LIC AAO ಅಧಿಸೂಚನೆಗೆ ಕಾಯುತ್ತಿರುವ ಅಭ್ಯರ್ಥಿಗಳಿಗೆ ಇದು ಸಿಹಿ ಸುದ್ದಿ. ಚಾರ್ಟರ್ಡ್ ಅಕೌಂಟೆಂಟ್, ಆಕ್ಚುರಿಯಲ್, ಲೀಗಲ್, ರಾಜಭಾಷಾ ಮತ್ತು ಐಟಿ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗುವುದು. ಆಸಕ್ತರು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಹುದ್ದೆಯ ಪೂರ್ಣ ಮಾಹಿತಿ ಈ ಲೇಖನದಲ್ಲಿ ಲಭ್ಯವಿದೆ.
ಹುದ್ದೆಯ ಬಗ್ಗೆ ಮಾಹಿತಿ :- ಎಲ್ಐಸಿ ಸಹಾಯಕ ಆಡಳಿತ ಅಧಿಕಾರಿ (AAO) ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಿದ್ದು, ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ಭಾರತೀಯ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ ಯಾವುದೇ ವಿಷಯದಲ್ಲಿ ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸಿರಬೇಕು.
ವಯಸ್ಸಿನ ಮಿತಿ :- ಹುದ್ದೆಗೆ ಅರ್ಜಿ ಸಲ್ಲಿಸಲು ಕನಿಷ್ಠ ವಯಸ್ಸು 21 ಹಾಗೂ ಗರಿಷ್ಠ ವಯಸ್ಸು 30. ಈ ಹುದ್ದೆಗೆ ಸರ್ಕಾರಿ ಮಿಸಲಾತಿ ನಿಯಮಗಳ ಪ್ರಕಾರ ಕೆಲವು ವರ್ಗಗಳಿಗೆ ವಯೋಮಿತಿ ಸಡಿಲಿಕೆ ಇದೆ.
ಹುದ್ದೆಯ ಸಂಬಳ :- ಆಯ್ಕೆ ಆದ ಅಭ್ಯರ್ಥಿಗಳ ತಿಂಗಳ starting salary 53,600 ರೂಪಾಯಿ ಜೊತೆಗೆ ಭತ್ಯೆಗಳು ಎಲ್ಲಾ ಸೇರಿ ಅಂದಾಜು 88,667 ರೂಪಾಯಿ ವೇತನ ಸಿಗುತ್ತದೆ.
ಹುದ್ದೆಯ ಪರೀಕ್ಷಾ ವಿಧಾನ :- ಪೂರ್ವಭಾವಿ ಪರೀಕ್ಷೆ ಮತ್ತು ಮುಖ್ಯ ಪರೀಕ್ಷೆ ಇರುತ್ತದೆ.
ಪೂರ್ವಭಾವಿ ಪರೀಕ್ಷೆಯ ವಿವರ :- ಪೂರ್ವಭಾವಿ ಪರೀಕ್ಷೆಯಲ್ಲಿ ಅಭ್ಯರ್ಥಿಗಳು ಪ್ರತಿ ವಿಭಾಗದಲ್ಲಿ ಪ್ರತ್ಯೇಕವಾಗಿ ಉತ್ತೀರ್ಣರಾಗಬೇಕು ಜೊತೆಗೆ ಮುಂದಿನ ಹಂತಕ್ಕೆ ಅರ್ಹತೆ ಪಡೆಯಬೇಕು ಎಂದರೆ ಕನಿಷ್ಠ ಒಟ್ಟು ಅಂಕಗಳನ್ನ ಪಡೆಯಲೇಬೇಕು. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ವಿಭಾಗಗಳು: ರೀಸನಿಂಗ್ ಹಾಗೂ ಕ್ವಾಂಟಿಟೇಟಿವ್ ಆಪ್ಟಿಟ್ಯೂಡ್ ಹಾಗೂ ಇಂಗ್ಲಿಷ್ ಭಾಷೆ.
- ಪ್ರಶ್ನೆಗಳ ಸಂಖ್ಯೆ : 100.
- ಒಟ್ಟು ಅಂಕಗಳು :- 70.
- ಅವಧಿ: 60 ನಿಮಿಷಗಳು.
ಮುಖ್ಯ ಪರೀಕ್ಷೆ :-
ಪೂರ್ವಭಾವಿ ಪರೀಕ್ಷೆಯಲ್ಲಿ ಉತ್ತೀರ್ಣ ಆಗಿರುವ ಅಭ್ಯರ್ಥಿಗಳು ಮುಖ್ಯ ಪರೀಕ್ಷೆ ಎದುರಿಸಬೇಕು.
- ಮುಖ್ಯ ಪರೀಕ್ಷೆಯ ವಿಭಾಗಗಳು: ತಾರ್ಕಿಕತೆ, ಸಾಮಾನ್ಯ ಜ್ಞಾನ, ಪ್ರಸ್ತುತ ವ್ಯವಹಾರಗಳು, ವೃತ್ತಿಪರ ಜ್ಞಾನ, ವಿಮೆ ಮತ್ತು ಹಣಕಾಸು ಮಾರುಕಟ್ಟೆಯ ಅರಿವು.
- ಪ್ರಶ್ನೆಗಳ ಸಂಖ್ಯೆ : 120.
- ಒಟ್ಟು ಅಂಕಗಳು: 300.
- ಅವಧಿ: 120 ನಿಮಿಷಗಳು.
ವಿವರಣಾತ್ಮಕ ಪರೀಕ್ಷೆ: ವಿವರಣಾತ್ಮಕ ಪರೀಕ್ಷೆಯಲ್ಲಿ ಇಂಗ್ಲಿಷ್ ಭಾಷೆಯಲ್ಲಿ ಪತ್ರ ಬರವಣಿಗೆ ಮತ್ತು ಪ್ರಬಂಧ ಬರೆಯುವುದು ಇರುತ್ತದೆ ಹಾಗೂ AAO ಅಥವಾ ಕಾನೂನು ಗಾಗಿ ಕಾನೂನು ಕರಡು ರಚನೆ ಬಗ್ಗೆ ವಿವರಣೆ ಕೇಳುತ್ತಾರೆ.
ನೇಮಕಾತಿ ಪ್ರಕ್ರಿಯೆ :- ಎರಡು ಹಂತದ ಪರೀಕ್ಷೆ ಪಾಸ್ ಆಗಿರುವ ಅಭ್ಯರ್ಥಿಗಳನ್ನು ಸಂದರ್ಶನ ನಡೆಸಲಾಗುತ್ತವೆ. ಸಂದರ್ಶನದಲ್ಲಿ ಅಭ್ಯರ್ಥಿಗಳ ಸಂವಹನ ಕೌಶಲ್ಯ ಹಾಗೂ ಜ್ಞಾನ ಮತ್ತು ಪಾತ್ರಕ್ಕೆ ಸೂಕ್ತತೆಯ ಬಗ್ಗೆ ಪ್ರಶ್ನೆ ಕೇಳಲಾಗುತ್ತದೆ. ಇದರ ಜೊತೆಗೆ ಅಭ್ಯರ್ಥಿಗಳು LIC AAO ಹುದ್ದೆಗೆ ಆಯ್ಕೆ ಆಗಬೇಕು ಎಂದಾದರೆ ಕೆಲವು ಆರೋಗ್ಯ ಪರೀಕ್ಷೆ ನಡೆಸಲಾಗುತ್ತದೆ. ಈ ಎಲ್ಲಾ ಹಂತಗಳನ್ನು ಪಾಸ್ ಆದ ಅಭ್ಯರ್ಥಿಗಳನ್ನು ನೇಮಕ ಮಾಡಿಕೊಳ್ಳಲಾಗುತ್ತದೆ.
ಅರ್ಜಿ ಸಲ್ಲಿಸುವುದು ಹೇಗೆ?
LIC ಯ ಅಧಿಕೃತ ವೆಬ್‌ಸೈಟ್ ಮೂಲಕ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಅರ್ಜಿಯಲ್ಲಿ ವೈಯಕ್ತಿಕ ಹಾಗೂ ಶೈಕ್ಷಣಿಕ ಮಾಹಿತಿಗಳು ತಪ್ಪುಲದ್ದಂತೆ ಭರ್ತಿ ಮಾಡಬೇಕು. ನಂತರ ಅಲ್ಲಿ ಕೇಳಿರುವ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಬೇಕು. ನಂತರ ಅರ್ಜಿ ಶುಲ್ಕವನ್ನು ಪಾವತಿ ಮಾಡಬೇಕು. ನಂತರ ಅರ್ಜಿ ಸಲ್ಲಿಸುವ ಮೊದಲು ಎಲ್ಲಾ ಮಾಹಿತಿಗಳು ಸರಿಯಾಗಿ ಇದೆಯೇ ಎಂಬುದನ್ನು ಮತ್ತೊಮ್ಮೆ ಪರಿಶೀಲನೆ ಮಾಡಿ ಅರ್ಜಿ ಸಲ್ಲಿಸಬೇಕು.
ಇದನ್ನೂ ಓದಿ: FD ಖಾತೆಯ ಹೂಡಿಕೆಗೆ ಹೆಚ್ಚಿನ ಬಡ್ಡಿದರ ನೀಡುವ 5 ಬ್ಯಾಂಕ್ ಗಳ ಬಗ್ಗೆ ವಿವರ ಇಲ್ಲಿದೆ
ಇದನ್ನೂ ಓದಿ: ಒಂದಕ್ಕಿಂತ ಹೆಚ್ಚು ಬ್ಯಾಂಕ್ ಖಾತೆಗಳಿಗೆ ಒಂದೇ ಮೊಬೈಲ್ ನಂಬರ್ ಲಿಂಕ್ ಆಗಿದ್ದರೆ RBI ನ ನಿಯಮ ಏನು?