UPI ಭಾರತದಲ್ಲಿ ದಿನನಿತ್ಯ ಬಳಸುವ ಒಂದು ಪೇಮೆಂಟ್ ಅಪ್ಲಿಕೇಶನ್. ಸ್ನೇಹಿತರಿಗೆ ಹಣ ವರ್ಗಾವಣೆ ಮಾಡಲು , 10 ರೂಪಾಯಿ ಚಾಕ್ಲೇಟ್ , ಬಂಗಾರ, ಬೆಲೆ ಬಾಳುವ ವಸ್ತುಗಳನ್ನು ತೆಗೆದುಕೊಂಡಾಗ ಯಾರು ನೋಟಿನ ರೂಪದಲ್ಲಿ ಹಣ ಪಾವತಿ ಮಾಡುವುದಿಲ್ಲ.ಬದಲಿಗೆ QR code ಸ್ಕ್ಯಾನ್ ಮಾಡಿ ಹಣವನ್ನು ಬ್ಯಾಂಕ್ ನಿಂದ ನೇರವಾಗಿ ಅಂಗಡಿ ಮಾಲೀಕನ ಬ್ಯಾಂಕ್ ಖಾತೆಗೆ ಕಳಿಸುತ್ತಾರೆ. ಆದರೆ ಭಾರತ ನಾಗರೀಕರು ವಿದೇಶಕ್ಕೆ ಪ್ರವಾಸಕ್ಕೆ ಹೋದಾಗಲೂ ಸಹ ನಮ್ಮ UPI ಬಳಸಬಹುದು ಎಂದರೆ ಅಚ್ಚರಿ ಪಡಬೇಕಾಗಿಲ್ಲ. ಹಾಗಾದರೆ ಈಗ ಯಾವ ಯಾವ ದೇಶದಲ್ಲಿ UPI ಬಳಸಬಹುದು ಎಂದು ತಿಳಿಯೋಣ.
ವಿದೇಶಾಂಗ ವ್ಯವಹಾರಗಳ ಸಚಿವಾಲಯವು UPI ಸೇವೆಗಳು ಈಗ ಶ್ರೀಲಂಕಾ ಮತ್ತು ಮಾರಿಷಸ್ ನಲ್ಲಿ ಲಭ್ಯವಿದೆ ಎಂದು ಪ್ರಕಟಿಸಿದೆ. ಶ್ರೀಲಂಕಾ ಮತ್ತು ಮಾರಿಷಸ್ ನಲ್ಲಿ ಯುನಿಫೈಡ್ ಪೇಮೆಂಟ್ ಇಂಟರ್ಫೇಸ್ (UPI) ಹಾಗೂ ರುಪೆ ಸೇವೆಗಳ ಉದ್ಘಾಟನೆಯನ್ನು ವರ್ಚುವಲ್ ಸಭೆಯಲ್ಲಿ ಮೂಲಕ ನರೇಂದ್ರ ಮೋದಿ ಭಾಗವಹಿಸಿದ್ದರು. ಇಂಟರ್ನ್ಯಾಷನಲ್ ಪೇಮೆಂಟ್ ಲಿಮಿಟೆಡ್ (NIPL) ಹಾಗೂ lyra ಫ್ರಾನ್ಸ್ ನಲ್ಲಿ UPI ಬಳಕೆ ಫೆಬ್ರುವರಿ 2024 ರಿಂದ ಆರಂಭವಾಯಿತು. ಹೆಚ್ಚಿನ ಮಾಹಿತಿಗಾಗಿ ನಮ್ಮ ಟೆಲಿಗ್ರಾಂ ಚಾನೆಲ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಭಾರತದ UPI ಯಾವ ಯಾವ ದೇಶದಲ್ಲಿ ಬಳಸಬಹುದು?
- ಭೂತಾನ್:- ಇಂಟರ್ನ್ಯಾಷನಲ್ ಪೇಮೆಂಟ್ ಲಿಮಿಟೆಡ್, ನ್ಯಾಷನಲ್ ಪೇಮೆಂಟ್ ಕಾರ್ಪೊರೇಷನ್ ಆಫ್ ಇಂಡಿಯಾದ ಅಂತಾರಾಷ್ಟ್ರೀಯ ಅಂಗಸಂಸ್ಥೆ ಹಾಗೂ ಭೂತಾನ್ ರಾಯಲ್ ಮಾನಿಟರ್ ಅಥಾರಿಟಿ ಜುಲೈ 31,2021 ರಲ್ಲಿ ಭಾರತದ ಭೀಮ್ ಯುಪಿಐ ಆಧಾರಿತ QR code ಸ್ಕ್ಯಾನರ್ ಬಳಕೆಗೆ ಆರಂಭಿಸಿದೆ. ಭೂತಾನ್ ನಲ್ಲಿ ಆರಂಭವಾದ ಭೀಮ್ ಯುಪಿಐ ಆಧಾರಿತ QR code ಸ್ಕ್ಯಾನರ್ ಪ್ರಾರಂಭದಿಂದ ಎರಡು ದೇಶಗಳ ಆರ್ಥಿಕ ಏಕೀಕರಣಕ್ಕೆ ಹೊಸ ಮೈಲಿಗಲ್ಲು ಆಗಿದೆ.
- ಓಮನ್:- ಇಂಟರ್ನ್ಯಾಷನಲ್ ಪೇಮೆಂಟ್ ಲಿಮಿಟೆಡ್, ನ್ಯಾಷನಲ್ ಪೇಮೆಂಟ್ ಕಾರ್ಪೊರೇಷನ್ ಆಫ್ ಇಂಡಿಯಾದ ಅಂತಾರಾಷ್ಟ್ರೀಯ ಅಂಗಸಂಸ್ಥೆ ಹಾಗೂ ಸೆಂಟ್ರಲ್ ಬ್ಯಾಂಕ್ ಆಫ್ ಓಮನ್ ನಡುವೆ ಅಕ್ಟೋಬರ್ 4 2022 ರಂದು ಒಪ್ಪಂದಕ್ಕೆ ಸಹಿ ಹಾಕಲಾಯಿತು . ಈ ಒಪ್ಪಂದದ ಪ್ರಕಾರ oman network ATM, POS ಮತ್ತು e-commerce ಸೈಟ್ ಗಳಲ್ಲಿ ಭಾರತದ rupay card ಓಮನ್ ನಲ್ಲಿ ಬಳಸಬಹುದು. ಹಾಗೂ UPI ಪೇಮೆಂಟ್ ಸಹ ಮಾಡಬಹುದು.
- ಮಾರಿಷಸ್ :- ಮಾರಿಷಸ್ ನಲ್ಲಿ ಇನ್ನೂ ನಮ್ಮ ದೇಶದ UPI ಹಾಗೂ ಭಾರತದಲ್ಲಿ ಐಪಿಎಸ್ ಅಪ್ಲಿಕೇಶನ್ ಬಳಸಬಹುದಾಗಿದೆ. ಹಾಗೂ ಭಾರತದ rupay card ಸಹಾ ಮಾರಿಷಸ್ ನಲ್ಲಿ ಬಳಸಬಹುದು.
- ಶ್ರೀಲಂಕಾ:- ಶ್ರೀಲಂಕಾ ದೇಶವು ಭಾರತದ UPI ಬಳಕೆಗೆ ಸಮ್ಮತಿ ಸೂಚಿಸಿದೆ. ಶ್ರೀಲಂಕಾದಲ್ಲು ಈಗ ಭಾರತೀಯ ಪ್ರವಾಸಿಗರು UPI ಬಳಸಬಹುದು.
- ನೇಪಾಳ :- ನೇಪಾಳಿ ಬಳಕೆದಾರರು ಯುನಿಫೈಡ್ ಪೇಮೆಂಟ್ ಇಂಟರ್ಫೇಸ್ ( UPI) ID ಬಳಸಿ ಭಾರತಕ್ಕೆ ಬ್ಯಾಂಕ್ ವರ್ಗಾವಣೆ ಮಾಡಲು ಸಾಧ್ಯ.
- ಫ್ರಾನ್ಸ್ :- ಫೆಬ್ರುವರಿ 4 2024 ರ NPCI ನೀಡಿರುವ ಪತ್ರಿಕಾ ಹೇಳಿಕೆಯ ಪ್ರಕಾರ ಇಂಟರ್ನ್ಯಾಷನಲ್ ಪೇಮೆಂಟ್ ಲಿಮಿಟೆಡ್ ಇ – ಕಾಮರ್ಸ್ ಮತ್ತು ಸಾಮೀಪ್ಯ ಪಾವತಿಗೆ ಫ್ರೆಂಚ್ ನಾಯಕ ಲೈರ ಅವರ ಸಹಭಾಗಿತ್ವದೊಂದಿಗೆ UPI ಬಳಕೆಯು ಐಫೆಲ್ ಟವರ್ ಇಂದ ಆರಂಭ ಆಗುತ್ತದೆ.
- ಆಗ್ನೇಯ ಏಷ್ಯಾ:- ಆಗ್ನೇಯ ಏಷ್ಯಾ ಹತ್ತು ರಾಷ್ಟ್ರಗಳು ಭಾರತದ UPI ಬಳಕೆ ಸಮ್ಮತಿಸಿದೆ.
ಇದನ್ನೂ ಓದಿ: ಸುಮಾರು 13000 ರೂಪಾಯಿಗಳ ರಿಯಾಯಿತಿಯೊಂದಿಗೆ Flipkart ನಲ್ಲಿ Apple iPhone 15 ನ ವಿಶೇಷತೆಯನ್ನು ನೀವೇ ನೋಡಿ
ಇದನ್ನೂ ಓದಿ: ಗ್ರಾಮ ಒನ್ ಕೇಂದ್ರ ಪ್ರಾಂಚೈಸಿಗೆ ಅರ್ಜಿ ಆಹ್ವಾನಿಸಲಾಗಿದೆ; ಹೀಗೆ ಅರ್ಜಿ ಸಲ್ಲಿಸಿ