ಭಾರತದ ಡ್ರೈವಿಂಗ್ ಲೈಸೆನ್ಸ್ ಇದ್ದರೆ ವಿಶ್ವದ ಕೆಲವು ದೇಶಗಳಲ್ಲಿ ನೀವು ವಾಹನ ಓಡಿಸಬಹುದು.

List Of Countries That Accept Indian Driving Licence

ಹೊರದೇಶಕ್ಕೆ ಹೋಗಿ ಸೋಲೋ ಟ್ರಿಪ್ ಅಥವಾ ಫ್ಯಾಮಿಲಿ ಫ್ರೆಂಡ್ಸ್ ಟ್ರಿಪ್ ಎಂದು ಬೈಕ್ ಅಥವಾ ಕಾರ್ ನಲ್ಲಿ ತಿರುಗಾಡುವ ಕನಸಿದ್ದರೆ ನಿಮಗೆ ಕೆಲವು ದೇಶಗಳು ಭಾರತದ ಡ್ರೈವಿಂಗ್ ಲೈಸೆನ್ಸ್ ಮಾನ್ಯ ಮಾಡುತ್ತದೆ. ಭಾರತೀಯ RTO ಸಂಸ್ಥೆ ಹಾಗೂ ಅಲ್ಲಿನ ರಸ್ತೆ ಪರವಾನಿಗೆ ಸಂಸ್ಥೆಗಳ ಒಪ್ಪಂದದ ಮೇರೆಗೆ ಭಾರತದ ಲೈಸೆನ್ಸ್ ಬೇರೆ ದೇಶದಲ್ಲಿ ಬಳಸಬಹುದು. ಹಾಗಾದರೆ ಅವು ಯಾವುವು ಎಂಬುದನ್ನು ತಿಳಿಯೋಣ.

WhatsApp Group Join Now
Telegram Group Join Now

ಭಾರತದ ಡ್ರೈವಿಂಗ್ ಲೈಸೆನ್ಸ್ ಮಾನ್ಯ ಮಾಡುವ ದೇಶಗಳು ಯಾವುವು?

1.ಸ್ವಿಟ್ಜರ್ಲೆಂಡ್(Switzerland):- ಈ ದೇಶದಲ್ಲಿ ಭಾರತದ ಡ್ರೈವಿಂಗ್ ಲೈಸೆನ್ಸ್ ಮಾನ್ಯ ಮಾಡಿದೆ.ಭಾರತದ ಲೈಸೆನ್ಸ್ ಒಂದು ವರ್ಷದ ವರೆಗೆ ಇಲ್ಲಿ ಬಳಸಬಹುದು.ಸ್ವಿಟ್ಜರ್ಲೆಂಡ್ ನಲ್ಲಿ ರಸ್ತೆಯ ಬಲಭಾಗದಲ್ಲಿ ವಾಹನ ಓಡಿಸಬೇಕು. ಸ್ವಿಟ್ಜರ್ಲೆಂಡ್ ನಲ್ಲಿ ಕಾರ್ ಓಡಿಸುವಾಗ ಸೀಟ್ ಬೆಲ್ಟ್ ಧರಿಸುವುದು ಕಡ್ಡಾಯ. ಮದ್ಯಪಾನ ಮಾಡಿ ವಾಹನ ಓಡಿಸುವುದು ಕಾನೂನುಬಾಹಿರ. ಈ ದೇಶದಲ್ಲಿ ನೀವು ಸುಂದರ ತಾಣಗಳನ್ನು ವೀಕ್ಷಣೆ ಮಾಡಬಹುದು. ಸ್ವಿಸ್ ಹಳ್ಳಿಗಳು ಹೊಳೆಯುವ ಸರೋವರಗಳು, ಇಂಟರ್‌ಲೇಕನ್, ಲುಸರ್ನ ಗಳನ್ನೂ ನೀವು ವೀಕ್ಷಣೆ ಮಾಡಬಹುದು. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

2.ನ್ಯೂಜಿಲೆಂಡ್(New Zealand):- ಇದು ಭಾರತದ ನೆಚ್ಚಿನ ಕ್ರಿಕೆಟಿಗ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಅವರ ನೆಚ್ಚಿನ ದೇಶವಂತೆ. ಇಲ್ಲಿನ ಸುಂದರವಾದ ಎತ್ತರದ ಪ್ರದೇಶಗಳನ್ನು ನೋಡುವುದು ಮತ್ತು ಅನುಭವ ಪಡೆಯುವುದು ಸಂತೋಷವಾಗಿದೆ. ಇಲ್ಲಿ ಕಾರ್ ಅಥವಾ ನಾಲ್ಕು ಚಕ್ರದ ವಾಹನಗಳ ಡ್ರೈವರ್ ಸೀಟ್ ಎಡಭಾಗದಲ್ಲಿ ಇದೆ. ಒಂದು ವರ್ಷದ ವರೆಗೆ ಭಾರತೀಯ ಪರವಾನಿಗೆ ಪತ್ರ ಇಲ್ಲಿ ಬಳಸಲು ಅನುಮತಿ ಇದೆ. ಇಲ್ಲಿ ನಿಮಗೆ ಕಾರ್ ಬಾಡಿಗೆಗೆ ಸಿಗುತ್ತದೆ. ಇಲ್ಲಿ ಕಾರ್ ಓಡಿಸಲು ಕನಿಷ್ಠ 21 ವರ್ಷ ಆಗಿರಬೇಕು.

3.ಆಸ್ಟ್ರೇಲಿಯಾ(Australia) :- ದೇಶದಲ್ಲಿ ಹಲವಾರು ಪ್ರವಾಸಿ ತಾಣಗಳು ಇವೆ. ನ್ಯೂ ಸೌತ್ ವೇಲ್ಸ್, ಕ್ವೀನ್ಸ್‌ಲ್ಯಾಂಡ್, ದಕ್ಷಿಣ ಆಸ್ಟ್ರೇಲಿಯಾ ಮತ್ತು ಆಸ್ಟ್ರೇಲಿಯನ್ ಪ್ರದೇಶಗಳಲ್ಲಿ ಡ್ರೈವಿಂಗ್ ಮಾಡಲು ನೀವು ದೇಶಕ್ಕೆ ಭೇಟಿ ನೀಡಿ ಒಂದು ವರುಷ ಆಗುವವರೆಗೆ ಭಾರತದ ಡೈವಿಂಗ್ ಲೈಸೆನ್ಸ್ ಮಾನ್ಯ ಪಡೆದಿದೆ. ಆದರೆ ಉತ್ತರ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡರೆ ನಿಮಗೆ ಈ ಸವಲತ್ತು ಮೂರು ತಿಂಗಳವರೆಗೆ ಕಡಿಮೆಯಾಗುತ್ತದೆ.

4.ಜರ್ಮನಿ(Garmany):- ಇಲ್ಲಿನ ಹೆದ್ದಾರಿಗಳು ಪ್ರಪಂಚದಲ್ಲಿ ಅತ್ಯುತ್ತಮ ಎಂದು ಮೂಲಗಳಿಂದ ತಿಳಿದು ಬಂದಿದೆ. ಆದರಿಂದ ಇದು ಪ್ರವಾಸಿಗರಿಗೆ ಒಂದು ಮರೆಯಲಾಗದ ಅನುಭವ ನೀಡುತ್ತದೆ. ಭಾರತೀಯ ಡ್ರೈವಿಂಗ್ ಲೈಸೆನ್ಸ್ ಹೊಂದಿರುವವರು ಯುರೋಪಿಯನ್ ದೇಶಕ್ಕೆ ಕಾಲಿಟ್ಟ ನಂತರ ಆರು ತಿಂಗಳವರೆಗೆ ಬಳಸಬಹುದು.

5.ಯುನೈಟೆಡ್ ಕಿಂಗ್ಡಮ್(United Kingdom) :- ಈ ದೇಶದಲ್ಲಿ ಸಂಚರಿಸಲು ನಿಮ್ಮ ಡ್ರೈವಿಂಗ್ ಲೈಸೆನ್ಸ್‌ನಲ್ಲಿ ನಿರ್ದಿಷ್ಟಪಡಿಸಿದ ವಾಹನವನ್ನು ಮಾತ್ರ ನೀವು ಇಲ್ಲಿ ಬಳಕೆ ಮಾಡಬಹುದು. ಸೆಂಟ್ರಲ್ ಲಂಡನ್‌ನ ಪ್ರವಾಸಿ ಹಾಟ್‌ಸ್ಪಾಟ್‌ಗಳಿಂದ ಸ್ಕಾಟಿಷ್ ಹೈಲ್ಯಾಂಡ್‌ಗಳವರೆಗೆ ನೀವು ಭಾರತದ ಲೈಸೆನ್ಸ್ ಬಳಸಿ ಪ್ರವಾಸ ಮಾಡಬಹುದು.

6.ದಕ್ಷಿಣ ಆಫ್ರಿಕಾ(South Africa) :- 

ಇಲ್ಲಿ ಭಾರತೀಯ ಡ್ರೈವಿಂಗ್ ಲೈಸೆನ್ಸ್ ಮಾನ್ಯ ಪಡೆದಿದ್ದರು ಸಹ ನೀವು ಇಂಟರ್ನ್ಯಾಷನಲ್ ಡ್ರೈವಿಂಗ್ ಪರ್ಮಿಟ್ (ಐಡಿಪಿ) ತೆಗೆದುಕೊಂಡು ಹೋಗುವುದು ಉತ್ತಮ. ಈ ದೇಶದಲ್ಲಿ ಸಹ ಒಂದು ವರ್ಷದ ವರೆಗೆ ನೀವು ಭಾರತದ ಲೈಸೆನ್ಸ್ ಬಳಸಬಹುದು.

7.ಸಿಂಗಾಪುರ(Singapore) :- ಸಿಂಗಪುರ ಭಾರತೀಯರು ಇಷ್ಟ ಪಡುವ ಸುಂದರ ದೇಶವಾಗಿದೆ. ಇಲ್ಲಿ ಆಂಗ್ಲ ಭಾಷೆಯ ಭಾರತೀಯ ಪರವಾನಿಗೆ ಮಾನ್ಯವಾಗಿದೆ.

8.ಸ್ಪೇನ್(Spain) :- ಈ ದೇಶದಲ್ಲಿ ಮೊದಲು ರೆಸಿಡೆನ್ಸಿ ನೋಂದಣಿಯನ್ನು ಪೂರ್ಣಗೊಳಿಸಿದ ನಂತರ ನಿಮ್ಮ ಡೈವಿಂಗ್ ಲೈಸೆನ್ಸ್ ತೋರಿಸಿದ ನಂತರ ನಿಮಗೆ ಈ ದೇಶದ ಯಾವುದೇ ಸ್ಥಳಕ್ಕೆ ನೀವು ಸಂಚರಿಸಬಹುದು. ನೀವು ಈ ದೇಶಕ್ಕೆ ಭೇಟಿನೀಡಿದ ಆರು ತಿಂಗಳುಗಳ ವರೆಗೆ ಭಾರತದ ಲೈಸೆನ್ಸ್ ಮಾನ್ಯವಾಗಿದೆ.

9.ನಾರ್ವೆ(Norway) :- ಈ ದೇಶಕ್ಕೆ ಭೇಟಿ ನೀಡಿದ ಮೂರು ತಿಂಗಳುಗಳ ವರೆಗೆ ಭಾರತೀಯ ಲೈಸೆನ್ಸ್ ಮಾನ್ಯವಾಗಿದೆ.

10.ಸ್ವೀಡನ್(Sweden) :- ಪರವಾನಿಗೆ ಪತ್ರ ಸ್ವೀಡಿಷ್, ಇಂಗ್ಲಿಷ್, ಫ್ರೆಂಚ್, ಜರ್ಮನ್ ಅಥವಾ ನಾರ್ವೇಜಿಯನ್ ಭಾಷೆಗಳಲ್ಲಿ ಮುದ್ರಣವಾಗಿರಬೇಕು. ಹಾಗೂ ಇಲ್ಲಿ ಒಂದು ವರ್ಷಗಳ ವರೆಗೆ ಭಾರತೀಯ ಲೈಸೆನ್ಸ್ ಬಳಸಲು ಅನುಮತಿ ಇದೆ.

ಇದನ್ನೂ ಓದಿ: ಡ್ರೈವಿಂಗ್ ಲೈಸೆನ್ಸ್ ಮುಗಿದ ತಕ್ಷಣ ಇದೊಂದು ಕೆಲಸವನ್ನು ಮಾಡಿ, ಸುಲಭವಾಗಿ ಡ್ರೈವಿಂಗ್ ಲೈಸೆನ್ಸ್ ಪಡೆಯುವ ಸಲಹೆಗಳು

ಇದನ್ನೂ ಓದಿ: ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್; HRA 3% ಏರಿಕೆ ಯಾವಾಗ ಎಂದು ಸರ್ಕಾರ ತಿಳಿಸಿದೆ.