ಮಹಿಳೆಯರು ಆರ್ಥಿಕವಾಗಿ ಸ್ವತಂತ್ರರಾಗಿ ಬದುಕಬೇಕು ಎಂದು ಈಗಾಗಲೇ ಕೇಂದ್ರ ಮತ್ತು ರಾಜ್ಯ ಸರಕಾರವು ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಮಹಿಳೆಯರ ಆರ್ಥಿಕ ಸಬಲೀಕರಣಕ್ಕಾಗಿ ಈಗ ರಾಜ್ಯ ಮತ್ತು ಕೇಂದ್ರ ಸರಕಾರಗಳು ಸೇರಿ ಲಖ್ಪತಿ ದೀದಿ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೀವು ತಿಳಿಯಬಹುದು.
ಏನಿದು ಲಖ್ಪತಿ ದೀದಿ ಯೋಜನೆ?: ಈ ಯೋಜನೆಯು ಮಹಿಳೆಯರಿಗೆ ಕೌಶಲ್ಯ ತರಬೇತಿ ನೀಡುವ ಯೋಜನೆ ಆಗಿದ್ದು ಈ ಯೋಜನೆಯಲ್ಲಿ ಮಹಿಳೆಯರ ಉದ್ಯಮ್ಯಕ್ಕೆ 1 ಲಕ್ಷ ರೂಪಾಯಿಯಿಂದ 5 ಲಕ್ಷ ರೂಪಾಯಿಯ ವರೆಗೆ ಬಡ್ಡಿ ರಹಿತ ಸಾಲವನ್ನು ನೀಡುತ್ತದೆ. ಮಹಿಳೆಯರಿಗೆ ಕೌಶಲ್ಯ ತರಬೇತಿ ನೀಡುವುದರ ಜೊತೆಗೆ ಮಹಿಳೆಯರ ಉದ್ಯಮಕ್ಕೆ ಸಹಾಯ ಧನ ನೀಡುವುದು ಯೋಜನೆಯ ಉದ್ದೇಶವಾಗಿದೆ. ನರೇಂದ್ರ ಮೋದಿ ಅವರ ಸರಕಾರ ವಿಶೇಷವಾಗಿ ಮಹಿಳೆಯರ ಆರ್ಥಿಕ ಸ್ಥಿತಿ ಸುಧಾರಿಸಬೇಕು ಎಂಬ ನಿಟ್ಟಿನಲ್ಲಿ ಈ ಯೋಜನೆಯನ್ನು ಆರಂಭಿಸಿದ್ದಾರೆ.
ಯೋಜನೆಯ ವಿಶೇಷತೆ ಏನು?
- ಕೌಶಲ್ಯ ತರಬೇತಿ ನೀಡುತ್ತಿದೆ :- ಮಹಿಳೆಯರಿಗೆ ಸ್ವಂತ ಉದ್ಯಮ ಆರಂಭ ಮಾಡಲು ಬೇಕಾಗಿರುವ ಕೌಶಲ್ಯ ತರಬೇತಿ ನೀಡುತ್ತದೆ. ಮಹಿಳೆಯರು ಮಾಡಬಹುದಾದ ಕ್ರಾಫ್ಟಿಂಗ್, ಹೊಲಿಗೆ, ಕೇಟರಿಂಗ್, ಇಂತಹ ಉದ್ಯೋಗಗಳಿಗೆ ಕೌಶಲ್ಯ ತರಬೇತಿ ನೀಡುತ್ತಾರೆ.
- ಬಡ್ಡಿ ರಹಿತ ಸಾಲ :- ಸಾಮಾನ್ಯವಾಗಿ ಯಾವುದೇ ಉದ್ಯಮ ಸ್ಟಾರ್ಟ್ ಮಾಡಬೇಕು ಎಂದರೆ ಸಾಲ ಪಡೆದಾಗ ಸಲಕ್ಕಿಂತ ಬಡ್ಡಿದರ ಜಾಸ್ತಿ ಇರುತ್ತದೆ. ಆದರೆ ಲಖ್ಪತಿ ದೀದಿ ಯೋಜನೆಯಲ್ಲಿ ಸಾಲದ ಮೊತ್ತವನ್ನು ಮಾತ್ರ ಮರುಪಾವತಿ ಮಾಡಿದರೆ ಸಾಕು. ಯಾವುದೇ ಬಡ್ಡಿ ಚಕ್ರಬಡ್ಡಿ ಇರುವುದಲ್ಲ.
- ಮಹಿಳೆಯರಿಗೆ ಆರ್ಥಿಕವಾಗಿ ನೆರವು :- ಸಾಲ ನೀಡುವ ಮೂಲಕ ಮಹಿಳೆಯರ ಉದ್ಯೋಗಕ್ಕೆ ಸಹಾಯ ಆಗುವುದಲ್ಲದೆ ಮಹಿಳೆಯರು ಸ್ವಾವಲಂಬಿಗಳಾಗಿ ಬದುಕಲು ಬಹಳ ಉಪಯೋಗ ಆಗುತ್ತದೆ.
ಯೋಜನೆಗೆ ಅರ್ಜಿ ಸಲ್ಲಿಸಲು ಇರುವ ಅರ್ಹತೆ :-
- ವಯಸ್ಸು :- ಲಖ್ಪತಿ ದೀದಿ ಯೋಜನೆಗೆ ಅರ್ಜಿ ಸಲ್ಲಿಸಲು ಮಹಿಳೆಯ ಕನಿಷ್ಠ ವಯಸ್ಸು 18 ಹಾಗೂ ಗರಿಷ್ಠ ವಯಸ್ಸು 50 ವರ್ಷ.
- ಭಾರತದ ಪ್ರಜೆ :- ಲಖ್ಪತಿ ದೀದಿ ಯೋಜನೆಗೆ ಅರ್ಜಿ ಸಲ್ಲಿಸಲು ಕಡ್ಡಾಯವಾಗಿ ಮಹಿಳೆ ಭಾರತದ ಪ್ರಜೆ ಆಗಿರಬೇಕು.
- ಸ್ವ ಸಹಕಾರಿ ಗುಂಪಿನ ಸದಸ್ಯತ್ವ :- ಈ ಯೋಜನೆಯ ಲಾಭ ಪಡೆಯಲು ಮಹಿಳೆಯರು ಸ್ವ ಸಹಕಾರಿ ಗುಂಪಿನ ಸದಸ್ಯತ್ವ ಹೊಂದಿರ್ಬೇಕು.
ಇದನ್ನೂ ಓದಿ: ಕಡಿಮೆ ಬಡ್ಡಿ ದರದಲ್ಲಿ ಗೃಹ ಸಾಲ ನೀಡುವ ಬ್ಯಾಂಕ್ ಗಳು ಯಾವುವು?
ಲಖ್ಪತಿ ದೀದಿ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ?
ಲಖ್ಪತಿ ದೀದಿ ಯೋಜನೆಗೆ ಅರ್ಜಿ ಸಲ್ಲಿಸಲು ಪ್ರಾದೇಶಿಕ ಸ್ವ-ಸಹಾಯ ಗುಂಪುಗಳ ಕಚೇರಿಗೆ ತೆರಳಿ ಅಗತ್ಯ ಮಾಹಿತಿಗಳು ಹಾಗೂ ದಾಖಲೆಗಳನ್ನು ನೀಡಬೇಕು ಜೊತೆಗೆ ನೀವು ಆರಂಭ ಮಾಡುವ ಉದ್ಯಮದ ಬಗ್ಗೆ ಸಂಪೂರ್ಣ ಮಾಹಿತಿ ನೀಡಬೇಕು. ಅರ್ಜಿ ಸಲ್ಲಿಸಿದ ನಂತರ ನಿಮ್ಮ ಅರ್ಜಿಯನ್ನು ಸಂಪೂರ್ಣವಾಗಿ ಪರಿಶೀಲನೆ ಮಾಡಿ ನಿಮ್ಮ ಅರ್ಜಿ ಅನುಮೋದನೆ ಪಡೆದ ನಂತರ ನೀವು ಯೋಜನೆಯ ಲಾಭ ಪಡೆಯಲು ಸಾಧ್ಯ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಅರ್ಜಿ ಸಲ್ಲಿಸುವಾಗ ನೀಡಬೇಕಾದ ದಾಖಲೆಗಳು :- ಲಖ್ಪತಿ ದೀದಿ ಯೋಜನೆಗೆ ಅರ್ಜಿ ಸಲ್ಲಿಸಲು ಮಹಿಳೆಯರು ಆಧಾರ್ ಕಾರ್ಡ್ ಹಾಗೂ ಪ್ಯಾನ್ ಕಾರ್ಡ್ ಪ್ರತಿ ಜೊತೆಗೆ ಆದಾಯ ಪುರಾವೆ, ಬ್ಯಾಂಕ್ ಪಾಸ್‌ಬುಕ್ ನ ಮೊದಲ ಪುಟದ ಪ್ರತಿ ಹಾಗೂ ಪಾಸ್‌ಪೋರ್ಟ್ ಸೈಜ್ ಫೋಟೋ ಹಾಗೂ ಮೊಬೈಲ್ ನಂಬರ್ ಜೊತೆಗೆ ಉದ್ಯಮದ ಬಗ್ಗೆ ದಾಖಲೆ ನೀಡಬೇಕು.
ಇದನ್ನೂ ಓದಿ: ಜನ್-ಧನ್ ಖಾತೆಯಿಂದ 10,000 ರೂ. ಓವರ್‌ಡ್ರಾಫ್ಟ್ ಸೇರಿದಂತೆ ಅನೇಕ ಲಾಭಗಳು! ಈಗಲೇ ತೆರೆಯಿರಿ!