LIC ನೇಮಕಾತಿಯ ಅಧಿಸೂಚನೆ ಪ್ರಕಟಿಸಿದೆ.

LIC Recruitment 2024

ಲೈಫ್ ಇನ್ಶುರೆನ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ಕಂಪನಿಯು ಭಾರತದಲ್ಲಿನ ಪ್ರಮುಖ ಸರ್ಕಾರಿ ಸ್ವಾಮ್ಯದ ವಿಮೆ ಮತ್ತು ಹೂಡಿಕೆಯ ಕಾಮಿನಿ ಆಗಿದ್ದು, ದೇಶದಲ್ಲಿ ಅತಿದೊಡ್ಡ ವಿಮಾ ಕಂಪನಿ ಎಂಬ ಹೆಗ್ಗಳಿಕೆ ಹೊಂದಿರುವ LIC ಕಂಪನಿಯಲ್ಲಿ ಹೊಸದಾಗಿ ನೇಮಕಾತಿ ಆರಂಭವಾಗಿದೆ ಆಸಕ್ತರು ಅರ್ಜಿ ಸಲ್ಲಿಸಬಹುದು.

WhatsApp Group Join Now
Telegram Group Join Now

ಹುದ್ದೆಯ ಬಗ್ಗೆ ಮಾಹಿತಿ :- ಭಾರತೀಯ ಜೀವ ವಿಮಾ ನಿಗಮದಲ್ಲಿ (LIC) ಡಿಜಿಟಲ್ ಪ್ರಕ್ರಿಯೆ ಮಾಲೀಕರ ಎರಡು ಹುದ್ದೆಗಳನ್ನು ಅಹಣ ಮಾಡಿದ್ದು. ಅಭ್ಯರ್ಥಿಗಳನ್ನು ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲಾಗುವುದು ಎಂದು ಇಲಾಖೆಯು ತಿಳಿಸಿದೆ. ಆಸಕ್ತ ಅಭ್ಯರ್ಥಿಗಳು LIC ಅಧಿಕೃತ ವೆಬ್‌ಸೈಟ್ ಮೂಲಕ ಮಾತ್ರ ಆನ್‌ಲೈನ್‌ನಲ್ಲಿ ಅರ್ಜಿ ಹಾಕಬಹುದು.

ಅರ್ಜಿ ಸಲ್ಲಿಕೆಗೆ ಇರುವ ನಿಯಮಗಳು :- ಡಿಜಿಟಲ್ ಪ್ರಕ್ರಿಯೆ ಮಾಲೀಕ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಬಿಇ ಅಥವಾ ಎಂಬಿಎ ಶಿಕ್ಷಣ ಮುಗಿಸಿರಬೇಕು. ಜೊತೆಗೆ ಮೂರರಿಂದ ಎಂಟು ವರ್ಷ ಅನುಭವ ಹೊಂದಿರಬೇಕು. ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯ ಗರಿಷ್ಠ ವಯಸ್ಸು 40 ವರ್ಷ.

ಫೀಸ್ ಡೀಟೈಲ್ಸ್ :-

ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯು 1,000 ರೂಪಾಯಿ ಶುಲ್ಕ ಪಾವತಿಸಬೇಕು. SC ಅಥವಾ ST ಅಥವಾ PwBD ಅಭ್ಯರ್ಥಿಗಳಿಗೆ ಶುಲ್ಕದ ವಿನಾಯಿತಿ ಇರುತ್ತದೆ. ಈ ಅಭ್ಯರ್ಥಿಗಳು ಕೇವಲ 100 ರೂಪಾಯಿ ಶುಲ್ಕ ಪಾವತಿ ಮಾಡಬೇಕು. ಪಾವತಿಯನ್ನು ಆನ್ಲೈನ್ ಮೂಲಕ ಮಾಡಬೇಕು. ಒಮ್ಮೆ ಶುಲ್ಕವನ್ನು ಪಾವತಿ ಮಾಡಿದ ನಂತರ ಯಾವುದೇ ಕಾರಣಕ್ಕೂ ಶುಲ್ಕವನ್ನು ಹಿಂದಿರುಗಿಸುವುದಿಲ್ಲ. ಶುಲ್ಕವನ್ನು ಡೆಬಿಟ್ ಕಾರ್ಡ್ (RuPay, Visa, MasterCard, Maestro), ಕ್ರೆಡಿಟ್ ಕಾರ್ಡ್, ಇಂಟರ್ನೆಟ್ ಬ್ಯಾಂಕಿಂಗ್, ಅಥವಾ ನಗದು ಕಾರ್ಡ ಹಾಗೂ ಮೊಬೈಲ್ ವಾಲೆಟ್ ಮೂಲಕ ಪಾವತಿಸಬಹುದು.

ಹುದ್ದೆಯ ನೇಮಕಾತಿ ಪ್ರಕ್ರಿಯೆ :- ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳನ್ನು ಆರಂಭಿಕ ಸ್ಕ್ರೀನಿಂಗ್ ಮತ್ತು ವೈಯಕ್ತಿಕ ಸಂದರ್ಶನ ನಡೆಸುವ ಮೂಲಕ ಆಯ್ಕೆ ಮಾಡಿಕೊಳ್ಳಲಾಗುವುದು.

ಹುದ್ದೆ ನೀಡಬೇಕಾದ ದಾಖಲಾತಿಗಳು:- ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯ ಹೆಸರು, ವಿಳಾಸದ ದಾಖಲೆ ( ಆಧಾರ್ ಕಾರ್ಡ್, ಚುನಾವಣಾ ಕಾರ್ಡ್, etc.. ) , ಶೈಕ್ಷಣಿಕ ದಾಖಲೆ, ಹಾಗೂ ಹುದ್ದೆಯ ಅನುಭವ ಪತ್ರ ಮತ್ತು ಭಾವಚಿತ್ರ.

ಅರ್ಜಿ ಸಲ್ಲಿಸುವ ವಿಧಾನ :- ಇಲಾಖೆಯ ಅಧಿಕೃತ ವೆಬ್ಸೈಟ್ ಗೆ ತೆರಳಿ ಮುಖಪುಟದಲ್ಲಿ ವೃತ್ತಿಗಳು ಎಂಬ ಬಟನ್ ಆಯ್ಕೆ ಮಾಡಿ ನಂತರ ಪ್ರದೇಶ ಮತ್ತು ಇಲಾಖೆಯ ಎಂಬ ಎರಡು option ಕಾಣುತ್ತದೆ. ಅದರಲ್ಲಿ ನೀವು ಎಲ್ಲಾ ಬಟನ್ ಕ್ಲಿಕ್ ಮಾಡಿದರೆ ನಿಮಗೆ ಹುದ್ದೆಯ ಅಧಿಸೂಚನೆ ಸಿಗುತ್ತದೆ. ಅದರ ಮೇಲೆ ಕ್ಲಿಕ್ ಮಾಡಿ. ‘ಒಪ್ಪಂದದ ಆಧಾರದ ಮೇಲೆ ಎಲ್ಐಸಿ ಆಫ್ ಇಂಡಿಯಾದಲ್ಲಿ ಡಿಜಿಟಲ್ ಪ್ರಕ್ರಿಯೆಯ ಮಾಲೀಕರ ನಿಶ್ಚಿತಾರ್ಥ” ಎಂಬ ಆಪ್ಷನ್ ಕ್ಲಿಕ್ ಮಾಡಿದರೆ ನಿಮಗೆ ಅರ್ಜಿ ನಮೂನೆ ಸಿಗುತ್ತದೆ. ಅರ್ಜಿ ನಮೂನೆಯಲ್ಲಿ ನಿಮ್ಮ ವೈಯಕ್ತಿಕ ಮಾಹಿತಿಗಳನ್ನು ಮತ್ತು ಶೈಕ್ಷಣಿಕ ಮಾಹಿತಿಗಳು ಎಲ್ಲವನ್ನೂ ಸರಿಯಾಗಿ ಭರ್ತಿ ಮಾಡಿ. ನಂತರ ಆನ್ಲೈನ್ ಮೂಲಕ ಫೀ ಪಾವತಿಸಿ . ನಂತರ ಓಕೆ ಬಟನ್ ಕ್ಲಿಕ್ ಮಾಡಿ ಅರ್ಜಿ ಸಲ್ಲಿಸಿ.

ಪ್ರಮುಖ ದಿನಾಂಕಗಳು: ಡಿಜಿಟಲ್ ಪ್ರಕ್ರಿಯೆ ಮಾಲೀಕರ ಹುದ್ದೆಗೆ ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ:- 19 – 03-2024. ಹಾಗೂ ಕೊನೆಯ ದಿನಾಂಕ:- 08-04-2024. ಹುದ್ದೆಗೆ ಅರ್ಜಿ ಸಲ್ಲಿಸುವ ಆಸಕ್ತರು ನಿಗದಿತ ಸಮಯದ ಒಳಗೆ ಅರ್ಜಿ ಸಲ್ಲಿಸಿ.

ಅಧಿಸೂಚನೆ PDF ಡೌನ್ ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ