ನೀವು ಗೂಗಲ್ ಪೇ ಬಳಸುತ್ತಿದ್ದೀರಾ ಹಾಗಾದರೆ ಇದೋ ನಿಮಗೆ ಒಂದು ಸಿಹಿ ಸುದ್ದಿ ಕಾಯ್ತಾ ಇದೆ…

Google Pay: ಈಗಿನ ದಿನಮಾನದಲ್ಲಿ ಸಾಲ ಮಾಡುವುದು ಅನಿವಾರ್ಯವಾಗಿದೆ, ಒಬ್ಬರು ಒಂದೊಂದು ರೀತಿಯ ಸಾಲವನ್ನು ಮಾಡುತ್ತಾರೆ. ಒಬ್ಬರು ಶಿಕ್ಷಣಕ್ಕಾಗಿ ಸಾಲ ತೆಗೆದರೆ ಇನ್ನೊಬ್ಬರು ಮನೆ ನಿರ್ಮಾಣಕ್ಕೆ ಅಂತ ಮತ್ತೊಬ್ಬರು ವಾಹನಗಳ ಖರೀದಿಗಾಗಿ ಹಾಗೂ ಇನ್ನಿತರೆ ವೈಯಕ್ತಿಕ ವಿಚಾರಗಳಿಗಾಗಿ ಸಾಲ ತೆಗೆಯುವುದು ಸರ್ವೇಸಾಮಾನ್ಯವಾಗಿದೆ. ಈಗಿನ ಹಣದುಬ್ಬರದಂತಹ ಪರಿಸ್ಥಿತಿಯಲ್ಲಿ ಸಾಲವನ್ನು ಮಾಡುವುದು ಅನಿವಾರ್ಯವಾಗಿದೆ. ಸುಮಾರಾಗಿ ಎಲ್ಲರೂ ಕೂಡ ಸಾಲವನ್ನು ಮಾಡುವುದು ತುಂಬಾನೇ ಅನಿವಾರ್ಯವಾಗಿದೆ ಹಾಗೂ ಇದು ಸರ್ವೆ ಸಾಮಾನ್ಯ ಅಂತಾನೂ ಹೇಳಬಹುದು. ಆದರೆ ಸಾಲವನ್ನು ಪಡೆಯುವುದು ಅಷ್ಟು ಸುಲಭವಲ್ಲ ಅದಕ್ಕೆ ಅಂತಾನೇ ಅನೇಕ ಪ್ರಕ್ರಿಯೆಗಳು ಇರುತ್ತವೆ. ನಾಗರೀಕರಿಗೆ ಸುಲಭವಾಗುವಂತಹ ಒಂದು ಹೊಸ ಸುದ್ದಿಯನ್ನ ಕೊಡ್ತಾ ಇದೆ ಗೂಗಲ್ ಪೇ.

WhatsApp Group Join Now
Telegram Group Join Now

ಈಗಿನ ದಿನಮಾನಗಳಲ್ಲಿ ಎಲ್ಲರೂ ಕೂಡ ಗೂಗಲ್ ಪೇಯನ್ನು ಬಳಸುತ್ತಿದ್ದಾರೆ ಎಲ್ಲರಿಗೂ ಕೂಡ ಗೂಗಲ್ ಪೇ(Google Pay) ಬಗ್ಗೆ ಮಾಹಿತಿಯೂ ಕೂಡ ಇದೆ. ಇಂತಹ ಸಂದರ್ಭಗಳಲ್ಲಿ ಗೂಗಲ್ ಪೇ ಒಂದು ಸಿಹಿ ಸುದ್ದಿಯನ್ನ ನೀಡಿದೆ. ಒಂದು ವೇಳೆ ನೀವು ಗೂಗಲ್ ಪೇಯನ್ನ ಬಳಸುತ್ತಿದ್ದರೆ ನಿಮಗೆ ಇದರ ಮೂಲಕವೇ ಸಾಲವನ್ನು ತೆಗೆದುಕೊಳ್ಳಬಹುದಾಗಿದೆ. ಮನೆಯಲ್ಲಿ ಕುಳಿತುಕೊಂಡು ನಿಮಗೆ ಬೇಕಾದಷ್ಟು ಸಾಲವನ್ನು ತೆಗೆದುಕೊಳ್ಳಬಹುದಾಗಿದೆ..

ದೈನಂದಿನ ಹೊಸ ಮಾಹಿತಿಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ: Click Here To Join WhatsApp

ಹಾಗಾದರೆ ಗೂಗಲ್ ಪೇ ಮೂಲಕ ಸಾಲ ಪಡೆಯುವುದು ಹೇಗೆ?

ನೇರವಾಗಿ ಗೂಗಲ್ ಪೇ(Google Pay) ನಿಮಗೆ ಸಾಲವನ್ನು ಕೊಡುವುದಿಲ್ಲ. ಬದಲಾಗಿ ಗೂಗಲ್ ಪೇ ಯು ಪಾಲುದಾರಿಕೆಯ ಮೂಲಕ ನಿಮಗೆ ಸಾಲವನ್ನು ನೀಡುತ್ತದೆ ಅಂದರೆ ಅನೇಕ ಹಣಕಾಸು ಕಂಪನಿಗಳು ಗೂಗಲ್ ಪೇ ಜೊತೆಗೆ ಪಾಲುದಾರಿಕೆಯಲ್ಲಿ ಸೇರಿಕೊಂಡಿವೆ. ಈ ರೀತಿಯಾಗಿ ಗೂಗಲ್ ಪೇ ಮೂಲಕ ನೀವು ಸಾಲವನ್ನು ಪಡೆಯಬಹುದು. ನೀವು ಗೂಗಲ್ ಪೇ ಅಪ್ಲಿಕೇಶನ್ ಅನ್ನ ಓಪನ್ ಮಾಡಿ ಅದರ ಮೂಲಕ ಸಾಲಕ್ಕಾಗಿ ಅರ್ಜಿಯನ್ನು ಸಲ್ಲಿಸಬಹುದು. ಅದು ಹೇಗೆಂದರೆ ಗೂಗಲ್ ಪೇ ಯು ಇಲ್ಲಿ ಕೇವಲ ಮಧ್ಯವರ್ತಿ ಅಷ್ಟೇ ಮಾತ್ರ. ನಿಮ್ಮ ಸಾಲಕ್ಕೂ ಗೂಗಲ್ ಪೇ ಗೂ ಯಾವುದೇ ಸಂಬಂಧವಿಲ್ಲ ಗೂಗಲ್ ಪೇ ಇದಕ್ಕೆ ಯಾವುದೇ ರೀತಿಯ ಜವಾಬ್ದಾರಿಯಲ್ಲ. ಇದು ಕೇವಲ ಮಧ್ಯವರ್ತಿಯಾಗಿ ಕಾರ್ಯವನ್ನ ನಿರ್ವಹಿಸುತ್ತಿದೆ. ಹಣಕಾಸಿನ ಕಂಪನಿಗಳಿಗೆ ಇದು ಪಾಲುದಾರಿಕೆ ಕೆಲಸವನ್ನು ಮಾಡುತ್ತಿದೆ ಅಷ್ಟೇ.

ಗೂಗಲ್ ಪೇ ಆಪ್(Google Pay) ಅನ್ನು ಓಪನ್ ಮಾಡಿ, ಅಲ್ಲಿ ಮ್ಯಾನೇಜ್ ಮನಿ ಅನ್ನೋ ಒಂದು ಆಪ್ಷನ್ ಇರುತ್ತೆ ಅಲ್ಲಿ ನೀವು ಕ್ಲಿಕ್ ಮಾಡಿದರೆ ಅಲ್ಲಿ ಸುಮಾರು ರೀತಿಯ ಆಪ್ಷನ್ಗಳು ನಿಮಗೆ ಕಾಣಿಸುತ್ತೆ. ನೀವು ಲೋನ್(Loan) ಅನ್ನೋ ಆಪ್ಷನ್ ಮೇಲೆ ಕ್ಲಿಕ್ ಮಾಡಬೇಕು. ನಂತರ ಸುಮಾರು ಆಯ್ಕೆಗಳು ನಿಮ್ಮ ಕಣ್ಣ ಮುಂದೆ ಬರುತ್ತೆ. ನಿಮಗೆ ಯಾವ ಕಂಪನಿಗಳಿಂದ ಲೋನ್ ತೆಗೆದುಕೊಳ್ಳಬೇಕು ಅಥವಾ ಯಾವ ಫೈನಾನ್ಸಿಂದ ನೀವು ಲೋನ್ ತೆಗೆದುಕೊಳ್ಳಬೇಕು ಎನ್ನುವುದನ್ನು ನೀವು ತೀರ್ಮಾನಿಸಬೇಕು. ನೀವು ತೆಗೆದುಕೊಳ್ಳಬೇಕಾದ ಆಯ್ಕೆಯನ್ನು ಸೆಲೆಕ್ಟ್ ಮಾಡಿದ ನಂತರ ಸ್ಟಾರ್ಟ್ ಲೋನ್ (Start Loan) ಅನ್ನೋ ಒಂದು ಆಪ್ಷನ್ ಬರುತ್ತೆ. ಅದರ ಮೇಲೆ ಕ್ಲಿಕ್ ಮಾಡಿದಾಗ ನಿಮ್ಮ ದಾಖಲಾತಿಗಳೆಲ್ಲವನ್ನು ಕೇಳುತ್ತೆ.

ಅದು ಕೇಳಿದ ದಾಖಲಾತಿಗಳನ್ನು ನೀವು ಒದಗಿಸಬೇಕಾಗುತ್ತದೆ ಅಂದರೆ ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಬೇಕಾಗುತ್ತೆ. ನಿಮ್ಮ ಮನೆಯ ವಿಳಾಸ ಆಧಾರ ಕಾರ್ಡ್ ಮತ್ತು ಪ್ಯಾನ್ ಕಾರ್ಡ್ ಗಳನ್ನು ಅಪ್ಲೋಡ್ ಮಾಡಬೇಕಾಗುತ್ತೆ. ಇದರಿಂದ ಸುಮಾರು ನೀವು ಆರು ಲಕ್ಷಕ್ಕೂ ಅಧಿಕ ಸಾಲವನ್ನು ಪಡೆಯಬಹುದು. 15% ಬಡ್ಡಿ ದರದೊಂದಿಗೆ ನೀವು ಇಲ್ಲಿ ಸಾಲವನ್ನು ಪಡೆಯಬಹುದು. ಇಲ್ಲಿ ನಿಮ್ಮ ಅರ್ಹತೆಗೆ ಅನುಗುಣವಾಗಿ ಸಾಲವನ್ನು ವಿತರಿಸಲಾಗುತ್ತದೆ. ಹೀಗೆ ನೀವು ಮನೆಯಲ್ಲೇ ಕುಳಿತುಕೊಂಡು ನಿಮಗೆ ಬೇಕಾದ ಸಾಲುಗಳನ್ನ ಪಡೆದುಕೊಳ್ಳಬಹುದು. ಯಾವುದೇ ರೀತಿಯ ಸರದಿಯಲ್ಲಿ ನಿಂತುಕೊಳ್ಳುವ ಅವಶ್ಯಕತೆ ಇಲ್ಲ ಅಥವಾ ಮನೆಯ ಹೊರಗಡೆ ಹೋಗಿ ಬಿಸಿಲಿನ ತಾಪದಲ್ಲಿ ಬೇಯುವ ಕ್ರಮವಿಲ್ಲ. ಮನೆಯಲ್ಲಿ ಕುಳಿತುಕೊಂಡು ಸ್ವಲ್ಪ ಸಮಯದಲ್ಲಿ ನಿಮಗೆ ಬೇಕಾದ ರೀತಿಯ ಸಾಲವನ್ನು ನೀವೇ ಪಡೆದುಕೊಳ್ಳಬಹುದು. 

ಇದನ್ನೂ ಓದಿ: ಗೃಹಲಕ್ಷ್ಮಿ ಯೋಜನೆಯ 2ನೇ ಕಂತಿನ ಹಣ ಬಿಡುಗಡೆ ಆದರು ನಿಮಗೆ ಯಾಕೆ ಬಂದಿಲ್ಲ?

ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram