LIC ಪಿಂಚಣಿ ಯೋಜನೆಯಲ್ಲಿ ಒಮ್ಮೆ ಠೇವಣಿ ಮಾಡಿದರೆ ಪ್ರತಿ ವರ್ಷ 60 ಸಾವಿರ ಪಿಂಚಣಿ ಪಡೆಯಬಹುದು.

Lic Pension Scheme

ನಿವೃತ್ತಿ ಜೀವನವನ್ನ ಅರಮದಾಯಕವಾಗಿ ಕಳೆಯಬೇಕು ಎಂಬುದು ಪ್ರತಿಯೊಬ್ಬರೂ ಆಸೆ ಪಡುತ್ತಾರೆ. ನಿವೃತ್ತಿ ಜೀವನಕ್ಕೆ ಕೆಲಸ ಮಾಡುವ ಸಮಯದಲ್ಲಿಯೇ ಹೆಚ್ಚಿನ ಹಣವನ್ನು ಹೂಡಿಕೆ ಮಾಡುತ್ತಾರೆ. ಈಗ ನಿವೃತ್ತಿ ಜೀವನದಲ್ಲಿ ವರುಷಕ್ಕೆ 60 ಸಾವಿರ ರೂಪಾಯಿ ಪಡೆಯಬಹುದಾದ ಉತ್ತಮ ಯೋಜನೆಯನ್ನು ಎಲ್ ಐ ಸಿ ಜಾರಿಗೆ ತರುತ್ತಿದೆ.

WhatsApp Group Join Now
Telegram Group Join Now

ಏನಿದು ಎಲ್ಐಸಿ ಪಿಂಚಣಿ ಯೋಜನೆ?

ಈಗಾಗಲೇ ಹಲವು ಸ್ಕೀಮ್ ಗಳ ಮೂಲಕ ಜನರಿಗೆ ಹೂಡಿಕೆ ಮಾಡಲು ಅವಕಾಶ ನೀಡಿರುವ ಎಲ್ಐಸಿ ಈಗ ಹೊಸದಾಗಿ ಪಿಂಚಣಿ ಯೋಜನೆಯನ್ನು ಜಾರಿಗೆ ತರುತ್ತಿದೆ. ಈ ಯೋಜನೆಯಲ್ಲಿ ನೀವು ಒಮ್ಮೆ ಹೂಡಿಕೆ ಮಾಡಿದರೆ ನಿನ್ನ ಜೀವನದುದ್ದಕ್ಕೂ ಪ್ರತಿ ವರ್ಷ 60,000 ರೂಪಾಯಿ ಪಡೆಯಲು ಸಾಧ್ಯವಿದೆ. ಎಲ್ಐಸಿ ಪಿಂಚಣಿ ಯೋಜನೆಯಲ್ಲಿ ಹೂಡಿಕೆಗೆ ಎರಡು ಆಯ್ಕೆಗಳು ಇವೆ. ನೀವು ನಿಮ್ಮ ಜೀವಿತ ಅವಧಿಗೆ ಪಿಂಚಣಿ ಯೋಜನೆ ಪಡೆಯಬಹುದು ಅಥವಾ ನಿಮ್ಮ ಮತ್ತು ನಿಮ್ಮ ಸಂಗಾತಿಯ ಜಂಟಿ ಖಾತೆಯಲ್ಲಿ ಈ ಯೋಜನೆ ಪಡೆಯಬಹುದು.

ಮೊದಲನೆಯ ಆಯ್ಕೆಯಲ್ಲಿ ನೀವು ನಿಮ್ಮ ಜೀವಿತ ಅವಧಿಯ ವರೆಗೆ ಪಿಂಚಣಿ ಪಡೆಯಲು ಬಯಸಿದರೆ ನಿಮ್ಮ ಜೀವಿತ ಅವಧಿಯ ವರೆಗೆ ನಿಮಗೆ ಪಿಂಚಣಿ ಸಿಗುತ್ತದೆ. ನಂತರ ಉಳಿದ ಹಣ ನೀವು ಯಾರ ಹೆಸರಿಗೆ ನಾಮಿನಿ ಮಾಡಿದ್ದಿರೋ ಅವರಿಗೆ ಸೇರುತ್ತದೆ. ಎರಡನೇ ಆಯ್ಕೆಯಲ್ಲಿ ನೀವು ನಿಮ್ಮ ಸಂಗಾತಿಯ ಜೊತೆಗೆ ಪಿಂಚಣಿ ಯೋಜನೆ ಆರಂಭಿಸಿದರೆ ನಮ್ಮಿಬ್ಬರಲ್ಲಿ ಯಾರು ಜೀವಂತ ವಾಗಿ ಇರುತ್ತಾರೋ ಅವರಿಗೆ ಹಣ ಸಿಗುತ್ತದೆ. ಮತ್ತೆ ಈ ಹಣ ಯಾವುದೇ ನಾಮಿನಿಗೆ ಸಿಗುವುದಿಲ್ಲ. ಜಂಟಿ ಖಾತೆಯಲ್ಲಿ ನೀವು ಹಾಗೂ ನಿಮ್ಮ ಸಂಗಾತಿ ಮಾತ್ರ ಹಕ್ಕುದಾರರು. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಹೂಡಿಕೆ ಮಾಡಲು ಇರುವ ನಿಯಮ ಏನು?: ಎಲ್ಐಸಿ ಪಿಂಚಣಿ ಯೋಜನೆ ಹೂಡಿಕೆ ಮಾಡಲು ಕನಿಷ್ಠ ವಯಸ್ಸಿನ ಮಿತಿ 40 ವರ್ಷ ಹಾಗೂ ಗರಿಷ್ಠ 80 ವರ್ಷ ವಯಸ್ಸು ಆಗಿರಬೇಕು ಎಂಬ ನಿಯಮ ಇದೆ.

ಪಿಂಚಣಿ ಪಡೆಯುವ ಆಯ್ಕೆಗಳು ಯಾವುವು?: ನೀವು ಈ ಪಿಂಚಣಿ ಯೋಜನೆಯನ್ನು ವಾರ್ಷಿಕವಾಗಿ ಅಥವಾ ಅರ್ಧವಾರ್ಷಿಕ ಅಥವಾ ತಿಂಗಳಿಗೆ ಅಥವಾ ಮೂರು ತಿಂಗಳಿಗೆ ಒಮ್ಮೆ ಪಡೆಯುವ ಆಯ್ಕೆಗಳು ಇರುತ್ತವೆ. ಹೂಡಿಕೆ ಮಾಡುವಾಗ ನೀವು ನಿಮ್ಮ ಇಷ್ಟದ ಪಿಂಚಣಿ ಆಯ್ಕೆ ಮಾಡಬಹುದಾಗಿದೆ.

ಇದನ್ನೂ ಓದಿ: ಒಂದಕ್ಕಿಂತ ಹೆಚ್ಚು ಬ್ಯಾಂಕ್ ಖಾತೆಗಳಿಗೆ ಒಂದೇ ಮೊಬೈಲ್ ನಂಬರ್ ಲಿಂಕ್ ಆಗಿದ್ದರೆ RBI ನ ನಿಯಮ ಏನು? 

60,000 ಪಿಂಚಣಿ ಪಡೆಯಲು ಎಷ್ಟು ಹಣವನ್ನು ಹೂಡಿಕೆ ಮಾಡಬೇಕು?

ನೀವು ವಾರ್ಷಿಕವಾಗಿ 60,000 ಪಿಂಚಣಿ ಪಡೆಯಬೇಕು ಎಂದರೆ ಒಮ್ಮೆಲೇ ನೀವು 10 ಲಕ್ಷ ರೂಪಾಯಿ ಹೂಡಿಕೆ ಮಾಡಬೇಕು. ನಂತರ ವಾರ್ಷಿಕವಾಗಿ ಪಿಂಚಣಿ ಬರುವಂತೆ ಆಯ್ಕೆ ಮಾಡಿದರೆ ವರ್ಷಕ್ಕೆ ಒಮ್ಮೆ ನಿಮಗೆ ಕೆಲವು ಟ್ಯಾಕ್ಸ ಹಣಗಳು ಕಡಿತವಾಗಿ ನಿಮಗೆ 58,950 ರೂಪಾಯಿ ಸಿಗುತ್ತದೆ. ಹಣ ನೇರವಾಗಿ ನಿಮ್ಮ ಬ್ಯಾಂಕ್ ಖಾತೆಗೆ ಜಮಾ ಆಗುತ್ತದೆ.

ಹೂಡಿಕೆ ಮಾಡುವ ವಿಧಾನ :- ಎಲ್ಐಸಿ ಪಿಂಚಣಿ ಯೋಜನೆಯಲ್ಲಿ ಹೂಡಿಕೆ ಮಾಡಬೇಕು ಎಂದರೆ ನೀವು ನಿಮ್ಮ ಹತ್ತಿರದ ಏಜೆಂಟ್ ಸಂಪರ್ಕ ಮಾಡಬಹುದು . ಅವರು ನಿಮಗೆ ಯೋಜನೆಯ ಬಗ್ಗೆ ಪೂರ್ಣ ಮಾಹಿತಿ ನೀಡುತ್ತಾರೆ ಹಾಗೂ ನಿನಗೆ ಇನ್ವೆಸ್ಟ್ಮೆಂಟ್ ಮಾಡಲು ಸಹಾಯ ಮಾಡುತ್ತಾರೆ. ಆನ್ಲೈನ್ ಮೂಲಕ ಏಜೆಂಟ್ ಇಲ್ಲದೆ ಹೂಡಿಕೆ ಮಾಡಬೇಕು ಎಂದಾದರೆ ಎಲ್ಐಸಿ ಅಧಿಕೃತ ವೆಬ್ಸೈಟ್ www.licindia.in ಭೇಟಿ ನೀಡಿ ಪಿಂಚಣಿ ಯೋಜನೆಯಲ್ಲಿ ಹೂಡಿಕೆ ಮಾಡಬಹುದು.

ಇದನ್ನೂ ಓದಿ: ಗರ್ಭಿಣಿ ಸ್ತ್ರೀಯರಿಗೆ ಹಾಗೂ ಕಾರ್ಮಿಕ ಮಕ್ಕಳ ಮದುವೆಗೆ ಕಾರ್ಮಿಕ ಇಲಾಖೆ ಸಹಾಯ ಧನ ನೀಡುತ್ತಿದೆ.