ಎಲ್ ಪಿ ಜಿ ಗ್ಯಾಸ್ ಸಬ್ಸಿಡಿ ಬೇಕು ಅಂದ್ರೆ ಮರೆಯದೆ ಈ ಕೆಲಸ ಮಾಡಿ; ಇಲ್ಲಾಂದ್ರೆ ಸಬ್ಸಿಡಿ ಹಣ ನಿಮ್ಮ ಖಾತೆ ಸೇರಲ್ಲ

ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಉಜ್ವಲ ಯೋಜನೆಯಡಿ ಬಡ ಕುಟುಂಬಗಳ ಮಹಿಳಾ ಸಬಲೀಕರಣಕ್ಕಾಗಿ ಉಚಿತ ಎಲ್.ಪಿ.ಜಿ LPG ವಿತರಣೆ ಮಾಡಲಾಗುತ್ತದೆ. ಇದರ ಜೊತೆಗೆ ಇತ್ತೀಚಿನ ದಿನಗಳಲ್ಲಿ ಎಲ್‌ಪಿಜಿ ಸಿಲಿಂಡರ್ ನ ಬೆಲೆಯನ್ನು 200 ರೂಪಾಯಿಗಳಷ್ಟು ಸರ್ಕಾರ ಕಡಿತಗೊಳಿಸಿದೆ. ಇದೀಗ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರೊಳಗೊಂಡ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದ್ದು, ಗ್ಯಾಸ್ ಸಬ್ಸಿಡಿ(Subsidy) ಪಡೆದುಕೊಳ್ಳುವವರು ಈ ನಿಯಮ ಪಾಲಿಸಲೇಬೇಕು ಅಂತ ತೀರ್ಮಾನಿಸಲಾಗಿದೆ. ಹೌದು ಕೇಂದ್ರ ಮೋದಿ ಸರ್ಕಾರ ಪ್ರಧಾನಮಂತ್ರಿ ಉಜ್ವಲ ಯೋಜನೆಯ ಫಲಾನುಭವಿಗಳಿಗೆ ಇನ್ನೂರು ರೂಪಾಯಿಗಳ ಸಬ್ಸಿಡಿ ಅನ್ನು 300 ರೂಪಾಯಿಗಳಿಗೆ ಹೆಚ್ಚಿಸಲು ನಿರ್ಧರಿಸಿದೆ. ಅಂದ್ರೆ 603 ರೂಪಾಯಿಗಳಿಗೆ ಉಜ್ವಲ ಯೋಜನೆಯ ಫಲಾನುಭವಿಗಳು ಗ್ಯಾಸ್ ಸಿಲೆಂಡರ್ ಪಡೆದುಕೊಳ್ಳಬಹುದು.

WhatsApp Group Join Now
Telegram Group Join Now

ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ಅಡಿಯಲ್ಲಿ ಫಲಾನುಭವಿಗಳು ಸಬ್ಸಿಡಿ ಪಡೆದುಕೊಳ್ಳುತ್ತಾರೆ ಹಾಗೂ ಉಚಿತ ಗ್ಯಾಸ್ ಕನೆಕ್ಷನ್ ಕೂಡ ಸಿಗುತ್ತದೆ. ಆದರೆ, ಇನ್ಮುಂದೆ ಸಬ್ಸಿಡಿ ಹಣ ಪಡೆದುಕೊಳ್ಳಬೇಕು ಅಂದ್ರೆ ನಿಮ್ಮ ಬ್ಯಾಂಕ್ ಖಾತೆಯೊಂದಿಗೆ ಆಧಾರ್ ಲಿಂಕ್ ಮಾಡಿಕೊಳ್ಳುವುದು ಕಡ್ಡಾಯವಾಗಿದೆ. ಇಲ್ಲದಿದ್ದರೆ ಗ್ಯಾಸ್ ಸಿಲಿಂಡರ್ ಸಬ್ಸಿಡಿ ಪ್ರಯೋಜನ ಸಿಗುವುದಿಲ್ಲ. ಫಲಾನುಭವಿಗಳು ಗ್ಯಾಸ್ ಸಬ್ಸಿಡಿ ಹಣ ಪಡೆದುಕೊಳ್ಳದೆ ವಂಚಿತರಾಗಬಹುದು. ಹೌದು ಕೇಂದ್ರ ಸರ್ಕಾರ ಎಲ್‌ಪಿಜಿ ಗ್ಯಾಸ್ ಸಂಪರ್ಕವನ್ನು ಆಧಾರ್ ಕಾರ್ಡ್‌ಗೆ ಲಿಂಕ್ ಮಾಡಲು ಸೂಚಿಸಿದೆ. ಈ ಪ್ರಕ್ರಿಯೆಯನ್ನು ಗ್ರಾಹಕರು ಪೂರ್ಣಗೊಳಿಸದಿದ್ದರೆ, LPG ಗ್ಯಾಸ್ ಸಿಲಿಂಡರ್ ಸಬ್ಸಿಡಿಯ ಲಾಭ ಪಡೆಯಲು ಸಾಧ್ಯವಿಲ್ಲ. ಹಾಗಾದ್ರೆ ಆಧಾರ್ ಲಿಂಕ್ ಮಾಡ್ಸೋದು ಹೇಗೆ ಏನ್ ಮಾಡಬೇಕು ಇದ್ದೆಲ್ಲವನ್ನ ನೋಡ್ತಾ ಹೋಗೋಣ ಬನ್ನಿ.

ದೈನಂದಿನ ಹೊಸ ಮಾಹಿತಿಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ: Click Here To Join WhatsApp

ಆಧಾರ್ ನಂಬರ್ ಲಿಂಕ್ ಮಾಡೋಸಿದು ಕಡ್ಡಾಯ

ಹೌದು ಈಗಾಗ್ಲೇ ದೇಶದಲ್ಲಿ ಜನಸಾಮಾನ್ಯರು ಪ್ರತಿಯೊಂದು ವಸ್ತುವಿನ ಬೆಲೆ ಏರಿಕೆಯಿಂದ ತತ್ತರಿಸಿ ಹೋಗಿದ್ದಾರೆ. ಈ ಮಧ್ಯೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಕೊಂಚ ಇಳಿಕೆ ಮಾಡಿ ಜನಸಾಮಾನ್ಯರಿಗೆ ಗುಡ್ ನ್ಯೂಸ್ ಕೊಟ್ಟಿತ್ತು. ಇದೀಗ ಮತ್ತೊಂದು ಹೆಜ್ಜೆ ಮುಂದೆ ಇಟ್ಟಿರುವ ಕೇಂದ್ರ ಸರ್ಕಾರ ಸಬ್ಸಿಡಿಯಲ್ಲೂ ಏರಿಕೆ ಮಾಡಲು ಮುಂದಾಗಿದ್ದು, ಅದಕ್ಕಾಗಿ ಗ್ರಾಹಕರು ಈ ಒಂದು ಚಿಕ್ಕ ಕೆಲಸವನ್ನ ಮಾಡಲೇಬೇಕು ಅಂತ ತಿಳಿಸಿದೆ. ಹೌದು ಎಲ್‌ಪಿಜಿ ಗ್ಯಾಸ್ ಸಂಪರ್ಕದ ಸಬ್ಸಿಡಿ( Subsidy) ಪಡೆಯಲು ಆಧಾರ್ ಕಾರ್ಡ್ ಲಿಂಕ್ ಮಾಡಬೇಕು. ಆಗ ಮಾತ್ರ ಸಬ್ಸಿಡಿ ಸಿಗುತ್ತದೆ. ನಿಮ್ಮ LPG ಗ್ಯಾಸ್ ಸಂಪರ್ಕವನ್ನು ಆಧಾರ್ ಕಾರ್ಡ್‌ನೊಂದಿಗೆ ಲಿಂಕ್ ಮಾಡದಿದ್ದರೆ, ನೀವು ಹೆಚ್ಚು ಕಷ್ಟಪಡಬೇಕಾಗಿಲ್ಲ, ಮನೆಯಲ್ಲಿ ಕುಳಿತು ಆನ್‌ಲೈನ್‌ನಲ್ಲಿ ಈ ಪ್ರಕ್ರಿಯೆಯನ್ನು ಸುಲಭವಾಗಿ ಪೂರ್ಣಗೊಳಿಸಬಹುದು.

ಹೌದು ಆಧಾರ್ ಕಾರ್ಡ್‌ನಲ್ಲಿ LPG ಗ್ಯಾಸ್ ಸಂಪರ್ಕವನ್ನು ಲಿಂಕ್ ಮಾಡಲು ನೀವು ಮೊದಲು UIDAI ಅಧಿಕೃತ ವೆಬ್‌ಸೈಟ್ https://uidai.gov.in/ ಗೆ ಭೇಟಿ ನೀಡಿ. ಅದರ ನಂತರ ಸೆಲ್ಫ್‌ ಸೀಡಿಂಗ್‌ ಪುಟಕ್ಕೆ ಹೋಗಿ. ಅದರಲ್ಲಿ ಕೇಳಲಾದ ಮಾಹಿತಿಯನ್ನು ನಮೂದಿಸಿ. ಇಲ್ಲಿ ನೀವು LPG ಅನ್ನು ಆಯ್ಕೆ ಮಾಡಬೇಕು ಮತ್ತು ಆಯಾ ಗ್ಯಾಸ್ ಕಂಪನಿ ಅಂದ್ರೆ ಉದಾಹರಣೆಗೆ IVOCL, BPCL ಇಲ್ಲ HPCL ಅನ್ನೋದನ್ನ ನಮೂದಿಸಬೇಕು. ನಂತರ ವಿತರಕರ ಪಟ್ಟಿ ನಿಮ್ಮ ಮುಂದೆ ಕಾಣಿಸುತ್ತದೆ. ಅದರಲ್ಲಿ ನಿಮ್ಮ ವಿತರಕರನ್ನು ಆಯ್ಕೆಮಾಡಿ. ಅದಾದ ನಂತರ ಗ್ಯಾಸ್ ಸಂಪರ್ಕ ಸಂಖ್ಯೆ, ಮೊಬೈಲ್ ಸಂಖ್ಯೆ, ಆಧಾರ್ ಸಂಖ್ಯೆ, ಮೇಲ್ ಐಡಿ ನಮೂದಿಸಿ. ಇದೇಲ ಆದ ನಂತರ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ಕಳುಹಿಸಲಾದ OTP ಯೊಂದಿಗೆ ವಿವರಗಳನ್ನು ಪರಿಶೀಲಿಸಿ. ಇಷ್ಟು ಮಾಡುದ್ರೆ ಸಾಕು ನಿಮ್ಮ ಆಧಾರ್ ಕಾರ್ಡ್ LPG ಗ್ಯಾಸ್ ಸಂಪರ್ಕದೊಂದಿಗೆ ಲಿಂಕ್ ಆಗುತ್ತದೆ.

ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram

ಆಫ್ ಲೈನ್ ನಲ್ಲೂ ಅರ್ಜಿ ಸಲ್ಲಿಸಬಹುದು

ಇನ್ನು ಮುಖ್ಯವಾಗಿ ಸ್ನೇಹಿತರೆ ನೀವು ಆಧಾರ್ ಲಿಂಕ್ ಮಾಡುವಾಗ ಕೆಲವು ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಹೌದು ಗ್ಯಾಸ್ ಸಂಪರ್ಕವು ಯಾರ ಹೆಸರಿನಲ್ಲಿದೆಯೋ ಅವರ ಆಧಾರ್ ಕಾರ್ಡ್‌ನೊಂದಿಗೆ ಲಿಂಕ್ ಮಾಡಬೇಕು. ಬ್ಯಾಂಕ್ ಖಾತೆಯನ್ನು ಆಧಾರ್ ಕಾರ್ಡ್‌ನೊಂದಿಗೆ ಲಿಂಕ್ ಮಾಡಬೇಕು. ನಿಮ್ಮ ಮೊಬೈಲ್ ಸಂಖ್ಯೆ ಆಧಾರ್ ಕಾರ್ಡ್‌ನಲ್ಲಿರಬೇಕು. ಜೊತೆಗೆ LPG ಗ್ಯಾಸ್ ಸಂಪರ್ಕದ ಹೆಸರು ಮತ್ತು ಆಧಾರ್ ಹೆಸರು ಒಂದೇ ಆಗಿರಬೇಕು. ಅಲ್ದೇ ಆಧಾರ್ ಕಾರ್ಡ್ ಅನ್ನು LPG ಗ್ಯಾಸ್ ಸಂಪರ್ಕದೊಂದಿಗೆ ಆಫ್‌ಲೈನ್‌ನಲ್ಲಿಯೂ ಲಿಂಕ್ ಮಾಡಬಹುದು. ಇದಕ್ಕಾಗಿ ನೀವು ನಿಮ್ಮ ವಿತರಕರ ಬಳಿಗೆ ಹೋಗಿ, ಅವರಿಂದ ಅಪ್ಲಿಕೇಶನ್ ಪಡೆದು ಭರ್ತಿ ಮಾಡಿ, ನಿಮ್ಮ ಆಧಾರ್ ಕಾರ್ಡ್‌ನ ಜೆರಾಕ್ಸ್ ಪ್ರತಿಯನ್ನು ಲಗತ್ತಿಸಿ ಅವರಿಗೆ ನೀಡಿದರೆ, ಅವರೇ ಲಿಂಕ್ ಪ್ರಕ್ರಿಯೆ ಪೂರ್ಣಗೊಳಿಸುತ್ತಾರೆ.

ಒಟ್ಟಿನಲ್ಲಿ ಆಧಾರ್ ಕಾರ್ಡ್ ಲಿಂಕ್ ಪ್ರಕ್ರಿಯೆಯನ್ನ ಪೂರ್ಣಗೊಳಿಸಿದರೆ ಮಾತ್ರ ನಿಮಗೆ ಯೋಜನೆಯ ಲಾಭ ಸಿಗಲು ಸಾಧ್ಯ. ಇಲ್ಲವಾದಲ್ಲಿ ನೀವು ಸಬ್ಸಿಡಿಯನ್ನ ಪಡೆಯಲು ಸಾಧ್ಯವಿಲ್ಲ. ಹೀಗಾಗಿ ತಿಳಿದವರು ಮನೆಯಲ್ಲಿಯೇ ಕುಳಿತು ನಿಮ್ಮ ಮೊಬೈಲ್ ನಿಂದಲೇ ಮೊದಲೇ ತಿಳಿಸಿದಂತೆ ನಿಮ್ಮ ಆಧಾರ್ ನಂಬರ್ ಅನ್ನ ಲಿಂಕ್ ಮಾಡಿಕೊಳ್ಳಬಹುದು ಇಲ್ಲವಾದರೆ, ನನ್ಹೆ ಗೋತ್ತಿಲ್ಲಾ ಅನ್ನೋರು ಹತ್ತಿರದ ವಿತರಕರು ಅಂದ್ರೆ ಗ್ಯಾಸ್ ಏಜನ್ಸಿ ಅವರು ಇರ್ತಾರಲ್ಲ ಅಲ್ಲಿ ಹೋಗಿ ಫಾರಂ ಭರ್ತಿ ಮಾಡಿ ಆಧಾರ್ ಲಿಂಕ್ ಮಾಡಿಸಬೇಕಾಗಿತ್ತದೆ. ಒಟ್ಟಿನಲ್ಲಿ ನೆನೆಪಿಟ್ಟುಕೊಳ್ಳಿ ಆಧಾರ್ ಲಿಂಕ್ ಮಾಡಿಸೋದು ಕಡ್ಡಾಯವಾಗಿದೆ.

ಇದನ್ನೂ ಓದಿ: ತಿಮ್ಮಪ್ಪನ ಸನ್ನಿಧಿಯಲ್ಲಿ ಖಾಲಿಯಿದೆ ವಿವಿಧ ಹುದ್ದೆಗಳು; ಅಭ್ಯರ್ಥಿಗಳ ಕೈ ಸೇರಲಿದೆ ಭರ್ಜರಿ ಸಂಬಳ

ಇದನ್ನೂ ಓದಿ: ಬಜಾಜ್ ಫೈನಾನ್ಸ್ ಗೆ ಸಾಲ ನೀಡದಂತೆ RBI ಆದೇಶವನ್ನು ಹೊರಡಿಸಿದೆ, ಏನಿದು? ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ.