ನಾಳೆ ರಾಜ್ಯದಲ್ಲಿ ಮೊದಲ ಹಂತದ ಲೋಕಸಭಾ ಚುನಾವಣೆ ನಡೆಯುತ್ತಿದೆ. ವೋಟ್ ಹಾಕುವ ಪ್ರಮಾಣವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಈಗಾಗಲೇ ಅನೇಕ ಸಂಸ್ಥೆಗಳು ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದೆ. ಅದರಂತೆಯೇ ಈಗ ಬೆಂಗಳೂರಿನ ಕೆಲವು ಹೋಟೆಲ್ ಗಳಲ್ಲಿ ನಾಳೆ ವೋಟ್ ಮಾಡಿ ಹೋಟೆಲ್ ಗೆ ಬಂದರೆ ಕೆಲವು ತಿಂಡಿಗಳು ರಿಯಾಯಿತಿ ದರದಲ್ಲಿ ನೀಡುತ್ತೇವೆ ಹಾಗೂ ಉಚಿತವಾಗಿ ನೀಡುತ್ತೇವೆ ಎಂದು ಕೆಲವು ಹೋಟೆಲ್ ಗಳು ಆಫರ್ ಮಾಡಿವೆ. ಹಾಗಾದರೆ ಯಾವ ಯಾವ ಹೋಟೆಲ್ ಗಳು ಈ ಆಫರ್ ನೀಡಿವೆ ಎಂಬ ಬಗ್ಗೆ ಮಾಹಿತಿ ಇಲ್ಲಿದೆ.
ಹೋಟೆಲ್ ಗಳ ಈ ಆಫರ್ ಗೆ ಬಿಬಿಎಂಪಿ ವಿರೋಧ ಮಾಡಿತ್ತು :- ಉಚಿತವಾಗಿ ಚುನಾವಣೆಯ ದಿನ ಮತದಾನ ಮಾಡಿದರೆ ಊಟ ನೀಡುವ ಘೋಷಣೆ ಮಾಡಿದ ಹೋಟೆಲ್ ಗಳ ನಿರ್ಧಾರವನ್ನು ಬಿಬಿಎಂಪಿ ವಿರೋಧ ಮಾಡಿತ್ತು. ಆದರೆ ಹೋಟೆಲ್ ಮಾಲೀಕರ ಸಂಘವು ವಿರೋಧವನ್ನು ಪ್ರಶ್ನಿಸಿ ಹೈಕೋರ್ಟ್ ಮೊರೆ ಹೋಗಿತ್ತು. ವಾದ ವಿವಾದಗಳನ್ನು ಪರಿಶೀಲಿಸಿ ಈಗ ಕೋರ್ಟ್ ಉಚಿತ ಊಟ ನೀಡಲು ಅನುಮತಿ ನೀಡಲಾಗಿದೆ.
ಯಾವ ಯಾವ ಹೋಟೆಲ್ ನಲ್ಲಿ ಈ ಆಫರ್ ಸಿಗುತ್ತಿದೆ?: ಮತ ಹಾಕಿ ಬೆರಳು ತೋರಿಸಿದರೆ ರಿಯಾಯಿತಿ ದರದಲ್ಲಿ ಹಾಗೂ ಉಚಿತವಾಗಿ ಹಲವು ಹೋಟೆಲ್ ಗಳು ಊಟ ಹಾಗೂ ತಿಂಡಿಯನ್ನು ನೀಡುತ್ತಿದ್ದಾರೆ ಅದರಲ್ಲಿ ಪ್ರಮುಖ ಯಾವುದೆಂದರೆ ನಿಸರ್ಗ ಗ್ರ್ಯಾಂಡ್, ಕೆಫೆ ಉಡುಪಿ ರುಚಿ, ಅಯ್ಯಂಗಾರ್ ವೆನ್ ಫ್ರೆಶ್, ಕಾಮತ್ ಹೋಟೆಲ್ ಗಳು. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ನಿಸರ್ಗ ಗ್ರ್ಯಾಂಡ್ ಹೋಟೆಲ್ ಮಾಲೀಕ ಹೇಳಿಕೆ ಹೀಗಿದೆ:-
ಬೆಂಗಳೂರಿನ ನೃಪತುಂಗ ರೋಡ್ ನಲ್ಲಿ ಇರುವ ಪ್ರಸಿದ್ಧ ನಿಸರ್ಗ ಗ್ರ್ಯಾಂಡ್ ಹೋಟೆಲ್ ನಲ್ಲಿ ಚುನಾವಣೆಯ ಪ್ರಯುಕ್ತ ‘ವೋಟ್ ಮಾಡಿ, ಊಟ ಮಾಡಿ’ ಎಂಬ ಅಭಿಯಾನ ಆರಂಭ ಆಗಿದೆ. ಮತದಾನದ ಮಾಡಿ ಮತದಾನ ಮಾಡಿದ ಗುರುತು ತೋರಿಸಿದರೆ ಉಚಿತವಾಗಿ ಬೆಣ್ಣೆ ದೋಸೆ, ಲಡ್ಡು ಮತ್ತು ಜ್ಯೂಸ್ ನೀಡುವುದಾಗಿ ಮಾಲೀಕರು ತಿಳಿಸಿದ್ದಾರೆ. ಈ ಹಿಂದೆ ನಡೆದ 2018 ರ ವಿಧಾನಸಭಾ ಚುನಾವಣೆಯಲ್ಲಿಯೂ ಸಹ ಮತದಾನ ಮಾಡಿದವರಿಗೆ ಉಚಿತ ಆಫರ್ ನೀಡಿತ್ತು.
ಹೋಟೆಲ್ ಹೊರತುಪಡಿಸಿ ಏನೇನು ಆಫರ್ ಗಳು ಇವೆ :-
ಚುನಾವಣೆಯಲ್ಲಿ ಮತದಾನ ಮಾಡಿದವರಿಗೆ ಉಚಿತ ಊಟದ ಜೊತೆಗೆ ಇನ್ನಷ್ಟು ಆಫರ್ ಇವೆ. ಮತದಾರರನ್ನು ಉಚಿತ ಹಾಗೂ ಆಫರ್ ಗಳ ಮೂಲಕ ಸೆಳೆಯಲು ಪ್ರಜ್ಞಾವಂತರು ಪ್ರಯತ್ನಿಸಿದ್ದಾರೆ.
- ಈಗಾಗಲೇ ಹಲವು ಐಟಿ ಕಂಪನಿಗಳು ಸಂಬಳದ ಜೊತೆಗೆ ರಜೆ ನೀಡುತ್ತಿವೆ.
- Rapido ಹಿರಿಯ ನಾಗರಿಕರು ಮತ್ತು ಅಂಗವಿಕಲರಿಗೆ ಉಚಿತವಾಗಿ ಮತಗಟ್ಟೆಗೆ ಕರೆದುಕೊಂಡು ಹೋಗುತ್ತೇವೆ ಎಂದು ಘೋಷಣೆ ಮಾಡಿದೆ. ಭಾರತೀಯ ಚುನಾವಣಾ ಆಯೋಗ ಮತ್ತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯೊಂದಿಗೆ ಸೇರಿಕೊಂಡು Rapido ಸಂಸ್ಥೆ ಈ ಯೋಜನೆ ತಿಳಿಸಿದೆ. ಈ ಸೇವೆಯನ್ನು.ಪಡೆಯಲು ರಾಪಿಡೊ ಬುಕ್ ಮಾಡಿ ಕೋಡ್ ಬಳಸಬೇಕು ಎಂದು ತಿಳಿಸಿದೆ.
- ಬಿಡದಿ ಬಳಿ ಇರುವ ಜನಪ್ರಿಯ ಅಮ್ಯೂಸ್‌ಮೆಂಟ್ ಪಾರ್ಕ್ ವಂಡರ್ಲಾ ನಲ್ಲಿ ಮತದಾನ ಮಾಡಿರುವ ಬಗ್ಗೆ ಕೈ ಗುರುತು ಪ್ರದರ್ಶಿಸುವವರಿಗೆ ಏಪ್ರಿಲ್ 26, 27 ಮತ್ತು 28 ನೇ ತಾರೀಖಿನ ದಿನ ಟಿಕೆಟ್ ಮೇಲೆ ಶೇಕಡಾ 15 ರಷ್ಟು ರಿಯಾಯಿತಿ ನೀಡುವುದಾಗಿ ಘೋಷಣೆ ಮಾಡಲಾಗಿದೆ.
ಇದನ್ನೂ ಓದಿ: ಗೃಹಲಕ್ಷ್ಮಿ ಖಾತೆಯ ಫಲಾನುಭವಿಗಳಿಗೆ ಏಪ್ರಿಲ್ ತಿಂಗಳಲ್ಲಿ 4,000 ರೂಪಾಯಿ ಹಣ ಜಮಾ ಆಗಿದೆ.
ಇದನ್ನೂ ಓದಿ: ಈ ಪೋಸ್ಟ್ ಆಫೀಸ್ ಉಳಿತಾಯ ಯೋಜನೆಯೊಂದಿಗೆ ಪ್ರತಿ ತಿಂಗಳು ರೂ 20,500 ಪಡೆಯಿರಿ!