LIC ಯ ಹೊಸ ಯೋಜನೆಯಲ್ಲಿ ಒಮ್ಮೆ ಹೂಡಿಕೆ ಮಾಡಿ ಪ್ರತಿ ತಿಂಗಳು 12000 ರೂಪಾಯಿ ಪಿಂಚಣಿ ಪಡೆಯಬಹುದು.

LIC Saral Pension Scheme

ಪ್ರತಿಯೊಬ್ಬರೂ ಇಂದು ಹಣ ಹೂಡಿಕೆ ಮಾಡುವುದು ನಮ್ಮ ನಿವೃತ್ತಿ ಬದುಕಿನ ಸಮಯದಲ್ಲಿ ನಮಗೆ ಆರ್ಥಿಕ ತೊಂದರೆ ಬಾರದೆ ಇರಲಿ ಎಂದು ಹಣ ಹೂಡಿಕೆ ಮಾಡುವಾಗ ಯಾವ ಯೋಜನೆಯಲ್ಲಿ ಯಾವ ರೀತಿಯ ಉಪಯೋಗ ಇದೆ ಎಂಬುದನ್ನು ನಾವು ತಿಳಿದು ಹಣ ಹೂಡಿಕೆ ಮಾಡಬೇಕು. ಇಂದು ಹಲವಾರು ಕಂಪನಿಗಳು ಹಲವಾರು ಯೋಜನೆಗಳನ್ನು ಜನರಿಗೆ ನೀಡುತ್ತಿವೆ ಆದರೆ ಜನರು ಮಾತ್ರ ಎಲ್ಐಸಿಯಲ್ಲಿ ಹೂಡಿಕೆ ಮಾಡುತ್ತಾ ಇದ್ದರೆ. ಯಾಕೆ ಎಂದರೆ ಇದು ಒಂದು ನಂಬಿಕಸ್ತ ಸಂಸ್ಥೆ ಆಗಿದ್ದು ಜನರಿಗೆ ಹಲವಾರು ರೀತಿಯ ಯೋಜನೆಗಳನ್ನು ಪರಿಚಯಿಸುತ್ತಾ ಇದೆ. ಈಗ ಹೊಸದಾಗಿ ಪಿಂಚಣಿ ಯೋಜನೆಯೊಂದನ್ನು ಎಲ್ಐಸಿ ಪರಿಚಯಿಸಿದೆ ಅದುವೇ ಸರಳ್ ಪಿಂಚಣಿ ಯೋಜನೆ.

WhatsApp Group Join Now
Telegram Group Join Now

ಸರಳ್ ಪಿಂಚಣಿ ಯೋಜನೆಯ ಬಗ್ಗೆ ಮಾಹಿತಿ :- ಎಲ್‌ಐಸಿಯ ಹೊಸದಾಗಿ ಪರಿಚಯಿಸುತ್ತಾ ಇರುವ ಸರಳ ಪಿಂಚಣಿ ಯೋಜನೆಯಲ್ಲಿ ಕೇವಲ ಒಂದು ಬಾರಿ ಹೂಡಿಕ ಮಾಡಿದರೆ ಸಾಕು ನಮ್ಮ ಜೀವನದುದ್ದಕ್ಕೂ ನಮಗೆ ತಿಂಗಳು ಹಣ ಬರುತ್ತದೆ. ಇದೇ ಕಾರಣಕ್ಕೆ ಈಗ ಎಲ್‌ಐಸಿ ಸರಳ್ ಪಿಂಚಣಿ ಯೋಜನೆಯಲ್ಲಿ ಹೆಚ್ಚಿನ ಜನರು ಹೂಡಿಕೆ ಮಾಡಲು ಬಯಸುತ್ತಾ ಇದ್ದಾರೆ. ಈ ಯೋಜನೆಯಲ್ಲಿ ಒಮ್ಮೆ ಹೂಡಿಕೆ ಮಾಡಿ ನಮ್ಮ ವೃತ್ತಿ ಜೀವನದ ನಿವೃತ್ತಿಯ ನಂತರ ನಮಗೆ ಪಿಎಫ್ ನ ಹಣ ಮತ್ತು ಗ್ರಾಚ್ಯುಟಿಯಿಂದ ಪಡೆದ ಹಣವನ್ನು ಹೂಡಿದರೆ ನಮಗೆ ಪ್ರತಿ ತಿಂಗಳು ಪಿಂಚಣಿ ಬರುತ್ತದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಪ್ರತಿ ತಿಂಗಳು ಬರುವ ಪಿಂಚಣಿ ಮೊತ್ತ ಏಷ್ಟು?

ಒಮ್ಮೆ ಹೂಡಿಕೆ ಮಾಡಿದರೆ ನಿಮಗೆ ಪ್ರತಿ ತಿಂಗಳು ಕನಿಷ್ಟ ಎಂದರೆ 12,000 ರೂಪಾಯಿ ಪಿಂಚಣಿ ಹಣವೂ ಬರುತ್ತದೆ. ಈ ಯೋಜನೆಯಲ್ಲಿ ಹೂಡಿಕೆ ಮಾಡಲು ಯಾವುದೇ ಗರಿಷ್ಠ ಹಣ ಹೂಡಿಕೆ ಮಾಡಬೇಕು ಎಂಬ ನಿಯಮ ಇಲ್ಲ. ನಮ್ಮ ಆರ್ಥಿಕ ಶಕ್ತಿಯ ಅನುಸಾರ ಏಷ್ಟು ಹಣ ಬೇಕಾದರೂ ಹೂಡಿಕೆ ಮಾಡಲೇ ಅವಕಾಶ ಇದೆ. ನಾವು ಹೂಡಿಕೆ ಮಾಡಿದ ಹಣದ ಮೇಲೆ ನಮಗೆ ಸಿಗುವ ಪಿಂಚಣಿ ಮೊತ್ತವು ಜಾಸ್ತಿ ಆಗಬಹುದು. ನಿಯಮದ ಅನುಸಾರವಾಗಿ ಒಬ್ಬ ವ್ಯಕ್ತಿ 42 ವರ್ಷದಲ್ಲೀ 30 ಲಕ್ಷ ರೂಪಯಿಯನ್ನೂ ಈ ಯೋಜನೆಯ ಅಡಿಯಲ್ಲಿ ಹೂಡಿಕೆ ಮಾಡಿದರೆ ಅವನಿಗೆ ಪ್ರತಿ ತಿಂಗಳು ಸಿಗುವ ಪಿಂಚಣಿ ಮೊತ್ತ 12,388 ರೂಪಾಯಿ ಆಗಿರುತ್ತದೆ. ನೀವು ಇನ್ನೂ ಹೆಚ್ಚಿನ ಹಣ ಹೂಡಿಕೆ ಮಾಡಿದರೆ ನಿಮಗೆ ಹೆಚ್ಚಿನ ಮೊತ್ತದ ಪಿಂಚಣಿ ಹಣ ಬರಲಿದೆ. ಈ ಯೋಜನೆಗೆ ಇನ್ವೆಸ್ಟ್ ಮಾಡಲು ವ್ಯಕ್ತಿಯ ವಯಸ್ಸು 40 ರಿಂದ 80 ವರ್ಷ ಇರಬೇಕು.

ಗಂಡ ಮತ್ತು ಹೆಂಡತಿ ಇಬ್ಬರೂ ಸೇರಿ ಯೋಜನೆಗೆ ಇನ್ವೆಸ್ಟ್ಮೆಂಟ್ ಮಾಡಬಹುದು :- ಎಲ್ಐಸಿ ಸರಳ ಪಿಂಚಣಿ ಯೋಜನೆಯ ವಿಶೇಷತೆ ಏನೆಂದರೆ ನೀವು ಈ ಯೋಜನೆಯನ್ನು ನೀವು ಮತ್ತು ನಿಮ್ಮ ಹೆಂಡತಿ ಇಬ್ಬರೂ ಸೇರಿ ಈ ಯೋಜನೆಯ ಪ್ರಯೋಜನ ಪಡೆಯಲು ಸಾಧ್ಯವಿದೆ. ನೀವು ಮತ್ತು ನಿಮ್ಮ ಸಂಗಾತಿಯು ಸೇರಿ ಇನ್ವೆಸ್ಟ್ ಮಾಡಿ ನಿಮ್ಮ ನಿವೃತ್ತಿ ಜೀವನದ ಹಣವನ್ನು ಪಡೆಯಲು ಸಾಧ್ಯವಿದೆ. ಜೊತೆಗೆ ನಿಮ್ಮ ಮರಣದ ನಂತರದಲ್ಲಿ ನಿಮಗೆ ಸಲ್ಲಬೇಕಾದ ಉಳಿದ ಹಣವನ್ನು ನೀವು ಯಾರ ಹೆಸರಲ್ಲಿ ನಾಮಿನಿ ಮಾಡಿರುತ್ತಿರೋ ಅವರಿಗೆ ಉಳಿದ ಹಣ ಸಿಗಲಿದೆ.

ನೀವು ಎಲ್ಐಸಿ ಸರಳ ಪಿಂಚಣಿ ಯೋಜನೆಯ ಬಗ್ಗೆ ಮಾಹಿತಿ ಹಾಗೂ ಈ ಯೋಜನೆಯಲ್ಲಿ ಹಣ ಹೂಡಿಕೆ ಮಾಡಲು ಬಯಸಿದರೆ LIC ಯ ಅಧಿಕೃತ ವೆಬ್‌ಸೈಟ್ www.licindia.in ಹೋಗಿ ಅರ್ಜಿ ಸಲ್ಲಿಸಲು ಸಾಧ್ಯವಿದೆ.

ಇದನ್ನೂ ಓದಿ: ಪಿಎಂ ಮುದ್ರಾ ಯೋಜನೆಯಲ್ಲಿ ಯಾವುದೇ ಪತ್ರವನ್ನು ಅಡ ಇಡದೆಯೆ ಸಿಗುತ್ತದೆ 10 ಲಕ್ಷ ರೂಪಾಯಿ ಸಾಲ

ಇದನ್ನೂ ಓದಿ: ಸುಡು ಬೇಸಿಗೆಯ ಈ ತಾಪಮಾನದಲ್ಲಿ ಖರೀದಿಸಿ ಆಲ್ಟೊ K10, ಅದೂ ಕೇವಲ 4 ಲಕ್ಷಕ್ಕೆ!