಚದರ ಕಿಲೋಮೀಟರ್. ಅತಿ ಹೆಚ್ಚು ಭೂ ಪ್ರದೇಶ ಹೊಂದಿರುವ ಜೊತೆಗೆ ಸುತ್ತಲೂ ಕಾಣುವ ಹಸಿರಿನ ವನಸಿರಿಯ ಬೆಟ್ಟಗಳು, ಫಲವತ್ತಾದ ಬಯಲು ಪ್ರದೇಶಗಳು ಮತ್ತು ಐತಿಹಾಸಿಕ ಶ್ರೀಮಂತಿಕೆಯನ್ನು ಈ ಜಿಲ್ಲೆ ಹೊಂದಿದೆ., ಈ ಜಿಲ್ಲೆಯು ತನ್ನ ನೈಸರ್ಗಿಕ ಸೌಂದರ್ಯ ಮತ್ತು ಸಾಂಸ್ಕೃತಿಕ ಪರಂಪರೆಯಿಂದ ಹೆಸರುವಾಸಿಯಾಗಿದೆ. ಇದೇ ರೀತಿಯ ಹೆಚ್ಚಿನ ಮಾಹಿತಿಗಾಗಿ ನಮ್ಮ ಟೆಲಿಗ್ರಾಂ ಚಾನಲ್ ಸೆರಲು ಇಲ್ಲಿ ಕ್ಲಿಕ್ ಮಾಡಿ
ಬೆಳಗಾವಿಯ ಬಗ್ಗೆ ಒಂದಿಷ್ಟು ಮಾಹಿತಿ:-
- ಇದು 12 ನೇ ಶತಮಾನದಲ್ಲಿ ಸ್ಥಾಪಿತವಾದ ನಗರ.
- ಸಮುದ್ರ ಮಟ್ಟದಿಂದ ಸರಿಸುಮಾರು 2,500 ಅಡಿ ಎತ್ತರದಲ್ಲಿದೆ.
- ಇಲ್ಲಿನ ಜನರು ಕನ್ನಡ, ಕೊಂಕಣಿ, ಮರಾಠಿ ಭಾಷೆಗಳನ್ನು ಮಾತನಾಡುತ್ತಾರೆ.
- 16 ನೇ ಶತಮಾನದ ಮಸೀದಿ, ಎರಡು ಜೈನ ದೇವಾಲಯಗಳು ಮತ್ತು ಮೂಲ ಕಂಟೋನ್ಮೆಂಟ್‌ನಲ್ಲಿ ಅಂಡಾಕಾರದ ಕಲ್ಲಿನ ಕೋಟೆ ಇಲ್ಲಿನ ಪ್ರೇಕ್ಷಣೀಯ ಸ್ಥಳಗಳು.
- ಇದು ರಾಷ್ಟೀಯ ಹೆದ್ದಾರಿಯ ವ್ಯಾಪಾರ ಕೇಂದ್ರವಾಗಿದೆ.
- ಹತ್ತಿ-ನೇಯ್ಗೆ, ಚರ್ಮ, ಜೇಡಿಮಣ್ಣು, ಸಾಬೂನು, ಕುಂಬಾರಿಕೆ ಮತ್ತು ಲೋಹದ ಪಾತ್ರೆಗಳ ತಯಾರಿಕೆ ಇಲ್ಲಿನ ಜನರ ಉದ್ಯೋಗ.
- ಶೈಕ್ಷಣಿಕವಾಗಿ ಬೆಳೆದಿರುವ ಜಿಲ್ಲೆ.
- ಪುಣೆ ಮತ್ತು ಬೆಂಗಳೂರಿಗೆ ರೈಲು ಸಂಪರ್ಕ ಹೊಂದಿದೆ.
- ಜವಾಹರಲಾಲ್ ನೆಹರು ವೈದ್ಯಕೀಯ ಕಾಲೇಜು ಈ ಜಿಲ್ಲೆಯಲ್ಲಿ ಶಿಕ್ಷಿಕವಾಗಿ ಹೇಗಿದೆ ಎಂಬುದಕ್ಕೆ ಸಾಕ್ಷಿ.
- 2011 ರಲ್ಲಿ, ಬೆಳಗಾವಿ ಜಿಲ್ಲೆ ಜನಸಂಖ್ಯೆಯು 4,779,661.
ಇದನ್ನೂ ಓದಿ: ಅನೇಕ ವೈಶಿಷ್ಟ್ಯತೆಗಳನ್ನು ಹೊಂದಿದ Citroen C3 Aircross ಬುಕಿಂಗ್ ಗೆ ರೆಡಿ, ಕಾರು ಅಂದ್ರೆ ಹೀಗಿರಬೇಕು