ನಿಂಬೆಹಣ್ಣಿನ ರಸವನ್ನು ಸೇವಿಸುವುದರಿಂದ ಆರೋಗ್ಯಕ್ಕೆ ಬಹಳ ಒಳ್ಳೆಯದು !

Lemon Juice Benefits

ನಿಂಬೆ ಹಣ್ಣು ಯಾರಿಗೆ ತಾನೆ ಗೊತ್ತಿಲ್ಲ? ಪ್ರತಿ ನಿತ್ಯ ಅಡುಗೆಗೆ ಸಾಮಾನ್ಯವಾಗಿ ಬಳಸುವ ನಿಂಬೆಹಣ್ಣು ಎಲ್ಲರಿಗೂ ಗೊತ್ತು. ಆದರೆ ಇದು ರುಚಿಗೆ ಅಲ್ಲದೆ ನಮ್ಮ ದೇಹದ ಆರೋಗ್ಯಕ್ಕೂ ಸಹ ಬಹಳ ಒಳ್ಳೆಯದು. ಅದರಲ್ಲೂ ನಿಂಬೆಹಣ್ಣು ಜ್ಯೂಸ್ ಅಂತೂ ಬಹಳ ರುಚಿಯಾಗಿದೆ ಇರುತ್ತದೆ. ನಾವು ನಿತ್ಯ ಬಳಸುವ ನಿಂಬೆಹಣ್ಣು ನಮ್ಮ ಆರೋಗ್ಯಕ್ಕೆ ಏಷ್ಟು ಒಳ್ಳೆಯದು ಎಂದು ತಿಳಿಯೋಣ.

WhatsApp Group Join Now
Telegram Group Join Now

ನಿಂಬೆಹಣ್ಣಿನಲ್ಲಿ ಯಾವ ವಿಟಮಿನ್ ಇದೆ?

ಬೇಸಿಗೆ ಬಂದರೆ ನಮಗೆ ನಿಂಬೆ ಹಣ್ಣಿನ ಶರಬತ್ತು ಅಥವಾ ಪಾನೀಯಗಳನ್ನು ಕುಡಿಯಬೇಕು ಎಂದು ಅನ್ನಿಸುತ್ತದೆ. ಬೇಸಿಗೆಯ ಬಿಸಿಲಿಗೆ ನಮ್ಮ ದೇಹದ ಆಯಾಸವನ್ನು ಕಡಿಮೆ ಮಾಡಲು ನಿಂಬೆ ಹಣ್ಣು ಬಹಳ ಉಪಯೋಗ ಆಗುತ್ತದೆ. ನಿಂಬೆಹಣ್ಣು ವಿಟಮಿನ್ ಸಿ, ಸಿಟ್ರಿಕ್ ಆಮ್ಲ ಒಳಗೊಂಡಿದೆ. ಇದು ಆರೋಗ್ಯಕ್ಕೆ ಬಹಳ ಒಳ್ಳೆಯದು. ನಿಂಬೆಹಣ್ಣು ನಿತ್ಯ ಸೇವಿಸುವುದರಿಂದ ಸಹ ನಮ್ಮ ಆರೋಗ್ಯಕ್ಕೆ ಬಹಳ ಉಪಯೋಗಗಳು ಇವೆ.

ನಿಂಬೆ ಹಣ್ಣು ನಮ್ಮ ದೇಹದ ಅನೇಕ ಕಾಯಿಲೆಗಳಿಗೆ ಮನೆ ಮದ್ದಿನ ಗುಣ ಹೊಂದಿದೆ. ಅನೇಕ ಹಳ್ಳಿ ಔಷಧಿಗಳಿಗೆ ನಿಂಬೆ ರಸವನ್ನು ಬಳಸುತ್ತಾರೆ. ಕೆಲವು ಕಜ್ಜಿ, ಹೊಟ್ಟೆ ನೋವು ಆದಾಗ ಹಳ್ಳಿ ಜನರು ರೋಗ ನಿರೋಧಕ ಬೇರಿನ ಜೊತೆಗೆ ನಿಂಬೆ ರಸವನ್ನು ಸೇರಿಸಿ ಕೊಡುತ್ತಾರೆ. ನಿಂಬೆ ಹಣ್ಣು ಸಣ್ಣ ಪುಟ್ಟ ಖಾಯಿಲೆಗಳಿಗೆ ಮಾತ್ರವಲ್ಲದೆ ಅನೇಕೆ ದೊಡ್ಡ ರೋಗಗಳಿಗೆ ರಾಮಬಾಣವಾಗಿದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ನಿಂಬೆ ಹಣ್ಣಿನ ಉಪಯೋಗ ಆರೋಗ್ಯಕ್ಕೆ ಏಷ್ಟು ಒಳ್ಳೆಯದು?

  1. ಮೂತ್ರಪಿಂಡದ ಕಲ್ಲು ಕರಗುತ್ತದೆ:- ನಿಂಬೆಹಣ್ಣಿನಲ್ಲಿರುವ ಸಿಟ್ರೇಟ್ ಎಂಬ ರಾಸಾಯನಿಕವು ಮೂತ್ರದಲ್ಲಿ ಕ್ಯಾಲ್ಸಿಯಂ ಸಂಯೋಜನೆಯನ್ನು ಕಲ್ಲುಗಳಾಗುವುದನ್ನು ತಡೆಯುತ್ತದೆ. ಮೂತ್ರಪಿಂಡದಲ್ಲಿ ಕಲ್ಲು ಆದರೆ ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದು ಲೋಟ ನೀರಿನಲ್ಲಿ ಒಂದು ನಿಂಬೆಹಣ್ಣಿನ ರಸ ಬೆರೆಸಿ ಕುಡಿಯಬೇಕು ಇಲ್ಲವೇ ನಿಂಬೆ ಹಣ್ಣಿನ ಸಿಪ್ಪೆ ಒಣಗಿಸಿ ಪುಡಿ ಮಾಡಿ ಕುಡಿಯಬೇಕು.
  2. ಕೊಲೆಸ್ಟ್ರಾಲ್ ಮತ್ತು ಬಿಪಿ ಕಡಿಮೆ ಮಾಡುತ್ತದೆ:- ನಮ್ಮ ದೇಹದಲ್ಲಿ ಹೆಚ್ಚು ಇರುವ ಕೊಲೆಸ್ಟ್ರಾಲ್ ಪ್ರಮಾಣವನ್ನು ಕಡಿಮೆ ಮಾಡಲು ನಿಂಬೆಹಣ್ಣಿನ ಬಳಕೆ ಉತ್ತಮವಾಗಿದೆ.
  3. ಹೃದ್ರೋಗ ಸಮಸ್ಯೆ:- ನಿಂಬೆಹಣ್ಣಿನಲ್ಲಿ ಸಿಟ್ರಿಕ್ ಆಮ್ಲ ಪ್ರಮಾಣ ಹೆಚ್ಚಾಗಿರುವುದರಿಂದ ನಮ್ಮ ದೇಹದ ಹೃದಯ ಸಂಬಂಧಿ ಖಾಯಿಲೆಗಳಿಗೆ ಉತ್ತಮ ಔಷಧಿ ಆಗಿದೆ.
  4. ದೇಹದ ತೂಕ ಕಡಿಮೆ ಮಾಡಲು :- ದೇಹದ ಬೊಜ್ಜು ಕಡಿಮೆ ಮಾಡಲು ಅಥವಾ ತೂಕ ಕಡಿಮೆ ಮಾಡಲು ಡೈಯಟ್ ಮಾಡುತ್ತಿರುವ ಯುವಕರಿಗೆ ನಿಂಬೆಹಣ್ಣಿನ ಬಳಕೆ ಮಾಡಿದರೆ ಆರಾಮದಾಯಕವವಾಗಿ ತೂಕವನ್ನು ಇಳಿಸಬಹುದು.
  5. ರಕ್ತ ಹೀನತೆಗೆ ಮನೆಮದ್ದು:- ಯಾರಾದರೂ ರಕ್ತ ಹೀನತೆಯಿಂದ ಬಳಲುತ್ತಿದ್ದರೆ ಅವರು ಹೆಚ್ಚಾಗಿ ನಿಂಬೆಹಣ್ಣು ಸೇವಿಸುವುದು ಉತ್ತಮ ನಿಂಬೆಹಣ್ಣಿನಲ್ಲಿ ಇರುವ ಸಿಟ್ರಿಕ್ ಆಮ್ಲ ಗುಣವು ದೇಹದಲ್ಲಿ ರಕ್ತದ ಪ್ರಮಾಣವನ್ನು ಹೆಚ್ಚು ಮಾಡುವಲ್ಲಿ ಸಹಾಯಕವಾಗಿದೆ. ಇದರಿಂದ ರಕ್ತಹೀನತೆಯಿಂದ ಅಸ್ವಸ್ಥರಾಗಿ ಇರುವವರಿಗೆ ಬಹಳ ಒಳ್ಳೆಯದು.
  6. ಜೀರ್ಣಶಕ್ತಿ ವೃದ್ಧಿಸುತ್ತದೆ:- ಜೀರ್ಣಕ್ರಿಯೆ ಸರಿಯಾಗಿ ಆಗದೆ ಇದ್ದರೆ ನಿಂಬೆಹಣ್ಣು ಬಹಳ ಒಳ್ಳೆಯ ಮನೆಮದ್ದು. ಜೀರ್ಣಾಂಗ ವ್ಯವಸ್ಥೆಯನ್ನು ಉತ್ತಮವಾಗಿ ಇರಿಸಲು ನಿಂಬೆಹಣ್ಣು ಸಹಾಯ ಮಾಡುತ್ತದೆ. ಮತ್ತು ಮಲಬದ್ಧತೆ ನಿವಾರಣೆಗೆ ಸಹ ನಿಂಬೆ ರಸವನ್ನು ಬಳಸುವುದು ಉತ್ತಮ.
  7. ಸಾಂಕ್ರಾಮಿಕ ರೋಗ ತಡೆಗಟ್ಟುತ್ತದೆ:- ನಿಂಬೆ ಹಣ್ಣಿನಲ್ಲಿ ಇರುವ ಅಮ್ಲಿಯ ಗುಣದಿಂದ ಸಾಂಕ್ರಾಮಿಕ ರೋಗಗಳು ಬಾರದಂತೆ ತಡೆಗಟ್ಟಬಹುದು. ಸಾಂಕ್ರಾಮಿಕವಾಗಿ ಹರಡುವ ಜ್ವರ, ಕಜ್ಜಿಗಳು ಬರದಂತೆ ತಡೆಯಲು ಉತ್ತಮ ರೋಗ ನಿರೋಧಕವಾಗಿದೆ.

ಇದನ್ನೂ ಓದಿ: ಯುಪಿಐ ಪಿನ್ ಮರೆತು ಹೋದರೆ ಚಿಂತೆ ಬೇಡ! ಬದಲಾಯಿಸಲು ಇಲ್ಲಿದೆ ಸುಲಭ ವಿಧಾನಗಳು