Madhavi: ಒಂದು ಕಾಲದ ಮೇರು ನಟಿ ಮಾಧವಿ ಈಗ ಎಲ್ಲಿದ್ದಾರೆ? ಮಾಧವಿ ಮತ್ತು ಅವ್ರ ಮಕ್ಕಳು ಹೇಗಿದ್ದಾರೆ? ಪತಿ ಯಾರು?

Madhavi: ​ಒಂದು ಕಾಲದಲ್ಲಿ ಕನ್ನಡ ಚಿತ್ರರಂಗ ದಲ್ಲಿ ತಮ್ಮದೇ ಅದ ಛಾಪು ಮೂಡಿಸಿ ಕನ್ನಡ ಮೇರು ನಟಿಯರಲ್ಲಿ ತಾವು ಒಬ್ಬರಾಗಿ ಮಿಂಚಿದ ನಟಿ ಮಾಧವಿ ಮದುವೆಯ ನಂತರ ಚಿತ್ರರಂಗ ದಿಂದ ದೂರವಾಗಿ ವಿದೇಶ ದಲ್ಲಿ ನೆಲೆಕಾಣುತ್ತಾರೆ. ಚಿತ್ರರಂಗ ತೊರೆದ ಮೇಲೆ ನಟಿ ಮಾಧವಿ ಏನಾದ್ರೂ, ಎಲ್ಲಿದ್ದಾರೆ, ಏನ್ ಮಾಡ್ತಿದ್ದಾರೆ? ಅವ್ರ ಫ್ಯಾಮಿಲಿ ಬಗ್ಗೆಯಾಗಲಿ ಎಲ್ಲೂ ಕೂಡ ಸುದ್ದಿಯಾಗಿಲ್ಲ. ಹಾಗಾದ್ರೆ ನಟಿ ಮಾಧವಿ ಈಗ ಹೇಗಿದ್ದಾರೆ ಎಲ್ಲಿದ್ದಾರೆ ಫ್ಯಾಮಿಲಿ ಬ್ಯಾಗ್ರೌಂಡ್ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.

WhatsApp Group Join Now
Telegram Group Join Now

ಹೌದು ನಟಿ ಮಾಧವಿ ಅವ್ರು ಬಹುಶ ಚಿತ್ರರಂಗದ ಎಲ್ಲ ಮೇರು ನಟರ ಜೊತೆಗೆ ತೆರೆ ಹಂಚಿಕೊಂಡಿದ್ದಾರೆ. ಡಾ.ರಾಜ್‌ಕುಮಾರ್, ಶಿವಾಜಿ ಗಣೇಶನ್, ಎನ್‌.ಟಿ.ಆರ್, ಅಮಿತಾಭ್ ಬಚ್ಚನ್ ಮುಂತಾದ ಮೇರು ಸಿನಿ ಕಲಾವಿದರ ಜೊತೆ ಮಾಧವಿ ಅಭಿನಯಿಸಿದ್ದಾರೆ. ಇನ್ನು 1976 ರಿಂದ 1996 ರ ಅವಧಿ ಯಲ್ಲಿ ಬಹು ಬೇಡಿಕೆಯ ನಟಿಯಾಗಿದ್ದರು ಮಾಧವಿ. ಆದ್ರೆ ಮಾಧವಿ ನಟನೆ ಬಿಟ್ಟು ತುಂಬಾ ವರ್ಷಗಳಾಗಿವೆ. ಈಗ ಅವರು ಹೇಗಿದ್ದಾರೆ? ಎಲ್ಲಿದ್ದಾರೆ? ಎಂಬ ಮಾಹಿತಿ ಕಡಿಮೆ ಜನರಿಗೆ ಮಾತ್ರ ಗೊತ್ತಿದೆ. ಸಿನಿಮಾ ಬಿಟ್ಟ ಮೇಲೂ ಮಾಧವಿ ಕೋಟಿ ಕೋಟಿ ಒಡತಿ ಅಂದ್ರೆ ನೀವು ನಂಬಲೇ ಬೇಕು. ವಿದೇಶ ದಲ್ಲಿ ಪತಿ ಹಾಗೂ ಮೂವರು ಹೆಣ್ಣು ಮಕ್ಕಳ ಜೊತೆಗೆ ಲಕ್ಸ್ಯೂರಿ ಜೀವನ ನಡೆಸುತ್ತಿದ್ದಾರೆ ಮಾಧವಿ ಅವ್ರು. ಇದರ ಜೊತೆಗೆ ಕೆಲವೊಂದಿಷ್ಟು ಮಾನವೀಯ ಮೌಲ್ಯ ಗಳನ್ನು ಬೆಳೆಸಿಕೊಂಡಿದ್ದು ಕಷ್ಟ ಅಂದವರ ಕೈ ಹಿಡಿದು ನಡೆಸುತ್ತಿದ್ದಾರೆ.

ಇನ್ನು ಮಾಧವಿ ಅವ್ರು ಆಂಧ್ರಪ್ರದೇಶದ ಏಲೂರಿ ನಲ್ಲಿ ಶಶಿರೇಖಾ ಮತ್ತು ಗೋವಿಂದಸ್ವಾಮಿ ಮಗಳಾಗಿ ಜನಿಸಿದರು. ಜೊತೆಗೆ ಮಾಧವಿಯ ನಿಜವಾದ ಹೆಸರು ಕನಕ ಮಹಾಲಕ್ಷ್ಮಿ ಅಂತ. ಮಾಧವಿ ಅವ್ರ ಅಮ್ಮ ಚಿಕ್ಕಂದಿ ನಿಂದಲೂ ಮಾಧವಿಗೆ ಭರತನಾಟ್ಯ ತರಬೇತಿ ನೀಡಿದ್ದರು. ಹೀಗಾಗಿ ಭರತನಾಟ್ಯ ಕಲಾವಿದೆಯಾಗಿಯೂ ನಟಿ ಮಾಧವಿ ಗುರುತಿಸಿಕೊಂಡಿದ್ದಾರೆ. ಇನ್ನು ಮಾಧವಿ ಹೈದರಾಬಾದ್‌ನ ಅಬಿಡ್ಸ್‌ನ ಸ್ಟಾನ್ಲಿ ಗರ್ಲ್ಸ್ ಸ್ಕೂಲ್‌ ನಲ್ಲಿ ಶಿಕ್ಷಣ ಪಡೆದರು. ಶಾಲಾ ದಿನಗಳಲ್ಲಿಯೇ ಮಾಧವಿ ಚಿತ್ರರಂಗ ಪ್ರವೇಶಿಸಿದ್ದು ಬಹಳ ವಿಶೇಷ ಕೇವಲ ಎಂಟನೇ ತರಗತಿ ಯಲ್ಲಿ ಓದುತ್ತಿದ್ದಾಗ ಒಂದು ದಿನ ದಾಸರಿ ನಾರಾಯಣ ರಾವ್ ರವೀಂದ್ರ ಭಾರತಿ ಯಲ್ಲಿ ಮಾಧವಿ ಅವರ ನೃತ್ಯ ಪ್ರದರ್ಶನ ನೋಡಿ ನೃತ್ಯ ದಿಂದ ಪ್ರಭಾವಿತರಾದರು, ಹಾಗಾಗಿ ಮಾಧವಿ 13ನೇ ವಯಸ್ಸಿ ನಲ್ಲಿ ಇಂಡಸ್ಟ್ರಿಗೆ ಎಂಟ್ರಿ ಕೊಟ್ಟರು. ಚಿತ್ರರಂಗ ದಲ್ಲಿ ವಿಜಯಲಕ್ಷ್ಮಿ, ಲಕ್ಷ್ಮಿ ಎಂಬ ಹೆಸರಿನಲ್ಲಿ ಸಾಕಷ್ಟು ನಟಿಮಣಿಯರು ಇದ್ದದ್ದರಿಂದ ಕನಕ ವಿಜಯಲಕ್ಷ್ಮಿಗೆ ‘ಮಾಧವಿ’ ಎಂದು ಹೆಸರಿಡಲಾಗಿತ್ತು.

ಇದನ್ನು ಓದಿ: ಕಿರುತೆರೆ ಧಾರಾವಾಹಿ ಗಳಿಂದ ದೂರಾಗಿದ್ದ ನಟಿ ಅಭಿನಯ ಈಗ ಮತ್ತೆ ಕಂಬ್ಯಾಕ್

ಮಾಧವಿ ಅವರ ಸಿನಿ ಜರ್ನಿ

ಹೌದು ನಟಿ ಮಾಧವಿ ಸಿನಿಪಯಣ ಆರಂಭಿಸಿದ ಮೇಲೆ ಮತ್ತೆ ಹಿಂತಿರುಗಿ ನೋಡಿದ್ದೇ ಇಲ್ಲ.1976ರಿಂದ 1996ರ ಅವಧಿಯ ಬಹು ಬೇಡಿಕೆಯ ನಟಿಯಾಗಿ ಮಾಧವಿ ಸಾಕಷ್ಟು ಜನಪ್ರಿಯತೆ ಪಡೆದುಕೊಂಡ್ರು.17 ವರ್ಷಗಳ ಕಾಲ ಲೀಡಿಂಗ್ ನಟಿಯಾಗಿ ಸಿನಿಮಾ ರಂಗದಲ್ಲಿ ಸುಮಾರು 300 ಸಿನಿಮಾಗಳಲ್ಲಿ ಮಾಧವಿ ನಟಿಸಿದ್ದಾರೆ. ದಾಸರಿ ನಾರಾಯಣ ರಾವ್ ಅವರ ‘ತೂರ್ಪು ಪಡಮರ’ ಎಂಬ ತೆಲುಗು ಸಿನಿಮಾ ಮೂಲಕ ಚಿತ್ರರಂಗ ಪ್ರವೇಶ ಮಾಡಿದ್ದರು ಇವರು.ನಂತರದಲ್ಲಿ ತೆಲುಗು, ತಮಿಳು, ಕನ್ನಡ, ಮಲಯಾಳಂ, ಹಿಂದಿ, ಓರಿಯಾ, ಬೆಂಗಾಳಿ ಭಾಷೆಗಳಲ್ಲಿ ನಟಿಸಿದ್ದಾರೆ. ದೊಡ್ಡ ದೊಡ್ಡ ನಟರು-ನಿರ್ದೇಶಕರ ಜೊತೆ ಕೆಲಸ ಮಾಡಿದ ಕೀರ್ತಿ ಮಾಧವಿಗೆ ಸಲ್ಲುತ್ತದೆ. ಜೊತೆಗೆ ತುಂಬ ವಿಭಿನ್ನ ಪಾತ್ರಗಳಿಗೆ ಮಾಧವಿ ಹೆಸರೂವಾಸಿಯಾಗಿದ್ದರು. ಈ ಸಮಯ ಮಾಧವಿ ಅವ್ರ ಸುವರ್ಣಯುಗ ಅಂದ್ರು ತಪ್ಪಾಗಲ್ಲ.’ಖೈದಿ, ಇಂಟ್ಲೊ ರಾಮಯ್ಯ ವೀದಿಲೊ ಕೃಷ್ಣಯ್ಯ, ರಾಜ ಪರ್ವೈ, ತಂಬಿಕ್ಕಿ ಇಂದ ಊರು, ಹಾಲು ಜೇನು, ಅಗ್ನಿಪಥ್’ ಸಿನಿಮಾಗಳು ಮಾಧವಿ ಅವ್ರ ಫೇವರಿಟ್ ಸಿನಿಮಾಗಳಂತೆ. ಇನ್ನು ಕನ್ನಡದಲ್ಲಿ ಡಾ.ರಾಜ್‌ಕುಮಾರ್, ಅನಂತ್‌ನಾಗ್, ವಿಷ್ಣುವರ್ಧನ್, ಶಂಕರ್‌ನಾಗ್, ಅಂಬರೀಶ್ ಜೊತೆಗೆ ನಟಿಸಿದ್ದಾರೆ ಮಾಧವಿ. ‘ಘರ್ಜನೆ, ಗರುಡ ರೇಖೆ, ಶೃತಿ ಸೇರಿದಾಗ, ಜೀವನ ಚೈತ್ರ, ಮಲಯ ಮಾರುತ, ರಾಮಣ್ಣ ಶ್ಯಾಮಣ್ಣ, ಚಾಣಕ್ಯ, ರುದ್ರನಾಗ, ಒಡಹುಟ್ಟಿದವರು, ಆಕಸ್ಮಿಕ’ ಮುಂತಾದ ಕನ್ನಡ ಸಿನಿಮಾಗಳಲ್ಲಿ ಮಾಧವಿ ನಟಿಸಿದ್ದಾರೆ.

ನಟಿ ಮಾಧವಿ ಪತಿ ಮತ್ತು ಮಕ್ಕಳು ಹೇಗಿದ್ದಾರೆ?

ಇನ್ನು ಮಾಧವಿ ಅವ್ರ ವೈಯಕ್ತಿಕ ಜೀವನಕ್ಕೆ ಬರುವುದಾದ್ರೆ ನಟಿ ಮಾಧವಿ ಅವರದ್ದು ಪಕ್ಕ ಅರೇಂಜ್ ಮ್ಯಾರೇಜ್. ಮಾಧವಿ ಹಿತೈಷಿಗಳಾದ ಸ್ವಾಮಿರಾಮ ಅವರ ಆಸೆಯಂತೆ ಅಮೆರಿಕದ ರಾಲ್ಪ್ ಶರ್ಮಾ ಜೊತೆ ಫೆಬ್ರವರಿ 14, 1996ರಂದು ಮಾಧವಿ ಅವ್ರ ವಿವಾಹ ನಡೆಯುತ್ತೆ. ಇನ್ನು ಮಾಧವಿ ಅವ್ರ ಪತಿ ರಾಲ್ಪ್ ಶರ್ಮಾ ಜರ್ಮನಿ ಯವರು. ಇನ್ನು ನಟಿ ಮಾಧವಿ ಭಾರತ ದಲ್ಲಿದಷ್ಟು ದಿನ ದೇವಸ್ಥಾನಗಳಿಗೆ ಹೋಗುವುದು, ಪೂಜೆ ಮಾಡುವುದು, ಸಂಪ್ರದಾಯ ಆಚಾರ – ವಿಚಾರಗಳನ್ನು ಪಾಲಿಸಿಕೊಂಡು ಬಂದುದ್ದ ಮಾಧವಿ ಅವ್ರು ಅಮೆರಿಕಕ್ಕೆ ಹೋದ ನಂತರ ದಲ್ಲೂ ಭಾರತೀಯ ಸಂಸ್ಕೃತಿ ಯನ್ನ ಮರೆಯದೆ ಪ್ರತಿನಿತ್ಯ ಗಾಯತ್ರಿ ಮಂತ್ರ, ಮೃತ್ಯುಂಜಯ ಮಂತ್ರ, ಗಣಪತಿ ಸ್ತೋತ್ರವನ್ನು ಹೇಳುತ್ತಾರಂತೆ.

ಇನ್ನು ಮಾಧವಿ ಅವ್ರ ಪತಿ ರಾಲ್ಪ್ ಶರ್ಮಾ ತುಂಬ ಮೃದು ಸ್ವಭಾವದ, ನಂಬಿಕಾರ್ಹ, ಉದಾರ ಮನಸ್ಥಿತಿಯುಳ್ಳ ವ್ಯಕ್ತಿ. ಮಾಧವಿ ಅವ್ರನ್ನು ತುಂಬ ಚೆನ್ನಾಗಿ ನೋಡಿಕೊಳ್ಳುತ್ತಾರಂತೆ. ತುಂಬ ಶಾಂತಿಯುತವಾಗಿ, ಪ್ರೀತಿ ಯಿಂದ ಈ ದಂಪತಿ ಈಗ ವಿದೇಶ ದಲ್ಲಿ ನೆಲೆಸಿದ್ದಾರೆ. ಇನ್ನು ಈ ದಂಪತಿಗೆ ಮೂವರು ಹೆಣ್ಣು ಮಕ್ಕಳು. ಟಿಫನಿ, ಪ್ರಿಸಿಲ್ಲ, ಎವಿಲಿನ್ ಅನ್ನೋದು ಮೂವರು ಹೆಣ್ಣುಮಕ್ಕಳ ಹೆಸರು. ಮಾಧವಿ ಮದುವೆಯಾಗಿ ಹತ್ತಿರ ಹತ್ತಿರ 30 ವರ್ಷಗಳು ಕಳೆದಿವೆ. ಮೂರು ಹೆಣ್ಣು ಮಕ್ಕಳು, ಪತಿಯ ಜೊತೆಗೆ ವಿದೇಶ ದಲ್ಲಿ ತುಂಬ ಚೆನ್ನಾಗಿ ಜೀವನ ಸಾಗಿಸುತ್ತಿದ್ದಾರೆ.

ಬಡವರಿಗಾಗಿ ಚಾರಿಟೇಬಲ್ ಫೌಂಡೇಶನ್ ಸ್ಥಾಪಿಸಿರುವ ಮಾಧವಿ

ಇನ್ನು ಅಮೇರಿಕಾ ದಲ್ಲಿ ನಟಿ ಮಾಧವಿ ಸುಮ್ಮನೆ ಕುಳಿತಿಲ್ಲ. ಚಿತ್ರರಂಗ ದಿಂದ ದೂರವಾದ ಬಳಿಕ ಸಂಬಂಧಿಕರು ಹಾಗೂ ಪತಿ ಜೊತೆ ಸೇರಿ ಮಾಧವಿ ಸ್ವಂತ ಔಷಧ ಉದ್ಯಮ ವನ್ನು ನಡೆಸಿಕೊಂಡು ಹೋಗುತ್ತಿದ್ದಾರೆ. ಸಿನಿಮಾ ನಟಿಯಾಗಿ, ನಂತರ ದಲ್ಲಿ ಪೂರ್ಣ ಪ್ರಮಾಣದ ತಾಯಿಯಾಗಿ, ಈಗ ಮಹಿಳಾ ಉದ್ಯಮಿಯಾಗಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಇನ್ನು ಮದುವೆಯಾಗುವ ಮುಂಚೆ ಮಾಧವಿ ಮತ್ತು ಅವರ ಪತಿ ಎರಡೇ ಎರಡು ಆಸೆ ಅಥವಾ ಉದ್ದೇಶಗಳನ್ನ ಇಟ್ಟುಕೊಂಡಿದ್ರು.

ಹೌದು ಇರುವಷ್ಟು ದಿನ ತಂದೆ-ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳಬೇಕು, ಸಂಪಾದಿಸಿದ ಹಣ ವನ್ನು ಚಾರಿಟಿಗೆ ಬಳಸಿಕೊಳ್ಳಬೇಕು ಅಂತ ಅಂದುಕೊಂಡಿದ್ರು. ಅದರಂತೆ 2017ರಲ್ಲಿ ‘ದಿ ಮಾಧವಿ ಚಾರಿಟೇಬಲ್ ಫೌಂಡೇಶನ್’ ನ್ನು ಸ್ಥಾಪಿಸಿರುವ ಮಾಧವಿ ಈ ಮೂಲಕ ಅನೇಕ ಸಾಮಾಜಿಕ ಕೆಲಸ ಗಳನ್ನು ಮಾಡುತ್ತಿರುತ್ತಾರೆ. ಸೋಶಿಯಲ್ ಮೀಡಿಯಾ ಬಳಸಿಕೊಂಡು ಜಾಗತಿಕ ಮಟ್ಟದಲ್ಲಿ ಹಣದ ಅವಶ್ಯಕತೆಯಿರುವವರಿಗೆ ಧನಸಹಾಹ ಮಾಡುತ್ತಿರುತ್ತಾರೆ ನಟಿ ಮಾಧವಿ.

ಇದನ್ನು ಓದಿ: ದೇವರ ಮನೆಯಲ್ಲಿ ವಿಷ್ಣುವರ್ಧನ್ ಅವರ ಫೋಟೋ ಹಿಂದಿರೋ ಕಥೆ ಹೇಳಿದ ಮಾಳವಿಕಾ ಅವಿನಾಶ್

ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram