ಬಡವರು ಮತ್ತು ಮಧ್ಯಮ ವರ್ಗದ ಜನರು ಕಡಿಮೆ ಹೂಡಿಕೆ ಮಾಡುವ ಸಾಮರ್ಥ್ಯ ಹೊಂದಿರುತ್ತಾರೆ. ಅವರು ಪ್ರತಿ ದಿನ ಅಥವಾ ತಿಂಗಳಿಗೆ ಕಡಿಮೆ ಮೊತ್ತದ ಹಣವನ್ನು ಹೂಡಿಕೆ ಮಾಡಿ ಹೆಚ್ಚಿನ ಹಣ ಗಳಿಸುವ ಅವಕಾಶವನ್ನೂ ಹುಡುಕುತ್ತಾರೆ. ಅಂತಹವರಿಗೆ ಈಗ LIC ಹೊಸ ಸ್ಕೀಮ್ ಪರಿಚಯಿಸಿದೆ. ಹಾಗಾದರೆ ದಿನವೂ 45 ರೂಪಾಯಿ ಹೂಡಿಕೆ ಮಾಡಿ 25,00,000 ಮೆಚ್ಯೂರಿಟಿ ಹಣ ಪಡೆಯುವ LIC ಯೋಜನೆಯ ಬಗ್ಗೆ ಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಯೋಣ.
ಎಲ್ಐಸಿ ಯ ಯೋಜನೆಯ ಬಗ್ಗೆ ಮಾಹಿತಿ :- ದಿನವೂ 45 ರೂಪಾಯಿ ಹೂಡಿಕೆ ಮಾಡಿ ಹೆಚ್ಚಿನ ಹಣ ಗಳಿಸುವ ಯೋಜನೆಯ ಹೆಸರು LIC ಜೀವನ್ ಆನಂದ್ ಯೋಜನೆ. ಈ ಯೋಜನೆಯಲ್ಲಿ ದಿನವೂ ನೀವು 45 ರೂಪಾಯಿ ಹೂಡಿಕೆ ಮಾಡಿದ್ರೆ 30 ದಿನಗಳಿಗೆ ಹೂಡಿಕೆ ಮೊತ್ತ 1,350 ರೂಪಾಯಿ ಆಗುತ್ತದೆ ಹಾಗೆ ಒಂದು ವರುಷಕ್ಕೆ ನಿಮ್ಮ ಹೂಡಿಕೆಯ ಮೊತ್ತ 16,425 ರೂಪಾಯಿ ಆಗುತ್ತದೆ.
ಈ ಯೋಜನೆಯ ಅವಧಿ :- LIC ಜೀವನ್ ಆನಂದ್ ಯೋಜನೆಯ ಅವಧಿಯು 15 ರಿಂದ 35 ವರ್ಷ ಇರುತ್ತದೆ. ನಿಮ್ಮ ಅಗತ್ಯತತೆ ಅನುಗುಣವಾಗಿ ನೀವು ಮೆಚ್ಯೂರಿಟಿ ಪೀರಿಯಡ್ ಆಯ್ಕೆ ಮಾಡಬಹುದು. ನೀವು ವಾರ್ಷಿಕವಾಗಿ 16,425 ರೂಪಾಯಿ ಹೂಡಿಕೆ ಮಾಡಿ 15 ವರ್ಷಗಳ ಬಳಿಕ ನಿಮ್ಮ ಹೂಡಿಕೆ ಮೊತ್ತವು 2,46,375 ಆಗುತ್ತದೆ. ಹಾಗೂ 35 ವರ್ಷಗಳ ಬಳಿಕ ನಿಮ್ಮ ಹೂಡಿಕೆ ಮೊತ್ತವು 5,74,875 ಆಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಬೋನಸ್ ಮೊತ್ತಗಳು ಹೀಗಿವೆ :- ನೀವು ಒಟ್ಟು ಹೂಡಿಕೆ ಮೊತ್ತ 5,74,875 ಆದರೆ ಇದರ ಜೊತೆಗೆ ಮೆಚ್ಯೂರಿಟಿ ಅವಧಿಯ ನಂತರ ನಿಮಗೆ 8.60 ಲಕ್ಷ ರೂಪಾಯಿಗಳ ಪರಿಷ್ಕರಣೆ ಬೋನಸ್ ಮತ್ತು 11.50 ಲಕ್ಷ ರೂಪಾಯಿಗಳ ಅಂತಿಮ ಬೋನಸ್ ಅನ್ನು ನೀಡುತ್ತಾರೆ. ಅಲ್ಲಿಗೆ ನಿಮಗೆ ಸಿಗುವ ಒಟ್ಟು ಮೊತ್ತ ಸರಾಸರಿ 25,00000 ರೂಪಾಯಿಗಳು.
ಇದನ್ನೂ ಓದಿ: ಕೆಲವು ಷರತ್ತುಗಳನ್ನು ಪೂರೈಸಿದರೆ ನೀವು 50,000 EPFO ಬೋನಸ್ ಹಣವನ್ನು ಕಡೆಯಬಹುದು.
ತೆರಿಗೆ ಪ್ರಯೋಜನ :-
ಈ ಯೋಜನೆಯಲ್ಲಿ ಹೂಡಿಕೆ ಮಾಡುವ ಜನರು ಯಾವುದೇ ರೀತಿಯ ತೆರಿಗೆ ರಿಯಾಯಿತಿಗಳನ್ನು ಪಡೆಯಲಾಗುವುದಿಲ್ಲ. ನೀವು ಆದಾಯ ತೆರಿಗೆ ನಿಯಮದ ಪ್ರಕಾರ ತೆರಿಗೆ ಕಟ್ಟಬೇಕು.
ನಾಲ್ಕು ವಿಧದ ರೈಡರ್ ಪಡೆಯುವ ಅವಕಾಶ :- ನೀವು ತೆರಿಗೆ ಪ್ರಯೋಜನ ಪಡೆಯುವುದಿಲ್ಲ ಆದರೆ ನೀವು ನಾಲ್ಕು ರೀತಿಯ ರೈಡರ್ ಪಡೆಯುವ ಅವಕಾಶ ಇರುತ್ತದೆ. ಯಾವುದೇ ರೀತಿಯ ಅಪಘಾತದ ಸಾವು ಮತ್ತು ಅಂಗವೈಕಲ್ಯ ಅಪಘಾತ ಲಾಭದ ರೈಡರ್ ಹಾಗೂ ಹೊಸ ಟರ್ಮ್ ಇನ್ಶುರೆನ್ಸ್ ರೈಡರ್ ಹಾಗೂ ಹೊಸ ಕ್ರಿಟಿಕಲ್ ಬೆನಿಫಿಟ್ ರೈಡರ್ ಇವೆ. ಅವಧಿ ಮುಗಿಯುವ ಮೊದಲು ನೀವು ಸಾವನ್ನಪ್ಪಿದ್ದರೆ ನಿಮ್ಮ ಹಣವೂ ನಾಮಿನಿಯು ಪಾಲಿಸಿಯ 125 ಪ್ರತಿಶತದಷ್ಟು ಮರಣದ ಲಾಭವನ್ನು ಪಡೆಯಬಹುದು.
ನೀವು ಈ ಯೋಜನೆಯನ್ನು ಪಡೆಯಲು ನಿಮ್ಮ ಹತ್ತಿರದ LIC ಕೇಂದ್ರ ಅಥವಾ ಯಾವುದೇ ಪಾಲಿಸಿ ನೀಡುವ ವ್ಯಕ್ತಿಯ ಜೊತೆ ವಿಚಾರಿಸಿ ಹಣವನ್ನು ಹೂಡಿಕೆ ಮಾಡಬೇಕು. ಎಲ್ಐಸಿ ಬೇರೆ ಯಾವುದೇ ಪಾಲಿಸಿ ಕಂಪನಿಗಿಂತ ಸುರಕ್ಷಿತ ಮತ್ತು ಹೆಚ್ಚಿನ ಲಾಭ ನೀಡುತ್ತದೆ. ನಿಮ್ಮ ಹಣದ ಉಳಿತಾಯ ಮತ್ತು ಹೆಚ್ಚಿನ ಲಾಭ ಗಳಿಸಲು LIC ಯ ಜೀವನ್ ಆನಂದ್ ಯೋಜನೆ ಬಹಳ ಉಪಯೋಗ ಆಗಲಿದೆ. ಒಮ್ಮೆಲೆ ಲಕ್ಷ ಲಕ್ಷ ಹೂಡಿಕೆ ಮಾಡಲು ಆಗದೆ ಇರುವ ಮಾಧ್ಯಮ ವರ್ಗ ಮತ್ತು ಬಡವರ ಪಾಲಿಗೆ ಹೂಡಿಕೆ ಮಾಡಲು ಅತ್ಯುತ್ತಮ ಆಯ್ಕೆ ಇದಾಗಿದೆ. ಹಾಗದರೆ ಇನ್ನೇಕೆ ತಡ ಈಗಲೇ ನೀವು ಈ ಪಾಲಿಶಿಯಲ್ಲಿ ಹಣವನ್ನು ಹೂಡಿಕೆ ಮಾಡಿ ಹೆಚ್ಚಿನ ಲಾಭ ಗಳಿಸಿ.
ಇದನ್ನೂ ಓದಿ: ಮುಂಬರುವ ಜೂನ್ ತಿಂಗಳಿಂದ APL ಪಡಿತರ ಚೀಟಿ ವಿತರಣೆಗೆ ಮರುಚಾಲನೆ ದೊರೆಯಲಿದೆ