ಎಲೆಕ್ಷನ್ ಕಾರ್ಡ್ ಇಲ್ಲದೆಯೇ ವೋಟ್ ಮಾಡುವುದು ಹೇಗೆ?

Lok Sabha Election Voting Without Voter ID Card

ದೇಶದಲ್ಲಿ ಲೋಕಸಭಾ ಚುನಾವಣೆ ನಡೆಯುತ್ತಾ ಇದೆ. ಚುನಾವಣೆಯಲ್ಲಿ ವೋಟ್ ಹಾಕುವಾಗ ಎಲೆಕ್ಷನ್ ಕಾರ್ಡ್ ಇಲ್ಲದೆ ಇದ್ದಲ್ಲಿ ನಾವು ವೋಟ್ ಹಾಕುವುದು ಹೇಗೆ ಎಂಬ ಪ್ರಶ್ನೆ ನಿಮಗೆ ಬರಬಹುದು. ಆದರೆ ನೀವು 18ವರ್ಷ ಮೇಲ್ಪಟ್ಟ ವ್ಯಕ್ತಿ ಆಗಿದ್ದರೆ ನೀವು ವೋಟ್ ಹಾಕಲು ಸಾಧ್ಯವಿದೆ. ಎಲೆಕ್ಷನ್ ಕಾರ್ಡ್ ಇಲ್ಲದೆಯೇ ನಾವು ಹೇಗೆ ವೋಟ್ ಮಾಡಬಹುದು ಎಂಬುದನ್ನು ಈ ಲೇಖನದಲ್ಲಿ ತಿಳಿಯೋಣ.

WhatsApp Group Join Now
Telegram Group Join Now

ಕರ್ನಾಟಕದಲ್ಲಿ ಚುನಾವಣಾ ದಿನಾಂಕ ಯಾವಾಗ?: ಕರ್ನಾಟಕದಲ್ಲಿ ಎರಡು ಹಂತದಲ್ಲಿ ಲೋಕಸಭಾ ಚುನಾವಣೆ ನಡೆಯುತ್ತಿದ್ದು. ಇದೇ ಬರುವ ಏಪ್ರಿಲ್ 26 ರಂದು ಮೊದಲ ಹಂತದ ಚುನಾವಣೆ ನಡೆಯುತ್ತಿದೆ. ಹಾಗೂ ಮೇ 7 ರಂದು ಎರಡನೇ ಹಂತದ ಚುನಾವಣೆ ನಡೆಯಲಿದೆ. 

Voter ID ಇಲ್ಲದೆಯೇ ವೋಟ್ ಮಾಡುವುದು ಹೇಗೆ?

ಚುನಾವಣಾ ಆಯೋಗದ ಸೂಚನೆಯ ಪ್ರಕಾರ voter ID ಇಲ್ಲದೆಯೇ ನಿಮ್ಮ ಬಳಿ ಯಾವುದೇ ರೀತಿಯ ಸರ್ಕಾರ ನೀಡಿದ ಯಾವುದೇ ಗುರುತಿನ ಚೀಟಿ ಇದ್ದರೂ ಸಹ ನೀವು ವೋಟ್ ಮಾಡ್ಬಹುದು ಎಂದು ತಿಳಿಸಿದೆ. ಚುನಾವಣಾ ಆಯೋಗವು ಮಾನ್ಯ ಮಾಡುವ ಕಾರ್ಡ್ಗಳು ಹೀಗಿವೆ :-
ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಭಾರತೀಯ ಪಾಸ್ಪೋರ್ಟ್ ಚಾಲನಾ ಪರವಾನಿಗೆ ಪತ್ರ , MNREGA ಜಾಬ್ ಕಾರ್ಡ್, ಫೋಟೋದೊಂದಿಗೆ ಪಿಂಚಣಿ ದಾಖಲೆ, ಬ್ಯಾಂಕ್ ಅಥವಾ ಅಂಚೆ ಕಛೇರಿಯಿಂದ ನೀಡಿದ ಫೋಟೋದೊಂದಿಗೆ ಪಾಸ್‌ಬುಕ್, ಕಾರ್ಮಿಕ ಸಚಿವಾಲಯ ನೀಡಿರುವ ಆರೋಗ್ಯ ವಿಮೆ ಸ್ಮಾರ್ಟ್ ಕಾರ್ಡ್, ಸಾಮಾಜಿಕ ನ್ಯಾಯ ಸಚಿವಾಲಯವು ನೀಡಿದ ನಿರ್ದಿಷ್ಟ ಅಂಗವೈಕಲ್ಯ ಐ-ಕಾರ್ಡ್, ಕೇಂದ್ರ/ರಾಜ್ಯ ಸರ್ಕಾರಗಳು ಅಥವಾ PSUಗಳು ಉದ್ಯೋಗಿಗಳಿಗೆ ನೀಡಿದ ಭಾವಚಿತ್ರದೊಂದಿಗೆ ಸೇವಾ I-ಕಾರ್ಡ್ ಎಂಪಿಗಳು, ಎಂಎಲ್ಎಗಳು ಮತ್ತು ಎಂಎಲ್ಸಿಗಳಿಗೆ ಅಧಿಕೃತ ಗುರುತಿನ ಚೀಟಿ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಅನಿವಾಸಿ ಭಾರತೀಯರು ಯಾವ ದಾಖಲೆ ನೀಡಬೇಕು?: ಅನಿವಾಸಿ ಭಾರತೀಯರ ಮತದಾನ ಕೇಂದ್ರದಲ್ಲಿ ಗುರುತಿಸಲು, ಅವರ ಮೂಲ ಪಾಸ್‌ಪೋರ್ಟ್ ಮಾತ್ರ ಸ್ವೀಕಾರಾರ್ಹ ಗುರುತಿನ ದಾಖಲೆಯಾಗಿದೆ. ಯಾವುದೇ ಇತರ ಗುರುತಿನ ದಾಖಲೆಗಳನ್ನು ಒಪ್ಪಿಕೊಳ್ಳಲಾಗುವುದಿಲ್ಲ.

ಭಾರತದಲ್ಲಿ ಒಟ್ಟು ಏಳು ಹಂತಗಳಲ್ಲಿ ಮತದಾನ ಪ್ರಕ್ರಿಯೆ ನಡೆಯಲಿದೆ. ಚುನಾವಣೆಯ ಫಲಿತಾಂಶಗಳು ಜೂನ್ 4 ರಂದು ಪ್ರಕಟವಾಗಲಿವೆ.

ಲೋಕಸಭಾ ಚುನಾವಣಾ ಕ್ಷೇತ್ರಗಳು: 543 ಲೋಕಸಭಾ ಕ್ಷೇತ್ರಗಳನ್ನು ಒಳಗೊಂಡಿರುವ ಭಾರತದ ದ್ವಿಮಾನ ಸಂಸ್ಥೆಯನ್ನು ಜನಸಂಖ್ಯೆಯ ಪ್ರಮಾಣಕ್ಕೆ ಅನುಗುಣವಾಗಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಾಗಿ ವಿಂಗಡಿಸಲಾಗಿದೆ.

ಇದನ್ನೂ ಓದಿ: ಆಭರಣ ಪ್ರಿಯರಿಗೆ ಸಿಹಿ ಸುದ್ದಿ; ಇಳಿಕೆ ಕಂಡ ಚಿನ್ನದ ಬೆಲೆ!

ಚುನಾವಣಾ ಕಣದಲ್ಲಿರುವ ಪ್ರಧಾನಿ ಅಭ್ಯರ್ಥಿಗಳ ಕುರಿತು ಮಾಹಿತಿ :-

ನರೇಂದ್ರ ಮೋದಿ: ಇವರಿಗೆ 73 ವರ್ಷ ವಯಸ್ಸು ಆಗಿದೆ. ಮೋದಿ ಅವರು ಪಶ್ಚಿಮ ಗುಜರಾತ್ ರಾಜ್ಯದ ಸಣ್ಣ ಪಟ್ಟಣದಲ್ಲಿ ಹುಟ್ಟಿದವರು. ಅವರು ತಮ್ಮ 20 ನೇ ವಯಸ್ಸಿನಲ್ಲಿ ಬಿಜೆಪಿಯ ಸೈದ್ಧಾಂತಿಕ ಪೋಷಕ ಆರ್‌ಎಸ್‌ಎಸ್ ಮತ್ತು ಸುಮಾರು ಒಂದೂವರೆ ದಶಕದ ನಂತರ ಜನಸಂಘಕ್ಕೆ ಸೇರಿದವರಾಗಿದ್ದಾರೆ. ವಿಶ್ವದ ಉತ್ತಮ ನಾಯಕನಾಗಿ ಗುರುತಿಸಿಕೊಂಡು ಭಾರತವನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯುವ ಸಲುವಾಗಿ ಬಹಳ ಶ್ರಮಿಸಿದ್ದಾರೆ. ಭಾರತದ ಸೇವಕ ಎಂದು ಹೇಳಿಕೊಳ್ಳುವ ಮೋದಿ ಅವರು ನಿಜಕ್ಕೂ ಭಾರತದ ಸೇವೆ ಮಾಡುತ್ತಾ ಇದ್ದಾರೆ.

ರಾಹುಲ್ ಗಾಂಧಿ: ಇವರು ಕಾಂಗ್ರೆಸ್ ಪಕ್ಷದ ನಾಯಕ. ಸೋನಿಯಾ ಗಾಂಧಿ ಅವರ ಮಗ. ಇವರು ಈಗಿನ ಇನ್ನೊಬ್ಬ ಪ್ರಧಾನಿ ಅಭ್ಯರ್ಥಿ ಆಗಿದ್ದರೆ. ಇವರು ಪ್ರಧಾನಿ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸುತ್ತಾರೆ. ಇವರಿಗೆ ಕೆಲವು ಬೆಂಬಲಿಗರು ಇದ್ದರೆ. ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಶ್ರಮ ಪಡುತ್ತಾ ಇದ್ದರೆ.

ಇದನ್ನೂ ಓದಿ: ಕ್ರೆಡಿಟ್ ಸ್ಕೋರ್ ಕಡಿಮೆ ಇದ್ದರೂ ನೀವು ಸುಲಭವಾಗಿ ಸಾಲ ಪಡೆಯಲು ಸಾಧ್ಯವಿದೆ